ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದುರ್ಮರಣ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳೂರಿನ ಸುಳ್ಯದ ಗಾಂಧಿ ನಗರ ಸಮೀಪ ನಡೆದಿದೆ. ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು ಮತ್ತೋರ್ವ ಕಾರ್ಮಿಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೃತ ಕಾರ್ಮಿಕ ದಂಪತಿ ಗದಗ ಜಿಲ್ಲೆಯ ಮುಂಡರಗಿ ನಿವಾಸಿಗಳಾದ ಸೋಮಶೇಖರ ರೆಡ್ಡಿ (45) ಮತ್ತು ಶಾಂತ (40) ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಜೆಸಿಬಿ ಮೂಲಕ […]

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದುರ್ಮರಣ Read More »

ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

ಅಮೇರಿಕಾ : ಕಂಪ್ಯೂಟರ್ ವಿಜ್ಞಾನ ಜಗತ್ತಿನ ದಾರ್ಶನಿಕ ಮತ್ತು ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ (94) ನಿಧನರಾಗಿದ್ದಾರೆ.ಇವರ ಸಾವು ತಂತ್ರಜ್ಞಾನ ಕ್ಷೇತ್ರದ ಮೇಲೆ ಅಪಾರ ಪ್ರಭಾವವನ್ನು ಉಂಟು ಮಾಡಲಿದೆ. ಕಂಪ್ಯೂಟರ್ ಚಿಪ್ ಉದ್ಯಮದ ಪ್ರವರ್ತಕರಾಗಿ, ಅವರ ಕೆಲಸವು ಆಧುನಿಕ ತಂತ್ರಜ್ಞಾನದ ಪ್ರಗತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಗಾರ್ಡನ್ ಮೂರ್ ತನ್ನ ನಾಮಸೂಚಕ ಸಿದ್ಧಾಂತಕ್ಕೆ ಹೆಸರುವಾಸಿಯಾಗಿದ್ದರು, ಮೂರ್ ಕಾನೂನು, ಇದು ದಶಕಗಳಿಂದ ಕಂಪ್ಯೂಟರ್ ಚಿಪ್‌ಗಳ ಅಭಿವೃದ್ಧಿಯನ್ನು ರೂಪಿಸಿದೆ. ಮೈಕ್ರೊಪ್ರೊಸೆಸರ್‌ನಲ್ಲಿನ ಟ್ರಾನ್ಸಿಸ್ಟರ್‌ಗಳ ಸಂಖ್ಯೆಯು ಸರಿಸುಮಾರು ಪ್ರತಿ ಎರಡು

ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ ನಿಧನ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮುಡ್ನೂರು ಆದಿಲಕ್ಷ್ಮೀ ಸಂಘ ಉದ್ಘಾಟನೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರೇಸ್ಟ್ ಪುತ್ತೂರು.ಚಿಕ್ಕಮುಡ್ನೂರು ಕಾರ್ಯಕ್ಷೇತ್ರದ ಆದಿಲಕ್ಷ್ಮೀ ಸಂಘವನ್ನು ಶನಿವಾರ ಉದ್ಘಾಟಿಸಲಾಯಿತು. ಯೋಜನೆಯ ಪುತ್ತೂರು ಯೋಜನಾಧಿಕಾರಿ ಆನಂದ ಕೆ. ಸಂಘ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಪ್ರಬಂಧಕರಾಗಿ ಗೀತಾ, ಸಂಯೋಜಕರಾಗಿ ಮಾಲಿನಿ, ಕೋಶಾಧಿಕಾರಿಯಾಗಿ ಯಶೋದಾ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಚಿಕ್ಕಮುಡ್ನೂರು ಒಕ್ಕೂಟದ ಉಪಾಧ್ಯಕ್ಷೆ ಪೂರ್ಣಿಮಾ, ಚಿಕ್ಕಮುಡ್ನೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಿಕಾ, ಕೇಪುಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೀಣಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮುಡ್ನೂರು ಆದಿಲಕ್ಷ್ಮೀ ಸಂಘ ಉದ್ಘಾಟನೆ Read More »

ರಾಧಾಕೃಷ್ಣ ರಾವ್ ನಿಧನ

ಪುತ್ತೂರು: ಕೊಂಬೆಟ್ಟು ನಿವಾಸಿ ರಾಧಾಕೃಷ್ಣ ರಾವ್ (61) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಸಹೋದರು, ಸಹೋದರಿಯರನ್ನು ಅಗಲಿದ್ದಾರೆ.

ರಾಧಾಕೃಷ್ಣ ರಾವ್ ನಿಧನ Read More »

36 ಉಪಗ್ರಹಗಳನ್ನು ಹೊತ್ತ ಇಸ್ರೋದ ಎಲ್ ವಿಎಂ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭ

ಶ್ರೀಹರಿಕೋಟ: ಎಲ್‌ವಿಎಂ3-ಎಂ3/ಒನ್‌ವೆಬ್ ಇಂಡಿಯಾ-2 ಮಿಷನ್‌ನಲ್ಲಿ 36 ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಶನಿವಾರ ತಿಳಿಸಿದೆ.ಉಪಗ್ರಹ ವಾಹಕವನ್ನು ಲಾಂಚ್ ಪ್ಯಾಡ್‍ಗೆ ಸ್ಥಳಾಂತರಿಸಲಾಗಿದ್ದು, ಮಾರ್ಚ್ 26 ರಂದು 36 ಬ್ರಾಡ್‍ಬ್ಯಾಂಡ್ ಉಪಗ್ರಹಗಳೊಂದಿಗೆ ಕಕ್ಷೆಗೆ ಹಾರಿಸಲಾಗುವುದು ಎಂದು ಇಸ್ರೋ ತಿಳಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 36 ಉಪಗ್ರಹಗಳನ್ನು ಹೊತ್ತ ಎಲ್ ವಿಎಂ ರಾಕೆಟ್ ಉಡಾವಣೆ ನಡೆಯಲಿದ್ದು, ಇದರಲ್ಲಿ ಬ್ರಿಟನ್ ಸಹಯೋಗವೂ ಇದೆ ಎಂದು ಇಸ್ರೋ ಹೇಳಿದೆ.ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು,

36 ಉಪಗ್ರಹಗಳನ್ನು ಹೊತ್ತ ಇಸ್ರೋದ ಎಲ್ ವಿಎಂ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭ Read More »

ಬೆಳ್ಳಿಪ್ಪಾಡಿ: ಮಾ. 25ರಂದು ಕಲ್ಕುಡ ಕಲ್ಲುರ್ಟಿ ವಾರ್ಷಿಕ ನೇಮೋತ್ಸವ

ಪುತ್ತೂರು: ಬೆಳ್ಳಿಪ್ಪಾಡಿಯ ಕಾರಣಿಕದ ರಾಜನ್ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 25ರಂದು ವಾರ್ಷಿಕ ನೇಮೋತ್ಸವ ನಡೆಯಲಿದೆ. ಬೆಳ್ಳಿಪ್ಪಾಡಿ ಕೋಡಿಯಡ್ಕ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ರಾತ್ರಿ 8ಕ್ಕೆ ರಾಜನ್ ದೈವ ಹಾಗೂ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವಾರ್ಷಿಕ ನೇಮೋತ್ಸವ ಜರಗಲಿದೆ. ಇದೇ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳ್ಳಿಪ್ಪಾಡಿ: ಮಾ. 25ರಂದು ಕಲ್ಕುಡ ಕಲ್ಲುರ್ಟಿ ವಾರ್ಷಿಕ ನೇಮೋತ್ಸವ Read More »

ಬಂಗಾರ್ ಕಾಯರ್ ಕಟ್ಟೆಯ ಪುನರ್ ನವೀಕರಣಕ್ಕೆ ಚಾಲನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬಂಗಾರ್ ಕಾಯರ್ ಕಟ್ಟೆಯ ನವೀಕರಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕರೂ, ಸಮಿತಿ ಸದಸ್ಯರೂ ಆಗಿರುವ ವೇ. ಮೂ. ವಿ.ಎಸ್. ಭಟ್ ಅವರು ಪೂಜಾ ವಿಧಿವಿಧಾನ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ಕಾಮಗಾರಿಗೆ ಚಾಲನೆ ನೀಡಿದರು. ಇಂಜಿನಿಯರ್ ಹಾಗೂ ಗುತ್ತಿಗೆದಾರ ಶಂಕರ ಭಟ್ಟ್, ಚಾಕರಿಯವರ ಕುಟುಂಬ, ನೆರೆಕರೆಯ ಭಕ್ತರು, ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಂಗಾರ್ ಕಾಯರ್ ಕಟ್ಟೆಯ ಪುನರ್ ನವೀಕರಣಕ್ಕೆ ಚಾಲನೆ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟೆ Read More »

ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತ: ಮಣ್ಣಿನಡಿ ಸಿಲುಕಿದ್ದ 3 ಮೃತದೇಹ ಪತ್ತೆ

ಸುಳ್ಯ: ಹೃದಯವಿದ್ರಾವಕ ಘಟನೆಯಲ್ಲಿ ಸುಳ್ಯದ ಗುರುಂಪು ಬಳಿ ಬರೆ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಶನಿವಾರ ಮಧ್ಯಾಹ್ನ ಅಬೂಬಕ್ಕರ್ ಎಂಬವರ ಮನೆ ಸಮೀಪ ಘಟನೆ ಸಂಭವಿಸಿದೆ. ಬರೆಗೆ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದಾಗ ದುರ್ಘಟನೆ ಘಟಿಸಿದೆ. ಕಾಮಗಾರಿಯಲ್ಲಿ ನಿರತರಾಗಿದ್ದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ. ಮೃತಪಟ್ಟವರಲ್ಲಿ ಗದಗ ಮುಂಡರಗಿ ಮೂಲದ ಸೋಮಶೇಖರ, ಶಾಂತಾ ದಂಪತಿ ಇದ್ದರು ಎಂದು ಗುರುತಿಸಲಾಗಿದೆ. ಬರೆ ಕುಸಿದ ತಕ್ಷಣ

ಸುಳ್ಯದ ಗುರುಂಪಿನಲ್ಲಿ ಬರೆ ಕುಸಿತ: ಮಣ್ಣಿನಡಿ ಸಿಲುಕಿದ್ದ 3 ಮೃತದೇಹ ಪತ್ತೆ Read More »

ಪಂಚಮಸಾಲಿ ಹೋರಾಟದಲ್ಲಿ ಒಡಕು: ಹೋರಾಟ ಕೈಬಿಡುತ್ತೇವೆಂದ ಸ್ವಾಮೀಜಿ

ಒಪ್ಪದ ವಿಜಯಾನಂದ ಕಾಶಪ್ಪನವರ್’ನಿಂದ ರಾಜೀನಾಮೆ ಸಲ್ಲಿಕೆ ಬೆಂಗಳೂರು: ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ. 7ರಷ್ಟು ಮೀಸಲಾತಿ ನೀಡಿದ್ದನ್ನು ಹೋರಾಟ ಸಮಿತಿ ಒಪ್ಪಿಕೊಂಡು ಎರಡು ವರ್ಷಗಳ ಹೋರಾಟವನ್ನು ಹಿಂದೆ ಪಡೆದಿದೆ. ಆದರೆ, ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರ ನಿನ್ನೆ ಮೀಸಲಾತಿ ಪ್ರಕಟಿಸಿದ ಹಿನ್ನಲೆಯಲ್ಲಿ ಇಂದು ಫ್ರೀಡಂ ಪಾರ್ಕ್‍ನಲ್ಲಿ ಪಂಚಮಸಾಲಿ ಮುಖಂಡರು ಹಾಗೂ

ಪಂಚಮಸಾಲಿ ಹೋರಾಟದಲ್ಲಿ ಒಡಕು: ಹೋರಾಟ ಕೈಬಿಡುತ್ತೇವೆಂದ ಸ್ವಾಮೀಜಿ Read More »

ಕೆ ಆರ್‌ ಪುರಂ-ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು, ನೂತನವಾಗಿ ನಿರ್ಮಿಸಲಾಗಿರುವ ಕೆಆರ್ ಪುರಂ- ಬೈಯ್ಯಪ್ಪನ ಹಳ್ಳಿ ಮೆಟ್ರೋ ರೈಲು ಮಾರ್ಗವನ್ನು (ಮಾ.25 ) ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಇದು ಪ್ರಮುಖವಾದ ಮೆಟ್ರೋ ಮಾರ್ಗವಾಗಿದ್ದು, ಈ ಮಾರ್ಗದಿಂದ 10 ಲಕ್ಷ ಜನರಿಗೆ ಸಹಾಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೆಟ್ರೋ ಉದ್ಘಾಟಿಸಿದ ನಂತರ ಅವರು ಮೆಟ್ರೋದಲ್ಲಿ ಸುಮಾರು 5 ಕಿ.ಮೀ.ವರೆಗೆ ಪ್ರಯಾಣಿಸಿದರು. ಆ ಸಂದರ್ಭದಲ್ಲಿ ಅವರು ರೈಲಿನಲ್ಲಿದ್ದ ಮೆಟ್ರೋ ರೈಲು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ

ಕೆ ಆರ್‌ ಪುರಂ-ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ Read More »

error: Content is protected !!
Scroll to Top