ಸ್ಥಳೀಯ ಸುದ್ದಿ

ಕುಸಿದು ಬಿದ್ದು ಉಪನ್ಯಾಸಕ ಮೃತ್ಯು

ಸುಳ್ಯ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ಉಪನ್ಯಾಸಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೈಸೂರಿನ ಕೆ. ಆರ್. ನಗರದ ಬೇರ್ಯ ನಿವಾಸಿ ಮಂಜು (42) ಎಂಬವರೇ ‌ಮೃತ ದುರ್ದೈವಿ. ಗುರುವಾರ ತರಗತಿ ಮುಗಿಸಿದ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಹೀಗಾಗಿ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಬಳಿಕ ಸ್ಥಳೀಯ ಮೆಡಿಕಲ್‌ಗೆ ಔಷಧ ಖರೀದಿಗೆ ಹೋಗಿದ್ದರು. ಅಲ್ಲಿ ಇದ್ದಕ್ಕಿದ್ದ ಹಾಗೆ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ‌ ಅವರು […]

ಕುಸಿದು ಬಿದ್ದು ಉಪನ್ಯಾಸಕ ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ

ಸುಳ್ಯ: ನಿನ್ನೆ ರಾತ್ರಿ ದೊಡ್ಡತೋಟ ಬಳಿಯ ಕಾಸಿನಗೋಡ್ಲು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕಾರಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕಾರು ಮಾವಿನಕಟ್ಟೆಯಿಂದ ಸುಳ್ಯದತ್ತ ಬರುತ್ತಿರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ Read More »

ವಿವಾಹ ಆರತಕ್ಷತೆ ಪ್ರಯುಕ್ತ ಯಕ್ಷಗಾಯನ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಸನತ್ ಮತ್ತು ಹರ್ಷಿತಾ ಆರತಕ್ಷತೆ ಪ್ರಯುಕ್ತ ಯಕ್ಷ ಗಾಯನ ಜರಗಿತು. ಭಾಗವತರಾಗಿ ಮಹೇಶ್ ಕನ್ಯಾಡಿ, ಸುಶಾಂತ್ ಆಚಾರ್ಯ ಕೈಕಂಬ, ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ. ಆಚಾರ್ಯ ಅಲಂಕಾರು ಮತ್ತು ಸಂಧ್ಯಾ ಬಂಟ್ವಾಳ ಭಾಗವಹಿಸಿದರು. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರು ಭಾಗವಹಿಸಿದ್ದರು. ಕಲಾವಿದ ಸತೀಶ್ ಆಚಾರ್ಯ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರನ್ನು ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ. ಎಲ್. ಗೌರವಿಸಿದರು. ಕುಟುಂಬದ ಹಿರಿಯರಾದ ಯಕ್ಷಗಾನ ಕಲಾವಿದ

ವಿವಾಹ ಆರತಕ್ಷತೆ ಪ್ರಯುಕ್ತ ಯಕ್ಷಗಾಯನ Read More »

ಜಾತಿಗೆ ಬೆಲೆ ನಮ್ಮ ದೇಶದಲ್ಲಿ ಇರಲಿಲ್ಲ ಎನ್ನುವುದು ಇತಿಹಾಸ ಓದಿದರೆ ತಿಳಿಯುತ್ತದೆ: ಅನಂತ ಕುಮಾರ್ ಹೆಗಡೆ

ಭಟ್ಕಳ: ಭಾರತದಲ್ಲಿ ಜಾತಿಗೆ ಎಂದೂ ಬೆಲೆ ಇರಲಿಲ್ಲ. ಯೋಗ್ಯತೆಗೆ ಬೆಲೆ ಇತ್ತು. ನಮ್ಮಂತಹ ಬುದ್ಧಿವಂತರು ಜಾತಿಗೆ ಪ್ರಾಶಸ್ತ್ಯ ನೀಡಿದ್ದು. ನಮ್ಮ ಹಿಂದಿನ ಕಾಲದ ಸತ್ಯ ಏನು ಎನ್ನುವುದು ಇತಿಹಾಸ ಓದಿದರೆ ಅರಿವಾಗುತ್ತದೆ ಎಂದು ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ. ಅವರು ಭಟ್ಕಳದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಇತಿಹಾಸದಲ್ಲಿ ಆಗಿ ಹೋದ 90% ಗಳಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರರೂ ಬ್ರಾಹ್ಮಣರಲ್ಲ. ಜಾತ್ಯಾತೀತತೆ ಎಂದರೆ ಅದು ಹಿಂದುತ್ವ. ನಾವು

ಜಾತಿಗೆ ಬೆಲೆ ನಮ್ಮ ದೇಶದಲ್ಲಿ ಇರಲಿಲ್ಲ ಎನ್ನುವುದು ಇತಿಹಾಸ ಓದಿದರೆ ತಿಳಿಯುತ್ತದೆ: ಅನಂತ ಕುಮಾರ್ ಹೆಗಡೆ Read More »

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪುತ್ತೂರು: ಕಾರು ತಾಗಿದ ‌ಕಾರಣವನ್ನಿಟ್ಟುಕೊಂಡು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸ ಭಟ್ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ವ್ಯಕ್ತಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು Read More »

ಮಾ.7 – 8: ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್- 3

ಮಂಗಳೂರು: ಯುವ ಘಟಕ – ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ.) ಮಂಗಳೂರು ಇದರ ವತಿಯಿಂದ ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್-3 ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಅಂತರ್ ಜಿಲ್ಲಾ ಕ್ರಿಕೆಟ್ ಮತ್ತು ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಮಾ‌ 7 ಮತ್ತು 8 ರಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾಟವು ಬೆಳಿಗ್ಗೆ 7.30 ಪ್ರಾರಂಭಗೊಳ್ಳಲಿದ್ದು, ಉದ್ಘಾಟನಾ ಸಮಾರಂಭ ಮಾ. 7ರ ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.

ಮಾ.7 – 8: ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್- 3 Read More »

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ

ಪುತ್ತೂರು: ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಲ್ಲಿ ಖಾಲಿ ಇರುವ ಅಕೌಂಟಿಂಗ್ – ಕಚೇರಿ ಸಹಾಯಕರ ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ: 9901355730 ನಂಬರ್ ಗೆ resume ಕಳುಹಿಸಿ.

ಪುತ್ತೂರಿನ ಸಂಸ್ಥೆಯೊಂದಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ Read More »

ಅಕ್ಷಯ ಕಾಲೇಜು ವಾರ್ಷಿಕ ಶಿಬಿರ 2025-26 ಸಮಾರೋಪ

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಅಕ್ಷಯ ಕಾಲೇಜು ಪುತ್ತೂರು ವತಿಯಿಂದ “ನನ್ನ ಭಾರತಕ್ಕಾಗಿ ಯುವಜನತೆ – ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಆಶಯದೊಂದಿಗೆ ಆಯೋಜಿಸಲಾದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಶ್ರೀ ರಾಮಚಂದ್ರ ಪದವಿ ಪರ‍್ವ ವಿದ್ಯಾಲಯದಲ್ಲಿ ನೆರವೇರಿತು. ಅಧ್ಯಕ್ಷತೆಯನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ವಹಿಸಿದ್ದರು. ಅಧ್ಯಕ್ಷ ಜಯಂತ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಏಳು ದಿನಗಳ ಕಾಲ ಪರ್ನೆ ಪರಿಸರವನ್ನು ಆಯ್ಕೆ ಮಾಡಿಕೊಂಡು ಶಿಬಿರವನ್ನು

ಅಕ್ಷಯ ಕಾಲೇಜು ವಾರ್ಷಿಕ ಶಿಬಿರ 2025-26 ಸಮಾರೋಪ Read More »

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಂಘದ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ ಮತ್ತು ಗಣ್ಯರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026 ಸಮಾರಂಭದಲ್ಲಿ ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ಅವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮತಿ ದಯಾಮಣಿ

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ Read More »

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನ (ಗ್ರಾಜ್ಯುಯೇಷನ್ ಡೇ) ಏರ್ಪಡಿಸಲಾಯಿತು. ಸಮಾರಂಭವನ್ನು ಎಸ್. ಎನ್. ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯೆ ರಶ್ಮಿ ಅಶ್ವಿನ್ ಎಲ್. ಶೆಟ್ಟಿ ಅವರು ಉದ್ಘಾಟಿಸಿದರು. ಅತಿಥಿಯಾಗಿ ಸವಣೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಂತ್ ವೈ. ಅವರು ಮಕ್ಕಳೇ ನಮ್ಮ ಆಸ್ತಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ, ಸರಿಯಾದ ಗುರಿ, ಗುರುಗಳ ಮೇಲೆ ಗೌರವ ಇರಬೇಕು ಎಂಬ ಹಿತನುಡಿಯೊಂದಿಗೆ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಅಢ್ವಕೇಟ್ ಅಶ್ವಿನ್ ಎಲ್. ಶೆಟ್ಟಿ

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ Read More »

error: Content is protected !!
Scroll to Top