ಸ್ಥಳೀಯ ಸುದ್ದಿ

ಜ.16 – ವಿಟ್ಲ ಜಾತ್ರಾ ಪ್ರಯುಕ್ತ ಸಮರ್ಪಣ್ ಕಲೋತ್ಸವ 2026: ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಸಲುವಾಗಿ ಜ. 16 ರಂದು ಸಮರ್ಪಣ್ ವಿಟ್ಲ ಇವರಿಂದ ‘ಸಮರ್ಪಣ್ ಕಲೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವ ಸಮರ್ಪಣೆ, ವಿದ್ಯಾನಿಧಿ ‌ಸಮರ್ಪಣೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂಸೇವಕ ಈಶ್ವರ ಡಿ. ಕೂಜಪ್ಪಾಡಿ ಅವರು ಬಿಡುಗಡೆ ಮಾಡಿದರು. ಸಮರ್ಪಣ್ ಕಲೋತ್ಸವದಲ್ಲಿ ಚೈತನ್ಯ ಕಲಾವಿದರು ಬೈಲೂರು ಅವರಿಂದ ರಾಘು ಮಾಸ್ಟ್ರು ಎಂಬ ತುಳು ಹಾಸ್ಯಮಯ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಸಮರ್ಪಣ್ […]

ಜ.16 – ವಿಟ್ಲ ಜಾತ್ರಾ ಪ್ರಯುಕ್ತ ಸಮರ್ಪಣ್ ಕಲೋತ್ಸವ 2026: ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಸತತ ಪ್ರಯತ್ನದ ಫಲವೇ ಯಶಸ್ಸು: ಸೀತಾರಾಮ ಕೇವಳ

ಅಂಕ ಗಳಿಕೆಯೇ ‌ಶಿಕ್ಷಣವಲ್ಲ: ರಾಜೇಂದ್ರ ಭಟ್ ಕೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ನೀಡಿ: ಶಿವರಾಮ ಏನೆಕಲ್ ಕಾಣಿಯೂರು: ಸಾಧನೆ ಮಾಡಬೇಕು ಎನ್ನುವವರಿಗೆ ಅಸಾಧ್ಯವಾದದ್ದು ಏನೂ ಇಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಪರಿಶ್ರಮ, ಅಭ್ಯಾಸ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕುದ್ಮಾರು ಶಾಲೆಯಲ್ಲಿ ಮಕ್ಕಳ ಸಾಧನೆಗೆ ಪೂರಕ ವಾತಾವರಣ ಇರುವುದು ಸಂತಸದ ವಿಷಯ ರಾಷ್ಟ್ರೀಯ ಮಟ್ಟದ ವಿಕಸನ ತರಬೇತುದಾರ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಅವರು ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು SDMC ವತಿಯಿಂದ ಸ.

ಸತತ ಪ್ರಯತ್ನದ ಫಲವೇ ಯಶಸ್ಸು: ಸೀತಾರಾಮ ಕೇವಳ Read More »

ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಯುವತಿಯಿಂದ ತಕ್ಕ ಶಾಸ್ತಿ

ಕಾರವಾರ: ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸಂತ್ರಸ್ತೆ ಸರಿಯಾಗಿ ಪಾಠ ಕಲಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಾಮುಕ ಯುವಕ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದು, ಇದರಿಂದ ಎಚ್ಚರಗೊಂಡ ಯುವತಿ ಕೂಡಲೇ ಆತನ ಮಾನಗೇಡಿ ವರ್ತನೆಯನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಆ ಬಳಿಕ ಆ ಯುವಕನ ವಿರುದ್ಧ ಸಮರ ಸಾರಿದ್ದಾಳೆ. ವಿಡಿಯೋ ರೆಕಾರ್ಡ್ ಸಾಕ್ಷ್ಯದ ಮೂಲಕ ಬಸ್ಸಿನಲ್ಲೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವತಿಯ ಧೈರ್ಯಕ್ಕೆ ನಾಡಿನೆಲ್ಲೆಡೆ ಶ್ಲಾಘನೆ

ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಯುವತಿಯಿಂದ ತಕ್ಕ ಶಾಸ್ತಿ Read More »

ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಾಖೆಯಲ್ಲಿ ವೈಕುಂಠ ಏಕಾದಶಿ ಆಚರಣೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ಇದರ ಕಳಿಯ ಗೇರುಕಟ್ಟೆ ಕ್ಷೀರಸಂಗಮ ಶಾಖೆಯಲ್ಲಿ ವೈಕುಂಠ ಏಕಾದಶಿಯ ಆಚರಣೆಯನ್ನು ಭಜನೆ, ವಿಷ್ಣು ನಾಮ ಸಂಕೀರ್ತನೆ ಮತ್ತು ವಿಷ್ಣು ನಮಸ್ಕಾರದ ಮೂಲಕ ಆಚರಿಸಲಾಯಿತು. ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಭಗವತ್ ಪ್ರೀತಿ ಮತ್ತು ಭಗವತ್ ಪ್ರಾಪ್ತಿಗಾಗಿ ಮಾಡುವ ಸತ್ಕರ್ಮಗಳಿಂದ ಪಡೆಯುವ ಪುಣ್ಯ ವಿಶೇಷದಿಂದ ಭಗವಂತನ ಸಾನಿಧ್ಯವನ್ನು ಪಡೆಯಬಹುದು. ಸಮರ್ಪಣ ಭಾವದಿಂದ ಮಾಡುವ ಕರ್ಮಾಚರಣೆಯಿಂದ ಜ್ಞಾನವನ್ನು

ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಾಖೆಯಲ್ಲಿ ವೈಕುಂಠ ಏಕಾದಶಿ ಆಚರಣೆ Read More »

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ

ಸುಳ್ಯ: ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ. ಬಿ. ಫೌಂಡೇಶನ್ ಅಧ್ಯಕ್ಷ ಎಂ. ಬಿ. ಸದಾಶಿವ ಕೃತಿಯನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೃತಿಯ ಸಂಪಾದಕಿ ಡಾ. ಅನುರಾಧಾ ಕುರುಂಜಿ,

‘ಹಿನ್ನೋಟ – ಇದು ನೆನಪಿನ ಬುತ್ತಿ’ ಕೃತಿ ಅನಾವರಣ Read More »

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ

ವಿಟ್ಲ: ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಮಾಡುವುದರ ಜೊತೆಗೆ ಪ್ರತಿ ಮನೆಯಲ್ಲೂ ನಿರಂತರ ಭಜನೆ ನಡೆಯಬೇಕು. ವ್ಯಕ್ತಿ ನಿರ್ಮಾಣ ಶಿಕ್ಷಣ ದೊರೆತಲ್ಲಿ ಮನುಷ್ಯನ ಮನಸ್ಸು ಚಂಚಲಗೊಳ್ಳುವುದಿಲ್ಲ. ಅದಕ್ಕಾಗಿ ಧಾರ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರೇರಣೆ ನೀಡುತ್ತಿದ್ದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ನಿವೃತ್ತ ಅಧ್ಯಾಪಕ ರಾಧಾಕೃಷ್ಣಾಯ ಅಡ್ಯಂತಾಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್( ರಿ) ವಿಟ್ಲ ತಾಲ್ಲೂಕು ಅಳಿಕೆ ವಲಯ ,ಶ್ರೀ ಧರ್ಮಸ್ಥಳ

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ Read More »

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯೆೋೋ ಡಾ. ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ ಗೌರವ ಸಂಚಾಲಕ ಶಿವರಾಮ್ ಕೇನಾಜೆ, ಸಂಚಾಲಕ ನಾಗರಾಜ್ ಮುಳ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಶಾಲಾ

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ Read More »

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಪುತ್ತೂರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಪಥಸಂಚಲನ ಮಾಡಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯಿಂದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋಹಣಗೈದು ಮಾತನಾಡಿದ ಶ್ರೀನಿವಾಸ ಗೌಡ (NCC ಆಫೀಸರ್ ನೇವಿ ವಿಂಗ್ ವಿಠಲ ಪಿಯು ಕಾಲೇಜು ವಿಟ್ಲ), ಕ್ರೀಡೆ ಮತ್ತು ಶಿಕ್ಷಣ ಎರಡು ಕೂಡ ಜೀವನಕ್ಕೆ ಅತ್ಯಗತ್ಯ. ಸಮಾಜದಲ್ಲಿ ಕೆಟ್ಟ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ Read More »

ಶ್ರೀ ಮಹಾಭಾರತ ಸರಣಿಯ 103 ನೇ ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಸೇವಾ ಟ್ರಸ್ಟ್ ಸ್ವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 103ನೇ ತಾಳಮದ್ದಳೆ ಕಲಿಕೀಚಕ ಎಂಬ ಪ್ರಸಂಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಬಿ. ಸುರೇಶ ರಾವ್ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಪರಪ್ಪು ಭಾಗವಹಿಸಿದ್ದರು. ವಿರಾಟನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಂತ್ರಿ ಮಾತಂಗ ಮತ್ತು ಭೀಮಸೇನನಾಗಿ ಶ್ರೀಧರ ಎಸ್ ಪಿ ಕೃಷ್ಣಾಪುರ, ರಥಕಾರನಾಗಿ ಸತೀಶ ಶಿರ್ಲಾಲು, ಕೀಚಕನಾಗಿ ಜಯರಾಮ ಗೌಡ

ಶ್ರೀ ಮಹಾಭಾರತ ಸರಣಿಯ 103 ನೇ ತಾಳಮದ್ದಳೆ Read More »

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ

ಮಂಗಳೂರು: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆಯಾದ ಡಾ. ಕೆ. ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್. ಎಫ್. ರಸ್ಕಿನ್ಹ ಸಭಾಂಗಣ, ಎಲ್.ಸಿ.ಆರ್.ಐ. ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ

ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ Read More »

error: Content is protected !!
Scroll to Top