ಸುದ್ದಿ

ಫೆ.21ರಂದು ಪುತ್ತೂರಿನಲ್ಲಿ ಬೃಹತ್‌ ಉದ್ಯೋಗ ಮೇಳ

ಫೆ.21ರಂದು ಪುತ್ತೂರಿನಲ್ಲಿ ಬೃಹತ್‌ ಉದ್ಯೋಗ ಮೇಳ ನಿರುದ್ಯೋಗಿ ಯುವಕರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಅವಕಾಶ ಮಂಗಳೂರು: ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ವತಿಯಿಂದ ಫೆ.21ರಂದು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಪುತ್ತೂರು ಇಲ್ಲಿ ಆಯೋಜಿಸಲಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕೆ.ಇ.ಜಯರಾಮ್ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಯುವಜನರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು […]

ಫೆ.21ರಂದು ಪುತ್ತೂರಿನಲ್ಲಿ ಬೃಹತ್‌ ಉದ್ಯೋಗ ಮೇಳ Read More »

ಬೃಹತ್‌ ಆನ್‌ಲೈನ್‌ ವಂಚನೆ ಜಾಲ ಬಯಲು : 11 ಮಂದಿ ಸೆರೆ

ದೇಶ-ವಿದೇಶಗಳಲ್ಲಿ ಹರಡಿದ ಜಾಲ, ನೂರಾರು ಬ್ಯಾಂಕ್‌ ಖಾತೆಗಳು, ಸಾವಿರಾರು ಕೋಟಿ ರೂ. ವ್ಯವಹಾರ ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚಿಸಿದ ಆನ್‌ಲೈನ್‌ ವಂಚನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸೆನ್‌ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ. ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ವಂಚಕರಿದ್ದು, ನೇಪಾಳ ಪೊಲೀಸರು ಚೀನಾದ ವಂಚಕರನ್ನು ಈಗಾಗಲೇ ಬಂಧಿಸಿದ್ದಾರೆ. 5 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಗುಜರಾತ್‌ನ ಬಾವಾ ನಗರ್ ಜಿಲ್ಲೆಯ

ಬೃಹತ್‌ ಆನ್‌ಲೈನ್‌ ವಂಚನೆ ಜಾಲ ಬಯಲು : 11 ಮಂದಿ ಸೆರೆ Read More »

ಮಹಿಳಾ ಅಧಿಕಾರಿಗೆ ಬ್ಲಾಕ್ ಮೇಲ್: ಮೂವರು ಖದೀಮರು ಅಂದರ್

ಬೆಳಗಾವಿ: ಹಿಡನ್ ಕೆನರಾ ಬಳಸಿ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡು, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, 50 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ದುಲ್ ರಶೀದ್ ಮಕಾನದಾರ, ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಇವರು ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕೆನರಾ ಇರಿಸಿ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದರು. ಆ ಬಳಿಕ ಆ ಅಧಿಕಾರಿಗೆ

ಮಹಿಳಾ ಅಧಿಕಾರಿಗೆ ಬ್ಲಾಕ್ ಮೇಲ್: ಮೂವರು ಖದೀಮರು ಅಂದರ್ Read More »

ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ವೃದ್ಧೆಯನ್ನು ರಕ್ಷಿಸಿದ ಸ್ಥಳೀಯರು

ಶ್ರೀರಂಗಪಟ್ಟಣ: ವೃದ್ಧೆಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಸ್ಥಳೀಯರು ಅವರನ್ನು ಕಾಪಾಡಿದ ಘಟನೆ ನಡೆದಿದೆ. ಚಾಮರಾಜನಗರದ ಬೆಂಡರವಾಡಿಯ ಗುಂಡಮ್ಮ (78) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು. ಕುಟುಂಬ ಕಲಹಕ್ಕೆ ಬೇಸತ್ತು ವೃದ್ಧೆ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಗಿ ತಿಳಿದು ಬಂದಿದೆ. ವೃದ್ಧೆ ನದಿಗೆ ಹಾರಿದ್ದನ್ನು ‌ಸ್ಥಳೀಯರು ನೋಡಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ. ನೀರಿನ ಮಟ್ಟ ಕಡಿಮೆ ಇದ್ದು, ತಕ್ಷಣವೇ ಸ್ಥಳೀಯರು ನೀರಿಗೆ ಹಾರಿ ಅವರನ್ನು ರಕ್ಷಿಸಿದ್ದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ಹಾಗೆ ಸ್ಥಳೀಯರೇ

ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ವೃದ್ಧೆಯನ್ನು ರಕ್ಷಿಸಿದ ಸ್ಥಳೀಯರು Read More »

ಬೆಂಗಳೂರಿಗರಿಗೆ ಈ ಬಾರಿಯೂ ತಟ್ಟಲಿದೆಯಾ ಕಾವೇರಿ ಬೆಲೆ ಏರಿಕೆಯ ಬರೆ?

ಬೆಂಗಳೂರು: ನಗರವಾಸಿಗಳಿಗೆ ಮೆಟ್ರೋ ಪ್ರಯಾಣ ದರ ಏರಿಕೆಯ ಜೊತೆಗೆ ಕುಡಿಯುವ ನೀರಿನ ದರವೂ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊಡೆತ ಬೀಳುವ ಸ್ಥಿತಿ ನಿರ್ಮಾಣವಾಗಿದೆ. BWSSB (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) 3% ಗಳಷ್ಟು ಕುಡಿಯುವ ಕಾವೇರಿ ನೀರಿನ ದರವನ್ನು ಏರಿಕೆ ಮಾಡುವ ಚಿಂತನೆ ನಡೆಸುತ್ತಿದೆ. ಪ್ರತಿ ವರ್ಷವೂ ನೀರಿನ ದರ ಏರಿಸುವ ಬಗ್ಗೆ ಆಡಳಿತ ಸುಧಾರಣಾ ಸಮಿತಿ ಶಿಫಾರಸು ಮಾಡಿದ್ದು, ಅದರನ್ವಯ ಈ ವರ್ಷವೂ ದರ ಪರಿಷ್ಕರಣೆ ಮಾತುಕತೆ ನಡೆಯುತ್ತಿದೆ. ಬೆಲೆ ಏರಿಕೆಯ ಬಿಸಿ

ಬೆಂಗಳೂರಿಗರಿಗೆ ಈ ಬಾರಿಯೂ ತಟ್ಟಲಿದೆಯಾ ಕಾವೇರಿ ಬೆಲೆ ಏರಿಕೆಯ ಬರೆ? Read More »

ಮಂಗಳೂರು : ರೈಲ್ವೆ ಹಳಿಯಲ್ಲಿ ಯುವಕ ಸಂಶಯಾಸ್ಪದವಾಗಿ ಸಾವು

ಮಂಗಳೂರು : ನಗರದ ಪಚ್ಚನಾಡಿ ಪ್ರದೇಶದ ರೈಲ್ವೆ ಹಳಿಯ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತನನ್ನು ಪಚ್ಚನಾಡಿ ಬಂದಲೆ ನಿವಾಸಿ ಬಬಿತ್ ಎಂದು ಗುರುತಿಸಲಾಗಿದೆ. ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣ ಸಂಶಯಾಸ್ಪದವಾಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಬ್ಯಾಗ್ ಸೇರಿದಂತೆ ಮೃತನಿಗೆ ಸೇರಿದ್ದ ಇತರ ವಸ್ತುಗಳು ಪತ್ತೆಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತನಿಖೆಯ ನಂತರವೇ ತಿಳಿದುಬರಲಿದೆ.

ಮಂಗಳೂರು : ರೈಲ್ವೆ ಹಳಿಯಲ್ಲಿ ಯುವಕ ಸಂಶಯಾಸ್ಪದವಾಗಿ ಸಾವು Read More »

ಅಪಘಾತದಲ್ಲಿ ಮೂವರು ಕಾರ್ಮಿಕ ಮಹಿಳೆಯರು ಸ್ಥಳದಲ್ಲೇ ಸಾವು

ಕ್ರೂಸರ್‌-ಕ್ಯಾಂಟರ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತ ಗದಗ: ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಗಜೇಂದ್ರಗಢದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತ ಹೊಸಮನಿ (48), ಮರಿಯಂಬೂ ಹುನಗುಂದ (55) ಎಂದು ಗುರುತಿಸಲಾಗಿದೆ. ಇವರು ರೋಣಕ್ಕೆ ಕಡಲೆ ಕೀಳಲು ಹೊರಟಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ

ಅಪಘಾತದಲ್ಲಿ ಮೂವರು ಕಾರ್ಮಿಕ ಮಹಿಳೆಯರು ಸ್ಥಳದಲ್ಲೇ ಸಾವು Read More »

ಯುವತಿ ನಾಪತ್ತೆ: ದೂರು ದಾಖಲು

ಉಪ್ಪಿನಂಗಡಿ: ಯುವತಿಯೊಬ್ಬಳು ಮಂಗಳವಾರ ಬೆಳಗ್ಗಿನ ಜಾವದಿಂದ ‌ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ಉರುವಾಲು ಗ್ರಾಮದ ಮಜಿಕುಡೇಲುವಿನಿಂದ ವರದಿಯಾಗಿದೆ. ನಾಪತ್ತೆಯಾದ ಯುವತಿಯನ್ನು ಸುಪ್ರಿತಾ(20) ಎಂದು ಗುರುತಿಸಲಾಗಿದೆ. ಸೋ‌ಮವಾರ ರಾತ್ರಿ ಎಂದಿನಂತೆ ಮಲಗಿದ್ದು, ಮಂಗಳವಾರ ಮುಂಜಾನೆ ಮನೆಯಲ್ಲಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಆ ಬಳಿಕ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ‌ತಿಳಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆ ಬಲ್ಲವರಾಗಿದ್ದು, 10 ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ. 4 ಅಡಿ 6

ಯುವತಿ ನಾಪತ್ತೆ: ದೂರು ದಾಖಲು Read More »

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು

ಕಡಬ: ನಾಯಿ ಅಡ್ಡ ಬಂದ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಪಂಜ ರಸ್ತೆಯ ಕೊಡಿಂಬಾಳ ಮಧುರ ಚೆಡವು ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯ ಠಾಣಾ ಎ.ಎಸ್. ಐ. ಸೀತಾರಾಮ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರಿಗೆ ನಾಯಿ ಅಡ್ಡ ಬಂದಿದ್ದು, ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರಿನಲ್ಲಿದ್ದ ‌ಸೀತಾರಾಮ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಗಿ ತಿಳಿದು ಬಂದಿದೆ.

ನಾಯಿ ಅಡ್ಡ ಬಂದು ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು Read More »

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ

ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಭಾರತದ ಜೊತೆ ಆಡದಿರಲು ನಿರ್ಧಾರ ಇಸ್ಲಾಮಾಬಾದ್‌ : ಮುಂಬರುವ ಶನಿವಾರದಿಂದ ಪ್ರಾರಂಭವಾಗಲಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15ರಂದು ಭಾರತ–ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ. ಪಾಕಿಸ್ತಾನದ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ Read More »

error: Content is protected !!
Scroll to Top