ಸುದ್ದಿ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ಹಣ, ತಿಂಡಿಯ ಆಮಿಷವೊಡ್ಡಿ ಕೃತ್ಯ ಎಸಗಿದ ಯುವಕ​ಮಂಗಳೂರು : ಒಂಬತ್ತು ಬಾಲಕನಿಗೆ ಹಣ ಮತ್ತು ತಿಂಡಿಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣವೊಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರು ಪೋಸ್ಟ್ ವ್ಯಾಪ್ತಿಯ ಮಡ್ಯಾರ್ ನಿವಾಸಿ, ಬಿಜೈನ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆಶೀಶ್ ಪೂಜಾರಿ (33) ಬಂಧಿತ ಆರೋಪಿ. ಬಾಲಕನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ವಿಕೃತ ಚಟುವಟಿಕೆಗಳಿಗೆ ಪ್ರೇರೇಪಿಸಿದಲ್ಲದೆ, ದೈಹಿಕ ದೌರ್ಜನ್ಯ ಎಸಗಿರುವ ಬಗ್ಗೆ ಪೋಷಕರು ನೀಡಿದ ದೂರಿನ […]

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ Read More »

ಇರಾನ್‌ನ ಇನ್ನೋರ್ವ ಪ್ರಮುಖ ನಾಯಕನ ಹತ್ಯೆ

ಇಸ್ರೇಲ್‌ ದಾಳಿಗೆ ಬಲಿಯಾದ ಭದ್ರತಾ ಸಚಿವ ಎಸ್ಮಾಯಿಲ್‌ ಖತೀಬ್‌ ನವದೆಹಲಿ : ಇರಾನ್‌ನ ಭದ್ರತಾ ಸಚಿವ ಅಲಿ ಲಾಲಿಜಾರಿಯನ್ನು ಸಾಯಿಸಿದ ಬೆನ್ನಿಗೆ ಇನ್ನೋರ್ವ ಸಚಿವನನ್ನು ಇಸ್ರೇಲ್‌ ಬಲಿತೆಗೆದುಕೊಂಡಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು ಹೇಡಿತನದ ಹತ್ಯೆ ಎಂದು ಕರೆದಿದ್ದಾರೆ. ಇಸ್ರೇಲ್ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ

ಇರಾನ್‌ನ ಇನ್ನೋರ್ವ ಪ್ರಮುಖ ನಾಯಕನ ಹತ್ಯೆ Read More »

ನದಿಯಲ್ಲಿ ಮುಳುಗಿ ಬಾಲಕ ಸಾವು

ಮುಂಡಾಜೆ: ದ್ವಿತೀಯ ಪಿಯುಸಿಯ ವಿದ್ಯಾರ್ಥಿಯೊಬ್ಬ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಸಮಜಲು ಎಂಬಲ್ಲಿ ನಡೆದಿದೆ. ಮೃತನನ್ನು ನಿಶಾಂತ್ ಎಂದು ಗುರುತಿಸಲಾಗಿದೆ. ಈತ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ. ಮಾ. 18 ರ ಮಧ್ಯಾಹ್ನ ಆತ ಈಜಾಟಕ್ಕೆಂದು ನದಿಗೆ ತೆರಳಿದ್ದು, ಈ ವೇಳೆ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದವರು ಅವನನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ದುರದೃಷ್ಟವಶಾತ್ ಅದಾಗಲೇ ಆತ ಸಾವನ್ನಪ್ಪಿದ್ದಾನೆ.

ನದಿಯಲ್ಲಿ ಮುಳುಗಿ ಬಾಲಕ ಸಾವು Read More »

ಮಯೂರ ಜಂಕ್ಷನ್ ರಾಜಕಾಲುವೆ ‌ನಿರ್ಮಾಣದಲ್ಲಿ ಲೋಪ: ಬಿಲ್ ಸ್ಥಗಿತಕ್ಕೆ ಪುಡಾ ಅಧ್ಯಕ್ಷರಿಂದ ‌ಸೂಚನೆ

ಪುತ್ತೂರು: ಮಯೂರ ಜಂಕ್ಷನ್ ಸಮೀಪದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಾಜಕಾಲುವೆ ‌ಡ್ರೈನೇಜ್ ಮತ್ತು ಸ್ಲಾಬ್ ‌ಕಾಮಗಾರಿಯಲ್ಲಿ ಅಕ್ರಮದ ವಾಸನೆ ಬಡಿದಿದ್ದು, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ಅವರಿಗೆ ತಕ್ಷಣವೇ ಈ ಕೆಲಸದ ಬಿಲ್ ಸ್ಥಗಿತ ಮಾಡುವಂತೆ ನಗರಸಭೆಗೆ ಸೂಚಿಸಲಾಗಿದೆ. ಆರಂಭದಿಂದಲೂ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ರಾಮಚಂದ್ರ ಅವರು ನಿರಂತರ ಪರಿಶೀಲನೆ ನಡೆಸುತ್ತಿದ್ದರು. ಕಾಮಗಾರಿ ಒಂದು ನಡೆಸುವ ವಾರದ ಮೊದಲು, ಕಬ್ಬಿಣದ ಸರಳುಗಳನ್ನು ಸರಿಯಾಗಿ ಕಟ್ಟಿರುವುದು ಮತ್ತು ಹಲಿಗೆಗಳ ನಡುವಿನ ಸೀಳುಗಳನ್ನು

ಮಯೂರ ಜಂಕ್ಷನ್ ರಾಜಕಾಲುವೆ ‌ನಿರ್ಮಾಣದಲ್ಲಿ ಲೋಪ: ಬಿಲ್ ಸ್ಥಗಿತಕ್ಕೆ ಪುಡಾ ಅಧ್ಯಕ್ಷರಿಂದ ‌ಸೂಚನೆ Read More »

ಹದಿನೈದು ದಿನದ ಹಸುಗೂಸು ಅನುಮಾನಾಸ್ಪದ ಸಾವು: ತಂದೆಯೇ ‌ಕೊಲೆಗೈದಿರುವ ಸಂದೇಹ

ಬೆಳಗಾವಿ: ಹದಿನೈದು ದಿನಗಳ ಹೆಣ್ಣುಗೂಸು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಮಗುವಿನ ತಂದೆಯೇ ವಿಷವುಣಿಸಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಮಗುವನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಹೆರಿಗೆಯ ಬಳಿ ಶೀಲಾ ಅವರು ತವರು ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಶೀಲಾ ಪತಿ ಭೀಮರಾಯ ಹೆಂಡತಿ ಮತ್ತು ಮಗುವನ್ನು ನೋಡಲು ಅಲ್ಲಿಗೆ ಆಗಮಿಸಿದ್ದಾನೆ. ಆತ ಬಂದು ಹೋದ ಕೆಲ ಹೊತ್ತಿನಲ್ಲೇ ಆರೋಗ್ಯವಾಗಿದ್ದ ಮಗು ಏಕಾಏಕಿ ಮೃತಪಟ್ಟಿದೆ. ಈ ಸಾವು ಮನೆಯವರನ್ನು ಬೆಚ್ಚಿ ಬೀಳಿಸಿದೆ. ಈ ವೇಳೆ

ಹದಿನೈದು ದಿನದ ಹಸುಗೂಸು ಅನುಮಾನಾಸ್ಪದ ಸಾವು: ತಂದೆಯೇ ‌ಕೊಲೆಗೈದಿರುವ ಸಂದೇಹ Read More »

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ

ಸವಣೂರು: ಎಸ್ ಎಸ್ ಎಲ್ ಸಿ 2026 ಪರೀಕ್ಷಾ ಕೇಂದ್ರವಾದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಅವರು ದೀಪ ಪ್ರಜ್ವಲನೆಯ ಮೂಲಕ ಪರೀಕ್ಷೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷರ ಶಿವಕುಮಾರ್, ಉಪಧೀಕ್ಷಕಿ ಲಕ್ಷ್ಮೀ, ಪ್ರಶ್ನೆಪತ್ರಿಕೆ ಅಧೀಕ್ಷಕ ಸತೀಶ್ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ Read More »

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ

ನವದೆಹಲಿ: ಕಟ್ಟಡವೊಂದರಲ್ಲಿ ಬೆಂಕಿ ಹತ್ತಿಕೊಂಡು ಒಂಬತ್ತು ಜನರು ಸಜೀವ ಸುಟ್ಟು ಹೋದ ಘಟನೆ ನೈಋತ್ಯ ದೆಹಲಿಯ ಪಾಲಂ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಏಕಾಏಕಿ ಈ ದುರಂತ ಸಂಭವಿಸಿರುವುದಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಕಟ್ಟಡದ ಒಳಗೆ ಜನರು ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ Read More »

ಇರಾನ್‌ ಮೇಲೆ 2200 ಕೆಜಿ ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ

ಹಾರ್ಮುಜ್‌ ಜಲಸಂಧಿ ಬಳಿ ಇರುವ ಕ್ಷಿಪಣಿ ತಾಣಗಳನ್ನು ಗುರಿ ಮಾಡಿಕೊಂಡು ದಾಳಿ ಟೆಹ್ರಾನ್: ಇರಾನ್‌-ಇಸ್ರೇಲ್‌ ಮತ್ತು ಅಮೆರಿಕ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿರುವ ಇಮೆರಿಕ ಇರಾನ್‌ ಮೇಲೆ ಬರೋಬ್ಬರಿ 2200 ಕೆಜಿ ಬಾಂಬ್‌ ತಂದು ಹಾಕಿದೆ. ಇರಾನ್‌ ಹಿಡಿತದಲ್ಲಿರುವ ಜಗತ್ತಿನ ಪ್ರಮುಖ ನೌಕಾಮಾರ್ಗ ಹಾರ್ಮುಜ್‌ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿ 2,200 ಕೆಜಿಯ ಬೃಹತ್‌ ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದೆ. ಇರಾನಿನ ಕ್ಷಿಪಣಿ ತಾಣಗಳನ್ನು ಈ ದಾಳಿಯಲ್ಲಿ ನಾಶ ಮಾಡಿರುವುದಾಗಿ

ಇರಾನ್‌ ಮೇಲೆ 2200 ಕೆಜಿ ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ Read More »

ವೃದ್ಧನನ್ನು ಮಂಗಳೂರಿಗೆ ಕೊರಿಯರ್‌ ಮೂಲಕ ಪಾರ್ಸಲ್‌ ಮಾಡಲು ಮುಂದಾದ ತಂಡ!

ಬಸ್‌ ಟಿಕೆಟ್‌ ದರ ಹೆಚ್ಚಾಗಿದೆ ಎಂದು ಕೊರಿಯರ್‌ ಮೂಲಕ ಕಳುಹಿಸುವ ಐಡಿಯಾ ಬೆಂಗಳೂರು: ರೀಲ್ಸ್‌ ಮಾಡುವುದಕ್ಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ ಕೊರಿಯರ್‌ ಮಾಡಲು ಬಂದ ಕೊರಿಯರ್‌ ಆಫೀಸ್‌ಗೆ ತಂಡವೊಂದು ಬಂದ ಘಟನೆ ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದೆ. ಮಂಗಳೂರಿಗೆ ಕೊರಿಯರ್ ಪಾರ್ಸೆಲ್ ಮಾಡುವ ನೆಪದಲ್ಲಿ ಈ ತಂಡ ವೈಯಾಲಿಕಾವಲ್‌ನಲ್ಲಿರುವ ಕೊರಿಯರ್‌ ಆಫೀಸ್‌ಗೆ ಬಂದಿದೆ. ಸಂಜೆ 4.30ರ ಸುಮಾರಿಗೆ ಬಿಳಿಬಣ್ಣದ ಭಾರವಾದ ಗೋಣಿಚೀಲದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್‌ನಲ್ಲಿರುವ ಕೊರಿಯರ್ ಆಫೀಸ್‌ಗೆ ಬಂದು ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ

ವೃದ್ಧನನ್ನು ಮಂಗಳೂರಿಗೆ ಕೊರಿಯರ್‌ ಮೂಲಕ ಪಾರ್ಸಲ್‌ ಮಾಡಲು ಮುಂದಾದ ತಂಡ! Read More »

ಅಡಿಕೆಯಲ್ಲಿಲ್ಲ ಹಾನಿಕಾರಕ ಅಂಶ : ಸರ್ಕಾರದ ಹೇಳಿಕೆ

ಅಡಿಕೆ ಹಾನಿಕಾರಕ ಅಲ್ಲ ಎಂದು ತಿಳಿಸಿದ ಸಂಶೋಧನಾ ಮಧ್ಯಂತರ ವರದಿ ಬೆಂಗಳೂರು: ಅಡಿಕೆಯಲ್ಲಿ ಆರೋಗ್ಯಕ್ಕೆ ಮಾರಕವಾಗುವ ಅಪಾಯಕಾರಿ ಅಂಶ ಇಲ್ಲ ಎಂದು ಸರ್ಕಾರ ಹೇಳಿದೆ. ಈ ಕುರಿತು ಕಲಾಪದಲ್ಲಿ ಹೇಳಿಕೆ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳು ಇಲ್ಲ ಎಂಬುದು ಸಂಶೋಧನಾ ಮಧ್ಯಂತರ ವರದಿಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಅಡಿಕೆ ಹಾನಿಕಾರಕವಲ್ಲ ಮತ್ತು ಅದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂಬುದನ್ನು ನಿರೂಪಿಸಲು ಸಂಶೋಧನೆಗಳು

ಅಡಿಕೆಯಲ್ಲಿಲ್ಲ ಹಾನಿಕಾರಕ ಅಂಶ : ಸರ್ಕಾರದ ಹೇಳಿಕೆ Read More »

error: Content is protected !!
Scroll to Top