ಸತ್ಯಕ್ಕೆ ದೂರವಾದ ವರದಿ ಬಿತ್ತರ : ಕನ್ನಡ ನ್ಯೂಸ್ ಚಾನೆಲ್ ವಿರುದ್ಧ ಜಿಲ್ಲೆಯ ಸಮಸ್ತ ಒಕ್ಕಲಿಗ ಸಮುದಾಯದಿಂದ ಖಂಡನೆ | ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ.
ಮಂಗಳೂರು: ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ 3.75 ಲಕ್ಷಕ್ಕಿಂತ ಅಧಿಕ ಮತದಾರರನ್ನು ಹೊಂದಿದ್ದು, ಇದು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಆಯೋಗ ನೀಡಿದ ವರದಿ ಹಾಗೂ ಒಕ್ಕಲಿಗರ ಸಂಘವು ನೀಡಿದ ಆಂತರಿಕ ಅಂಕಿಅಂಶವಾಗಿದೆ. ಆದರೆ ಕನ್ನಡ ನ್ಯೂಸ್ ಚಾನೆಲ್ ಒಂದು ತನ್ನ ವರದಿಯಲ್ಲಿ ದ.ಕ.ಜಿಲ್ಲೆಯಲ್ಲಿ ಕೇವಲ 80 ಸಾವಿರ ಅಂತ ಬಿಂಬಿಸಿ ನಿಕೃಷ್ಟ ಮತ್ತು ತಾತ್ಸಾರ ವರದಿ ನೀಡಿರುವುದು ಸಮುದಾಯದಲ್ಲಿ ಆಕ್ರೋಶ ಮತ್ತು ತಳಮಳಕ್ಕೆ ಕಾರಣವಾಗಿದೆ. ಅಧ್ಯಯನ ಪೂರಕ, ವಸ್ತುನಿಷ್ಠ ಸಂತ್ಯಾಂಶರಹಿತ ವರದಿ ಪ್ರಕಟಿಸಿರುವುದು ಮಾಧ್ಯಮದ ಘನತೆಗೆ ತಕ್ಕುದಲ್ಲ ಎಂದು […]










