ಸುದ್ದಿ

ಕೊನೆಗೂ ಸೆರೆಯಾಯ್ತು ನರಹಂತಕ ಕಾಡಾನೆ

ಮಡಿಕೇರಿ: ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 34 ವರ್ಷದ ನರಹಂತಕ ಕಾಡಾನೆಯನ್ನು ಪಾಲಿಬೆಟ್ಟ ‌ಸಮೀಪದ ಚೆನ್ನಯ್ಯನಕೋಟೆಯ ಬಾಡಗ ಬಾಣಂಗಾಲ ಎಂಬಲ್ಲಿಯ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ. ಈ ಆನೆ ಹಾಡುಹಗಲೇ ಕಾಫಿ ಬೆಳೆಗಾರರೊಬ್ಬರನ್ನು ಬಲಿ ಪಡೆದಿತ್ತು. ನರಹಂತಕ ಆನೆಯ ಸೆರೆಗೆ ಅರಣ್ಯ ಇಲಾಖೆಯು ಸಾಕಾನೆಗಳಾದ ಕಂಜನ್, ಸುಗ್ರೀವ, ಧನಂಜಯ, ಪ್ರಶಾಂತ್, ಹರ್ಷ, ಅಯ್ಯಪ್ಪನನ್ನು ಬಳಕೆ ಮಾಡಿಕೊಂಡಿದ್ದರು. ಪಶುವೈದ್ಯರು ಕಾಡಾನೆಗೆ ಅರಿವಳಿಕೆ ಔಷಧ ನೀಡಿದ್ದು, ಬಳಿಕ ಸಾಕಾನೆಗಳು ಕಾಡಾನೆಯನ್ನು ಸುತ್ತುವರಿದು ಯಶಸ್ವಿಯಾಗಿ ಬಂಧಿಸಲಾಗಿದೆ.

ಕೊನೆಗೂ ಸೆರೆಯಾಯ್ತು ನರಹಂತಕ ಕಾಡಾನೆ Read More »

ರಿಕ್ಷಾದಲ್ಲಿ ಕುಳಿತು ಮಹಿಳೆ ಮೇಲೆ ಮೂತ್ರ ಮಾಡಿದ ಯುವಕ : ಥಳಿಸಿ ಕೊಂದ ಜನ

ಕುಡಿದ ಅಮಲಿನಲ್ಲಿ ಮಾಡಬಾರದ ಕೃತ್ಯ ಎಸಗಿದ ಯುವಕ ಚೆನ್ನೈ: ಕುಡಿದ ಮತ್ತಲ್ಲಿ ಆಟೋದಲ್ಲಿ ಕುಳಿತು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಯುವಕನ್ನು ಜನರು ಥಳಿಸಿ ಕೊಂದ ಘಟನೆ ಘಟನೆ ಚೆನ್ನೈಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಕಲೈಸೆಲ್ವನ್ ಎಂದು ಗುರುತಿಸಲಾಗಿದ್ದು, ಸ್ನೇಹಿತನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಎಂದು ತಿಳಿದುಬಂದಿದೆ. ಬುಧವಾರ ಕಲೈಸೆಲ್ವನ್ ಕುಡಿದ ಮತ್ತಿನಲ್ಲಿ ಸ್ನೇಹಿತನೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಆಟೋದಲ್ಲೇ ಕುಳಿತು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕಲೈಸೆಲ್ವನ್ ಹಾಗೂ

ರಿಕ್ಷಾದಲ್ಲಿ ಕುಳಿತು ಮಹಿಳೆ ಮೇಲೆ ಮೂತ್ರ ಮಾಡಿದ ಯುವಕ : ಥಳಿಸಿ ಕೊಂದ ಜನ Read More »

SSLC ಪರೀಕ್ಷಾ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

ಬೆಂಗಳೂರು: ಮಾ. 18 ರಿಂದ ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ಆರಂಭವಾಗಲಿದ್ದು, ಈ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ದಿನಾಂಕ: 18-03-2026 ರಿಂದ 02-04-2026 88 2025-26 2 ಎಸ್.ಎಸ್.ಎಲ್.ಸಿ ಪರೀಕ್ಷೆ -1 ಅನ್ನು ಬೆಂಗಳೂರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ದಿನಗಳಂದು ಪರೀಕ್ಷಾ

SSLC ಪರೀಕ್ಷಾ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ Read More »

ಎಲ್‌ಪಿಜೆ ಕೊರತೆ : ಕಲ್ಲಿದ್ದಲು, ಪಿಎನ್‌ಜಿ ಬಳಸಲು ಕೇಂದ್ರ ಸರ್ಕಾರ ಸಲಹೆ

ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆ ವ್ಯತ್ಯಯವಾಗಿ ಸಮಸ್ಯೆ ನವದೆಹಲಿ: ಮಧ್ಯಪ್ರಾಚ್ಯದ ಯುದ್ಧ ತೀವ್ರಗೊಂಡಿದ್ದು, ಸದ್ಯಕ್ಕೆ ನಿಲ್ಲುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್‌ ಮಿತವಾಗಿ ಬಳಸುವಂತೆ ಸಲಹೆ ನೀಡಿದೆ. ಯುದ್ಧದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದ್ದು, ಯುದ್ಧ ಇದೇ ರೀತಿ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥಾಪನೆಗಳು ಕಲ್ಲಿದ್ದಲು ಹಾಗೂ ಪರ್ಯಾಯ ಇಂಧನ ಬಳಸುವ ಮೂಲಕ ಮಿತವ್ಯಯ ಮಾಡಬೇಕು ಹಾಗೂ ಮನೆಗಳಲ್ಲಿ ಪಿಎನ್‌ಜಿ ಅನಿಲ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ

ಎಲ್‌ಪಿಜೆ ಕೊರತೆ : ಕಲ್ಲಿದ್ದಲು, ಪಿಎನ್‌ಜಿ ಬಳಸಲು ಕೇಂದ್ರ ಸರ್ಕಾರ ಸಲಹೆ Read More »

ಕೆಲಸಕ್ಕೆಂದು ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಪಲಾಯನ

ಮಂಗಳೂರು: ಕೂಲಿ ಕೆಲಸಕ್ಕೆಂದು ಹೊರಜಿಲ್ಲೆಯ ಮಹಿಳೆಯನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಚಾರ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ಮಂಗಳೂರಿನ ಲಾಲ್‌ಭಾಗ್‌ನಲ್ಲಿ ಸಂಭವಿಸಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪಲಾಯನ ಮಾಡಿದ್ದಾನೆ. ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಎಂದಿನಂತೆ ಕೆಲಸ ಅರಸಿಕೊಂಡು ನಿಂತಿದ್ದ 35ರ ಹರೆಯದ ಮಹಿಳೆಯನ್ನು ಆರೋಪಿ ತನ್ನ ಮನೆಯಲ್ಲಿ ಕೆಲಸ ಇದೆ ಎಂದು ಹೇಳಿ ಲಾಲ್‌ಬಾಗ್‌ಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಲಾಲ್‌ಬಾಗ್‌ನ ಪಂಪ್‌ಹೌಸ್‌ನ ಜನವಸತಿಯಿಲ್ಲದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಜನ ಸೇರಿದ್ದು,

ಕೆಲಸಕ್ಕೆಂದು ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ : ಆರೋಪಿ ಪಲಾಯನ Read More »

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು

ಇರಾನ್‌ ವಿದೇಶಾಂಗ ಸಚಿವ ಬಹಿರಂಗಪಡಿಸಿದ ರಹಸ್ಯ ಟೆಹ್ರಾನ್‌: ರಷ್ಯಾದಿಂದ ತೈಲ ಖರೀದಿಸುವಂತೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿದ್ದಲ್ಲ ಬದಲಾಗಿ ಬೇಡಿಕೊಂಡದ್ದು ಎಂದು ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಬಹಿರಂಗಪಡಿಸಿದ್ದಾರೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಬಳಿ ಈಗ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬೇಡಿಕೊಳ್ಳುವ ಸ್ಥಿತಿಗೆ ಅಮೆರಿಕವನ್ನು ತಂದು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಮದ್ಯಪ್ರಾಚ್ಯ ಯುದ್ಧ ಶುರುವಾದ ಬಳಿಕ ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದು,

ರಷ್ಯಾದಿಂದ ತೈಲ ಖರೀದಿಸಲು ಭಾರತದ ಬಳಿ ಅಮೆರಿಕ ಬೇಡಿಕೊಂಡಿತ್ತು Read More »

ದ.ಕ.ಜಿಲ್ಲೆಯಲ್ಲಿ ಗ್ಯಾಸ್‌ ಕೊರತೆಯಿಲ್ಲ : ಜಿಲ್ಲಾಡಳಿತ

ಗೃಹ ಬಳಕೆ ಸಿಲಿಂಡರ್‌ ಸಮಸ್ಯೆಯಿ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಅನಿಲ ಸಿಲಿಂಡರ್ಗಳ ದಾಸ್ತಾನು ಇದ್ದು, ಜಿಲ್ಲೆಯ ಎಲ್ಲ ಗೃಹ ಬಳಕೆ ಅನಿಲ ಗ್ರಾಹಕರು ಗಾಬರಿ/ ಆತಂಕಪಡಬಾರದೆಂದು ಹಾಗೂ ಹೆಚ್ಚುವರಿ ದಾಸ್ತಾನು ಮಾಡಿಕೊಳ್ಳಬಾರದು ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಸಿಲಿಂಡರ್‌ಗಳ ಕೊರತೆ ಇಲ್ಲದಿರುವುದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಭಿತ್ತರವಾಗುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಗೃಹ ಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ

ದ.ಕ.ಜಿಲ್ಲೆಯಲ್ಲಿ ಗ್ಯಾಸ್‌ ಕೊರತೆಯಿಲ್ಲ : ಜಿಲ್ಲಾಡಳಿತ Read More »

ಇರಾನ್‌ನ ದ್ವೀಪದ ಮೇಲೆ ಭೀಕರ ಬಾಂಬ್‌ ದಾಳಿ ಮಾಡಿದ ಅಮೆರಿಕ

ಇರಾನ್‌ ಆರ್ಥಿಕತೆಯ ಬೆನ್ನೆಲುಬಾದ ಖಾರ್ಗ್‌ ದ್ವೀಪ ಸರ್ವನಾಶ ಟೆಹ್ರಾನ್ : ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಬಾಂಬ್ ದಾಳಿಯನ್ನು ಅಮೆರಿಕ ಇರಾನ್ ಮೇಲೆ ಮಾಡಿದೆ. ಇರಾನ್‌ನ ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ಮೇಲೆ ಅಮೆರಿಕದ ಸೇನೆ ಮರಣಾಂತಿಕ ಪೆಟ್ಟು ನೀಡಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇರಾನ್‌ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳ ಮಳೆ ಸುರಿಸಿದೆ. ಇದರಿಂದ ಇರಾನ್‌ನ ತೈಲ

ಇರಾನ್‌ನ ದ್ವೀಪದ ಮೇಲೆ ಭೀಕರ ಬಾಂಬ್‌ ದಾಳಿ ಮಾಡಿದ ಅಮೆರಿಕ Read More »

ಮಾ. 15: ಕೋಕೋ ಮಿತ್ರ ಸಂಸ್ಥೆ ಶುಭಾರಂಭ

ಸುಳ್ಯ: ನೂತನವಾದ ಕೋಕೋ ‌ಮಿತ್ರ ಎಂಬ ಹೆಸರಿನ ಪರಿಶುದ್ಧ ತೆಂಗಿನೆಣ್ಣೆ ಮತ್ತು ಇತರ ವಸ್ತುಗಳ ತಯಾರಿಕಾ ಘಟಕವು ಮಾ. 15 ರ ಆದಿತ್ಯವಾರದಂದು ‌ನಿಂತಿಕಲ್ಲಿನಲ್ಲಿ ಶುಭಾರಂಭಗೊಳ್ಳಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, ಮಂಗಳೂರು ಇಲ್ಲಿನ ಪರಮ ಪೂಜ್ಯ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಪವಿತ್ರ ಪಾವಕ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ.ಶಾಸಕಿ ಭಾಗೀರಥಿ ಮುರುಳ್ಯ ಅವರು ಘಟಕದ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಜಾನಪದ ವಿವಿ ಹಾವೇರಿಯ ‌ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ

ಮಾ. 15: ಕೋಕೋ ಮಿತ್ರ ಸಂಸ್ಥೆ ಶುಭಾರಂಭ Read More »

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ

ಉಡುಪಿ: ಕುಂಜಿಬೆಟ್ಟುವಿನ ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ (ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಘಟಕ)ದ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ. ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ.

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ Read More »

error: Content is protected !!
Scroll to Top