ಸುದ್ದಿ

ಮಹಿಳೆಯರಿಗೆ ಸಿಗಲಿದೆ ಶಕ್ತಿ ಸ್ಮಾರ್ಟ್‌ಕಾರ್ಡ್‌

ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ದಾಖಲೆಯಾಗಿ ಸ್ಮಾರ್ಟ್‌ಕಾರ್ಡ್‌ ಬಳಕೆ ಬೆಂಗಳೂರು: ಶಕ್ತಿ ಯೋಜನೆಯಡಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಪ್ರತಿಸಲ ಆಧಾರ್‌ ಕಾರ್ಡ್‌ ಒಯ್ದು ನಿರ್ವಾಹಕರಿಗೆ ತೋರಿಸುವ ಕಷ್ಟವನ್ನು ತಪ್ಪಿಸುವ ಸಲುವಾಗಿ ಸರಕಾರ ಮಹಿಳೆಯರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಿದೆ. ಶಕ್ತಿ ಯೋಜನೆಯನ್ನು ಸರಳೀಕರಿಸುವ ಪ್ರಕ್ರಿಯೆಯಂಗವಾಗಿ ಶೀಘ್ರದಲ್ಲೇ ಎಲ್ಲ ಫಲಾನುಭವಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಪ್ರತಿ ಸಲ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರು ತಮ್ಮ ಆಧಾರ್‌ ಕಾರ್ಡ್‌ ತೋರಿಸಬೇಕಾಗುತ್ತದೆ. […]

ಮಹಿಳೆಯರಿಗೆ ಸಿಗಲಿದೆ ಶಕ್ತಿ ಸ್ಮಾರ್ಟ್‌ಕಾರ್ಡ್‌ Read More »

ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌

ಡಿಕೆಶಿ ವಿದೇಶದಲ್ಲಿರುವಾಗ ಆಪ್ತರೊಂದಿಗೆ ಗೂಢಾಲೋಚನೆ ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಗುಸುಗುಸು ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಆಪ್ತ ಸಚಿವರ ಜೊತೆ ನಡೆಸಿದ ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಜೊತೆಗೆ ಸಂಪುಟ ಪುನರ್‌ ರಚನೆಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ಪಡಸಾಲೆಯಲ್ಲಿ ಈ ಡಿನ್ನರ್‌ ಮೀಟಿಂಗ್‌ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿದೇಶ ಪ್ರವಾಸದಲ್ಲಿರುವಾಗಲೇ ಸಿದ್ದರಾಮಯ್ಯ ಆಪ್ತರ

ಕುತೂಹಲ ಕೆರಳಿಸಿದ ಸಿದ್ದರಾಮಯ್ಯ ಡಿನ್ನರ್‌ ಮೀಟಿಂಗ್‌ Read More »

ಪ್ರೀತಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ | ಆರೋಪಿ ಮೇಲೆ ಪೋಕ್ಸೋ, ಅಟ್ರಾಸಿಟಿ ಪ್ರಕರಣ ದಾಖಲು

ಕಡಬ : ಕಾಲೇಜ್ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಅದನ್ನು ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ ಮೇಲ್‍ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಒಂಕಲ್ ನಿವಾಸಿ ಪ್ರವೀಣ್ ಪೂಜಾರಿ ಬಂಧಿತ ಆರೋಪಿ. ಸಂತ್ರಸ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು ಆಕೆಯನ್ನು ಪ್ರವೀಣ್ ಪ್ರೀತಿಯ ಬಲೆಗೆ ಬೀಳಿಸಿದ ಬಳಿಕ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದ. ಅಲ್ಲದೆ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‍ ಮೇಲ್‍ ಮಾಡುತ್ತಿದ್ದ ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ

ಪ್ರೀತಿಸುವ ನೆಪದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ | ಆರೋಪಿ ಮೇಲೆ ಪೋಕ್ಸೋ, ಅಟ್ರಾಸಿಟಿ ಪ್ರಕರಣ ದಾಖಲು Read More »

ಗ್ರಾಪಂ ಕಚೇರಿಯಲ್ಲಿ ಮೌಲ್ವಿಯಿಂದ ಪ್ರಾರ್ಥನೆ : ಹಿಂದು ಸಂಘಟನೆಗಳ ವಿರೋಧ

ಕಾಂಗ್ರೆಸ್‌-ಎಸ್‌ಡಿಪಿಐ ಅಧಿಕಾರ ಸ್ವೀಕಾರ ವೇಳೆ ಮೌಲ್ವಿಯನ್ನು ಕರೆಸಿ ಪ್ರಾರ್ಥನೆ ಉಡುಪಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಸಲ್ಲಿಸಿರುವ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಹಿಂದೂ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿವೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಮೂರು ದಶಕಗಳ ಬಳಿಕ ಕಾಂಗ್ರೆಸ್​ ಮತ್ತು ಎಸ್​ಡಿಪಿಐ ಮೈತ್ರಿಯ ತೆಕ್ಕೆಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರ ಹಂಚಿಕೆಯಾಗಿದೆ. ಕಾಂಗ್ರೆಸ್​ನ ಜಯಂತಿ ಖಾರ್ವಿ ಎಂಬುವರು ಅಧ್ಯಕ್ಷರಾಗಿದ್ದರೆ, ಎಸ್​ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಉಪಾಧ್ಯಕ್ಷರಾಗಿದ್ದಾರೆ. ತಬ್ರೇಜ್ ಉಪಾಧ್ಯಕ್ಷ ಅಧಿಕಾರ

ಗ್ರಾಪಂ ಕಚೇರಿಯಲ್ಲಿ ಮೌಲ್ವಿಯಿಂದ ಪ್ರಾರ್ಥನೆ : ಹಿಂದು ಸಂಘಟನೆಗಳ ವಿರೋಧ Read More »

ಪುರುಷರಿಗೆ ಟಿಕೆಟ್‌ ದರ ಏರಿಕೆ ಬರೆ

ಕೆಎಸ್‌ಆರ್‌ಟಿಸಿ ಟಿಕೆಟ್‌ ದರ ಶೇ.15ರಂತೆ ಹೆಚ್ಚಳ; ಜ.5ರಿಂದ ಜಾರಿ ಬೆಂಗಳೂರು: ನಿರೀಕ್ಷೆಯಂತೆಯೇ ಹೊಸ ವರ್ಷದಲ್ಲಿ ಸರಕಾರ ಜನರಿಗೆ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆಯ ಬರೆ ಎಳೆದಿದೆ. ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣದ ಕೊಡುಗೆ ನೀಡಿ ಅದರ ಮೂರುಪಟ್ಟು ದರವನ್ನು ಪುರುಷರಿಂದ ವಸೂಲು ಮಾಡಲು ಮುಂದಾಗಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಬಸ್‌ ಟಿಕೆಟ್‌ ದರ ಶೇ.15 ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಸಂಕ್ರಾಂತಿ ನಂತರ ಟಿಕೆಟ್‌ ದರ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ

ಪುರುಷರಿಗೆ ಟಿಕೆಟ್‌ ದರ ಏರಿಕೆ ಬರೆ Read More »

ಮಾಜಿ ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಹಾಲಿ ಶಾಸಕರು ಅಭಿವೃದ್ಧಿ ಕಡೆ ಗಮನಹರಿಸಲಿ | ಪತ್ರಿಕಾಗೋಷ್ಠಿಯಲ್ಲಿ ಶೌಕತ್ ಅಲಿ

ಪುತ್ತೂರು: ಹಿರೇಬಂಡಾಡಿಯಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್‍ ನಲ್ಲಿ ಶಾಸಕ ಅಶೋಕ್‍ ಕುಮಾರ್‍ ರೈ ಯವರು ಟ್ಯಾಕ್ಸ್ ಕಲೆಕ್ಷನ್ ಎಂಬ ಶಬ್ದವನ್ನು ಬಳಸಿ ಮಾಜಿ ಶಾಸಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದು, ಈ ಕುರಿತು ನೀವು ಕೊಡುವ ಸರ್ಟಿಫಿಕೇಟ್‍ ಅಗತ್ಯವಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು, ಮಾಜಿ ಶಾಸಕರ ರಾಜಕೀಯ ಜೀವನದ 35 ವರ್ಷಗಳ ಬಗ್ಗೆ ಹಿರೇಬಂಡಾಡಿ ಜನರಿಗೆ ತಿಳಿದಿದೆ ಎಂದು ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೌಕತ್ ಅಲಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,

ಮಾಜಿ ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಹಾಲಿ ಶಾಸಕರು ಅಭಿವೃದ್ಧಿ ಕಡೆ ಗಮನಹರಿಸಲಿ | ಪತ್ರಿಕಾಗೋಷ್ಠಿಯಲ್ಲಿ ಶೌಕತ್ ಅಲಿ Read More »

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ

ಉಚಿತ ವಿದ್ಯುತ್‌ ಗ್ಯಾರಂಟಿ ಕೈ ಬಿಡುವಂತೆ ಜನರಿಗೆ ಮನವಿ ಶಿಮ್ಲಾ: ಕರ್ನಾಟಕದಂತೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ಈಗ ದಿವಾಳಿಯಂಚಿಗೆ ತಲುಪಿದ್ದು, ಆರ್ಥಿಕ ಸ್ಥಿತಿಯ ಚೇತರಿಕೆಗಾಗಿ ಗ್ಯಾರಂಟಿಗಳನ್ನು ಹಿಂದೆಗೆದುಕೊಳ್ಳಲು ಪ್ರಾರಂಭಿಸಿದೆ. ಮೊದಲ ಹಂತವಾಗಿ ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಶುರುವಾಗಿದೆ. ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಸ್ವತಃ ತನ್ನ ಐದು ವಿದ್ಯುತ್‌ ಸಂಪರ್ಕಗಳ ಸಬ್ಸಿಡಿಯನ್ನು ವಾಪಸು ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಣ ಉಳಿಸುವ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ Read More »

ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ : ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ

ಧರ್ಮಸ್ಥಳದಲ್ಲಿ ನೇತ್ರಾವತಿ ಸೇರುವ ಉಪನದಿಯನ್ನು ಮಲಿನಗೊಳಿಸಿದ ದುಷ್ಕರ್ಮಿಗಳು ಧರ್ಮಸ್ಥಳ : ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಎಸೆದಿರುವ ಕೃತ್ಯದ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ಇದೆ ಎಂದು ಆರೋಪಿಸಿರುವ ಹಿಂದು ಸಂಘಟನೆಗಳು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.ಧರ್ಮಸ್ಥಳದ ಪುಣ್ಯನದಿಯಾಗಿರುವ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ. ಇದರ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸ್ಪಷ್ಟ ಉದ್ದೇಶ ಇದೆ ಎಂದು

ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ : ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ Read More »

ರೇಷನ್‌ ಕಾರ್ಡ್‌ ತಿದ್ದುಪಡಿ ಅಂತಿಮ ಗಡು ಒಂದು ತಿಂಗಳು ವಿಸ್ತರಣೆ

ಜ.31ರ ತನಕ ಗ್ರಾಮ ಒನ್‌ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ಬೆಂಗಳೂರು : ರೇ‌ಷನ್ ಕಾರ್ಡ್‌ ತಿದ್ದುಪಡಿ ಅಂತಿಮ ಗಡುವನ್ನು ಸರಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ. ರೇಷನ್ ಕಾರ್ಡ್‌ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇನ್ನೂ ಅನೇಕ ಕಾರ್ಡ್‌ಗಳ ತಿದ್ದುಪಡಿ ಬಾಕಿ ಇರುವುದರಿಂದ ಜ.31ರ ತನಕ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್‌ ಕಾರ್ಡ್‌ ತಿದ್ದುಪಡಿಗೆ ಡಿ.31 ಅಂತಿಮ ಗಡುವು ನೀಡಿತ್ತು. ಆದರೆ ತಿದ್ದಪಡಿಯಲ್ಲೇ ಸಾಕಷ್ಟು

ರೇಷನ್‌ ಕಾರ್ಡ್‌ ತಿದ್ದುಪಡಿ ಅಂತಿಮ ಗಡು ಒಂದು ತಿಂಗಳು ವಿಸ್ತರಣೆ Read More »

ಪುತ್ತೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಮಂಗಳೂರು : ಆಧುನಿಕ ವಿದ್ಯೆಗೆ ಕೊರತೆ ಇಲ್ಲಾ, ನೂರು ವರ್ಷಗಳ ಹಿಂದೆ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.5 ಇದ್ದು, ಇದೀಗ ಪ್ರಸ್ತುತ ದಿನಗಳಲ್ಲಿ ಶೇ.80 ಕ್ಕಿಂತಲೂ ಸಾಕ್ಷರತೆ ಸಿಗುತ್ತಿದೆ. ಆಧುನಿಕ ವಿದ್ಯೆಯ ಭರದಲ್ಲಿ ಸಿಲುಕಿ, ಆಧ್ಯಾತ್ಮಿಕ ವಿದ್ಯೆಯನ್ನು ಮರೆಯುತ್ತಿದ್ದೇವೆ ಎಂಬ ಭಯದ ಕಾಲಘಟ್ಟದಲ್ಲಿದ್ದೇವೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಅವರು ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನ

ಪುತ್ತೂರು: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ | ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ Read More »

error: Content is protected !!
Scroll to Top