ಸುದ್ದಿ

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ

ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾರುತ್ತಿದ್ದ ನಾಲ್ವರು ಸೆರೆ ಪುತ್ತೂರು : ಬೆಟ್ಟಂಪಾಡಿ, ಇರ್ದೆ, ರೆಂಜ ಹಾಗೂ ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರಿನ ಮೊಹಮ್ಮದ್ ಹರ್ಷದ್, ಮಹಮ್ಮದ್ ಆರೀಶ್, ಇಬ್ರಾಹಿಂ ಅಶ್ರಫ್ ಹಾಗೂ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಬಂಟ್ವಾಳದ ಮುಸ್ತಾಫ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50,000 ರೂ. ಮೌಲ್ಯದ 6.39 ಗ್ರಾಂ ಎಂಡಿಎಂಎ ಹಾಗೂ ಗಾಂಜಾ […]

ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ Read More »

ಆಪರೇಷನ್ ಸಿಂಧೂರ್ ‌ನಿಲ್ಲಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು: ಭಾರತ

ನ್ಯೂಯಾರ್ಕ್: ಈ ಹಿಂದೆ ಪಾಕಿಸ್ತಾನದ ವಿರುದ್ಧ ನಡೆಸಿದ್ದ ಆಪರೇಷನ್ ಸಿಂಧೂರ್ ‌ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ‌ಪಾಕ್ ಬೇಡಿಕೊಂಡಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತ ತಿಳಿಸಿದೆ‌. ಜೊತೆಗೆ ಇಸ್ಲಾಮಾಬಾದ್‌ನ ಬಾಹ್ಯ ಹಸ್ತಕ್ಷೇಪದ ಹಕ್ಕುಗಳನ್ನು ತಳ್ಳಿ ಹಾಕಿದೆ. ಭಾರತದ ಶಾಶ್ವತ ಪ್ರತಿನಿಧಿ ಪಿ. ಹರೀಶ್ ಭಾರತದ ಪರವಾಗಿ ಮಾತನಾಡಿದ್ದು, ನಮ್ಮ ನಾಗರಿಕರನ್ನು ಕಾಪಾಡಲು, ಅವರ ಹಿತ ರಕ್ಷಣೆಯ ದೃಷ್ಟಿಯಿಂದ ಎಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ಭಯೋತ್ಪಾದನೆಯನ್ನು ಪಾಕಿಸ್ತಾನ ಬಯಸಿದ ರೀತಿಯಲ್ಲಿ ಸಾಮಾನ್ಯೀಕರಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ

ಆಪರೇಷನ್ ಸಿಂಧೂರ್ ‌ನಿಲ್ಲಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು: ಭಾರತ Read More »

ಪತ್ನಿ ಮತ್ತೊಬ್ಬನ ಜೊತೆ ಪರಾರಿ: ಪತಿ ನೇಣಿಗೆ ‌ಶರಣು

ದಾವಣಗೆರೆ: ವಿವಾಹವಾದ ಎರಡೇ ತಿಂಗಳಿಗೆ ಪತ್ನಿ ಮತ್ತೊಬ್ಬನ ಜೊತೆ ಪರಾರಿಯಾಗಿದ್ದು, ಘಟನೆಯಿಂದ ಮನನೊಂದ ಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್ (32) ಮೃತ ದುರ್ದೈವಿ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಹರೀಶ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಪತ್ನಿ ಮತ್ತೊಬ್ಬನ ಜೊತೆಗೆ ಓಡಿ ಹೋಗಿರುವುದನ್ನು ಉಲ್ಲೇಖ ಮಾಡಿದ್ದಾರೆ. ಹಾಗೆಯೇ ತನ್ನ ಸಾವಿಗೆ ಪತ್ನಿ, ಅತ್ತೆ, ಮಾವ ಮತ್ತು ಅವಳನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಹೇಳಿದ್ದಾರೆ. ಹರೀಶ್ ಮೇಲೆ ಪತ್ನಿ

ಪತ್ನಿ ಮತ್ತೊಬ್ಬನ ಜೊತೆ ಪರಾರಿ: ಪತಿ ನೇಣಿಗೆ ‌ಶರಣು Read More »

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ರಿಪಬ್ಲಿಕ್ ಸೇಲ್‌ಗೆ ಬಹುಪರಾಕ್ ಎಂದ ಗ್ರಾಹಕರು

ಪುತ್ತೂರು: ನಗರದ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ‌ದಲ್ಲಿ ಜ. 22 ರಿಂದ ಜ. 26 ರ ವರೆಗೆ ರಿಪಬ್ಲಿಕ್ ಸೇಲ್ ನಡೆದಿದ್ದು, ಗ್ರಾಹಕರು ಇದಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಪ್ರಸ್ತುತ ದಿನಗಳಲ್ಲಿ ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ರಿಪಬ್ಲಿಕ್ ಸೇಲ್‌ನಲ್ಲಿ ಮೇಕಿಂಗ್ ಚಾರ್ಜಸ್ ಮೇಲೆ ಸಂಸ್ಥೆ ಭಾರೀ ರಿಯಾಯಿತಿ ನೀಡುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಸಂಸ್ಥೆ ಈ ಆಫರ್ ನೀಡಿತ್ತು. ಪುತ್ತೂರು, ಸುಳ್ಯ, ಹಾಸನ,

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ರಿಪಬ್ಲಿಕ್ ಸೇಲ್‌ಗೆ ಬಹುಪರಾಕ್ ಎಂದ ಗ್ರಾಹಕರು Read More »

ಬಡವರ ಉದ್ಯೋಗ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ: ಡಿ. ಕೆ. ಶಿವಕುಮಾರ್

ಬೆಂಗಳೂರು: ಕರ್ನಾಟಕದ ಗ್ರಾಮ ಪಂಚಾಯತ್‌ಗಳಿಗೆ ಗಾಂಧೀಜಿ ಅವರ ಹೆಸರನ್ನು ಮರು ನಾಮಕರಣ ಮಾಡುವ ಮೂಲಕ ಅವರ ತತ್ವಗಳನ್ನು ಶಾಶ್ವತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಡಿ ಸಿ ಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಅವರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಮನ್‌ರೇಗಾ ಯೋಜನೆಯನ್ನು ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಪ್ರಯತ್ನ ನಡೆಸುತ್ತಿದೆ. ಬಡವರ ಉದ್ಯೋಗ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ. ಇದರ

ಬಡವರ ಉದ್ಯೋಗ ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ: ಡಿ. ಕೆ. ಶಿವಕುಮಾರ್ Read More »

ಆಸ್ತಿಗಾಗಿ ಹೆತ್ತ ತಾಯಿಗೆ ಚಟ್ಟ ‌ಕಟ್ಟಿದ ನೀಚ ಪುತ್ರ

ಲಿಂಗಸೂಗೂರು: ಮೂರು ಎಕರೆ ಜಮೀನಿಗಾಗಿ ಮಗನೇ ಹೆತ್ತಮ್ಮನನ್ನು ಕಲ್ಲು ಎತ್ತಿ ಹಾಕಿ ಕೊಂದ ಘಟನೆ ಜಕ್ಕೇರುಮಡು ಗ್ರಾಮದಲ್ಲಿ ನಡೆದಿದೆ. ಕುಮಾರ ಎಂಬಾತನೇ ಆರೋಪಿ. ಚಂದವ್ವ (55) ಎಂಬವರೇ ‌ಮೃತ ದುರ್ದೈವಿ. ಕುಮಾರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿ ಬಂದಿದ್ದ. ಈತನಿಗೆ ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಯ ಮೇಲೆ ಕಣ್ಣಿತ್ತು. ಆ ಜಮೀನನ್ನು ತನಗೆ ಮತ್ತು ಅಣ್ಣನಿಗೆ ಭಾಗ ಮಾಡಿ ಕೊಡುವಂತೆ ಆಗಾಗ್ಗೆ ಜಗಳ ಮಾಡುತ್ತಿದ್ದ. ಆದರೆ ಇದಕ್ಕೆ ತಾಯಿ ಒಪ್ಪುತ್ತಿರಲಿಲ್ಲ. ತಾಯಿಯನ್ನು ಕೊಲ್ಲುವ ದಿನ

ಆಸ್ತಿಗಾಗಿ ಹೆತ್ತ ತಾಯಿಗೆ ಚಟ್ಟ ‌ಕಟ್ಟಿದ ನೀಚ ಪುತ್ರ Read More »

ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆಯ ಅಗತ್ಯ ಇಲ್ಲ: ಮೋಹನ್ ಭಾಗವತ್

ನವದೆಹಲಿ: ಮೂಲಭೂತವಾಗಿ ಭಾರತ ಹಿಂದೂ ರಾಷ್ಟ್ರ. ಅದನ್ನು ಹೊಸದಾಗಿ ಘೋಷಣೆ ಮಾಡಲು ಯಾವುದೇ ಸಾಂವಿಧಾನಿಕ ಅನುಮೋದನೆಯ ಅಗತ್ಯ ಇಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬಿಹಾರದಲ್ಲಿ ‌ನಡೆದ ವಿಚಾರಗೋಷ್ಠಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎನ್ನುವ ವಿಷಯ ಹೇಗೆ ಸತ್ಯವೋ, ಭಾರತ ದೇಶ ಹಿಂದೂ ರಾಷ್ಟ್ರ ಎನ್ನುವುದು ಕೂಡಾ ಅಷ್ಟೇ ಸತ್ಯ ಎಂಬುದಾಗಿ ತಿಳಿಸಿದ್ದಾರೆ. ಅದನ್ನು ಮತ್ತೆ ಘೋಷಣೆ ಮಾಡುವ ಅಗತ್ಯ ಇಲ್ಲ. ಈಗಾಗಲೇ ಅದು ಅಸ್ತಿತ್ವದಲ್ಲಿದೆ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಲ್ಲರೂ

ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆಯ ಅಗತ್ಯ ಇಲ್ಲ: ಮೋಹನ್ ಭಾಗವತ್ Read More »

ಎಟಿಎಂಗೆ ಹಣ ತುಂಬುವ ಸಿಬ್ಬಂದಿಯೇ ಕೋಟಿಗಟ್ಟಲೆ ರೂಪಾಯಿಯೊಂದಿಗೆ ಎಸ್ಕೇಪ್‌

ಎರಡು ತಂಡವಾಗಿ ಹಣ ಎಗರಿಸಿಕೊಂಡು ಪಲಾಯನ ಮಾಡಿದ ಸಿಬ್ಬಂದಿ ಬೆಂಗಳೂರು: ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ನಡೆಸಿದ್ದ ಎಟಿಎಂ ದರೋಡೆ ಪ್ರಕರಣಮಾದರಿಯಲ್ಲೇ ಮತ್ತೊಂದು ಪೇಮೆಂಟ್ ಸರ್ವಿಸ್ ಕಂಪನಿ ಸಿಬ್ಬಂದಿಯಿಂದ ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದೆ. ಹಿಟಾಚಿ ಕಂಪನಿಯ ಸಿಬ್ಬಂದಿ ಎಟಿಎಂಗೆ ತುಂಬಲು ಕೊಟ್ಟಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ನಾಲ್ಕು ಮಂದಿಯ ಒಂದು ಟೀಂ 50 ಲಕ್ಷ ರೂ. ಹಣ ತಗೆದುಕೊಂಡು ಹೋಗಿದ್ದರೆ ಮೂರು ಜನರ ಮತ್ತೊಂದು ತಂಡ 80 ಲಕ್ಷ ರೂ. ಹಣ ತಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

ಎಟಿಎಂಗೆ ಹಣ ತುಂಬುವ ಸಿಬ್ಬಂದಿಯೇ ಕೋಟಿಗಟ್ಟಲೆ ರೂಪಾಯಿಯೊಂದಿಗೆ ಎಸ್ಕೇಪ್‌ Read More »

ಕೋಡಿಬೆಂಗ್ರೆ ದೋಣಿ ದುರಂತಕ್ಕೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಕಾರಣ : ಶಾಸಕ ಆರೋಪ

ಅಳಿವೆ ಬಾಗಿಲಲ್ಲಿ ದೋಣಿ ಪಲ್ಟಿಯಾಗಿ ಇಬ್ಬರು ಮೃತಪಟ್ಟ ದುರಂತ ಉಡುಪಿ: ಜಿಲ್ಲೆಯ ಕೋಡಿ ಬೆಂಗ್ರೆ ಡೆಲ್ಟಾ ಬೀಚ್ ಬಳಿ ಸೋಮವಾರ ಪ್ರವಾಸಿ ದೋಣಿ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಹಂಗರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ 15 ರಿಂದ 20 ಪ್ರಯಾಣಿಕರ ಸಾಮರ್ಥ್ಯದ ದೋಣಿ ಮಗುಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕೋಡಿ ಬೆಂಗ್ರೆಯಲ್ಲಿ ನಡೆದ ದುರಂತ ಪ್ರವಾಸಿ ದೋಣಿ

ಕೋಡಿಬೆಂಗ್ರೆ ದೋಣಿ ದುರಂತಕ್ಕೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಕಾರಣ : ಶಾಸಕ ಆರೋಪ Read More »

ಮಂಗಳೂರು: ಉದ್ಯೋಗ ಸಿಗದ ಬೇಸರದಲ್ಲಿ ಮರ ಏರಿ ಕುಳಿತ ಯುವಕ!

ಮಂಗಳೂರು: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಮರವೇರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿ ಕೆಲಹೊತ್ತು ಆತಂಕ ಸೃಷ್ಟಿಸಿರುವ ಘಟನೆ ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಬಾಗಲಕೋಟೆಯ ಭೀಮಪ್ಪ(24) ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಈತ ಕೆಲಸ ಸಿಗದ ಕಾರಣಕ್ಕಾಗಿ ಮನನೊಂದು ಮರವೇರಿ ಆತ್ಮಹತ್ಯೆ ಮಾಡುವ ಯೋಚನೆ ಮಾಡಿದ್ದ ಎನ್ನಲಾಗಿದೆ. ಮರದಿಂದ

ಮಂಗಳೂರು: ಉದ್ಯೋಗ ಸಿಗದ ಬೇಸರದಲ್ಲಿ ಮರ ಏರಿ ಕುಳಿತ ಯುವಕ! Read More »

error: Content is protected !!
Scroll to Top