ಸುದ್ದಿ

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ

ಯೂನಿಟ್‌ಗೆ 36 ಪೈಸೆಯಂತೆ ಹೆಚ್ಚಿಸಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಬೆಂಗಳೂರು : ಈಗಾಗಲೇ ಎಲ್ಲ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಸರಕಾರ ಮತ್ತೆ ವಿದ್ಯುತ್‌ ದರ ಏರಿಕೆಯ ಶಾಕ್‌ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹೆಚ್ಚಳದ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲು ಕೆಇಆರ್​ಸಿ ಮುಂದಾರುವುದರ ಪರಿಣಾಮವಾಗಿ […]

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ Read More »

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು

ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಮರ್ದಾಳ ದಲ್ಲಿರುವ ಜೀವನ್ ಜ್ಯೋತಿ ವಿಶೇಷ  ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲಿಯ ವಿದ್ಯಾರ್ಥಿಗಳಿಗೆ ಮನರಂಜನ ಸ್ಪರ್ಧೆಗಳನ್ನು ನಡೆಸಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹುಮ್ಮಿಸಿ, ಲವಲವಿಕೆಯಿಂದ ಸ್ಪರ್ಧೆಗಳಲ್ಲಿ ತೊಡಗಿಕೊಂಡರು. ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಆರತಿ ಕೆ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರಾದ ಶೈಲಾ  ಅವರು ಸಂಸ್ಥೆಯ ಉದ್ದೇಶವನ್ನು  ಹಾಗೂ ವಿದ್ಯಾರ್ಥಿಗಳು ನ್ಯೂನತೆಯನ್ನು ಹೊಂದಿದ್ದರು

ಮರ್ಧಾಳದ ಜೀವನ್ ಜ್ಯೋತಿ ವಿಶೇಷ ಶಾಲೆಗೆ ಭೇಟಿ ನೀಡಿದ  ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು Read More »

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ

ಪುತ್ತೂರು ತಾಲೂಕಿನ  ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ  ಟೈಲರಿಂಗ್ ಕ್ಲಾಸ್ ತರಬೇತಿ ನಡೆಸಿದ್ದು ಮಾ.13 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ   ಮಾತನಾಡಿ, ತಾಯಿಯ ತ್ಯಾಗ, ಪ್ರೀತಿ, ಕರುಣೆ ಎಂದರೆ ಹೇಗೆ, ತಂದೆ ಮಕ್ಕಳಿಗೆ ತೋರಿಸುವ ಪ್ರೀತಿ ಮಮಕಾರ ಹೇಗೆ ಮಕ್ಕಳಿಗೆ ತಾವು ಕೇಳಿದಂತಹ ವಸ್ತುಗಳನ್ನು ನೇರವಾಗಿ ತೆಗೆದುಕೊಡುವ ಮೊದಲು ತಂದೆ-ತಾಯಿಯ

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ Read More »

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಹೇಳಿಕೆಗೆ ಮಂಡ್ಯ ಜಿಲ್ಲೆಯಲ್ಲಿ ಭಾರಿ ಜನಾಕ್ರೋಶ ಮಂಡ್ಯ: ಮಂಡ್ಯದವರು ಛತ್ರಿಗಳು ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್‍ಗೆ ಅಧಿಕಾರ ಸಿಕ್ಕಿದೆ. 7ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ Read More »

ಮೇರಠ್‌ನಲ್ಲೂ ನಡೆಯಿತು ಕಾರ್ಕಳದ ದೆಪ್ಪುತ್ತೆ ಮಾದರಿ ಕೊಲೆ ಕೃತ್ಯ

ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂಡು ಕತ್ತರಿಸಿ ಡ್ರಮ್‌ನಲ್ಲಿ ತುಂಬಿಸಿಟ್ಟ ಪತ್ನಿ ಕೋರ್ಟಿಗೆ ಕರೆತಂದಾಗ ವಕೀಲರು ಮಾಡಿದ್ದ ಮಾತ್ರ ಬೇರೆಯೇ ಕ್ರಮ ಲಖನೌ: ಕಾರ್ಕಳದ ಅಜೆಕಾರು ಸಮೀಪ ದೆಪ್ಪುತ್ತೆಯಲ್ಲಿ ಕಳೆದ ವರ್ಷ ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ವಿಷ ಹಾಕಿ ಕೊಂದ ಕೃತ್ಯದ ಮಾದರಿಯಲ್ಲೇ ಉತ್ತರ ಪ್ರದೇಶದ ಮೇರಠ್‌ನಲ್ಲಿ ಹೆಂಡತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಶವವನ್ನು ಕತ್ತರಿಸಿ ತುಂಡು ತುಂಡು ಮಾಡಿ ಪ್ಲಾಸ್ಟಿಕ್‌ ಡ್ರಮ್‌ಗೆ ಹಾಕಿ ಅದರ ಮೇಲೆ ಸಿಮೆಂಟ್‌

ಮೇರಠ್‌ನಲ್ಲೂ ನಡೆಯಿತು ಕಾರ್ಕಳದ ದೆಪ್ಪುತ್ತೆ ಮಾದರಿ ಕೊಲೆ ಕೃತ್ಯ Read More »

ಬಂಟ್ವಾಳ : ಜೂಜಾಟವಾಡುತ್ತಿದ್ದ ಇಬ್ಬರ ಬಂಧನ  

ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಆಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲಿಸರು ಇಬ್ಬರನ್ನು ಬಂಧಿಸಿದ ಘಟನೆ ಬಿ.ಸಿ.ರೋಡು ಸಮೀಪದ ಕೈಕಂಬ ಎಂಬಲ್ಲಿ ನಡೆದಿದೆ. ಬಂಟ್ವಾಳ ಮೂಡ ಗ್ರಾಮದ ಕೈಕಂಬ ಎಂಬಲ್ಲಿ ಖಾಸಗಿ ಕಟ್ಟಡವೊಂದರ ಬಳಿಯಲ್ಲಿ ಆಟಕ್ಕೆ ತಯಾರು ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೋಲೀಸರು ಪ್ರಮುಖ ಆರೋಪಿಗಳಾದ ನಾವೂರ ನಿವಾಸಿ ಸುರೇಶ್ ಹಾಗೂ ಮಿತ್ತಬೈಲು ನಿವಾಸಿ ಭಾಸ್ಕರ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3.500 ರೂ ನಗದು ಹಾಗೂ ಆಟಕ್ಕೆ

ಬಂಟ್ವಾಳ : ಜೂಜಾಟವಾಡುತ್ತಿದ್ದ ಇಬ್ಬರ ಬಂಧನ   Read More »

ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಐಎಸ್‌ಐ ಏಜೆಂಟ್‌ ಸೆರೆ

ಬೆಂಗಳೂರಿನ ಬಿಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬೆಂಗಳೂರು : ಗುಪ್ತಚರ ಇಲಾಖೆ ಹಾಗೂ ಸೇನಾ ಇಂಟೆಲಿಜೆನ್ಸ್ ವಿಭಾಗ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.ಉತ್ತರಪ್ರದೇಶದ ಗಾಜಿಯಾಬಾದ್​​​ ಮೂಲದ ನಿವಾಸಿ ಬಿಇಎಲ್​​​ನಲ್ಲಿ ಕೆಲಸ ಮಾಡುತ್ತಿದ್ದ ದೀಪ್‌ರಾಜ್​ ಚಂದ್ರ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಈತ ಪಾಕಿಸ್ಥಾನದ ಗೂಢಚಾರ ಸಂಸ್ಥೆ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಾಹ್ಯಾಕಾಶ ಮತ್ತು ಸೇನೆಗಾಗಿ ಆಧುನಿಕ ರಕ್ಷಣಾ ಉಪಕರಣಗಳನ್ನು ತಯಾರಿಸುವ ಕೇಂದ್ರ ಸರಕಾರ ಸ್ವಾಮ್ಯದ ಬಿಇಎಲ್​ನ ಪ್ರಾಡಕ್ಟ್​​​

ಪಾಕಿಸ್ಥಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಐಎಸ್‌ಐ ಏಜೆಂಟ್‌ ಸೆರೆ Read More »

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 38 ಕೋ. ರೂ. ಮೌಲ್ಯದ ಕೊಕೇನ್‌ ವಶ

75 ಕೋ. ರೂ. ಮಾದಕ ವಸ್ತು ವಶವಾದ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿದೊಡ್ಡ ಪ್ರಕರಣವಾದ 75 ಕೋ.ಟಿ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡ ಬೆನ್ನಲ್ಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 38 ಕೋ.ರೂ. ಮೌಲ್ಯದ ಕೊಕೇನ್‌ ವಶವಾಗಿದೆ.ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಘಾನಾ ದೇಶದ ಮಹಿಳೆಯೊಬ್ಬಳನ್ನು ಬಂಧಿಸಿ 38.4 ಕೋಟಿ ರೂ. ಮೌಲ್ಯವಿರುವ 3.186 ಕೆಜಿ ಕೊಕೇನ್‌ ಮಾದಕ ವಸ್ತು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 38 ಕೋ. ರೂ. ಮೌಲ್ಯದ ಕೊಕೇನ್‌ ವಶ Read More »

ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ : ಸಿದ್ದರಾಮಯ್ಯ ದಿಗ್ಭ್ರಮೆ

ದೇಶಾದ್ಯಂತ ಸುದ್ದಿಯಾದ ಮಲ್ಪೆ ಬಂದರಿನಲ್ಲಿ ನಡೆದ ಘಟನೆ ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೊ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೆ ಇರಲಿ ಒಬ್ಬ ಮಹಿಳೆಗೆ ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ

ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ : ಸಿದ್ದರಾಮಯ್ಯ ದಿಗ್ಭ್ರಮೆ Read More »

ಅಬ್ಬಬ್ಬಾ ಈ ಶ್ವಾನದ ಬೆಲೆ 49 ಕೋ.ರೂ.!

ಜಗತ್ತಿನ ದುಬಾರಿ ನಾಯಿಯನ್ನು ಖರೀದಿಸಿದ ಬೆಂಗಳೂರಿನ ಶ್ವಾನಪ್ರೇಮಿ ಬೆಂಗಳೂರು: ಬೆಂಗಳೂರಿನ ಶ್ವಾನಪ್ರೇಮಿ ಎಸ್. ಸತೀಶ್ ಎಂಬುವರು ಜಗತ್ತಿನ ಅತಿ ದುಬಾರಿ ನಾಯೊಂದನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ನಾಯಿಯ ಬೆಲೆ ಕೇಳಿದರೆ ಬೆಚ್ಚಿಬೀಳುವುದು ಖಂಡಿತ. ಇದು ಬರೋಬ್ಬರಿ 49 ಕೋಟಿ ರೂ. (4.4 ಮಿಲಿಯನ್ ಪೌಂಡ್‌ಗಳು) ಬೆಲೆಬಾಳುವ ಅತ್ಯಂತ ಅಪರೂಪದ ನಾಯಿ. ವೂಲ್ಫ್ ಡಾಗ್ ಎಂಬ ವಿಶೇಷ ತಳಿಯ ಶ್ವಾನವನ್ನು ಅವರು ಇಷ್ಟು ದುಬಾರಿ ಬೆಲೆಕೊಟ್ಟು ಖರೀದಿಸಿ ಬೆಂಗಳೂರಿಗೆ ತಂದಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ

ಅಬ್ಬಬ್ಬಾ ಈ ಶ್ವಾನದ ಬೆಲೆ 49 ಕೋ.ರೂ.! Read More »

error: Content is protected !!
Scroll to Top