ಮಗಳ ಮದುವೆ ಮಂಟಪದಲ್ಲೇ ತಂದೆ ಕುಸಿದು ಬಿದ್ದು ಸಾವು
ಕನ್ಯಾದಾನ ಮಾಡಿ ಜವಾಬ್ದಾರಿ ಮುಗಿಸಿದ ಮರುಕ್ಷಣವೇ ಬಂದ ಸಾವು ಹೈದರಾಬಾದ್: ಮಗಳ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ತಂದೆ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಗಳ ಮದುವೆಯೆಂದು ಖುಷಿಯಿಂದ ಓಡಾಡಿಕೊಂಡಿದ್ದ ಅಪ್ಪ, ಧಾರೆ ಎರೆಯುವ ಶಾಸ್ತ್ರ ಮಾಡಿ ಜವಾಬ್ದಾರಿ ಮುಗಿಸಿದ ಮರುಕ್ಷಣವೇ ಕೊನೆಯುಸಿರೆಳೆದಿದ್ದಾರೆ. ಬಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿ ಗ್ರಾಮದ ನಿವಾಸಿ ಬಾಲಚಂದ್ರಂ ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟವರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ನಡೆದಾಗ ಮದುವೆ ಮುಗಿದಿತ್ತು. […]
ಮಗಳ ಮದುವೆ ಮಂಟಪದಲ್ಲೇ ತಂದೆ ಕುಸಿದು ಬಿದ್ದು ಸಾವು Read More »










