ಸುದ್ದಿ

ಬಾರದ ಯುವಕನಿಗೆ ಮಾತು ಕೊಟ್ಟ ಮಣಿಕಂಠ|ಮಾಲಾಧಾರನಿಗೆ ಸ್ವಾಮಿ ಶರಣೂ ಅನ್ನೋ ಭಾಗ್ಯ

ಪುತ್ತೂರು: ಅಯ್ಯಪ್ಪ ಸ್ವಾಮಿಯ ಮಹಿಮೆ ಎಂತದ್ದು ಅನ್ನೋದು ಅಯ್ಯಪ್ಪ ಭಕ್ತರಿಗೆ ಅರಿವಾಗಿರುತ್ತದೆ. ಶಬರಿ ಮಲೆಯ ಅಯ್ಯಪ್ಪನ ಲೀಲೆಗಳ ಕಥೆಗಳನ್ನು , ಅಥವಾ ಪವಾಡಗಳನ್ನು ಕೇಳೀರುತ್ತೇವೆ, ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆಲೇ ಇರುತ್ತದೆ. ಅಯ್ಯಪ್ಪನ  ಮಹಿಮೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.  ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ […]

ಬಾರದ ಯುವಕನಿಗೆ ಮಾತು ಕೊಟ್ಟ ಮಣಿಕಂಠ|ಮಾಲಾಧಾರನಿಗೆ ಸ್ವಾಮಿ ಶರಣೂ ಅನ್ನೋ ಭಾಗ್ಯ Read More »

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ

ದೇಶ-ವಿದೇಶಗಳ ಅದ್ಭುತ ಕಲಾಪರಂಪರೆ ಮೂಡುಬಿದಿರೆಯಲ್ಲಿ ಅನಾವರಣ ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ನಡೆದ ದೇಶ-ವಿದೇಶಗಳ ಅದ್ಭುತ ಕಲಾಪರಂಪರೆಯನ್ನು ಧರೆಗಿಳಿಸಿ ಸಾರ್ಥಕವಾಯಿತು. ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ, ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳು ಮಾತ್ರವಲ್ಲದೆ ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ Read More »

ಇಬ್ಬರು ಕುಖ್ಯಾತ ಸರಗಳ್ಳರ ಬಂಧನ : ಸರ, ಬೈಕ್‌ ವಶ

39ಕ್ಕೂ ಅಧಿಕ ಪ್ರಕರಣಗಳಿರುವ ಕುಖ್ಯಾತ ಕಳ್ಳರು 24 ತಾಸೊಳಗೆ ಅರೆಸ್ಟ್‌ ಮಂಗಳೂರು : ಕಾರ್ಕಳದಲ್ಲಿ ಕಳೆದ ಡಿ.9ರಂದು ನಡೆದ ಸರಗಳ್ಳತನ ಕೃತ್ಯದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡ ಪರಾರಿಯಾದ ಪ್ರಕರಣಗಳ ಆರೋಪಿಗಳು ಇವರು ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಚಿನ್ನದ

ಇಬ್ಬರು ಕುಖ್ಯಾತ ಸರಗಳ್ಳರ ಬಂಧನ : ಸರ, ಬೈಕ್‌ ವಶ Read More »

ಶಿರೂರು ಭೂಕುಸಿತ ದುರಂತ : ಐದು ತಿಂಗಳು ಕಳೆದರೂ ಸಿಕ್ಕಿಲ್ಲ ಎರಡು ಶವ

ಪರಿಹಾರ ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಭೀಕರ ಭೂಕುಸಿತ ಸಂಭವಿಸಿ ಐದು ತಿಂಗಳೇ ಕಳೆದು ಹೋದರೂ ಇಬ್ಬರ ಶವ ಇನ್ನೂ ಪತ್ತೆಯಾಗಿಲ್ಲ. ಕಳೆದ ಜುಲೈ 16ರಂದು ಭೀಕರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಇಡೀ ಒಂದು ಬೆಟ್ಟವೇ ಜಾರಿ ಹೆದ್ದಾರಿಗೆ ಬಿದ್ದು, ರಸ್ತೆ ಬದಿಯಲ್ಲಿದ್ದ ಒಂದು ಚಿಕ್ಕ ಚಹಾದಂಗಡಿ, ಅದರ ಪಕ್ಕ ನಿಂತಿದ್ದ ಲಾರಿ ಸಮೇತ ಪಂಚಗಂಗಾವಳಿ ನದಿಗೆ ದೂಡಿ ಹಾಕಿತ್ತು. ಈ ದುರಂತದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಕೇರಳದ ಲಾರಿಯೊಂದು

ಶಿರೂರು ಭೂಕುಸಿತ ದುರಂತ : ಐದು ತಿಂಗಳು ಕಳೆದರೂ ಸಿಕ್ಕಿಲ್ಲ ಎರಡು ಶವ Read More »

ಇಂದು ಸಂಜೆ ಎಸ್‌.ಎಂ ಕೃಷ್ಣ ಅಂತ್ಯಕ್ರಿಯೆ

ಸಿದ್ದರಾಮಯ್ಯ, ಪ್ರಹ್ಲಾದ್‌ ಜೋಶಿ ಸಹಿತ ಗಣ್ಯರಿಂದ ಅಂತಿಮ ನಮನ ಬೆಂಗಳೂರು : ನಿನ್ನೆ ನಿಧನರಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಹುಟ್ಟೂರು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ನಡೆಯಲಿದೆ. ಬೆಳಗ್ಗೆ ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರಿಗೆ ಕೊಂಡೊಯ್ಯಲಾಗುತ್ತದೆ. ಮಾರ್ಗ ಮಧ್ಯೆ ಕೆಂಗೇರಿ, ರಾಮನಗರ, ಚನ್ನಪಟ್ಟಣದಲ್ಲಿ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಂಜೆ 3 ಗಂಟೆ ಸುಮಾರಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ,

ಇಂದು ಸಂಜೆ ಎಸ್‌.ಎಂ ಕೃಷ್ಣ ಅಂತ್ಯಕ್ರಿಯೆ Read More »

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ

ಅಮರ ಚಿತ್ರಕಥಾ ಸರಣಿಗಳ ಜನಕ ಅವರು ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್. ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತ ರಮ್ಯ ಕಲ್ಪನಾಲೋಕ ಸೃಷ್ಟಿಸಿದ ಸರಣಿ ಪುಸ್ತಕಗಳು. ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್ ಪೈ’ ಎಂದವರು ಪ್ರೀತಿಯಿಂದ ಕರೆದುಕೊಂಡರು.

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ Read More »

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ

ಮಂಗಳೂರು: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ  ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾಮಂಜೂರು ತಿರುವೈಲು ಮೂಡುಜೆಪ್ಪು ಅಮೃತೇಶ್ವರ ದೇವಸ್ಥಾನದ ಬಳಿಯ ನಿವಾಸಿ ನದೀಂ(34) ಎಂದು ಪತ್ತೆ ಹಚ್ಚಲಾಗಿದೆ. ಈತ ಬಂಗ್ರ ಕೂಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಎನ್ನಲಾಗಿದ್ದು, ಈತನ ವಶದಲ್ಲಿದ್ದ ಅಂದಾಜು 56,000 ರೂ. ಬೆಲೆಬಾಳುವ ಮಾದಕ ವಸ್ತುಗಳು, ಮೊಬೈಲ್ ಫೋನ್, 7 ಡೆಬಿಟ್‌ ಕಾರ್ಡ್‌ಗಳು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ Read More »

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ

ಕೊಡಗು: ಗುಂಡಿಯನ್ನು ತಪ್ಪಿಸಲು ಹೋದ KSRTC ಬಸ್‍ ಚಾಲಕ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೊಡಗಿನಲ್ಲಿ ನಡೆದಿದೆ. KSRTC ಬಸ್ ಮೈಸೂರಿನಿಂದ ವಿರಾಜಪೇಟೆ ಕಡೆಗೆ ಚಲಿಸುವ ಬಸ್‍ ಆಗಿದ್ದು, ಕೊಡಗಿನ  ತಿತಿಮತಿ ಸಮೀಪದ ದೇವರಪುರದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂ ಗೊಂಡಿದೆ. ಬಸ್ ಚಾಲಕನ ಕಾಲು ಮುರಿದಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಮರಕ್ಕೆ ಡಿಕ್ಕಿ ಹೊಡೆದ ಬಸ್‍ | ಪ್ರಯಾಣಿಕರಿಗೆ ಗಂಭೀರ ಗಾಯ Read More »

ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎಕ್ಸ್‌ನಲ್ಲಿ ಶೋಕ ಸಂದೇಶ ಫೋಸ್ಟ್‌ ಮಾಡಿದ ಸಿದ್ದರಾಮಯ್ಯ, ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅಜಾತಶತ್ರುವಾದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌

ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ Read More »

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ

100 ಮೀಟರ್‌ ಉದ್ದಕ್ಕೂ ನಿಲ್ಲಿಸಿದ್ದ 40 ವಾಹನಗಳು ಜಖಂ ಮುಂಬಯಿ: ಬ್ರೇಕ್‌ಫೇಲ್ ಆದ ಬೆಸ್ಟ್‌ ಬಸ್ ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ದುರ್ಮರಣವನ್ನಪ್ಪಿ 49 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸೋಮವಾರ ತಡರಾತ್ರಿ ಮುಂಬಯಿಯ ಉಪನಗರ ಕುರ್ಲಾದಲ್ಲಿ ಸಂಭವಿಸಿದೆ. ಕುರ್ಲಾ ಪಶ್ಚಿಮದ ಎಲ್ ವಾರ್ಡ್‌ನ ಎಸ್‌ ಜಿ ಬರ್ವೆ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ಬ್ರೇಕ್‌ಫೇಲ್‌ ಆದ ಬಸ್‌ 100 ಮೀಟರ್‌ ಉದ್ದಕ್ಕೆ ನಿಲ್ಲಿಸಿದ್ದ ಸುಮಾರು 40 ವಾಹನಗಳಿಗೆ ಡಿಕ್ಕಿ

ಮುಂಬಯಿ : ಬ್ರೇಕ್‌ಫೇಲ್‌ ಆಗಿ ಕಟ್ಟಡಕ್ಕೆ ಗುದ್ದಿದ ಬಸ್‌, 6 ಮಂದಿ ಸಾವು, 49 ಜನರಿಗೆ ಗಾಯ Read More »

error: Content is protected !!
Scroll to Top