ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನಿತಿನ್ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ
ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ತ್ರೀನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ನಿತೀನ್ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷತೆಗಾಗಿ ನಿತಿನ್ ಪಕ್ಕಳ ಅವರನ್ನು ಸದಸ್ಯ ನಿತಿನ್ ಮಂಗಳ ಸೂಚಿಸಿದರು. ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅನುಮೋದಿಸಿದರು. ಉಪಾಧ್ಯಕ್ಷತೆಗಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವರನ್ನು ನಿತಿನ್ ಮಂಗಳ ಸೂಚಿಸಿದರು. ಪ್ರಜ್ವಲ್ ಕೆ.ಆರ್. ಅನುಮೋದಿಸಿದರು. […]