ಸುದ್ದಿ

ಸೆರೆ ಹಿಡಿದ ಬಿಎಸ್‌ಎಫ್‌ ಯೋಧನನ್ನು ಬಿಡುಗಡೆಗೊಳಿಸದೆ ಪಾಕ್‌ ಮೊಂಡಾಟ

ನಿನ್ನೆಯಿಂದೀಚೆಗೆ ಪಾಕ್‌ ಸೈನಿಕರ ಕಸ್ಟಡಿಯಲ್ಲಿರುವ ಭಾರತೀಯ ಯೋಧ ಶ್ರೀನಗರ: ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಬಂಧನಕ್ಕೆ ಒಳಗಾಗಿರುವ ಗಡಿ ಭದ್ರತಾ ಪಡೆ ಯೋಧನನ್ನು ಹಸ್ತಾಂತರ ಮಾಡಲು ಪಾಕಿಸ್ತಾನ ಮೊಂಡಾಟ ಮಾಡುತ್ತಿದೆ. ಗುರುವಾರ ಸಂಜೆ ಧ್ವಜ ಸಭೆಗೆ ರೇಂಜರ್‌ಗಳು ಬರಲಿಲ್ಲ. ಮಾಧ್ಯಮಗಳಲ್ಲಿ ತಾನು ಒಳ್ಳೆಯವನು ಎಂದು ಪ್ರಚಾರ ಮಾಡುವ ಸಲುವಾಗಿ ಪಾಕಿಸ್ತಾನ ಭಾರತೀಯ ಯೋಧನನ್ನು ಬಳಸಲು ಮುಂದಾಗಿದೆ ಎನ್ನಲಾಗಿದೆ. ಪಂಜಾಬ್‌ನ ಫಿರೋಜ್‌ಪುರ ಬಳಿ ಗುರುವಾರ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ 182ನೇ ಬೆಟಾಲಿಯನ್‌ ಕಾನ್‌ಸ್ಟೆಬಲ್‌ ಪಿ.ಕೆ ಸಾಹು ಅವರನ್ನು […]

ಸೆರೆ ಹಿಡಿದ ಬಿಎಸ್‌ಎಫ್‌ ಯೋಧನನ್ನು ಬಿಡುಗಡೆಗೊಳಿಸದೆ ಪಾಕ್‌ ಮೊಂಡಾಟ Read More »

ಗಡಿಯಾಚೆಗಿನಿಂದ ಗುಂಡಿನ ದಾಳಿ ನಡೆಸಿ ಭಾರತವನ್ನು ಕೆಣಕಿದ ಪಾಕಿಸ್ಥಾನ

ಗುರುವಾರ ರಾತ್ರಿಯಿಡೀ ಎಲ್‌ಒಸಿಯಲ್ಲಿ ಭಾರಿ ಗುಂಡಿನ ಚಕಮಕಿ ನವದೆಹಲಿ : ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ನರಮೇಧ ಮಾಡಿದ ಮೂರು ದಿನಗಳ ಬಳಿಕ ಪಾಕಿಸ್ಥಾನ ಗಡಿಯಾಚೆಗಿನಿಂದ ಗುಂಡಿನ ದಾಳಿ ಪ್ರಾರಂಭಿಸಿದ್ದು, ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಗಡಿ ನಿಯಂತ್ರಣ ರೇಖೆಯಾಚೆಯಿಂದ ರಾತ್ರಿಯಿಡೀ ಶೆಲ್‌ ಮತ್ತು ಮೋರ್ಟರ್‌ ದಾಳಿಯಾಗಿದೆ. ಇದು ಅಸ್ವಾಭಾವಿಕ ಬೆಳವಣಿಗೆಯಾಗಿದ್ದು, ಪಾಕಿಸ್ಥಾನ ಕಾಲು ಕೆದರಿ ಯುದ್ಧಕ್ಕೆ ಬರುವ ಲಕ್ಷಣದಂತೆ ಕಾಣಿಸುತ್ತಿದೆ ಎಂದು ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ಥಾನಿ ಸೈನಿಕರು ಶೆಲ್‌ ಮತ್ತು ಮೋರ್ಟರ್‌ಗಳಿಂದ ದಾಳಿ ನಡೆಸಿದ್ದು,

ಗಡಿಯಾಚೆಗಿನಿಂದ ಗುಂಡಿನ ದಾಳಿ ನಡೆಸಿ ಭಾರತವನ್ನು ಕೆಣಕಿದ ಪಾಕಿಸ್ಥಾನ Read More »

ಐಪಿಎಲ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಯುವಕರು ಸೆರೆ

ಮೊಬೈಲ್‌ ಬೆಟ್ಟಿಂಗ್ ಅಪ್ಲಿಕೇಶನ್ ಮೂಲಕ ಅಕ್ರಮ ದಂಧೆ ಉಡುಪಿ : ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ವ್ಯಕ್ತಿಗಳನ್ನು ಉಡುಪಿ ಸಿಇಎನ್ (ಸೆನ್‌) ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಸಿಇಎನ್ ಪೊಲೀಸ್ ಠಾಣೆಯ ಅಪರಾಧ ನಿರೀಕ್ಷಕ ರಾಮಚಂದ್ರ ನಾಯಕ್ ಉಡುಪಿ ಅಜ್ಜರಕಾಡಿನ ಭುಜಂಗ್ ಪಾರ್ಕ್ ಬಳಿ ದಾಳಿ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಭೇದಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟಲು

ಐಪಿಎಲ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಯುವಕರು ಸೆರೆ Read More »

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕ ನೌಕರಿಯಿಂದ ವಜಾ

ಮುಡಿಪುವಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದ ಘಟನೆ ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕನನ್ನು ನೌಕರಿಯಿಂದಲೇ ವಜಾ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಂಡಕ್ಟರ್‌ ನೇಮಕಾತಿ ಪಡೆದಿದ್ದ ಆರೋಪಿ ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35)ನನ್ನು ವಜಾಗೊಳಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಸರಕಾರಿ ಬಸ್‌ಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಸುರಕ್ಷಿತವಾಗಿ ಪ್ರಯಾಣಿಸಬೇಕು. ಬಸ್‌ನ ಸಿಬ್ಬಂದಿಯೇ ದುರ್ವರ್ತನೆ ತೋರಿಸಿದರೆ ಅದು ಜನರಿಗೆ ತೀರಾ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಇಂಥ ಕೃತ್ಯವನ್ನು ಸರಕಾರ

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕ ನೌಕರಿಯಿಂದ ವಜಾ Read More »

ಸೀತಾರಾಮ ಪಟ್ಟೆ ವಿಧಿವಶ

ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡೀಲಿನಲ್ಲಿರುವ ಬಾಳಪ್ಪ ಕಾಂಪ್ಲೆಕ್ಸ್’ನಲ್ಲಿ ಎಸ್.ಆರ್. ಹಾರ್ಡ್’ವೇರ್ ಉದ್ಯಮ ನಡೆಸುತ್ತಿದ್ದ ಸೀತಾರಾಮ ಪಟ್ಟೆಯವರು ಇಂದು ಮುಂಜಾನೆ 5.30ಕ್ಕೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಶೋಭಾ ಮತ್ತು ಅಂಬಿಕಾ ಸೆಂಟ್ರಲ್ ಸ್ಕೂಲ್’ನಲ್ಲಿ 10ನೆ ತರಗತಿ ವ್ಯಾಸಂಗ ಮಾಡುತ್ತಿರುವ ಮಗಳು ಮನಸ್ವಿ ಮತ್ತು 6ನೆ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರನ್ನು ಅಗಲಿದ್ದಾರೆ. ಸೀತಾರಾಮ ಅವರು ಪಡೀಲ್’ನಲ್ಲಿರುವ ‘ಸಮೃದ್ಧಿ ಕಾಂಪ್ಲೆಕ್ಸ್’ನ ಮಾಲಕರು ಆಗಿದ್ದರು. ಪುಟ್ಟದೊಂದು ಸರಕು ಸಾಗಣೆಯ

ಸೀತಾರಾಮ ಪಟ್ಟೆ ವಿಧಿವಶ Read More »

ಉಗ್ರರನ್ನು ಮಟ್ಟ ಹಾಕಲೇ ಬೇಕು, ಎಲ್ಲ ಬೆಂಬಲ ಕೊಡುತ್ತೇವೆ ಎಂದ ವಿಪಕ್ಷಗಳು

ಕಾಶ್ಮೀರದಲ್ಲಿ ಭದ್ರತಾ ಲೋಪವಾಗಿದೆ ಎಂದು ಒಪ್ಪಿಕೊಂಡ ಸರಕಾರ ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಹಿನ್ನೆಲೆಯಲ್ಲಿ ಉಗ್ರರನ್ನು ಮಟ್ಟ ಹಾಕಲು ಸರಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿವೆ. ಸಂಸತ್ ಭವನದಲ್ಲಿ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲ ಪ್ರಮುಖ ವಿಪಕ್ಷಗಳು ಉಗ್ರರನ್ನು ಮಟ್ಟಹಾಕಲೇ ಬೇಕು ಎಂದು ಪ್ರತಿಪಾದಿಸಿವೆ. ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಚರ್ಚಿಸಿ ಉಗ್ರರ ಕೃತ್ಯವನ್ನು ಒಕ್ಕೂರಲಿನಿಂದ ಖಂಡಿಸಲಾಗಿದೆ. ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ತಮ್ಮ ಬೆಂಬಲವಿದೆ

ಉಗ್ರರನ್ನು ಮಟ್ಟ ಹಾಕಲೇ ಬೇಕು, ಎಲ್ಲ ಬೆಂಬಲ ಕೊಡುತ್ತೇವೆ ಎಂದ ವಿಪಕ್ಷಗಳು Read More »

ಹಿಂದೂಗಳ ಹತ್ಯೆಯನ್ನು ಸಮರ್ಥಿಸಿಕೊಂಡ ಅಸ್ಸಾಂನ ಶಾಸಕ

ಗುವಾಹಟಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ನಡೆದ ಹಿಂದೂಗಳ ನರಮೇಧಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದ್ದ ಅಸ್ಸಾಂನ ವಿರೋಧ ಪಕ್ಷವಾಗಿರುವ ಎಐಯುಡಿಎಫ್‌ ಶಾಸಕ ಅಮಿನುಲ್‌ ಇಸ್ಲಾಂನನ್ನು ಪೊಲೀಸರು ಬಂಧಿಸಿದ್ದಾರೆ. ನಾಗಾಂವ್ ಜಿಲ್ಲೆಯ ನಿವಾಸದಲ್ಲಿ ಶಾಸಕನನ್ನು ಬಂಧಿಸಲಾಗಿದೆ. ಪಕ್ಷದ ಶಾಸಕನ ಹೇಳಿಕೆ ಕುರಿತು ಎಐಯುಡಿಎಫ್ ಅಂತರ ಕಾಯ್ದುಕೊಂಡಿದೆ. ಇದು ಶಾಸಕನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನ ಸಮರ್ಥಿಸಿಕೊಂಡಿರುವ ಶಾಸಕನ ವಿಡಿಯೋ ನೋಡಿದ್ದೇವೆ. ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಶಾಸಕರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.

ಹಿಂದೂಗಳ ಹತ್ಯೆಯನ್ನು ಸಮರ್ಥಿಸಿಕೊಂಡ ಅಸ್ಸಾಂನ ಶಾಸಕ Read More »

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ದಾಳಿ | ಆಲಂಕಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ

ಅಲಂಕಾರು : ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪ್ರತಿಭಟನಾ ಸಭೆ ಇಂದು ಆಲಂಕಾರಿನಲ್ಲಿ ನಡೆಯಿತು. ಈ ವೇಳೆ ನವೀನ್‍ ನೆರಿಯ ಹಾಗೂ ಆಲಂಕಾರಿನ ಎಲ್ಲಾ ಹಿಂದೂ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ದಾಳಿ | ಆಲಂಕಾರಿನಲ್ಲಿ ಬೃಹತ್ ಪ್ರತಿಭಟನಾ ಸಭೆ Read More »

ಮೇ 1 : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ ಹಾಗೂ ಸಂಘದ ವಾರ್ಷಿಕ ಮಹಾಸಭೆ ಮೇ 1 ಗುರುವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್‍ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಶೈಕ್ಷಣಿಕವಾಗಿ ಆರು ಮಂದಿ ಸಾಧಕರಿಗೆ ಅಭಿನಂದಿಸಲಾಗುವುದು. ದೆಹಲಿ ಗಣರಾಜ್ಯೋತ್ಸವದಲ್ಲಿ ಪ್ರಧಾನಮಂತ್ರಿ ರ‍್ಯಾಲಿಯಲ್ಲಿ, ದೆಹಲಿ ಕರ್ತವ್ಯಪಥ ರಾಜ್ಯೋತ್ಸವ ಪಥಸಂಚಲನದಲ್ಲಿ, ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ, ಸಾಂಸ್ಕೃತಿಕ

ಮೇ 1 : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ, ಸಂಘದ ವಾರ್ಷಿಕ ಮಹಾಸಭೆ Read More »

ಕಾರು-ಆಕ್ಟಿವಾ ಡಿಕ್ಕಿ | ಆಕ್ಟಿವಾ ಸವಾರ ಗಂಭೀರ ಗಾಯ

ಪುತ್ತೂರು : ಕಾರು ಮತ್ತು ಅಕ್ಟಿವಾ ನಡುವೆ ಅಪಘಾತ ಸಂಭವಿಸಿದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಬಳಿ ನಡೆದಿದೆ. ಘಟನೆಯಿಂದಾಗಿ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ಕೊಡಿಪ್ಪಾಡಿ ನಿವಾಸಿ ರಫೀಕ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಅದೇ ರಸ್ತೆಯಾಗಿ ತೆರಳುತ್ತಿದ್ದ ಉದ್ಯಮಿ ಉಜ್ವಲ್ ಪ್ರಭು ತಕ್ಷಣ ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರು-ಆಕ್ಟಿವಾ ಡಿಕ್ಕಿ | ಆಕ್ಟಿವಾ ಸವಾರ ಗಂಭೀರ ಗಾಯ Read More »

error: Content is protected !!
Scroll to Top