ಸುದ್ದಿ

ರಾಜ್ಯದಲ್ಲಿ ಇನ್ನು ಇರಲ್ಲ ಬೈಕ್‌ ಟ್ಯಾಕ್ಸಿ ಸೇವೆ

ರ‍್ಯಾಪಿಡೊ, ಉಬರ್​ ಬೈಕ್​ ಟ್ಯಾಕ್ಸಿ ಸೇವೆ ರದ್ದುಪಡಿಸಲು ಸರಕಾರ ಆದೇಶ ಬೆಂಗಳೂರು: ಹೈಕೋರ್ಟ್‌ ಆದೇಶವನ್ನು ಅನುಸರಿಸಿ ರಾಜ್ಯದಲ್ಲಿ ಕರ್ನಾಟಕದಲ್ಲಿ ರ‍್ಯಾಪಿಡೊ, ಉಬರ್​ ಬೈಕ್​ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಸಾರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ರಾಜ್ಯದ ಆಟೋ ಮತ್ತು ಕ್ಯಾಬ್ ಚಾಲಕರ ಹಲವಾರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಮೋಟಾರ್ […]

ರಾಜ್ಯದಲ್ಲಿ ಇನ್ನು ಇರಲ್ಲ ಬೈಕ್‌ ಟ್ಯಾಕ್ಸಿ ಸೇವೆ Read More »

ಇಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

ರಾಷ್ಟ್ರಪತಿ ದ್ರೌಪದಿ ಮುರ್ಮು, ಡೊನಾಲ್ಡ್‌ ಟ್ರಂಪ್‌ ಸಹಿತ ಗಣ್ಯರು ಭಾಗಿ ವ್ಯಾಟಿಕನ್ ಸಿಟಿ: ಕಳೆದ 21ರಂದು ನಿಧನರಾದ ಕ್ರೈಸ್ತರ ಪರಮೋಚ್ಚಗುರು ಪೋಪ್ ಫ್ರಾನ್ಸಿಸ್ (88) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸೇಂಟ್ ಪೀಟರ್ಸ್ ಸ್ಕ್ವಯರ್ ಪ್ರಾಂತ್ಯದ ಸಂತ ಮರಿಯಾ ಮಗೊಯ್ರ್‌ನಲ್ಲಿ ಶನಿವಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಯೇ ತಮ್ಮ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಪೋಪ್ ಅವರ ಅಂತಿಮ ಇಚ್ಛೆಯಾಗಿತ್ತು. ಹಾಗಾಗಿ, ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ವ್ಯಾಟಿಕನ್ ಸಿಟಿ ತಿಳಿಸಿದೆ. ಪೋಪ್ ಅವರ ಪಾರ್ಥಿವ ಶರೀರವನ್ನು

ಇಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ Read More »

ಜೀನಿ ಸಂಸ್ಥೆಯ ಮಾಲಕನ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ದಾಖಲು

ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ ಘಟನೆ ನಡೆದಿದೆ. ಜೀನಿ ಕಂಪೆನಿಯ ಮಾಲೀಕರಾದ ದಿಲೀಪ್ ಕುಮಾರ್ ವಿರುದ್ಧ ಅವರದ್ದೇ ಕಂಪೆನಿಯ ಕೆಲಸ ಮಾಡುತ್ತಿದ್ದ ಮೇಘನಾ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ತಿಳಿಸಿದಂತೆ, ಕಳೆದ ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ, ಕಳೆದ 15 ದಿನಗಳಿಂದ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ, ನನ್ನನ್ನು ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ

ಜೀನಿ ಸಂಸ್ಥೆಯ ಮಾಲಕನ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ದಾಖಲು Read More »

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ

ವಿಟ್ಲ: ಗುಡ್ಡೆಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾದ ಘಟನೆ ಸಾಲೆತ್ತೂರು ಸಮೀಪದ ಪಾಲ್ತಾಜೆ ಎಂಬಲ್ಲಿ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರು ಧಾವಿಸಿದ್ದು,  ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ .ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ Read More »

ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಯುವಕರು | ಸ್ಥಳಿಯರ ನೆರವಿನಿಂದ ಯುವಕರು ಪೋಲಿಸರ ಕೈವಶ

ಮಂಗಳೂರು : ಅನೇಕ ಕಡೆಗಳಲ್ಲಿ ಗೋ ಹತ್ಯೆ, ಗೋ ಸಾಗಾಟದ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ ಅಂತಹದ್ದೇ ಗೋ ಸಾಗಾಟ ಮಾಡುತ್ತಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೂಳೂರು ಸೇತುವೆಯ ಬಳಿಯಿಂದ ತಣ್ಣೀರು ಬಾವಿಗೆ ಹೋಗುವ ರಸ್ತೆಯಲ್ಲಿ ಅಕ್ರಮ ದನ ಸಾಗಾಟ ಮಾಡಲು  ಪ್ರಯತ್ನಿಸುತ್ತಿದ್ದ ಯುವಕರು ಪೊಲೀಸರ ವಶವಾದ ಘಟನೆ ನಿನ್ನೆ (ಏ.24) ತಡರಾತ್ರಿ ನಡೆದಿದೆ. ಯುವಕರು ಮೂರು ದನಗಳಿಗೆ ಆಹಾರ ನೀಡುತ್ತಾ ಅದನ್ನು ಹಿಡಿದು ವಾಹನದಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಸಂಶಯಗೊಂಡ ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಬಳಿಕ

ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಯುವಕರು | ಸ್ಥಳಿಯರ ನೆರವಿನಿಂದ ಯುವಕರು ಪೋಲಿಸರ ಕೈವಶ Read More »

ಭಾರತೀಯ ಸೇನೆಯ ಬಹುದೊಡ್ಡ ಬೇಟೆ | ಲಷ್ಕರ್​ ಸಂಘಟನೆಯ ಟಾಪ್ ಕಮಾಂಡರ್ ಅಲ್ತಾಫ್​ ಹತ್ಯೆ

ಬಂಡಿಪೋರಾ : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ(Bandipora)ದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಟಾಪ್ ಕಮಾಂಡರ್ ಅಲ್ತಾಫ್ ಸಾವನ್ನಪ್ಪಿದ್ದಾನೆ.  ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿ ಹೊಣೆಯನ್ನು ಲಷ್ಕರ್​-ಎ-ತೊಯ್ಬಾ ಹೊತ್ತುಕೊಂಡಿತ್ತು. ಇದೀಗ ಭಾರತೀಯ ಸೇನೆ ಬಹುದೊಡ್ಡ ಬೇಟೆಯನ್ನೇ ಆಡಿದ್ದು, ಟಾಪ್​ ಕಮಾಂಡರ್​ ಅಲ್ತಾಫ್​ನನ್ನು ಹತ್ಯೆ ಮಾಡಿವೆ. ಭಯೋತ್ಪಾದಕರು ಅಲ್ಲಿ ಅಡಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದ ಸೇನೆ ಅಲ್ಲಿಗೆ ತೆರಳಿತ್ತು. ಭಾರತೀಯ ಸೇನೆ ಮತ್ತು ಜಮ್ಮು

ಭಾರತೀಯ ಸೇನೆಯ ಬಹುದೊಡ್ಡ ಬೇಟೆ | ಲಷ್ಕರ್​ ಸಂಘಟನೆಯ ಟಾಪ್ ಕಮಾಂಡರ್ ಅಲ್ತಾಫ್​ ಹತ್ಯೆ Read More »

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

ಕಡಬ: ಅತ್ಯುತ್ತಮ ಹೆಸರಾಂತ ಕಬಡ್ಡಿ ಆಟಗಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿಯಲ್ಲಿ ಗಮನ ಸೆಳೆದಿದ್ದ ಕಡಬದ ಕೋಕಿಲಾನಂದ ಆಸ್ಪತ್ರೆಯಲ್ಲಿ ನಿಧನರಾದರು. ಇತ್ತೀಚೆಗೆ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಕೋಕಿಲಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರ ಚಿಕಿತ್ಸೆಗೆ ಹಲವು ಧಾನಿಗಳು ಆರ್ಥಿಕ ಸಹಾಯವನ್ನು ನೀಡಿದ್ದರು. ಕೋಕಿಲಾನಂದ ಅವರು ಕಡಬ ನಿವಾಸಿಯಾಗಿದ್ದು, ಕೇವಲ ಕಬಡ್ಡಿ ಆಟ ಮಾತ್ರವಲ್ಲದೆ ಊರಿನ ಕೆಲವೊಂದು ಸಮಸ್ಯೆಗೆ ಹೋರಾಟ ಕೂಡಾ ನಡೆಸಿದ್ದರು. ಕಡಬದಲ್ಲಿ ಆನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ  ಪೂರ್ವ ವಿದ್ಯಾರ್ಥಿ  ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ಏ.21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ ಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಕೆ ರಂಗಯ್ಯ ಶೆಟ್ಟಿಗಾರ್ ಅವರು ಈ ಘಟಕವು ಸಂಸ್ಥೆಯ ಹಲವಾರು ವಿದ್ಯಾರ್ಥಿಗಳಿಗೆ  ಉದ್ಯೋಗವನ್ನು,

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ Read More »

ಫೇಸ್‌ಬುಕ್‌ನಲ್ಲಿ ಪಹಲ್ಗಾಮ್‌ ದಾಳಿ ಸಮರ್ಥಿಸಿ ಪೋಸ್ಟ್‌

ಕೊಣಾಜೆಯ ವ್ಯಕ್ತಿಗಾಗಿ ಪೊಲೀಸರ ಶೋಧ ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್​ ಹಾಕಿದ್ದ ಫೇಸ್‌ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ್ ಕುಮಾರ್ ಎಂಬವರು‌ ನೀಡಿದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 192 ಮತ್ತು 353(1)(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್​ಬುಕ್ ಪೇಜ್​ನ ಡಿಪಿ‌ಯಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿಚ್ಚು ಮಂಗಳೂರು ಎಂಬ‌ ಫೇಸ್​ಬುಕ್​ ಪೇಜ್​ನಲ್ಲಿ, 2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಮೂವರು

ಫೇಸ್‌ಬುಕ್‌ನಲ್ಲಿ ಪಹಲ್ಗಾಮ್‌ ದಾಳಿ ಸಮರ್ಥಿಸಿ ಪೋಸ್ಟ್‌ Read More »

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ

ಸುಳ್ಯದ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಪ್ರಸ್ತುತ ಪಡಿಸಿದ **ಮನಸ್ಸು – ಮನುಷ್ಯನ ವ್ಯಕ್ತಿತ್ವದ ತಳಹದಿ” ವಿಷಯದ ಕುರಿತ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಏ. 25 ಶುಕ್ರವಾರದಂದು ರಾತ್ರಿ 8.30ಕ್ಕೆ ಬಿತ್ತರಗೊಳ್ಳಲಿದೆ.  ಇದನ್ನು ಮಂಗಳೂರು ಆಕಾಶವಾಣಿಯ  100.3FM ನಲ್ಲಿ ಆಲಿಸಬಹುದು. ಈ ಹಿಂದೆ ಮಂಗಳೂರು ಹಾಗೂ ಮಡಿಕೇರಿ ಆಕಾಶವಾಣಿಗಳಲ್ಲಿ ಹಲವು ಬಾರಿ ಇವರ ಭಾಷಣಗಳು,ಕವಿತೆಗಳು, ಅರೆಭಾಷೆ ಹಾಗೂ ತುಳು ಕಾರ್ಯಕ್ರಮಗಳು ಬಿತ್ತರಗೊಂಡುದುದಲ್ಲದೇ ಡಿ ಡಿ ಚಂದನದಲ್ಲೂ ತರಬೇತಿ ನೀಡಿದ ಹೆಗ್ಗಳಿಕೆ

ಡಾ. ಅನುರಾಧಾ ಕುರುಂಜಿಯವರ ಭಾಷಣ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ Read More »

error: Content is protected !!
Scroll to Top