ಸುದ್ದಿ

ಪುಣ್ಯಕ್ಞೇತ್ರಗಳ 500 ಮೀಟರ್‌ ವ್ಯಾಪ್ತಿಯಲ್ಲಿ ಸೋಪ್‌, ಶ್ಯಾಂಪೂ ಮಾರಾಟ ನಿಷೇಧ

ಜಲಮೂಲ ಮಲಿನಗೊಳಿಸುವುದನ್ನು ತಡೆಯಲು ಸರಕಾರ ಸೂಚನೆ ಬೆಂಗಳೂರು: ಪುಣ್ಯಕ್ಷೇತ್ರಗಳ ಬಳಿಯಿರುವ ನದಿ, ಸರೋವರ, ಕಲ್ಯಾಣಿ, ಸ್ನಾನಘಟ್ಟಗಳಿಗೆ ತ್ಯಾಜ್ಯ ಎಸೆದು ಅಪವಿತ್ರಗೊಳಿಸುವುದನ್ನು ತಡೆಯಲು ಸರಕಾರ ಮುಂದಾಗಿದ್ದು, ಇಂಥ ಸ್ಥಳಗಳ 500 ಮೀಟರ್ ವ್ಯಾಪ್ತಿಯ ಸುತ್ತಮುತ್ತ ಸೋಪ್‌, ಶ್ಯಾಂಪೂ ಮಾರಾಟವನ್ನು ನಿಷೇಧಿಸಲು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪುಣ್ಯಕ್ಷೇತ್ರಗಳ ಬಳಿ ಇರುವ ಜಲಮೂಲಗಳಲ್ಲಿ ಭಕ್ತರು, ಪ್ರವಾಸಿಗರು ಸ್ನಾನಮಾಡಿ ಉಳಿದ ಶ್ಯಾಂಪೂ ಮತ್ತು ಸೋಪಿನ ಸ್ಯಾಷೆಗಳನ್ನು ದಂಡೆಯಲ್ಲಿ ಎಸೆದು […]

ಪುಣ್ಯಕ್ಞೇತ್ರಗಳ 500 ಮೀಟರ್‌ ವ್ಯಾಪ್ತಿಯಲ್ಲಿ ಸೋಪ್‌, ಶ್ಯಾಂಪೂ ಮಾರಾಟ ನಿಷೇಧ Read More »

42 ವರ್ಷದ ಅಂಕಲ್‌ ಜೊತೆ 15ರ ಬಾಲಕಿಯ ಲವ್‌ ದುರಂತ ಅಂತ್ಯ

ಒಂದು ತಿಂಗಳ ಬಳಿಕ ದಟ್ಟ ಕಾಡಿನಲ್ಲಿ ಇಬ್ಬರ ಶವ ಪತ್ತೆ ಕಾಸರಗೋಡು: 42 ವರ್ಷದ ಆಟೋ ಚಾಲಕ ಅಂಕಲ್‌ ಜೊತೆ 15ರ ಹರೆಯದ ಶಾಲಾ ಬಾಲಕಿಯ ಪ್ರೀತಿ ಇಬ್ಬರ ಸಾವಿನಲ್ಲಿ ದುರಂತ ಅಂತ್ಯಗೊಂಡ ಘಟನೆಯೊಂದು ಕಾಸರಗೋಡಿನ ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಳೆದ ಫೆ.11ರಂದು ನಾಪತ್ತೆಯಾಗಿದ್ದ ಇವರಿಬ್ಬರ ಮೃತದೇಹಗಳು ಒಂದು ತಿಂಗಳ ಬಳಿಕ ಕಾಡಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿವೆ.ಕುಂಬಳೆ ಪೈವಳಿಕೆ ಸಮೀಪ ಮಂಡೆಕಾಪು ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಟೋ

42 ವರ್ಷದ ಅಂಕಲ್‌ ಜೊತೆ 15ರ ಬಾಲಕಿಯ ಲವ್‌ ದುರಂತ ಅಂತ್ಯ Read More »

ನೆಲ್ಲಿದಡಿ ಗುತ್ತು ವಿವಾದ : ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ

ಶತಮಾನಗಳಿಂದ ನಡೆಯುತ್ತಿರುವ ದೈವಾರಾಧನೆಗೆ ಅಡ್ಡಿಯಾಗದಂತೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್‌)ನಿಂದ ನೆಲ್ಲಿದಡಿ ಗುತ್ತಿನ ಪ್ರಸಿದ್ಧ ಕಾಂತೇರಿ ಜುಮಾದಿ ದೈವದ ಆರಾಧನೆಗೆ ತೊಡಕುಂಟಾಗಿರುವ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಸದ್ಯಕ್ಕೆ ಅಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚಿಸಿದ್ದಾರೆ. ನೆಲ್ಲಿದಡಿಯಲ್ಲಿ ಈವರೆಗೂ ದೈವಾರಾಧನೆ ನಿಂತಿಲ್ಲ. ಲಿಖಿತವಾಗಿ ಅನುಮತಿ ಪಡೆಯದಿದ್ದರೆ ಅವಕಾಶ ಇಲ್ಲ ಎಂದಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ. ಶಾಶ್ವತ ಪರಿಹಾರ ಸಿಗುವವರೆಗೂ ಯಥಾಸ್ಥಿತಿ ಕಾಪಾಡಲು ಸೂಚಿಸಲಾಗಿದೆ ಎಂದು

ನೆಲ್ಲಿದಡಿ ಗುತ್ತು ವಿವಾದ : ಯಥಾಸ್ಥಿತಿಗೆ ಜಿಲ್ಲಾಧಿಕಾರಿ ಸೂಚನೆ Read More »

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಕೇಳಿ ಬರುತ್ತಿದೆ ರಾಜಕೀಯ ನಾಯಕರ ಹೆಸರು

ನಟಿಯ ಕಂಪನಿಗೆ ಮಂಜೂರಾಗಿದೆಯಾ 12 ಎಕರೆ ಜಮೀನು? ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಒಳಗೊಂಡಿರುವ ಗೋಲ್ಡ್‌ ಸ್ಮಗ್ಲಿಂಗ್‌ ಜಾಲದ ಬಾಹುಗಳು ಬಹಳ ವಿಶಾಲವಾಗಿ ಚಾಚಿಕೊಂಡಿವೆ ಎಂಬ ವಿಚಾರ ತನಿಖೆ ಮುಂದುವರಿದಂತೆ ಬಯಲಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣಗಳಲ್ಲೂ ಭಾರಿ ಪ್ರಮಾಣದ ಚಿನ್ನದ ಬಿಸ್ಕಟ್‌ಗಳು ವಶವಾಗಿದ್ದು, ಈ ಪ್ರಕರಣಗಳಿಗೂ ರನ್ಯಾ ರಾವ್‌ ಒಳಗೊಂಡಿರುವ ಪ್ರಕರಣಕ್ಕೂ ಸಂಬಂಧ ಇದೆ ಎಂಬ ಅನುಮಾನ ಬಂದಿದೆ. ಮೂರು ಕಡೆ ಒಂದೇ ರೀತಿಯ ಚಿನ್ನದ ಬಿಸ್ಕೆಟ್‌ಗಳು ವಶವಾಗಿವೆ. ಮೂರೂ

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಕೇಳಿ ಬರುತ್ತಿದೆ ರಾಜಕೀಯ ನಾಯಕರ ಹೆಸರು Read More »

ಕರಿದ ಹಸಿರು ಬಟಾಣಿಯಲ್ಲೂ ಇದೆ ಕ್ಯಾನ್ಸರ್‌ಕಾರಕ ಅಂಶ

ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢ, ಬ್ಯಾನ್‌ಗೆ ಶಿಫಾರಸ್ಸು ಬೆಂಗಳೂರು: ಇಡ್ಲಿ, ಗೋಬಿಮಂಚೂರಿ, ಕಬಾಬ್‌ ಸೇರಿದಂತೆ ವಿವಿಧ ಆಹಾರ ವಸ್ತುಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶ ಪತ್ತೆಯಾದ ಬಳಿಕ ಈಗ ಕರಿದ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್‌ಕಾರಕ ಅಂಶ ಇರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇತ್ತೀಚೆಗಷ್ಟೇ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಕ್ಯಾನ್ಸರ್​ಕಾರಕ ಅಂಶ ಬಿಡುಗಡೆಯಾಗಿ ಇಡ್ಲಿಯನ್ನು ಸೇರಿಕೊಳ್ಳುತ್ತಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಹೊಟೇಲ್, ಉಪಾಹಾರ ಮತ್ತು ತಿನಿಸು ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಯ ಬಳಕೆಯನ್ನು ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ

ಕರಿದ ಹಸಿರು ಬಟಾಣಿಯಲ್ಲೂ ಇದೆ ಕ್ಯಾನ್ಸರ್‌ಕಾರಕ ಅಂಶ Read More »

ಸಿರಿಯಾ : ಭದ್ರತಾ ಪಡೆಗಳಿಂದ 1000ಕ್ಕೂ ಅಧಿಕ ನಾಗರಿಕರ ಹತ್ಯೆ

ಮಾಜಿ ಅಧ್ಯಕ್ಷ ಅಸಾದ್‌ ಬೆಂಬಲಿಗರ ಮೇಲೆ ಪ್ರತೀಕಾರದ ಹಿಂಸಾಚಾರ ಬೇರೂತ್‌: ಸಿರಿಯಾದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಾಶರ್‌ ಅಲ್‌ ಅಸಾದ್‌ ಬೆಂಬಲಿಗರ ನಡುವೆ ನಡೆಯುತ್ತಿರುವ ಭೀಕರ ಹಿಂಸಾಚಾರದಲ್ಲಿ 1000ಕ್ಕೂ ಅಧಿಕ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೆಡಿಟೇರಿಯನ್‌ ಕರಾವಳಿಯಲ್ಲಿ ಎರಡು ದಿನಗಳಿಂದ ಭೀಕರ ಹಿಂಸಾಚಾರ ನಡೆಯುತ್ತಿದೆ. ದಂಗೆಯೆದ್ದಿರುವ ಅಲ್ವೈಟ್‌ ಸಮುದಾಯದ ಜನರನ್ನು ಭದ್ರತಾ ಪಡೆ ನಿರ್ದಯವಾಗಿ ಸಾಯಿಸುತ್ತಿದೆ ಎನ್ನಲಾಗಿದೆ.ಸಿರಿಯಾದ ಹೊಸ ಸರಕಾರ ಮತ್ತು ಮಾಜಿ ಅಧ್ಯಕ್ಷ ಅಸಾದ್‌ ಬೆಂಬಲಿಗರ ನಡುವೆ

ಸಿರಿಯಾ : ಭದ್ರತಾ ಪಡೆಗಳಿಂದ 1000ಕ್ಕೂ ಅಧಿಕ ನಾಗರಿಕರ ಹತ್ಯೆ Read More »

ಮದುವೆ ಸಮಾರಂಭದಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿ ಬಳಕೆ ಮಾಡುವಂತಿಲ್ಲ

ಹೈಕೋರ್ಟಿನ ಮಹತ್ವದ ಆದೇಶ ತಿರುವನಂತಪುರ: ಮದುವೆ ಮತ್ತಿತರ ಖಾಸಗಿ ಸಮಾರಂಭಗಳಲ್ಲಿ ಪ್ಲಾಸಿಕ್‌ ನೀರಿನ ಬಾಟಲಿ ಬಳಕೆ ಮಾಡಬಾರದು ಎಂದು ಕೇರಳ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ನ್ಯಾಯಾಲಯ ರಾಜ್ಯದಲ್ಲಿ ಮದುವೆ ಮತ್ತಿತರ ಸಮಾರಂಭದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಹೇಳಿದೆ. ಸಣ್ಣ ಪ್ಲಾಸ್ಟಿಕ್ ಬಾಟಲಿಗಳು ಪ್ರಕೃತಿಗೆ ಹಾನಿಯನ್ನುಂಟುಮಾಡುತ್ತಿವೆ ಮತ್ತು ಯಾವುದೇ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ಕಠಿಣ ಕ್ರಮಗಳು

ಮದುವೆ ಸಮಾರಂಭದಲ್ಲಿ ಪ್ಲಾಸ್ಟಿಕ್‌ ನೀರಿನ ಬಾಟಲಿ ಬಳಕೆ ಮಾಡುವಂತಿಲ್ಲ Read More »

ಪರೀಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದನೇ ದಿಗಂತ್‌?

ಶಿವಮೊಗ್ಗ, ಮೈಸೂರು, ಬೆಂಗಳೂರು ತಿರುಗಾಡಿ ಉಡುಪಿಗೆ ಬಂದಾಗ ಪತ್ತೆ ​ಮಂಗಳೂರು : ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌ ಪಿಯುಸಿ ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ನಿನ್ನೆ ಬಗೆಹರಿದಿದೆ. ದಿಗಂತ್‌ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿ ವಿಧಾನ ಮಂಡಲದ ಕಲಾಪದಲ್ಲೂ ಪ್ರತಿಧ್ವನಿಸಿತ್ತು. ಸ್ಪೀಕರ್‌ ಖಾದರ್‌ ನೀಡಿದ ಸೂಚನೆಯ ಬಳಿಕ ಪೊಲೀಸರು 11 ತಂಡಗಳನ್ನು ರಚಿಸಿ ಹುಡುಕಾಡಿ ದಿಗಂತ್‌ನನ್ನು ನಿನ್ನೆ ಉಡುಪಿಯ ಡಿಮಾರ್ಟ್‌ ಮಾಲ್‌ನಲ್ಲಿ ಪತ್ತೆಹಚ್ಚಿದ್ದಾರೆ. ಹಿಂದು ಸಂಘಟನೆಗಳಿಂದ ಪ್ರತಿಭಟನೆ ಸಹಿತ ಹಲವು ಬೆಳವಣಿಗೆಗಳಿಗೆ ಕಾರಣವಾಗಿದ್ದ

ಪರೀಕ್ಷೆಗೆ ಹೆದರಿ ಮನೆಬಿಟ್ಟು ಹೋಗಿದ್ದನೇ ದಿಗಂತ್‌? Read More »

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌

ಭಾರತ-ನ್ಯೂಜಿಲ್ಯಾಂಡ್‌ ಫೈನಲ್‌ ಕದನಕ್ಕೆ ಕ್ಷಣಗಣನೆ; ಭಾರತವೇ ಬುಕ್ಕಿಗಳ ಫೇವರಿಟ್‌ ದುಬೈ : ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐಸಿಸಿ ಟೂರ್ನಿಯ ಫೈನಲ್​ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬ ತೀವ್ರ ಕುತೂಹಲ ಕ್ರಿಕೆಟ್‌ ಪ್ರೇಮಿಗಳಲ್ಲಿದೆ. ಇದರ ಜೊತೆಗೆ ಈ ಪಂದ್ಯದ ಮೇಲೆ ಭರ್ಜರಿ ಬೆಟ್ಟಿಂಗ್‌ ಕೂಡ ನಡೆದಿದೆ. ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ ಪಂದ್ಯ ಶುರುವಾಗಲಿದೆ.

ಚಾಂಪಿಯನ್ಸ್‌ ಟ್ರೋಫಿ : ಫೈನಲ್‌ ಪಂದ್ಯದ ಮೇಲೆ ನಡೆದಿದೆ ಭರ್ಜರಿ ಬೆಟ್ಟಿಂಗ್‌ Read More »

ತಾಯಿ ಹಚ್ಚಿದ ಅಗರಬತ್ತಿಯಿಂದ ಏಳುತಿಂಗಳ ಮಗು ಮೃತ್ಯು

ಕನಕಗಿರಿ :  ಮಗುವಿಗೆ ಅನಾರೋಗ್ಯವಾಗಿದ್ದರಿಂದ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದರೆ ಗುಣಮುಖವಾಗಬಹುದೆಂದು ತಿಳಿದು ಏಳು ತಿಂಗಳ ಮಗುವಿಗೆ ಅಗರಬತ್ತಿಯಿಂದ ಬಿಸಿ ಮುಟ್ಟಿಸಿದ್ದು, ಬಳಿಕ ಗುಣ ಪಡಿಸಲು ಮನೆಮದ್ದು ಮಾಡಿದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಮಗು ಮೃತಪಟ್ಟ ವೇಳೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ‘ಸುಟ್ಟಗಾಯಗಳಿಂದ ನಂಜಾಗಿ ಮಗು ಸಾವನ್ನಪ್ಪಿದೆ’ ಎಂದು ತಿಳಿಸಿದ್ದಾರೆ. ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ್ ಎಂಬುವವರು

ತಾಯಿ ಹಚ್ಚಿದ ಅಗರಬತ್ತಿಯಿಂದ ಏಳುತಿಂಗಳ ಮಗು ಮೃತ್ಯು Read More »

error: Content is protected !!
Scroll to Top