ಸುದ್ದಿ

ಮತ್ತೆ ಮದ್ಯದ ಬೆಲೆ ಏರಿಕೆ?

ಬಜೆಟ್‌ನಲ್ಲಿ ನೀಡಿದ ಗುರಿ ತಲುಪಲು ಬೆಲೆ ಹೆಚ್ಚಿಸುವುದು ಅನಿವಾರ್ಯ ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮದ್ಯದ ದರ ಹೆಚ್ಚಿಸಲು ಚಿಂತನೆ ನಡೆದಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ದರ ಹೆಚ್ಚಳ ಮಾಡುವ ಬಗ್ಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಲಾಗಿದೆ. ಹೆಚ್ಚುವರಿ ಗುರಿಯನ್ನು […]

ಮತ್ತೆ ಮದ್ಯದ ಬೆಲೆ ಏರಿಕೆ? Read More »

ಉಪ್ಪಿನಂಗಡಿ ನದಿಯಲ್ಲಿ  ವ್ಯಕ್ತಿಯೋರ್ವನ ಶವ ಪತ್ತೆ

ಉಪ್ಪಿನಂಗಡಿ : ಉಪ್ಪಿನಂಗಡಿ ನದಿಯಲ್ಲಿ ಶವವೊಂದು ಪತ್ತೆಯಾದ ಘಟನೆ ಇಂದು ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿ ಬಳಿಕ, ಸ್ಥಳಕ್ಕೆ ಪೊಲೀಸರು ಹಾಗೂ ಅಗತ್ಯ ತಂಡಗಳು ತೆರಳಿ ಶವವನ್ನು ಹೊರತೆಗೆದಿದ್ದಾರೆ. ಶವದ ಗುರುತಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಉಪ್ಪಿನಂಗಡಿ ನದಿಯಲ್ಲಿ  ವ್ಯಕ್ತಿಯೋರ್ವನ ಶವ ಪತ್ತೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶ

ವಿಮಾನ ನಿಲ್ದಾಣದಿಂದ ಹೊರಬರಲು ವಿಶೇಷ ಪ್ರೊಟೊಕಾಲ್‌ ಒದಗಿಸಿದ ಅನುಮಾನ ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್ ಒಳಗೊಂಡಿರುವ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಆಕೆಯ ಮಲತಂದೆ ಡಿಜಿಪಿ ಡಾ.ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೊಟೊಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ ವಿರುದ್ಧ ತನಿಖೆಗೆ ಆದೇಶ Read More »

ಕೆ.ಎಸ್. ಎಸ್ ಕಾಲೇಜು ವಿದ್ಯಾರ್ಥಿಗಳಿಂದ ನ್ಯಾಯಾಲಯಕ್ಕೆ ಭೇಟಿ

ಪುತ್ತೂರು : ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಮಾರ್ಚ್ 10 ರಂದು ಪುತ್ತೂರು ಸ್ಟೇಷನ್, ನ್ಯಾಯಾಲಯಕ್ಕೆ ಅಂತಿಮ ಬಿಬಿಎ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭೇಟಿ ಕಾರ್ಯಕ್ರಮ ನಡೆಯಿತು. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಶಿವಪ್ರಸಾದ್ ಎಸ್ ಅವರ ಮಾರ್ಗದರ್ಶನದಲ್ಲಿ ಹಿರಿಯ ವಕೀಲ ಮತ್ತು ನೋಟರಿ ಜಯರಾಮ್ ಚಿಲ್ತಡ್ಕ ಮತ್ತು ವಕೀಲ ಚೇತನ್ ಕೆ ಅವರ ಸಹಕಾರದಿಂದ ವಿದ್ಯಾರ್ಥಿಗಳು ನ್ಯಾಯಾಲಯದ ವಿಚಾರಣೆಗಳ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಪಡೆದರು  ಪಠ್ಯಕ್ಕೆ ಸಂಬಂಧಪಟ್ಟಂತೆ ಅನುಭವಾತ್ಮಕ ಕಲಿಕೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಅಂಶಗಳ ಮಾಹಿತಿ

ಕೆ.ಎಸ್. ಎಸ್ ಕಾಲೇಜು ವಿದ್ಯಾರ್ಥಿಗಳಿಂದ ನ್ಯಾಯಾಲಯಕ್ಕೆ ಭೇಟಿ Read More »

ನೇಣುಬಿಗಿದು ಯುವತಿ ಆತ್ಮಹತ್ಯೆ

ಬ್ರಹ್ಮಾವರ : ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಮನನೊಂದು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೆಲಿನ್ ಡಿಸೋಜ(46) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.9ರಂದು ಸಂಜೆ ಮನೆಯ ಹಾಲ್‌ನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ಯುವತಿ ಆತ್ಮಹತ್ಯೆ Read More »

ಸದನದಲ್ಲಿ ಪ್ರತಿಧ್ವನಿಸಿದ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌

ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ಬಹಿರಂಗಪಡಿಸಲು ಸುನಿಲ್‌ ಕುಮಾರ್‌ ಒತ್ತಾಯ ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಜೊತೆ ನಂಟು ಹೊಂದಿರುವ ರಾಜ್ಯದ ಇಬ್ಬರು ಸಚಿವರ ಹೆಸರು ಬಹಿರಂಗಪಡಿಸಲು ಮತ್ತು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ಶಾಸಕ ಸುನಿಲ್‌ ಕುಮಾರ್‌ ನಿನ್ನೆ ಸದನದಲ್ಲಿ ಒತ್ತಾಯಸಿದ್ದಾರೆ. ಕಲಾಪದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುನಿಲ್‌ ಕುಮಾರ್‌ ನಟಿಯೊಬ್ಬರು ಭಾರಿ ಪ್ರಮಾಣದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ವಿಚಾರ ಮಾಧ್ಯಮಗಳಲ್ಲಿ ಬಂದಿದೆ. ಈ ನಟಿಯ ಹಿಂದೆ ಕೆಲವು ಪ್ರಭಾವಿ ವ್ಯಕ್ತಿಗಳಿದ್ದು,

ಸದನದಲ್ಲಿ ಪ್ರತಿಧ್ವನಿಸಿದ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ Read More »

ಶರವೂರು ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆ

ಅಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬ ಕಲಾಸಂಗಮ   ಶರವೂರು ಇದರ ವತಿಯಿಂದ ಇಷ್ಟಾರ್ಥ ಸಿದ್ಧಿಗಾಗಿ  ಯಕ್ಷಗಾನ ತಾಳಮದ್ದಳೆ ಸೇವೆಯು ಶ್ರೀ ದೇವಿ ಸನ್ನಿದಿಯಲ್ಲಿ ಅರ್ಚಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಹರೀಶ ಉಪಾಧ್ಯಾಯ ಮತ್ತು ರಾಘವೇಂದ್ರ ಪ್ರಸಾದರು  ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರದಲ್ಲಿ ದೇವಿಗೆ ಪ್ರಿಯವಾದ  ಯಕ್ಷಗಾನ ಸೇವೆ   ಹಿಂದಿನಿಂದಲೂ ನಡೆಯುತ್ತಿದ್ದು ಇಷ್ಟಾರ್ಥ ಸಿದ್ಧಿಗಾಗಿ  ಈಗ ಆರಂಭಿಸಲ್ಪಡುತ್ತಿರುವ ತಾಳಮದ್ದಳೆಯು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ 

ಶರವೂರು ಕ್ಷೇತ್ರದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆ Read More »

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ

ಮಾ.14ರಂದು ಚಂದ್ರಗ್ರಹಣ; ಮಾ.29ರಂದು ಸೂರ್ಯಗ್ರಹಣ ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನದಂದು ಹೋಳಿ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಚಂದ್ರಗ್ರಹಣ ಮಾರ್ಚ್ 14ರಂದು ಬೆಳಿಗ್ಗೆ 9.29ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3.29ಕ್ಕೆ ಕೊನೆಗೊಳ್ಳಲಿದೆ. ಸುದೀರ್ಘ ಆರು ತಾಸು ಚಂದ್ರಗ್ರಹಣ ಇದ್ದರೂ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದೇ ತಿಂಗಳಲ್ಲಿ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಖಗೋಲ ಶಾಸ್ತ್ರಜ್ಞರ ಪ್ರಕಾರ ಮಾ.29ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ

ಈ ತಿಂಗಳಲ್ಲಿ ಸಂಭವಿಸಲಿದೆ ಎರಡು ಗ್ರಹಣ Read More »

ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಹೇಳಿಕೆಗೆ ಭಾರಿ ವಿರೋಧ

ಚಕ್ರವರ್ತಿ ಸೂಲಿಬೆಲೆಗೆ ಎಸ್‌ಡಿಪಿಐಯಿಂದ ಎಚ್ಚರಿಕೆ ಮಂಗಳೂರು: ಹಿಂದೂ ಹುಡುಗರಿಗೆ ಮದುವೆಯಾಗಲು ಹುಡುಗಿ ಸಿಗದಿದ್ದರೆ ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಿ ಎಂದಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಎಸ್‌ಡಿಪಿಐ ಸೇರಿ ಹಲವು ಸಂಘಟನೆಗಳ ನಾಯಕರು ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಚಕ್ರವರ್ತಿ ಸೂಲಿಬೆಲೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಹೇಳಿಕೆಗೆ ಸದಾ ಬದ್ಧನಾಗಿರುತ್ತೇನೆ ಎಂದಿದ್ದಾರೆ. ವಿಶ್ವ ಹಿಂದೂ ಪರಿಷತ್ ಭಾನುವಾರ ಮಂಗಳೂರಿನಲ್ಲಿ ನಡೆದಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ

ಅನ್ಯಧರ್ಮದ ಹುಡುಗಿಯರನ್ನು ಮದುವೆಯಾಗಿ ಹೇಳಿಕೆಗೆ ಭಾರಿ ವಿರೋಧ Read More »

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ

ಟಿವಿ ಚಾನೆಲ್‌ಗಳಲ್ಲಿ, ಸ್ಟೇಡಿಯಂ ಸುತ್ತಮುತ್ತ ತಂಬಾಕು, ಮದ್ಯದ ಜಾಹೀರಾತು ಹಾಕದಂತೆ ಆದೇಶ ಹೊಸದಿಲ್ಲಿ: ಐಪಿಎಲ್‌ ಪಂದ್ಯಗಳು ನಡೆಯುವ ಕ್ರೀಡಾಂಗಣದ ಆವರಣದಲ್ಲಿ ಮತ್ತು ಪ್ರಸಾರದ ಸಮಯದಲ್ಲಿ ಎಲ್ಲ ರೀತಿಯ ತಂಬಾಕು ಮತ್ತು ಮದ್ಯದ ಜಾಹೀರಾತು ಮತ್ತು ಪ್ರಚಾರಗಳನ್ನು ನಿಷೇಧಿಸಲು ಐಪಿಎಲ್‌ ಮಂಡಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ.ಡಾ.ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ನಿಮ್ಮ ಸಾಮಾಜಿಕ ಮತ್ತು ನೈತಿಕ

ಐಪಿಎಲ್‌ ಪಂದ್ಯಗಳಲ್ಲಿ ತಂಬಾಕು, ಮದ್ಯದ ಜಾಹೀರಾತಿಗೆ ನಿಷೇಧ : ಕೇಂದ್ರ ಸೂಚನೆ Read More »

error: Content is protected !!
Scroll to Top