ಸುದ್ದಿ

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ

ಎರಡು ಎಕರೆ ಪ್ರದೇಶದ ಮರ-ಗಿಡ ಸುಟ್ಟು ಕರಕಲು ಕಡಬ : ತಾಲೂಕಿನ ಕಾಯ್ಮಣ ಗ್ರಾಮದ ಮುಂಗ್ಲಿಮಜಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಶುಕ್ರವಾರ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದ್ದು, ಮಧ್ಯಾಹ್ನದ ಧಗಧಗಿಸುವ ಬಿಸಿಲಿನ ಸಂದರ್ಭದಲ್ಲಿ ಬೆಂಕಿ ಬಿದ್ದು ಅರಣ್ಯ ಪ್ರದೇಶವನ್ನು ಆವರಿಸಿಕೊಂಡಿದೆ, ಮುಂಗ್ಲಿಮಜಲು, ಪದವು ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಾಟಿ ಮಾಡಿರುವ ನೆಡುತೋಪಿನ ಹಣ್ಣು ಹಂಪಲುಗಳ ಗಿಡಗಳು […]

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ Read More »

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ

ಮೊದಲ ದಿನ ಭಾರತ-ಅಮೆರಿಕ ಮುಖಾಮುಖಿ ಮುಂಬೈ: ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಇಂದಿನಿಂದ ಶುರುವಾಗುತ್ತಿದೆ. ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಭಾರತ ತಂಡ ಸೇರಿದಂತೆ ಎಲ್ಲಾ 20 ತಂಡಗಳು ಈ ಮೆಗಾ ಟೂರ್ನಮೆಂಟ್‌ಗಾಗಿ ತಯಾರಿ ಪೂರ್ಣಗೊಳಿಸಿ ಅಖಾಡಕ್ಕಿಳಿಯಲು ಸಜ್ಜಾಗಿವೆ. ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿರುವ ಭಾರತ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಇದಕ್ಕೆ

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ Read More »

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ

ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದ ಸಿಎಂ ಹೈದರಾಬಾದ್ : ಜಗತ್​ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಇನ್ನೂ ಮುಗಿದಿಲ್ಲ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ಅತ್ರಬೈಲು ನಿವಾಸಿ ಕಮಲ-ಮೋನಪ್ಪ ಮತ್ತು ಕೆದಿಲ ಎ ಕಾರ್ಯಕ್ಷೇತ್ರದ ಸತ್ತಿಕಲ್ಲು ನಿವಾಸಿ ಸೆಲ್ಮಾರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಫಲಾನುಭವಿಗಳಾಗಿದ್ದು, ಇವರಿಗೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀಡಿರುವ ದಿನ ಬಳಕೆಗೆ ಉಪಯೋಗವಾಗುವಂತಹ ವಾತ್ಸಲ್ಯ ಕಿಟ್ ಅನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ Read More »

ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’

ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯು.ಎಸ್. ಕಮ್ಯುನಿಕೇಶನ್ಸ್ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಎಂಟರ್‌ಪ್ರೈಸಸ್‌ನ ಸಹಯೋಗದೊಂದಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಸ್ ಟೆಕ್ -2026* ಫೆ.21ರಿಂದ ಮೂರು ದಿನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಲಿರುವುದಾಗಿ ಅಸೋಸಿಯೇಶನ್‌ ಆಫ್ ಕನ್ಸಲಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಮತಾವು ತಿಳಿಸಿದ್ದಾರೆ. ಈ ಮೂರು ದಿನದ

ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’ Read More »

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ‌ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಸಹ ವಿಚಾರಣೆ ನಡೆದಿದ್ದು, ಧರ್ಮಸ್ಥಳ ಕ್ಷೇತ್ರದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಇಂದು ವಾದ ಮಂಡನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಹಾನಿಯಾಗಿದೆ‌. ಅವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಕಾನೂನಿನಡಿ ಸಂತ್ರಸ್ತ ಪದದ ವ್ಯಾಖ್ಯಾನದ ಬಗೆಗೂ ತಿಳಿಸಿದ ಅವರು, ಈ ಪ್ರಕರಣದಲ್ಲಿ ಕ್ಷೇತ್ರದವರನ್ನು ಸಂತ್ರಸ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ SIT

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ Read More »

ಐತಿಹಾಸಿಕ ಲಾಲ್‌ಚೌಕ್‌ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿ‌ಗೆ ಚಾಲನೆ

ಶ್ರೀನಗರ: RSS ಕುರಿತಾಗಿ ಕೆಲವರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಉದ್ದೇಶದಿಂದ ‘ಧ್ವಜ ಯಾತ್ರೆ’ ಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಚಾಲನೆ ನೀಡಲಾಯಿತು. ಈ ಸಾಂಕೇತಿಕ ಯಾತ್ರೆಯು ಲಾಲ್‌ಚೌಕ್‌ನಿಂದ ಪ್ರವಾಸಿ ಸ್ವೀಕರಣಾ ಕೇಂದ್ರದ ವರೆಗೆ ಸಾಗಿತು. ಅಲ್ಲಿಂದ ಈ ಯಾತ್ರೆಯನ್ನು ಮುಂದುವರೆಸಿಕೊಂಡು ಹೋಗುವವರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ಯಾತ್ರೆ ಮುಂದುವರೆಸಿದರು. ಜನರಿಗೆ ಈ ವರೆಗೆ RSS ಬಗ್ಗೆ ತಿರುಚಿದ ಇತಿಹಾಸವನ್ನು ಹೇಳಲಾಗಿದ್ದು, ನಿಜವಾದ ಇತಿಹಾಸವನ್ನು

ಐತಿಹಾಸಿಕ ಲಾಲ್‌ಚೌಕ್‌ನಲ್ಲಿ RSS ಧ್ವಜಯಾತ್ರೆ ಕಾಶ್ಮೀರ – ಕನ್ಯಾಕುಮಾರಿ‌ಗೆ ಚಾಲನೆ Read More »

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ

ನಂತೂರಿನಲ್ಲಿ ಸ್ಕೂಟಿಗೆ ಬಸ್‌ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆ ಮಂಗಳೂರು: ನಗರದ ನಂತೂರು ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದೀಪ್ತಿ (24) ಎಂಬ ಯುವತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಅತ್ಯಂತ ನೋವಿನ ಅಂಶವೆಂದರೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಅದೇ ಬಸ್‌ನಲ್ಲಿ ಅವರ ತಾಯಿಯೂ ಪ್ರಯಾಣಿಸುತ್ತಿದ್ದರು. ಚಾಲಕ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಗುರುವಾರ ಕದ್ರಿ ಪೊಲೀಸ್‌ ಠಾಣೆಯ ಎದುರು ಬಂಧುಗಳು ದೀಪ್ತಿಯ

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ Read More »

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ

ನಗರದಲ್ಲಿ ಸತ್ತು ಬೀಳುತ್ತಿರುವ ಕಾಗೆಗಳು, ಕೋಳಿ ಫಾರಂಗಳಿಗೆ ಕಟ್ಟೆಚ್ಚರ ಘೋಷಣೆ ಚೆನ್ನೈ: ಚೆನ್ನೈಯಲ್ಲಿ ಪಕ್ಷಿಜ್ವರ ಅಥವಾ ಎಚ್‌5ಎನ್‌1 ವೈರಾಣು ಹಾವಳಿ ಪ್ರಾರಂಭವಾಗಿದ್ದು, ನೂರಾರು ಕಾಗೆಗಳು ಈ ವೈರಸ್‌ ತಗಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಗರದೆಲ್ಲೆಡೆ ಕಾಗೆಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬಂದಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಿಸಿದೆ. ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಎಚ್‌5ಎನ್‌1 ವೈರಾಣು ಹರಡುವುದನ್ನು ತಡೆಯಲು ಸತ್ತಿರುವ ಕಾಗೆಗಳನ್ನು ಹಾಗೂ ಕೋಳಿಗಳನ್ನು ಆರೋಗ್ಯ ಅಧಿಕಾರಿಗಳ ಸೂಚನೆ ಪ್ರಕಾರ ನಾಶ ಮಾಡಬೇಕು

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ Read More »

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ

ಬಳ್ಳಾರಿ: ನಾಗಲಕೆರೆಯಲ್ಲಿರುವ ದೇವಾಲಯವೊಂದರಲ್ಲಿ ಮಾಂಸದ ಚೀಲವೊಂದು ಪತ್ತೆಯಾದ ಘಟನೆ ನಡೆದಿದೆ. ಆಂಜನೇಯ ದೇವಾಲಯದ ಹಿಂದಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದಿರುವ ಗರುಡ ಸ್ಥಂಬದ ಮುಂದೆ ಮಾಂಸದ ಕವರ್ ಪತ್ತೆಯಾಗಿರುವುದಾಗಿದೆ. ಬೆಳಗ್ಗಿನ ವೇಳೆ ದೇಗುಲದ ಅರ್ಚಕರ ಗಮನಕ್ಕೆ ಈ ಮಾಂಸದ ಚೀಲ ಬಂದಿದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಂಸದ ಕವರ್ ಅನ್ನು ತೆರವು ಮಾಡಿದ್ದು, ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ತಂದು ಹಾಕಿರುವುದೋ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ Read More »

error: Content is protected !!
Scroll to Top