ಸುದ್ದಿ

ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸ್ಟೇಟಸ್‌ ಹಾಕಿದ್ದಕ್ಕೆ ಯುವಕ ಸೆರೆ

ಕೋಮು ಸಂಘರ್ಷ ನಿಗ್ರಹ ಪಡೆಯಿಂದ ಕಾರ್ಕಳದ ಯುವಕನ ಬಂಧನ ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ರಚಿಸಿರುವ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಬೆನ್ನು ಬಿದ್ದಿದ್ದು, ರಕ್ತಕ್ಕೆ ರಕ್ತವೇ ಬೇಕು ಎಂದು ಸ್ಟೇಟಸ್ ಹಾಕಿದ ಕಾರ್ಕಳದ ಯುವಕನೊಬ್ಬನನ್ನು ಬಂಧಿಸಿದೆ. ಕಾರ್ಕಳ ಇರ್ವತ್ತೂರು ಗ್ರಾಮದ ಆಶಿಕ್ ಎಸ್ ಕೋಟ್ಯಾನ್​​ ಸೆರೆಯಾದ ಯುವಕ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು, ಜೀವಕ್ಕೆ ಜೀವವೇ ಬೇಕುʼ […]

ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸ್ಟೇಟಸ್‌ ಹಾಕಿದ್ದಕ್ಕೆ ಯುವಕ ಸೆರೆ Read More »

ಇಸ್ರೇಲ್‌ ದಾಳಿಗೆ ಗಾಜಾದಲ್ಲಿ 94 ನಾಗರಿಕರು ಸಾವು

ನಿರಾಶ್ರಿತರ ಶಿಬಿರದಲ್ಲಿರುವವರ ಮೇಲೆ ದಾಳಿಯ ಆರೋಪ ಟೆಲ್‌ ಅವೀವ್: ಇರಾನ್‌ ಜೊತೆಗಿನ ಯುದ್ಧಕ್ಕೆ ಇಸ್ರೇಲ್‌ ಸದ್ಯಕ್ಕೆ ವಿರಾಮ ನೀಡಿದ್ದರು. ಗಾಜಾದ ಮೇಲಿನ ದಾಳಿ ಮುಂದುವರಿಸಿದೆ. ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ವಾಯುದಾಳಿ ಮತ್ತು ಗುಂಡಿನ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ‌ 94 ಮಂದಿ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದಕ್ಷಿಣ ಗಾಜಾದಲ್ಲಿ ನಿರ್ವಸಿತ ಜನರು ಮಲಗಿದ್ದ ಟೆಂಟ್ ಶಿಬಿರದ ಮೇಲೆ ರಾತ್ರಿ ಹೊತ್ತು ನಡೆದ ದಾಳಿಗೆ ಜನರು ಬಲಿಯಾಗಿದ್ದಾರೆ. 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು

ಇಸ್ರೇಲ್‌ ದಾಳಿಗೆ ಗಾಜಾದಲ್ಲಿ 94 ನಾಗರಿಕರು ಸಾವು Read More »

ಬಿಜೆಪಿಗೆ ಈ ಸಲ ಮಹಿಳಾ ಸಾರಥ್ಯ?

ಮುಂಚೂಣಿಯಲ್ಲಿದೆ ನಿರ್ಮಲ ಸೀತಾರಾಮನ್‌, ಡಿ.ಪುರಂದೇಶ್ವರಿ, ವನತಿ ಶ್ರೀನಿವಾಸನ್‌ ಹೆಸರು ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆಗಳು ಶುರುವಾಗಿದ್ದು, ಈ ಸಲ ಕೇಸರಿ ಪಕ್ಷಕ್ಕೆ ಮಹಿಳಾ ಸಾರಥ್ಯ ಸಿಗಲಿದೆ ಎಂಬ ಸುಳಿವು ಸಿಕ್ಕಿದೆ. ಹಾಲಿ ಅಧ್ಯಕ್ಷ ಜೆ.ಪಿ.ನಡ್ಡ ಅಧಿಕಾರವಧಿ 2023ಕ್ಕೆ ಮುಗಿದಿದ್ದರೂ 2024ರ ಸಾರ್ವತ್ರಿಕ ಚುನಾವಣೆವರೆಗೆ ಅವರನ್ನು ಮುಂದುವರಿಸಲಾಗಿತ್ತು. ಈಗ ಚುನಾವಣೆ ಮುಗಿದು ಒಂದು ವರ್ಷ ಕಳೆದಿದ್ದು, ಸದ್ಯದಲ್ಲೇ ಬಿಜೆಪಿಗೆ ನೂತನ ಅಧ್ಯಕ್ಷರು ಬರಲಿದ್ದಾರೆ. ಉನ್ನತ ನಾಯಕರು ಅಧ್ಯಕ್ಷರ ಆಯ್ಕೆ ಕುರಿತು ಮಾತುಕತೆಗಳನ್ನು ನಡೆಸುತ್ತಿದ್ದು, ರಾಷ್ಟ್ರೀಯ

ಬಿಜೆಪಿಗೆ ಈ ಸಲ ಮಹಿಳಾ ಸಾರಥ್ಯ? Read More »

ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಎಂಎಲ್‌ಸಿ ರವಿಕುಮಾರ್‌

ಶಾಲಿನಿ ರಜನೀಶ್‌ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಎಫ್‌ಐಆರ್‌ ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೂನ್ 30ರಂದು ನಡೆದ ಬಿಜೆಪಿ ಪ್ರತಿಭಟನೆ ವೇಳೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ರವಿಕುಮಾರ್ ಅವರದ್ದೆನ್ನಲಾದ ಈ ಹೇಳಿಕೆ ಬಿಜೆಪಿಗೆ ಭಾರಿ ಮುಜುಗರ ತಂದಿದೆ. ನಿನ್ನೆ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಈಗ ಶಾಲಿನಿ ರಜನೀಶ್‌ ವಿರುದ್ಧ ಆಡಿದ್ದಾರೆನ್ನಲಾದ

ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಎಂಎಲ್‌ಸಿ ರವಿಕುಮಾರ್‌ Read More »

ಭ್ರಷ್ಟಾಚಾರ: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಗ, ಸೊಸೆ ವಿರುದ್ಧ ಕೇಸ್‌

ಅಧಿಕಾರದಲ್ಲಿದ್ದಾಗ ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣ ಶಿವಮೊಗ್ಗ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಹಾಗೂ ಸೊಸೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರಪ್ಪ ಪುತ್ರ ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧವೂ ಭ್ರಷ್ಟಚಾರ ಕಾಯ್ದೆಯಡಿ ಕೇಸ್ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು

ಭ್ರಷ್ಟಾಚಾರ: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಗ, ಸೊಸೆ ವಿರುದ್ಧ ಕೇಸ್‌ Read More »

5.759 ಕೆಜಿ ಗಾಂಜಾದ ಜೊತೆ ಆರು ಆರೋಪಿಗಳ ಸೆರೆ

ಡ್ರಗ್ಸ್‌ ವ್ಯಸನಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರು: ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಠಾಣೆಯ ಪೊಲೀಸರು ದಾಳಿ ಮಾಡಿ ಐವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಇವರ ಬಂಧನಕ್ಕೆ ನೆರವಾದದ್ದು ಡ್ರಗ್ಸ್‌ ವ್ಯಸನಿಯಾಗಿದ್ದ ಯುವಕನೊಬ್ಬನ ತಂದೆ ನೀಡಿದ್ದ ದೂರು ಎನ್ನುವುದು ಗಮನಾರ್ಹ ಅಂಶ. ನಗರದ ಬಿಕರ್ನಕಟ್ಟೆಯ ಅಡುಮರೋಳಿ ನಿವಾಸಿ ತುಷಾರ್ ಸೋನು (21), ನಾಗುರಿಯ

5.759 ಕೆಜಿ ಗಾಂಜಾದ ಜೊತೆ ಆರು ಆರೋಪಿಗಳ ಸೆರೆ Read More »

ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ

ಡೆಡ್‌ಲೈನ್‌ ಒಳಗೆ ಅರ್ಜಿ ಹಿಂಪಡೆಯದಿದ್ದರೆ ರಾಜೀನಾಮೆ ಅಂಗೀಕಾರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾರ್ವಜನಿಕ ವೇದಿಕೆಯಲ್ಲಿ ಅವಮಾನಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಸರ್ಕಾರ ಸೂಚನೆ ನೀಡಿದೆ. ಉನ್ನತ ಪೊಲೀಸ್‌ ಅಧಿಕಾರಿಯನ್ನು ಕಾಂಗ್ರೆಸ್‌ ಸಭೆಯ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಹೀನಾಯವಾಗಿ ನಡೆಸಿಕೊಂಡ ಕುರಿತು ಭಾರಿ ಟೀಕೆ ವ್ಯಕ್ತವಾಗಿದ್ದರೂ ಸರ್ಕಾರ ರಾಜೀನಾಮೆ ಅಂಗೀಕರಿಸಲು ಸೂಚನೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಗೃಹ ಇಲಾಖೆ ನಾರಾಯಣ ಬರಮಣ್ಣಿ ಅವರ ಸ್ವಯಂ ನಿವೃತ್ತಿ ಮನವಿಯನ್ನು

ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ Read More »

ನಕಲಿ ಪ್ರಮಾಣಪತ್ರ ಸೃಷ್ಟಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ವಂಚನೆ

4500ಕ್ಕೂ ಅಧಿಕ ಉದ್ದಿಮೆ ನಕಲಿ ಸರ್ಟಿಫಿಕೆಟ್‌ ಸೃಷ್ಟಿಸಿರುವ ಅನುಮಾನ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ದಿನಕ್ಕೊಂದು ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರಪಾಲಿಕೆ ನೀಡುವ ಪ್ರಮಾಣಪತ್ರವನ್ನೇ ನಕಲಿಯಾಗಿ ಸೃಷ್ಟಿಸಿ ತೆರಿಗೆ ವಂಚಿಸಿದ ಪ್ರಕರಣ ಬಯಲಾಗಿದ್ದು, ಇದರ ಹಿಂದೆ ಬೃಹತ್‌ ಜಾಲ ಇರುವ ಅನುಮಾನ ವ್ಯಕ್ತವಾಗಿದೆ. ನಕಲಿ ತೆರಿಗೆ ನೋಂದಣಿ ಜಾಲವೊಂದು ಇದರ ಹಿಂದೆ ಇದೆ ಎನ್ನಲಾಗಿದೆ. ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಮಹಾನಗರ ಪಾಲಿಕೆ ನೀಡುವ ಸರ್ಟಿಫಿಕೇಟ್​​ನ್ನೇ ವಂಚಕರು ಕಂಪ್ಯೂಟರ್ ತಂತ್ರಜ್ಞಾನ ಬಳಸಿ

ನಕಲಿ ಪ್ರಮಾಣಪತ್ರ ಸೃಷ್ಟಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ವಂಚನೆ Read More »

ಮುಂಬಯಿ: ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕಿ

ಪಂಚತಾರಾ ಹೋಟೆಲ್‌ಗಳಲ್ಲಿ ಶಿಷ್ಯನ ಮೇಲೆ ದೌರ್ಜನ್ಯ ಎಸಗಿದ ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಮುಂಬೈ: ಪ್ರತಿಷ್ಠಿತ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಹದಿಹರೆಯದ ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಆಘಾತಕಾರಿ ಘಟನೆ ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. 11ನೇ ತರಗತಿ ವಿದ್ಯಾರ್ಥಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 40ರ ಹರೆಯದ ಶಿಕ್ಷಕಿಯನ್ನು ಪೋಕ್ಸೊ ಕಾಯ್ದೆಯ ಅಡಿ ಬಂಧಿಸಲಾಗಿದೆ. ಮುಂಬೈನ ಪ್ರಖ್ಯಾತ ಶಾಲೆಯ 40 ವರ್ಷದ ಇಂಗ್ಲಿಷ್‌ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ 16 ವರ್ಷದ ವಿದ್ಯಾರ್ಥಿಯ ಮೇಲೆ ಹಲವು ಬಾರಿ

ಮುಂಬಯಿ: ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕಿ Read More »

ಈಡೇರದ ಬೇಡಿಕೆ : ಮುಷ್ಕರದತ್ತ ಸಾರಿಗೆ ನೌಕರರ ಚಿತ್ತ

1.10 ಲಕ್ಷ ಸಿಬ್ಬಂದಿಗೆ ಶೇ.25 ವೇತನ ಹೆಚ್ಚಿಸಲು ಒತ್ತಾಯ ಬೆಂಗಳೂರು: ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಮಾತಿಗೆ ತಪ್ಪಿರುವುದರಿಂದ ಮುಷ್ಕರ ಹೂಡಲು ಸಾರಿಗೆ ನೌಕರರು ಚಿಂತಿಸುತ್ತಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಇಂದು ನಾಲ್ಕು ನಿಗಮದ ನೌಕರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ಮುಷ್ಕರ ಹೂಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರಿಗೆ ನೌಕರರು ವೇತನ ಏರಿಕೆಯೂ ಸೇರಿದಂತೆ ಸರ್ಕಾರದ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಕಳೆದ ವರ್ಷ ಕೂಡ ಬಸ್ ನಿಲ್ಲಿಸಿ

ಈಡೇರದ ಬೇಡಿಕೆ : ಮುಷ್ಕರದತ್ತ ಸಾರಿಗೆ ನೌಕರರ ಚಿತ್ತ Read More »

error: Content is protected !!
Scroll to Top