ಸುದ್ದಿ

ಪುತ್ತೂರು : ಮನೆಯಿಂದ ಚಿನ್ನ ಕದ್ದವ ಸೆರೆ

ಪುತ್ತೂರು: ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಕದ್ದ ಸರಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29) ಎಂದು ಗುರುತಿಸಲಾಗಿದೆ. ಪುತ್ತೂರಿನ ಈಶ್ವರಮಂಗಲದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 30.120 ಗ್ರಾಂ ಬಂಗಾರ ಹಾಗೂ ರೂ.5000 ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕಳ್ಳತನಕ್ಕೆ ಬಳಸಿದ ಡಿಸ್ಕವರಿ ಬೈಕ್ ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ಪತ್ತೆ ಹಚ್ಚುವಲ್ಲಿ […]

ಪುತ್ತೂರು : ಮನೆಯಿಂದ ಚಿನ್ನ ಕದ್ದವ ಸೆರೆ Read More »

ಭಾರಿ ಮಳೆ ಸಾಧ್ಯತೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆಗಳಿಗೆ ರಜೆ

ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣ ಹವಾಮಾನ ಇಲಾಖೆ ಸೋಮವಾರ ಕರಾವಳಿ ಜಿಲ್ಲೆಗಳಿಗೆ ಇಂದು ಭಾರಿ ಮಳೆಯ ಮುನ್ಸೂಚನೆ ನೀಡಿ ರೆಡ್‌ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ

ಭಾರಿ ಮಳೆ ಸಾಧ್ಯತೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆಗಳಿಗೆ ರಜೆ Read More »

ಬಿಜೆಪಿಯವರು ರ‍್ಯಾಲಿ ಮಾಡುತ್ತಿರುವುದು ಧರ್ಮಸ್ಥಳ ಪರ ನ್ಯಾಯದ ಪರ ಅಲ್ಲ : ಡಿ.ಕೆ.ಶಿವಕುಮಾರ್‌

ಆರೋಪಗಳು ಸತ್ಯನಾ, ಸುಳ್ಳಾ ಎಂದು ತಿಳಿಯಲು ಎಸ್‌ಐಟಿ ರಚಿಸಿದ್ದೇವೆ ಎಂದು ಸಮರ್ಥನೆ ಬೆಂಗಳೂರು: ಧರ್ಮಸ್ಥಳದ ಅಪಪ್ರಚಾರ ವಿರುದ್ಧ ಬಿಜೆಪಿ ನಡೆಸುತ್ತಿರುವ ರ‍್ಯಾಲಿಯನ್ನು ಟೀಕಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಜೆಪಿಗರು ರ‍್ಯಾಲಿ ಮಾಡ್ತಿರೋದು ಧರ್ಮಸ್ಥಳದ ಪರವಾಗಿಯೇ ಹೊರತು ನ್ಯಾಯದ ಪರ ಅಲ್ಲ ಎಂದು ಹೇಳಿದ್ದಾರೆ. ನಾವು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಮುಕ್ತಿ ಸಿಗಲಿ, ಅದು ಸತ್ಯನಾ ಅಥವಾ ಸುಳ್ಳಾ ಅನ್ನೋದು ಜನಕ್ಕೆ ಗೊತ್ತಾಗಲಿ ಅಂತಾ ಎಸ್‌ಐಟಿ ರಚನೆ ಮಾಡಿದ್ದೇವೆ. ಅದರಲ್ಲಿ ಈಗ ಏನೂ ಸಿಕ್ಕಿಲ್ಲ ಅಂತ ಗೊತ್ತಾದ ಮೇಲೆ

ಬಿಜೆಪಿಯವರು ರ‍್ಯಾಲಿ ಮಾಡುತ್ತಿರುವುದು ಧರ್ಮಸ್ಥಳ ಪರ ನ್ಯಾಯದ ಪರ ಅಲ್ಲ : ಡಿ.ಕೆ.ಶಿವಕುಮಾರ್‌ Read More »

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವೃದ್ಧನ ಬಂಧನ

ವಿಡಿಯೋ ವೈರಲ್‌ ಆಗಿ ಬೆಳಕಿಗೆ ಬಂದ ಕೃತ್ಯ ಮಂಗಳೂರು: ಮೂಡುಬಿದಿರೆ ಸಮೀಪ ಖಾಸಗಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ್ದ ಅನ್ಯಕೋಮಿನ ವೃದ್ಧನನ್ನು ಶನಿವಾರ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬೆಳುವಾಯಿಯ ನಿವಾಸಿ ರೆಹ್ಮಾನ್‌ ಸೆರೆಯಾಗಿರುವ ಆರೋಪಿ. ಕೆಲ ದಿನಗಳ ಹಿಂದೆ ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತನ್ನ ಪಕ್ಕ ಕುಳಿತಿದ್ದ ಯುವತಿಗೆ ಆರೋಪಿ ಮೈಮುಟ್ಟಿ ಕಿರುಕುಳ ನೀಡಿದ್ದ. ಇದನ್ನು ಪ್ರತಿಭಟಿಸಿ ಯುವತಿ ಬಸ್‌ನಲ್ಲೇ ವೃದ್ಧನನ್ನು ದಬಾಯಿಸಿದ್ದು, ಉಳಿದ ಪ್ರಯಾಣಿಕರೂ ಯುವತಿಯ ಬೆಂಬಲಕ್ಕೆ ನಿಂತಿದ್ದರು.ಯಾರೋ ಇದನ್ನು ವಿಡಿಯೋ ಮಾಡಿ

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವೃದ್ಧನ ಬಂಧನ Read More »

ಧರ್ಮಸ್ಥಳಕ್ಕೆ ಬಂದ ಬಿಜೆಪಿ ಶಾಸಕರ ತಂಡ

ಮತಾಂತರ, ಮತಾಂಧತೆ ಮಾಫಿಯಾದ ಕೈವಾಡ ಇದೆ ಎಂದ ಸಿ.ಟಿ.ರವಿ ಮಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಶಾಸಕರ ತಂಡ ಇಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದೆ. ಎಂಎಲ್‍ಸಿ ಸಿ.ಟಿ ರವಿ ಹಾಗೂ ಶಾಸಕರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ. ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ವೇದವ್ಯಾಸ ಕಾಮತ್‌, ಎಂಎಲ್‌ಸಿ ಸಿ.ಟಿ.ರವಿ ಸಹಿತ ಬಿಜೆಪಿಯ ಹಲವು ಶಾಸಕರು, ಎಂಎಲ್‌ಸಿಗಳು ಮತ್ತು

ಧರ್ಮಸ್ಥಳಕ್ಕೆ ಬಂದ ಬಿಜೆಪಿ ಶಾಸಕರ ತಂಡ Read More »

ಭಾರತಕ್ಕೆ ಆಗಮಿಸಿದ ಗಗನಯಾತ್ರಿ ಶುಭಾಂಶು ಶುಕ್ಲ

ದಿಲ್ಲಿ, ಸಿಎಂ, ಕೇಂದ್ರ ಸಚಿವರು ಸಹಿತ ಗಣ್ಯರಿಂದ ನಸುಕಿನ ಹೊತ್ತು ಅದ್ದೂರಿ ಸ್ವಾಗತ ನವದೆಹಲಿ: ನಾಸಾದ ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಶುಭಾಂಶು ಶುಕ್ಲಾ ಇಂದು ನಸುಕಿನ ಹೊತ್ತು ಭಾರತಕ್ಕೆ ಆಗಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಮೊದಲ ಬಾರಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ತಾಯ್ನಾಡಿಗೆ ಮರಳಿದ್ದು, ಅವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಅಮೆರಿಕದಿಂದ ಮಧ್ಯರಾತ್ರಿ 1.30ರ ವೇಳೆಗೆ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಕೇಂದ್ರ ಸಚಿವ

ಭಾರತಕ್ಕೆ ಆಗಮಿಸಿದ ಗಗನಯಾತ್ರಿ ಶುಭಾಂಶು ಶುಕ್ಲ Read More »

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು

ಒಂದೇ ದಿನ ಇಬ್ಬರು ಸಹೋದರರ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬ ಮಂಗಳೂರು: ತಮ್ಮನ ಅಂತ್ಯಕ್ರಿಯೆಗಾಗಿ ದೂರದ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಅಂತ್ಯಕ್ರಿಯೆ ಮುಗಿಯುವ ಮೊದಲೇ ಸಾವಿಗೀಡಾದ ಘಟನೆ ಕಟೀಲು ಸಮೀಪ ನಿಡ್ಡೋಡಿ ಎಂಬಲ್ಲಿ ಶನಿವಾರ ಸಂಭವಿಸಿದೆ. ನಿಡ್ಡೋಡಿಯ ಮುದಲಾಡಿಗುತ್ತು ಮನೆಯ ಪ್ರವೀಣ್‌ ಶೆಟ್ಟಿ (49) ಮತ್ತು ಸಾಯಿಪ್ರಸಾದ್‌ ಶೆಟ್ಟಿ (52) ಒಂದೇ ದಿನ ಸಾವಿಗೀಡಾದ ಸಹೋದರರು. ಪ್ರವೀಣ್‌ ಶೆಟ್ಟಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಅವರ ಪರಿಸ್ಥಿತಿ ಉಲ್ಬಣಿಸಿತ್ತು. ಮನೆಯವರು ಗುಜರಾತ್‌ನಲ್ಲಿರುವ ಸಾಯಿಪ್ರಸಾದ್‌ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದರು.

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು Read More »

ಧರ್ಮಸ್ಥಳಕ್ಕೆ ಇಂದು ಬಿಜೆಪಿ ಶಾಸಕರ ತಂಡ ಭೇಟಿ

ಬಿಜೆಪಿ-ಕಾಂಗ್ರೆಸ್‌ ಕಿತ್ತಾಟ ; ರಾಜಕೀಯ ವಿವಾದವಾಗಿ ಬದಲಾದ ಪ್ರಕರಣ ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪದ ತನಿಖೆಗೆ ಅವರಸದಲ್ಲಿ ಎಸ್‌ಐಟಿ ರಚನೆ ಮಾಡಿದ ವಿಚಾರ ಈಗ ರಾಜಕೀಯ ವಿವಾದವಾಗಿ ಬದಲಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ನಿನ್ನೆ ಬಿಜೆಪಿ ಎಂಎಲ್‌ಸಿ ವಿಶ್ವನಾಥ್‌ ನೇತೃತ್ವದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ ತನಕ ಬೃಹತ್‌ ವಾಹನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದರ ಬೆನ್ನಿಗೆ ಭಾನುವಾರ (ಆ.17) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಪೊಲೀಸರ ವಿಚಾರಣೆ,

ಧರ್ಮಸ್ಥಳಕ್ಕೆ ಇಂದು ಬಿಜೆಪಿ ಶಾಸಕರ ತಂಡ ಭೇಟಿ Read More »

ಭಾರಿ ಮಳೆಗೆ ಭೂಕುಸಿತ : ಮಂಗಳೂರು-ಬೆಂಗಳೂರು ರೈಲು, ರಸ್ತೆ ಸಂಚಾರ ವ್ಯತ್ಯಯ

ಶಿರಾಡಿ ಘಾಟ್‌ನಲ್ಲಿ ಟ್ರಾಫಿಕ್‌ ಜಾಮ್‌ ಆಗಿ ವಾಹನ ಸವಾರರಿಗೆ ಸಮಸ್ಯೆ ಮಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಮಳೆ ಮತ್ತೆ ಅಬ್ಬರಿಸತೊಡಗಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡರಲ್ಲೂ ಭೂಕುಸಿತ ಸಂಭವಿಸಿದೆ. ಎಡಕುಮೇರಿ ಬಳಿ ಭೂಕುಸಿತವಾಗಿ ಬೆಂಗಳೂರು-ಮಂಗಳೂರು ರೈಲುಗಳು ಸ್ಥಗಿತಗೊಂಡಿವೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಹಲವೆಡೆ ಭೂಕುಸಿತ ಉಂಟಾಗಿದೆ. ಮರಗಿಡಗಳ ಸಮೇತ ಮಣ್ಣು ರಸ್ತೆಗೆ ಕುಸಿಯುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ವಾಹನಗಳ

ಭಾರಿ ಮಳೆಗೆ ಭೂಕುಸಿತ : ಮಂಗಳೂರು-ಬೆಂಗಳೂರು ರೈಲು, ರಸ್ತೆ ಸಂಚಾರ ವ್ಯತ್ಯಯ Read More »

ಭೀಕರ ಬೆಂಕಿ ಅವಘಡ : ಐದು ಮಂದಿ ಸಜೀವ ದಹನ

ತಂದೆ-ತಾಯಿ ಇಬ್ಬರು ಪುಟ್ಟ ಮಕ್ಕಳ ದುರಂತ ಅಂತ್ಯ ಬೆಂಗಳೂರು: ಇಲ್ಲಿನ ಕೆ.ಆರ್ ಮಾರ್ಕೆಟ್ ಬಳಿಯ ನಗರ್ತ ಪೇಟೆಯ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಸಜೀವ ಸುಟ್ಟುಕರಕಲಾದವರನ್ನು ಮದನ್ (38), ಅವರ ಪತ್ನಿ ಸಂಗೀತಾ (33) ಪುತ್ರರಾದ ಮಿತೇಶ್ (8), ವಿಹಾನ್ (5) ಎಂದು ಗುರುತಿಸಲಾಗಿದ್ದು, ಮತ್ತೊಂದು ಮಹಡಿಯಲ್ಲಿ ಸುರೇಶ್‌ ಎಂಬವರೂ ಸುಟ್ಟು ಕರಕಲಾಗಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌

ಭೀಕರ ಬೆಂಕಿ ಅವಘಡ : ಐದು ಮಂದಿ ಸಜೀವ ದಹನ Read More »

error: Content is protected !!
Scroll to Top