ಸುದ್ದಿ

5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು

ನೋ ಡಿಟೆನ್ಶನ್‌ ನಿಯಮ ರದ್ದು ಮಾಡಿದ ಕೇಂದ್ರ ಹೊಸದಿಲ್ಲಿ : 5 ಮತ್ತು 8ನೇ ತರಗತಿಗೆ ಇದ್ದ ನೋ ಡಿಟೆನ್ಶನ್‌ ನಿಯಮವನ್ನು ರದ್ದುಗೊಳಿಸುವ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಷ್ಟರ ತನಕ ನೋ ಡಿಟೆನ್ಶನ್‌ ನಿಯಮದ ಪ್ರಕಾರ ವಿದ್ಯಾರ್ಥಿ ಕಲಿಯುವುದರಲ್ಲಿ ಎಷ್ಟೇ ಹಿಂದೆ ಇದ್ದರೂ ಅವನನ್ನು ಅನುತ್ತೀರ್ಣಗೊಳಿಸುವಂತಿರಲಿಲ್ಲ. ಈ ನಿಯಮವನ್ನು ರದ್ದು ಮಾಡಿರುವ ಕೇಂದ್ರ 5 ಮತ್ತು 8ರಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಲು ಅವಕಾಶ ಕೊಟ್ಟಿದೆ. ಉಚಿತ ಮತ್ತು ಕಡ್ಡಾಯ […]

5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು Read More »

ಶಿರಾಡಿ ಘಾಟಿ ಸುರಂಗ ಮಾರ್ಗದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ

3.8 ಕಿಲೋಮೀಟರ್ ಸುರಂಗ ಮಾರ್ಗ, 10 ಕಿ.ಮೀ ವಯಡಕ್ಟ್‌ ನಿರ್ಮಿಸುವ ಯೋಜನೆ ಹೊಸದಿಲ್ಲಿ: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸುರಂಗ ನಿರ್ಮಾಣಕ್ಕೆ ಭಾರಿ ಮೊತ್ತ ಬೇಕಾಗುತ್ತದೆ. ಜೊತೆಗೆ ಇದು ಕಾರ್ಯಸಾಧು ಅಲ್ಲ ಎಂದು 2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಉತ್ತರ ನೀಡಿದ್ದರು. ಆದರೆ ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ 3

ಶಿರಾಡಿ ಘಾಟಿ ಸುರಂಗ ಮಾರ್ಗದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ Read More »

ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಕಾಪು ಮೂಲದ ಹುಡುಗ ತನುಷ್ ಕೋಟ್ಯಾನ್

ರವಿಚಂದ್ರನ್‌ ಅಶ್ವಿನ್‌ ನಿವೃತ್ತಿಯಿಂದಾಗಿ ಸಿಕ್ಕಿದ ಅವಕಾಶ ಮುಂಬಯಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ತನುಷ್ ಕೋಟ್ಯಾನ್ ಎಂಬ ಯುವ ಆಟಗಾರ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ತನುಷ್‌ ಕೋಟ್ಯಾನ್‌ ಹೆತ್ತವರು ಉಡುಪಿಯ ಕಾಪು ಮೂಲದವರು. ತನುಷ್‌ ಕೋಟ್ಯಾನ್‌ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ. ತನುಷ್ ಕೋಟ್ಯಾನ್ ವಯಸ್ಸು ಕೇವಲ 26. ಬಲಗೈ

ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಕಾಪು ಮೂಲದ ಹುಡುಗ ತನುಷ್ ಕೋಟ್ಯಾನ್ Read More »

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಅವರು ಬರೆದ 900 ಹಿಂದಿ ಹಾಡುಗಳು ಕೂಡ ಸೂಪರ್ ಹಿಟ್ ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದಿದ್ದ ನನಗೆ 60-70ರ ದಶಕದ ಕೆಲವು ಅದ್ಭುತವಾದ ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.ಆ ಕವಿ ಯಾರು? ಎಂದು ಹುಡುಕುತ್ತಾ ಹೋದಾಗ ನನಗೆ ವಿಸ್ಮಯವೇ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ Read More »

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದ ಸುವರ್ಣ ಮಹೋತ್ಸವದ ಸಂಭ್ರಮ | ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಚಪ್ಪರ ಮುಹೂರ್ತ

ಮಂಗಳೂರು : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದ ಸುವರ್ಣ ಮಹೋತ್ಸವವು ಜನವರಿ 1 ಮತ್ತು 2 ರಂದು ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿ ತಯಾರಿಯ ಅಂಗವಾಗಿ ನಿರ್ಮಾಣಗೊಳ್ಳಲಿರುವ ಯಾಗಶಾಲೆ, ಪಾಕಶಾಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಮುಂತಾದವುಗಳ ನಿರ್ಮಾಣ ಕಾರ್ಯದ ಪ್ರಾರಂಭೋತ್ಸವದ ಸಲುವಾಗಿ ಇಂದು ಬೆಳಿಗ್ಗೆ ಚಪ್ಪರ ಮುಹೂರ್ತ ನಡೆಯಿತು. ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಚಪ್ಪರ ಮುಹೂರ್ತ ನಡೆಸಿದರು. ಕಾರ್ಯಕ್ರಮದಲ್ಲಿ ಸುಬ್ಬಕಾರಡ್ಕ, ಸುಬ್ರಹ್ಮಣ್ಯ ಭಟ್, ಕುಮಾರ. ಬಿ. ಕೆ. , ಸ್ವಾಮಿರಾವ್ , ರಣದೀಪ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದ ಸುವರ್ಣ ಮಹೋತ್ಸವದ ಸಂಭ್ರಮ | ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರಿಂದ ಚಪ್ಪರ ಮುಹೂರ್ತ Read More »

25 ವರ್ಷದ ಬಳಿಕ ಪತ್ತೆಯಾದ ತಾಯಿ| ಭಾವುಕರಾದ  ಮಕ್ಕಳು

ಬಳ್ಳಾರಿ  : ಬಳ್ಳಾರಿ ಜಿಲ್ಲೆಯ ಸಾಕಮ್ಮ ಎನ್ನುವ ಮಹಿಳೆ 25 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಅನಾಥಾಶ್ರಮದಲ್ಲಿ ಪತ್ತೆಯಾಗಿದ್ದಾರೆ. ಸಾಕಮ್ಮ ಅವರು 25 ವರ್ಷಗಳ ಹಿಂದೆ ಹೊಸಪೇಟೆಯಿಂದ ರೈಲು ಹತ್ತಿ ಹಿಮಾಚಲ ಪ್ರದೇಶಕ್ಕೆ ಹೋಗಿದ್ದು, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಸಾಕಮ್ಮ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರು ಮಾಹಿತಿ ಸಿಕ್ಕಿದೆ. ಪಿ ಮಣಿವಣ್ಣನ್ ಅವರ ನಿರ್ದೇಶನದ ಮೇರೆಗೆ ಮಂಡಿಗೆ ಹೋಗಿದ್ದ ತಂಡ ಸಾಕಮ್ಮ ಅವರ

25 ವರ್ಷದ ಬಳಿಕ ಪತ್ತೆಯಾದ ತಾಯಿ| ಭಾವುಕರಾದ  ಮಕ್ಕಳು Read More »

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮಸಂಗಮ | ಕಾರ್ಯಕರ್ತರ ಮಹಾಸಭೆ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಮುಂಭಾಗ ಡಿ.28 – 29 ರಂದು ಜರಗುವ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮಕ್ಕೆ ಆನ್ ಲೈನ್ ನಲ್ಲಿ ನೊಂದಾಯಿತ ಕಾರ್ಯಕರ್ತರ ಮಹಾಸಭೆ ಭಾನುವಾರ ಸಂಜೆ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಂಚಾಲಕ ಅರುಣ್  ಕುಮಾರ್ ಪುತ್ತಿಲ ಮಾತನಾಡಿ, ಈ  ಬಾರಿ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಕಾರ್ಯಕ್ರಮದ ಅಚ್ಚುಕಟ್ಟಾದ ನಿರ್ವಹಣೆಗೆ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಸೂಚನೆ

ಡಿ.28-29 : ಶ್ರೀನಿವಾಸ ಕಲ್ಯಾಣೋತ್ಸವ – ಧರ್ಮಸಂಗಮ | ಕಾರ್ಯಕರ್ತರ ಮಹಾಸಭೆ Read More »

ವಿಟ್ಲ ಅಂಬೇಡ್ಕರ್ ಭವನಕ್ಕೆ ಅನುದಾನ ಮಂಜೂರು ಮಾಡಲು ವಿಳಂಬ | ಡಿ.30 ರಂದು ದಲಿತ್ ಸೇವಾ ಸಮಿತಿಯಿಂದ ಕಾಲ್ನಡಿಗೆ ಜಾಥಾ ಮೂಲಕ ಮನವಿ

ಪುತ್ತೂರು: ವಿಟ್ಲದಲ್ಲಿ ಮಂಜೂರುಗೊಂಡಿರುವ ಅಂಬೇಡ್ಕರ್ ಭವನಕ್ಕೆ ಈಗಾಗಲೇ 2 ಕೋಟಿ ಅನುದಾನ ಮಂಜೂರುಗೊಳಿಸಲು ವಿಳಂಬ ಮಾಡಿರುವ ಹಿನ್ನಲೆಯಲ್ಲಿ ಸರಕಾರದ ವಿರುದ್ಧ ಡಿ.30 ರಂದು ಕಬಕ ವೃತ್ತದಿಂದ ಶಾಸಕರ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರಿಗೆ ಮನವಿ ಸಲ್ಲಿಸಿದ ಬಳಿಕವೂ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ದಲಿತ ಏಳು ಸಮುದಾಯವನ್ನು ಸೇರಿಸಿಕೊಂಡು ಜನವರಿ

ವಿಟ್ಲ ಅಂಬೇಡ್ಕರ್ ಭವನಕ್ಕೆ ಅನುದಾನ ಮಂಜೂರು ಮಾಡಲು ವಿಳಂಬ | ಡಿ.30 ರಂದು ದಲಿತ್ ಸೇವಾ ಸಮಿತಿಯಿಂದ ಕಾಲ್ನಡಿಗೆ ಜಾಥಾ ಮೂಲಕ ಮನವಿ Read More »

ಡಿ.25 : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಶ್ರೀ ಆಂಜನೇಯ-56 ಸಂಭ್ರಮ, ಶ್ರೀ ಯಕ್ಷಾಂಜನೇಯ ಪ್ರಶಸ್ತಿ, ಪ್ರದಾನ

ಪುತ್ತೂರು : ಬೊಳ್ವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ “ಆಂಜನೇಯ-56” ಸಂಭ್ರಮ ಡಿ.25 ಬುಧವಾರ ದಿನಪೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 9 ಕ್ಕೆ ಶ್ರೀ ಆಂಜನೇಯ-56 ಸಂಭ್ರಮದ ಉದ್ಘಾಟನೆ ನಡೆಯಲಿದ್ದು, ಬಳಿಕ ‘ಯಕ್ಷ ತಾಪಸಿಯರು-ಸಂವಾದ’ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ

ಡಿ.25 : ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಶ್ರೀ ಆಂಜನೇಯ-56 ಸಂಭ್ರಮ, ಶ್ರೀ ಯಕ್ಷಾಂಜನೇಯ ಪ್ರಶಸ್ತಿ, ಪ್ರದಾನ Read More »

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಂಟ್ವಾಳ : ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾವೆಸೆಗಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಮನೆಯವರ ಜೊತೆ ಆಗಮಿಸಿದ್ದ ಯುವತಿಯನ್ನು ಆರೋಪಿ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಯುವತಿ ನೀಡಿದ ದೂರಿನ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ Read More »

error: Content is protected !!
Scroll to Top