ಸುದ್ದಿ

ಸಂಪುಟ ಪುನರ್‌ ರಚನೆ ಪಕ್ಕಾ : ಔತಣಕೂಟದಲ್ಲಿ ಸಿದ್ದರಾಮಯ್ಯ ಸುಳಿವು

ಯಾವುದಕ್ಕೂ ಸಿದ್ಧವಾಗಿರಿ ಎಂದು ಸಚಿವರಿಗೆ ಕಿವಿಮಾತು ಹೇಳಿದ ಸಿಎಂ ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿದ್ದ ಡಿನ್ನರ್ ಪಾರ್ಟಿಸೋಮವಾರ ರಾತ್ರಿ ಸಂಪನ್ನಗೊಂಡಿದೆ. ಭರ್ಜರಿ ಊಟದ ಜೊತೆಗೆ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆಗಳು ಆಗಿವೆ. ಈ ವೇಳೆ ಸಿದ್ದರಾಮಯ್ಯನವರು ಸಚಿವರಿಗೆ ಕೆಲ ಕಿವಿಮಾತು ಕೇಳಿದ್ದಾರೆ. ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ಸಚಿವರಿಗೆ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ […]

ಸಂಪುಟ ಪುನರ್‌ ರಚನೆ ಪಕ್ಕಾ : ಔತಣಕೂಟದಲ್ಲಿ ಸಿದ್ದರಾಮಯ್ಯ ಸುಳಿವು Read More »

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ

ಪುತ್ತೂರು: ಯುವ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ವಿದ್ದು ಉಚ್ಚಿಲ ಅವರ ಮಾರ್ಗದರ್ಶನದಲ್ಲಿ, ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ಬೆಳ್ಳಾರೆ ನೇತೃತ್ವದ ಗೊಂಬೆ ರಾವಣ ಎಂಬ ಮಕ್ಕಳ ರಂಗ ನಾಟಕ ಅ. 18 ಶನಿವಾರದಂದು ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 13 ಮಕ್ಕಳು ಈ ರಂಗನಾಟಕದಲ್ಲಿ ಅಭಿನಯಿಸಲಿದ್ದಾರೆ. ಕಲಾ ಪೋಷಕರ ಸಹಕಾರದ ಜೊತೆಗೆ ‘ಮುದ್ರಾರಂಗ’ – ಚಿಣ್ಣರ

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ Read More »

ಸುರಂಗ ನಿರ್ಮಾಣಕ್ಕೆ ಲಾಲ್‌ಭಾಗ್‍ ಭೂಮಿ ಬಳಕೆ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು: ವಿನಾಶಕ್ಕೆ ದಾರಿ ಮಾಡುವ ಸುರಂಗ ನಿರ್ಮಾಣಕ್ಕೆ ಲಾಲ್‌ಬಾಗ್‌ನ ಆರು ಎಕರೆ ಭೂಮಿಯಲ್ಲ, ಆರು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಈಗಾಗಲೇ ಪ್ರಸ್ತಾವನೆ ಮಾಡಿರುವ ಸುರಂಗ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಹಾಗೆ ಭೂ ಸ್ವಾಧೀನ ಮಾಡಲು ವಿರೋಧ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ ಭೂ ವೈಜ್ಞಾನಿಕ ವರದಿಯನ್ನು ಸಲ್ಲಿಕೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ. ಸುರಂಗ ರ್ಯಾಂಪ್‌ಗಾಗಿ ಉದ್ಯಾನವನವನ್ನು ಗುರುತಿಸುವ ಮೊದಲು ವಾಕಿಂಗ್ ಇನ್ನಿತರ ಚಟುವಟಿಕೆಗೆ ಬಳಕೆ ಮಾಡುವ ಸಾರ್ವಜನಿಕರ

ಸುರಂಗ ನಿರ್ಮಾಣಕ್ಕೆ ಲಾಲ್‌ಭಾಗ್‍ ಭೂಮಿ ಬಳಕೆ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ Read More »

ಮಾಸ್ಕ್‌ಮ್ಯಾನ್ ಚಿನ್ನಯ್ಯನ ಪತ್ನಿ SIT ಕಚೇರಿಗೆ ಹಾಜರ್

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಮಾಸ್ಕ್‌ಮ್ಯಾನ್ ಚಿನ್ನಯ್ಯ‌ನ ಎರಡನೇ ಪತ್ನಿ SIT ಕಚೇರಿಗೆ ಇಂದು ಹಾಜರಾಗಿದ್ದಾರೆ. ಅವರನ್ನು ಆರೋಪಿ ಚಿನ್ನಯ್ಯನಿಗೆ ಸಂಬಂಧಿಸಿದಂತೆ ಇರುವ ಮಾಹಿತಿಗಳನ್ನು ಸಂಗ್ರಹ ಮಾಡುವ ದೃಷ್ಟಿಯಿಂದ SIT ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಗ್ಲಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಚಿನ್ನಯ್ಯ ತೋರಿಸಿದ್ದ ಜಾಗದಲ್ಲಿ ಇತ್ತೀಚೆಗೆ ಮತ್ತೆ SIT ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಹಾಗೆಯೇ ಅರಣ್ಯಾಧಿಕಾರಿಗಳ ಜೊತೆಗೂ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದ್ದರು.

ಮಾಸ್ಕ್‌ಮ್ಯಾನ್ ಚಿನ್ನಯ್ಯನ ಪತ್ನಿ SIT ಕಚೇರಿಗೆ ಹಾಜರ್ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆ

ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ. ರಿ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆ ಜರಗಿತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ತಾಲೂಕು ಘಟಕಗಳ ಪುನಶ್ಚೇತನ, ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ, ಸದಸ್ಯತನದ ನವೀಕರಣ, ಸೇವಾ ಚಟುವಟಿಕೆಗಳನ್ನು ನಡೆಸುವ ಬಗ್ಗೆ ತಿಳಿಸಿದರು. ಪುತ್ತೂರಿನಲ್ಲಿ ಜರಗುವ ಹತ್ತನೇ ದ.ಕ ಜಿಲ್ಲಾ ಮಟ್ಟದ ಗಮಕ ಸಮ್ಮೇಳನ ಮತ್ತು ಬಂಟ್ವಾಳದಲ್ಲಿ ಕನ್ನಡ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆ Read More »

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ : ಆರ್‌.ವಿ.ದೇಶಪಾಂಡೆ

ಕಾಂಗ್ರೆಸ್‌ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಹಿರಿಯ ಶಾಸಕ ಬೆಂಗಳೂರು: ಕಾಂಗ್ರೆಸ್‌ ಚುನಾವಣೆ ಗೆಲ್ಲಲು ನೀಡಿರುವ ಪಂಚ ಗ್ಯಾರಂಟಿಗಳು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ ಎಂಬುದನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌. ವಿ. ದೇಶಪಾಂಡೆ ಒಪ್ಪಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಿದ್ರೆ ಪಂಚ ಗ್ಯಾರಂಟಿ ಯೋಜನೆಗಳನ್ನುಅನುಷ್ಠಾನ ಮಾಡುತ್ತಿರಲಿಲ್ಲ ಎಂದು ಸ್ವಪಕ್ಷದ ಯೋಜನೆ ಬಗ್ಗೆ ಪಕ್ಷದ ಕಾರ್ಯಕ್ರಮದಲ್ಲೇ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರಿ

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ : ಆರ್‌.ವಿ.ದೇಶಪಾಂಡೆ Read More »

ರಾಜ್ಯದಲ್ಲಿ ಮದ್ಯ ಮಾರಾಟ ಭಾರಿ ಇಳಿಮುಖ

ಮದ್ಯ ಶೇ.15, ಬಿಯರ್‌ ಶೇ.19ರಷ್ಟು ಮಾರಾಟ ಕುಸಿತ ಬೆಂಗಳೂರು : ಕರ್ನಾಟಕದಲ್ಲಿ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಸರ್ಕಾರ ಮೂರ್ನಾಲ್ಕು ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡಿರುವುದು ಎನ್ನಲಾಗಿದೆ. ಕಳೆದ ಆರು ತಿಂಗಳಿನಿಂದ ಮದ್ಯ ಮಾರಾಟದ ಮೇಲೆ ಹೊಡೆತ ಬಿದ್ದಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ವ್ಯಾಪಾರ ಕುಸಿದಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಅಂಕಿಅಂಶ ಪ್ರಕಾರ ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023, 2024ಕ್ಕೆ

ರಾಜ್ಯದಲ್ಲಿ ಮದ್ಯ ಮಾರಾಟ ಭಾರಿ ಇಳಿಮುಖ Read More »

‘ವಿಶ್ವಕರ್ಮ ಮಿತ್ರ ಬಳಗ ಕಾವು’ ನೂತನ ಸಂಘಟನೆ ಶುಭಾರಂಭ

ಪುತ್ತೂರು: ಕಾವು ಮತ್ತು ಸುತ್ತ ಮುತ್ತಲಿನ ಗ್ರಾಮದ ವಿಶ್ವಕರ್ಮ ಸಮಾಜದ ಸೇವಾಕಾಂಕ್ಷಿಗಳ ಯುವಕರು “ವಿಶ್ವಕರ್ಮ ಮಿತ್ರ ಬಳಗ ಕಾವು” ಎಂಬ ಸಂಘಟನೆಗೆ ಸರಳ ಸಮಾರಂಭದ ಮೂಲಕ ಚಾಲನೆ ನೀಡಿದ್ದಾರೆ. ನೂತನ ಸಂಘದ ಅಧ್ಯಕ್ಷರಾಗಿ ರವೀಂದ್ರ ಆಚಾರ್ಯ ಅರಿಯಡ್ಕ,ಉಪಾಧ್ಯಕ್ಷರಾಗಿ ಪ್ರಮೋದ್ ಆಚಾರ್ಯ ಮಾಣಿಯಡ್ಕ ಕಾವು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ, ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ಆಚಾರ್ಯ ಪೆರ್ಲಂಪಾಡಿ ,ಕೋಶಧಿಕಾರಿಯಾಗಿ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಮತ್ತು 15 ಜನರನ್ನು ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಂಘಟನೆಯ ಮೂಲಕ ಸಮಾಜದ

‘ವಿಶ್ವಕರ್ಮ ಮಿತ್ರ ಬಳಗ ಕಾವು’ ನೂತನ ಸಂಘಟನೆ ಶುಭಾರಂಭ Read More »

ಆದಾಯ ಸಾಕಾಗುತ್ತಿಲ್ಲ ಸಚಿವ ಸ್ಥಾನದಿಂದ ಕೈಬಿಡಿ ಎಂದು ಮನವಿ ಮಾಡಿದ ಸುರೇಶ್‌ ಗೋಪಿ!

ರಾಜಕೀಯ ವಲಯದಲ್ಲಿ ಅಚ್ಚರಿ ಹುಟ್ಟಿಸಿದ ಕೇರಳದ ಸಂಸದನ ಬಹಿರಂಗ ಹೇಳಿಕೆ ನವದೆಹಲಿ: ಸಚಿವ ಸ್ಥಾನಕ್ಕೆ ಇನ್ನಿಲ್ಲದಂತೆ ತಿಪ್ಪರಲಾಗ ಹಾಕುವ ರಾಜಕಾರಣಿಗಳ ನಡುವೆ ಕೇರಳದ ತ್ರಿಶ್ಶೂರಿನಿಂದ ಲೋಕಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ಚಿತ್ರನಟ ಸುರೇಶ್‌ ಗೋಪಿ ನನಗೆ ಸಚಿವ ಸ್ಥಾನ ಬೇಡ ಎಂದು ಬಹಿರಂಗವಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕೇರಳದಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆ ಗೆದ್ದಿರುವ ಮೊದಲ ಸಂಸದ ಎಂಬ ಹಿರಿಮೆಯನ್ನೂ ಹೊಂದಿರುವ ಸುರೇಶ್‌ ಗೋಪಿ ಸಚಿವ ಸ್ಥಾನ ಬೇಡ ಎಂದಿರುವುದಕ್ಕೆ ನೀಡಿರುವ ಕಾರಣ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಸದ್ಯ

ಆದಾಯ ಸಾಕಾಗುತ್ತಿಲ್ಲ ಸಚಿವ ಸ್ಥಾನದಿಂದ ಕೈಬಿಡಿ ಎಂದು ಮನವಿ ಮಾಡಿದ ಸುರೇಶ್‌ ಗೋಪಿ! Read More »

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ

ಆರೋಪಿಗಳಿಂದ ಕಾರು ಸಹಿತ 26.5 ಲ.ರೂ. ಸೊತ್ತು ವಶ ಮಂಗಳೂರು: ನಗರದ ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಕಾಶಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ನಿವಾಸಿ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ. ಅಕ್ಟೋಬರ್ 9ರಂದು ಹಾರೀಫ್

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ Read More »

error: Content is protected !!
Scroll to Top