ಸುದ್ದಿ

ಅಫಘಾನಿಸ್ತಾನ ಮೇಲೆ ಪಾಕಿಸ್ತಾನ ಮತ್ತೆ ಕ್ಷಿಪಣಿ ದಾಳಿ

ಗಡಿ ಭಾಗದ ದೇಶಗಳಲ್ಲಿ ಯುದ್ಧದ ಕಾರ್ಮೋಡ ಕಾಬೂಲ್‌: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದಾಳಿ ಮತ್ತು ಪ್ರತಿದಾಳಿ ನಡೆಸಲಾರಂಭಿಸಿದ್ದು, ಜಗತ್ತಿನಲ್ಲಿ ಇನ್ನೊಂದು ಯುದ್ಧದ ಕಾರ್ಮೋಡ ಕವಿದಿದೆ. ಕಾಬೂಲ್‌ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್‌ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಿದೆ. ಅಫ್ಘಾನ್‌- ಪಾಕ್‌ ಗಡಿಯಾಗಿರುವ ಡುರಾಂಡ್‌ ಲೈನ್‌ನಲ್ಲಿ ನಡೆದ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆ ಗಡಿಯಲ್ಲಿ ಸ್ಥಾಪಿಸಿದ್ದ 12 ಔಟ್‌ಪೋಸ್ಟಿಂಗ್‌ಗಳನ್ನ ಅಫಘಾನಿಸ್ತಾನ ವಶಪಡಿಸಿಕೊಂಡಿದೆ […]

ಅಫಘಾನಿಸ್ತಾನ ಮೇಲೆ ಪಾಕಿಸ್ತಾನ ಮತ್ತೆ ಕ್ಷಿಪಣಿ ದಾಳಿ Read More »

ಪುತ್ತೂರು : ಹೆಜ್ಜೇನು ದಾಳಿಯಿಂದ ಬಾಲಕಿ ಮೃತ್ಯು

ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಾಲಕಿಯರ ಮೇಲೆ ದಾಳಿ ನಡೆಸಿದ ಹೆಜ್ಜೇನು ಪುತ್ತೂರು: ಹೆಜ್ಜೇನು ದಾಳಿಯಿಂದ ಬಾಲಕಿ ಮೃತಪಟ್ಟ ದಾರುಣ ಘಟನೆ ಸೇಡಿಯಾಪು ಕೂಟೇಲು ಸಮೀಪ ಸಂಭವಿಸಿದೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಮೂವರು ಗಾಯಗೊಂಡಿದ್ದರು. ಈ ಪೈಕಿ ಓರ್ವ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ಕೂಟೇಲು ಎಂಬಲ್ಲಿನ ನಿವಾಸಿ ಕಿರಣ್ ಪೂಜಾರಿ ಎಂಬವರ ಪುತ್ರಿ ದಿಶಾ (7) ಮೃತ ಬಾಲಕಿ. 5ನೇ ತರಗತಿ

ಪುತ್ತೂರು : ಹೆಜ್ಜೇನು ದಾಳಿಯಿಂದ ಬಾಲಕಿ ಮೃತ್ಯು Read More »

ಪುತ್ತೂರು : ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು

ಮನೆಯ ಎದುರು ಕುಳಿತಿದ್ದ ವೇಳೆ ಬಡಿದ ಸಿಡಿಲು ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಆನಡ್ಕ ನಿವಾಸಿ ವಾಮನ (40) ಸಾವನ್ನಪ್ಪಿದ ವ್ಯಕ್ತಿ. ಕೂಲಿ ಕಾರ್ಮಿಕರಾಗಿದ್ದ ವಾಮನ ಅವರು ಸಂಜೆ ಸುಮಾರು 5.30ರ ವೇಳೆಗೆ ತನ್ನ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದ ವೇಳೆಯಲ್ಲಿ ಸಿಡಲು ಬಡಿದಿದ್ದು,

ಪುತ್ತೂರು : ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು Read More »

ಬೆಂಗಳೂರು ನಡಿಗೆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ

ಬೆಂಗಳೂರು: ಲಾಲ್ ಬಾಗ್‌ನಲ್ಲಿ ‌ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗಳನ್ನು ಚಲಿಸುವ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ದಿನಗಳಲ್ಲಿ ಆರು ಪ್ರಮುಖ ಉದ್ಯಾನಗಳಲ್ಲಿ ಬೆಳಗ್ಗೆ 1 ತಾಸು ನಡಿಗೆ ಮತ್ತು ಒಂದು ತಾಸು ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಇಂದು ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಜೊತೆಗೆ ಹಾಳಾದ ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಆಂಬ್ಯುಲನ್ಸ್ ಸಂಚಾರಕ್ಕೆ ಅನುಕೂಲಕರ ಮತ್ತು ಉದ್ದೇಶಿತ ಟನಲ್ ರಸ್ತೆಗೆ ಸಂಬಂಧಿಸಿದ

ಬೆಂಗಳೂರು ನಡಿಗೆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ Read More »

ಕೋಲ್ಡ್ರಿಫ್ ಸಿರಫ್ ನಿಷೇಧಿಸಿದ ದೆಹಲಿ ಸರ್ಕಾರ

ನವದೆಹಲಿ: ಕೋಲ್ಡ್ರಿಫ್ ಕಾಫ್ ಸಿರಪ್ ಬಳಸಿ ಮಧ್ಯಪ್ರದೇಶದಲ್ಲಿ 20 ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಘಟನೆಯ ಬಳಿಕ ದೆಹಲಿ ಸರ್ಕಾರ ಈ ಸಿರಪ್ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಈ ಸಿರಪ್ ಮಾರಾಟ ಮತ್ತು ಖರೀದಿಯನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಕೋಲ್ಡ್ರಿಫ್ ಸಿರಪ್‌ ಗುಣಮಟ್ಟ ಕಳಪೆಯಾಗಿದ್ದು, ಆ ಕಾರಣದಿಂದ ದೆಹಲಿ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡಿರುವುದಾಗಿದೆ. ಮಕ್ಕಳಿಗೆ ನೆಗಡಿ, ಕೆಮ್ಮು ಬಂದಾಗ ವೈದ್ಯರು ಕೋಲ್ಡ್ರಿಫ್ ಸಿರಪ್ ಶಿಫಾರಸ್ಸು ಮಾಡುತ್ತಾರೆ. ಆದರೆ ಅದನ್ನು ಸೇವಿಸಿದ ಬಳಿಕ ಮಕ್ಕಳ ಆರೋಗ್ಯ ಮತ್ತಷ್ಟು

ಕೋಲ್ಡ್ರಿಫ್ ಸಿರಫ್ ನಿಷೇಧಿಸಿದ ದೆಹಲಿ ಸರ್ಕಾರ Read More »

ಪ್ರೀತ್ಸೇ ಅಂತ ಟಾರ್ಚರ್ ಕೊಟ್ಟ ಯುವಕ: 17 ರ ಬಾಲಕಿ ನೇಣು ಬಿಗಿದು ಆತ್ಮಹತ್ಯೆ

ಖಾನಾಪುರ: ಯುವಕನೊಬ್ಬ ಪ್ರೀತಿ ಮಾಡು ಎಂದು ಪೀಡಿಸಿದ್ದಕ್ಕೆ ‌ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಲತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಅಶ್ವಿನಿ ಕೋಲಾರ(17) ಎಂದು ಗುರುತಿಸಲಾಗಿದೆ. ನಂದಳ್ಳಿ ಗ್ರಾಮದ ರತನ್ ಪಾಟೀಲ್ (26) ಎಂಬಾತ ಅಶ್ವಿನಿಗೆ ತನ್ನನ್ನು ಪ್ರೀತಿಸಬೇಕು‌. ಇಲ್ಲವಾದಲ್ಲಿ ನಿನ್ನನ್ನು ನಾನು ಬಿಡುವುದಿಲ್ಲ ಎಂದು ಕಳೆದೊಂದು ವರ್ಷದಿಂದ ಬೆದರಿಕೆ ಹಾಡುತ್ತಿದ್ದ. ಲೈಂಗಿಕ ಕಿರುಕುಳ ಸಹ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರೀತ್ಸೇ ಅಂತ ಟಾರ್ಚರ್ ಕೊಟ್ಟ ಯುವಕ: 17 ರ ಬಾಲಕಿ ನೇಣು ಬಿಗಿದು ಆತ್ಮಹತ್ಯೆ Read More »

ಮುಲ್ಲಾ ಮೋಕ್ಷ್ ಹೋಮ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಅರವಿಂದ ಬೆಲ್ಲದ್ ನೇತೃತ್ವದ ಬಿಜೆಪಿ ಕಾರ್ಯಕರ್ತರು ಮುಲ್ಲಾ ಮೋಕ್ಷ್ ಹೋಮ ಎಂಬ ಬೋರ್ಡ್ ಹಿಡಿದು ಅರ್ಚಕರಿಂದ ಹೋಮ ನಡೆಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಖುರಾನ್ ಪಠಣ ಮಾಡಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಡೆಯನ್ನು ಖಂಡಿಸಿ ಈ ಪ್ರತಿಭಟನೆಯನ್ನು ನಡೆಸಲಾಗಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಚಿತ್ರ ಹಾಕಿಕೊಂಡು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹಾಗೆಯೇ ಒಂದು ಸಮುದಾಯವನ್ನು ಓಲೈಸಲು ಖುರಾನ್ ಪಠಣ ಮಾಡಲಾಗಿದೆ. ಸರ್ಕಾರಿ

ಮುಲ್ಲಾ ಮೋಕ್ಷ್ ಹೋಮ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ Read More »

ನಿಷೇಧಿತ ಪಿಎಫ್‌ಐ ಪರ ಪ್ರಚಾರ : ಕಡಬದ ವ್ಯಕ್ತಿ ಸೆರೆ

ಸೋಷಿಯಲ್‌ ಮೀಡಿಯಾದಲ್ಲಿ ನಿರಂತರ ಪ್ರಚಾರ ಮಾಡುತ್ತಿದ್ದ ಆರೋಪಿ ಮಂಗಳೂರು : ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಬೀಜತ್ತಳಿ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ (55) ಬಂಧಿತ ಆರೋಪಿ. 2022ರಲ್ಲಿ ಕೇಂದ್ರ ಸರ್ಕಾರ ಪಿಎಫ್‌ಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದೆ. ನಿಷೇಧದ ಹೊರತಾಗಿಯೂ ಆರೋಪಿ ಸಂಘಟನೆಯ ಪರ

ನಿಷೇಧಿತ ಪಿಎಫ್‌ಐ ಪರ ಪ್ರಚಾರ : ಕಡಬದ ವ್ಯಕ್ತಿ ಸೆರೆ Read More »

ಭಾರತದ ನೆಲದಲ್ಲಿ ನಿಂತು ಪಾಕ್‌ಗೆ ಶಾಂತಿಯ ಸಂದೇಶ ರವಾನಿಸಿದ ಅಫ್ಘಾನ್ ಸಚಿವ ಮುತ್ತಕಿ

ನವದೆಹಲಿ: ಉಗ್ರರ ಗುಂಪುಗಳನ್ನು ಅಫ್ಘಾನಿಸ್ತಾನ ಸಂಪೂರ್ಣವಾಗಿ ನಿರ್ನಾಮ ಮಾಡಿದ್ದು, ಇದೇ ರೀತಿಯ ಶಾಂತಿಯ ಹಾದಿಯನ್ನು ಪಾಕಿಸ್ತಾನ ತುಳಿಯಬೇಕು ಎಂದು ಭಾರತದ ನೆಲದಲ್ಲಿ ನಿಂತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. LET, ಜೈಶ್ ಎ ಮೊಹಮ್ಮದ್‌ನಂತಹ ಉಗ್ರ ಗುಂಪುಗಳು ಈ ಹಿಂದೆ ಅಫ್ಘಾನಿಸ್ತಾನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವುಗಳೆಲ್ಲವನ್ನೂ ಸಂಪೂರ್ಣ ನಿರ್ನಾಮ ಮಾಡಲಾಗಿದೆ. ಪ್ರಸ್ತುತ ಅಫ್ಘಾನ್‌ನಲ್ಲಿ ಯಾವ ಭಯೋತ್ಪಾದಕರೂ ಇಲ್ಲ. ಅವರ ನಿಯಂತ್ರಣದಲ್ಲಿ ತುಂಡು ಭೂಮಿಯೂ

ಭಾರತದ ನೆಲದಲ್ಲಿ ನಿಂತು ಪಾಕ್‌ಗೆ ಶಾಂತಿಯ ಸಂದೇಶ ರವಾನಿಸಿದ ಅಫ್ಘಾನ್ ಸಚಿವ ಮುತ್ತಕಿ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರಿನ ಸ್ವಾಗತ ಹೋಟೆಲ್ ನಲ್ಲಿ ಜರಗಿತು . ಪಡುಮಲೆ ಶ್ರೀ ಕೂವೆ ಶಾಸ್ತರ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿದ ಜಿಲ್ಲಾಮಟ್ಟದ ಹಿರಿಯರ ಕಾರ್ಯಾಗಾರದ ಫಲಶ್ರುತಿ ಬಗ್ಗೆ ಚರ್ಚಿಸಲಾಯಿತು. ಮೂರು ವಿಚಾರಗೋಷ್ಠಿಗಳು, ಹಿರಿಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಪಡುಮಲೆ ಇವರನ್ನು ಅಭಿನಂದಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 18.10.2025 ರಂದು ಜರಗಲಿರುವ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ Read More »

error: Content is protected !!
Scroll to Top