ಸುದ್ದಿ

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ

ಶ್ರೀಶೈಲಂ: ಆಂಧ್ರಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶ್ರೀಶೈಲಂ‌ನ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ಅವರು ಹಸುವಿನ ಹಾಲು, ತುಪ್ಪ, ಸಕ್ಕರೆ, ಜೇನು ತುಪ್ಪ, ಮೊಸರು ಮಿಶ್ರಿತ ರುದ್ರಾಭಿಷೇಕವನ್ನು ಶ್ರೀ ದೇವರಿಗೆ ನೆರವೇರಿಸಿದರು‌. ಆ ಬಳಿಕ ದೇಗುಲದಲ್ಲಿ ಕೊಂಚ ಧ್ಯಾನ ನಡೆಸಿ, ಬಳಿಕ ಪ್ರಾರ್ಥಿಸಿದರು‌. ಒಂದೇ ದೇವಾಲಯದ ಸಂಕೀರ್ಣದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠಗಳೆರಡೂ ಇದ್ದು, ಇದು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ Read More »

ದೀಪಾವಳಿ ಪ್ರಯುಕ್ತ ಜಿ. ಎಲ್. ಆಚಾರ್ಯ ಚಿನ್ನಾಭರಣ ಮಳಿಗೆಯಲ್ಲಿ ಸ್ವರ್ಣ ಹಬ್ಬ: ಗ್ರಾಹಕರಿಗೆ ವಿಶೇಷ ಆಫರ್

ಪುತ್ತೂರು: ದೀಪಾವಳಿಯ ಶುಭ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಸ್ವರ್ಣ ಹಬ್ಬ ನಡೆಯುತ್ತಿದ್ದು ಗ್ರಾಹಕರಿಗೆ ಆಭರಣ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ಗ್ರಾಂ ಖರೀದಿಯ ಮೇಲೆ 400 ರೂ. ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ 7000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ. ಜಿ. ಗೆ 3 ಸಾವಿರ ರೂ. ವರೆಗೆ ರಿಯಾಯಿತಿ ನೀಡುವುದಾಗಿ ಸಂಸ್ಥೆ ತಿಳಿಸಿದೆ. 50 ಸಾವಿರ

ದೀಪಾವಳಿ ಪ್ರಯುಕ್ತ ಜಿ. ಎಲ್. ಆಚಾರ್ಯ ಚಿನ್ನಾಭರಣ ಮಳಿಗೆಯಲ್ಲಿ ಸ್ವರ್ಣ ಹಬ್ಬ: ಗ್ರಾಹಕರಿಗೆ ವಿಶೇಷ ಆಫರ್ Read More »

ಮೈಸೂರಿಗೆ ಎಸಿಪಿ ಆಗಲು ಕೋಟಿ ರೂ.: ಎಚ್. ವಿಶ್ವನಾಥ್ ಆಕ್ರೋಶ

ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮೈಸೂರು ಸಹ ಇದಕ್ಕೆ ಹೊರತಾಗಿಲ್ಲ. ಮೈಸೂರಿಗೆ ಎಸಿಪಿ ಆಗಹೇಕಾದರೆ ಒಂದು ಕೋಟಿ ರೂ. ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಹುದ್ದೆಗೆ 75 ಲಕ್ಷ ರೂ., ಎಸ್‌ಐ ಹುದ್ದೆಗೆ 50 ಲಕ್ಷ ರೂ. ನೀಡಬೇಕು. ಈಗ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಲ್ಲ ಬದಲಾಗಿ ಶಾಸಕರ ಕೃಪಾ ಪೋಷಿತರು. ಸಿಕ್ಕ ಸಿಕ್ಕಲ್ಲೆಲ್ಲಾ ಅಕ್ರಮ, ಅನ್ಯಾಯ ನಡೆಯುತ್ತಿದೆ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯಗೆ

ಮೈಸೂರಿಗೆ ಎಸಿಪಿ ಆಗಲು ಕೋಟಿ ರೂ.: ಎಚ್. ವಿಶ್ವನಾಥ್ ಆಕ್ರೋಶ Read More »

ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಪಟಾಕಿ ದಾಸ್ತಾನು ಜಪ್ತಿ ಮಾಡಿದ ಪೊಲೀಸರು

ಕಾರ್ಕಳ: ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಸುಡುಮದ್ದು‌ಗಳನ್ನು ಕಾರ್ಕಳ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಖಚಿತ, ಗುಪ್ತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ಮೂರು ಕಂಟೇನರ್‌ನಷ್ಟು ಪ್ರಮಾಣದ ಪಟಾಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಲಕ್ಷಾಂತರ ಮೌಲ್ಯದ ಈ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಪರವಾನಗಿ ಹೊಂದಿರದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದೀಪಾವಳಿ ಹಬ್ಬದ ಕಾರಣಕ್ಕೆ ಪಟಾಕಿ ಮಾರಾಟಗಾರರ ಮೇಲೆ ಪೊಲೀಸ್ ಕಣ್ಗಾವಲು ಹೆಚ್ಚಿಸಿದ್ದು, ಅಕ್ರಮವಾಗಿ, ಪರವಾನಗಿ ಇಲ್ಲದೆ ಪಟಾಕಿ ದಾಸ್ತಾನು,

ಅಕ್ರಮವಾಗಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ಮೌಲ್ಯದ ಪಟಾಕಿ ದಾಸ್ತಾನು ಜಪ್ತಿ ಮಾಡಿದ ಪೊಲೀಸರು Read More »

ಬಿಜೆಪಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯ ಹೊಸ ಆಫರ್ ಕುರಿತಂತೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೊನೆಯಾಗುವ ಕಾಲದಲ್ಲಿ ಪಕ್ಷಕ್ಕೆ ನಿಷ್ಟೆ ತೋರಿ ಜೈಲು ವಾಸವನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ತಿಳಿಸಿದ್ದಾರೆ. ಸುಮಾರು ಹತ್ತು ಮಂದಿ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು‌‌‌. ಆ ಸಮಯದಲ್ಲಿ ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ಮತ್ತೆ ಕ್ವಾಟ್ರಸ್‌ಗೆ ಕರೆ ತಂದೆ‌. ಆಗ ನನಗೊಬ್ಬ ಇನ್‌ಕಂ ಟ್ಯಾಕ್ಸ್ ಅಧಿಕಾರಿ ಕರೆ ಮಾಡಿದ್ದರು.

ಬಿಜೆಪಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್ Read More »

ಮುಖ್ಯಮಂತ್ರಿಗೆ ಇನ್ನೊಂದು ಪತ್ರ ಬರೆದ ಪ್ರಿಯಾಂಕ್‌ ಖರ್ಗೆ

ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲು ಆಗ್ರಹ ಬೆಂಗಳೂರು : ಸರ್ಕಾರಿ ಶಾಲೆಯ ಆವರಣ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬಿಜೆಪಿ ಮತ್ತು ಸಂಘ ಪರಿವಾರದ ಆಕ್ರೋಶಕ್ಕೆ ಗುರಿಯಾಗಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಮುಖ್ಯಮಂತ್ರಿಗಳಿಗೆ ಮತ್ತೊಂದು ಪತ್ರ ಬರೆದು ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಸರ್ಕಾರಿ

ಮುಖ್ಯಮಂತ್ರಿಗೆ ಇನ್ನೊಂದು ಪತ್ರ ಬರೆದ ಪ್ರಿಯಾಂಕ್‌ ಖರ್ಗೆ Read More »

ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಇನ್ನಿಲ್ಲ

ಪೌರಾಣಿಕ, ತುಳು ಪ್ರಸಂಗಗಳ ಅಮೋಘ ಭಾಗವತಿಕೆಯ ಪರಂಪರೆ ಕೊನೆಯ ಕೊಂಡಿ ಮಂಗಳೂರು : ರಸರಾಗ ಚಕ್ರವರ್ತಿ ಎಂದು ಅರಿಯಲ್ಪಡುತ್ತಿದ್ದ ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಗುರುವಾರ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು. ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿ ಯಕ್ಷಗಾನ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಿದ್ದರು. ಯಕ್ಷಗಾನ ಕ್ಷೇತ್ರದ ಹಿರಿಯ

ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್‌ ಅಮ್ಮಣ್ಣಾಯ ಇನ್ನಿಲ್ಲ Read More »

ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಒಡ್ಡಿದ ವ್ಯಕ್ತಿಯ ಗುರುತು ಪತ್ತೆ

ಬೆದರಿಕೆ ಹಿನ್ನೆಲೆ ಸಚಿವರಿಗೆ ಭದ್ರತೆ ಹೆಚ್ಚಳ ಬೆಂಗಳೂರು: ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸಬೇಕೆಂದು ಪತ್ರ ಬರೆದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಮೂಲ ಪತ್ತೆ ಹಚ್ಚಿದ್ದಾರೆ. ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನೇಶ್ ನರೋಣ ಎಂದು ತಿಳಿದುಬಂದಿದೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ವ್ಯಕ್ತಿಯೋರ್ವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಪ್ರಿಯಾಂಕ್ ಖರ್ಗೆ ದೂರು ನೀಡಲು

ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಒಡ್ಡಿದ ವ್ಯಕ್ತಿಯ ಗುರುತು ಪತ್ತೆ Read More »

1.50 ಲಕ್ಷದತ್ತ ಚಿನ್ನದ ಬೆಲೆ : ಬೆಳ್ಳಿ 2 ಲಕ್ಷ ತಲುಪುವ ಸಾಧ್ಯತೆ

ಹಬ್ಬದ ಸಂದರ್ಭದಲ್ಲೇ ಬೆಲೆ ಏರಿಕೆಯ ಬಿಸಿ ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಾಲೋಟವೂ ಮುಂದುವರಿದಿದೆ. ಚಿನ್ನ 10 ಗ್ರಾಂಗೆ ಈಗಾಗಲೇ 1.20 ಲ.ರೂ. ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು 1.50 ಲ.ರೂ. ಆಗಬಹುದು ಎನ್ನಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಒಡವೆ ಖರೀದಿಸುವುದು ವಾಡಿಕೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗುತ್ತಿರುವುದರಿಂದ ಜನರು ಚಿನ್ನದಂಗಡಿಗಳತ್ತ ಸುಳಿಯಲು ಹಿಂದೇಟು

1.50 ಲಕ್ಷದತ್ತ ಚಿನ್ನದ ಬೆಲೆ : ಬೆಳ್ಳಿ 2 ಲಕ್ಷ ತಲುಪುವ ಸಾಧ್ಯತೆ Read More »

ದೀಪಾವಳಿಗೂ ಇಲ್ಲ ಗೃಹಲಕ್ಷ್ಮೀ ಹಣ

ನಾಲ್ಕು ತಿಂಗಳಿಂದ ಖಾತೆಗೆ ಹಣ ಬಂದಿಲ್ಲ ಎಂದು ಮಹಿಳೆಯರ ದೂರು ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ 3-4 ತಿಂಗಳಿಂದ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿಲ್ಲ. ದೀಪಾವಳಿ ಸಮಯದಲ್ಲಾದರೂ ಗೃಹಲಕ್ಷ್ಮೀ ಹಣ ಸಿಗಬಹುದು ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯೇ ಹೆಚ್ಚು ಜನರನ್ನು ತಲುಪಿತ್ತು. ಮಹಿಳೆಯರ ಮನಗೆದ್ದಿದ್ದ ಈ ಯೋಜನೆ ಈಗ ಕುಂಟಲಾರಂಭಿಸಿದೆ. ಕಳೆದ 4

ದೀಪಾವಳಿಗೂ ಇಲ್ಲ ಗೃಹಲಕ್ಷ್ಮೀ ಹಣ Read More »

error: Content is protected !!
Scroll to Top