ಸುದ್ದಿ

ಬಂತು ಬಂತು ದೀಪಗಳ ಬೆಳಕಿನ ದೀಪಾವಳಿ ಹಬ್ಬ

ದೀಪಾವಳಿ ಬರೆ ಒಂದು ದಿವಸಗಳ ಹಬ್ಬವಲ್ಲ ಐದು ದಿವಸಗಳ ಕಾಲ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯ ಪ್ರಕಾರ ಅಕ್ಟೊಬರ್ 20 ರಂದು ದೀಪಾವಳಿ ಸೂರ್ಯಸ್ತದ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ ಮರುದಿನ ನರಕಚತುರ್ದಶಿ ಅಥವಾ ದೀಪಾವಳಿ ಯನ್ನು ಆಚರಣೆ ಮಾಡುತ್ತಾರೆ ನರಕ ಚತುರ್ದಶಿಯಂದು ಬೆಳಿಗ್ಗೆ ತಿಲ ಮತ್ತು ಎಣ್ಣೆ ಹಚ್ಚಿ ಸ್ಥಾನ ಮಾಡುವ ಸಂಪ್ರದಾಯವಿದೆ ಹಾಗೂ ಗೋವರ್ಧನ ಪೂಜೆ ಅಂಗಡಿ ಪೂಜೆ ಬಲಿಪಾಡ್ಯಮಿ ಆಚರಣೆ ಹಾಗೂ ಸಹೋದರಿಯರು ಸಹೋದರರ ಹಣೆಗೆ ತಿಲಕವನ್ನು ಹಚ್ಚಿ ಒಣಗಿದ ಗೋಲವನ್ನು ಉಡುಗೊರೆಯಾಗಿ ನೀಡುತ್ತಾರೆ. ದೀಪಾವಳಿ […]

ಬಂತು ಬಂತು ದೀಪಗಳ ಬೆಳಕಿನ ದೀಪಾವಳಿ ಹಬ್ಬ Read More »

ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ಮಂಗಳೂರು ಜಿಲ್ಲಾ ಬೆಳ್ತಂಗಡಿ, ಕಳಿಯ ಮತ್ತು ಗುರುವಾಯನಕೆರೆ ಯೋಗ ಶಾಖೆಯ ಯೋಗ ಬಂಧುಗಳು ದೀಪಾವಳಿ ಗೋ ಪೂಜೆಯ ಪ್ರಯುಕ್ತ ಕಾಯರ್ತಡ್ಕದ ನಂದಗೋಕುಲ ಗೋಶಾಲೆಗೆ ಇಂದು ಮುಂಜಾನೆ ಭೇಟಿ ನೀಡಿ ಸಾಮೂಹಿಕ ಗೋಪೂಜೆ ನೆರವೇರಿಸಿದರು. ಯೋಗಬಂಧು ಅಶ್ವಥ್ ಗೋಪೂಜೆಯ ಮಹತ್ವದ ಬಗ್ಗೆ ಬೌದ್ಧಿಕ ನೀಡಿದರು. ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸಹ ಶಿಕ್ಷಕ ಸುಕೇಶ್,ವಿಜಯಣ್ಣ ಹಾಗೂ ಮೂರು ಯೋಗ ಶಾಖೆಗಳ 85 ಯೋಗ ಬಂಧುಗಳು

ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ Read More »

ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದಲ್ಲಿ ಬಲಿಂದ್ರ ಪೂಜೆ ಮತ್ತು ತುಳಸಿ ಪೂಜೆ.

ಉಪ್ಪಿನಂಗಡಿಗೆ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವ, ಕಾರ್ತಿಕ ಮಹಾಪೂಜೆ , ಬಲಿಂದ್ರ ಪೂಜೆ ಮತ್ತು ಶ್ರೀ ತುಳಸಿ ಪೂಜೆಯು ದೇವಳದ ಅರ್ಚಕರಾದ ಗುರುಪ್ರಸಾದ ನೂರಿತ್ತಾಯ ನೆರವೇಸಿದರು. ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷರಾದ ಭಾಸ್ಕರ ಬಾರ್ಯ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದೇವಳದ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಸೇವಾ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ ಬಾರ್ಯ, ಟ್ರಸ್ಟಿಗಳಾದ ಪ್ರವೀಣ್ ಮೂರುಗೋಳಿ , ವಿಜಯಲಕ್ಷ್ಮಿ ರೈ ಬಾರ್ಯ, ಶ್ರೀವಾರಿಣಿ ಗುರುಪ್ರಸಾದ್ , ಸುಧಾಕರ

ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದಲ್ಲಿ ಬಲಿಂದ್ರ ಪೂಜೆ ಮತ್ತು ತುಳಸಿ ಪೂಜೆ. Read More »

ಗೇರುಕಟ್ಟೆ ಪತಂಜಲಿ ಯೋಗಶಾಖೆಯಲ್ಲಿ ದೀಪಾವಳಿ ಆಚರಣೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಛೇರಿ ತುಮಕೂರು, ಮಂಗಳೂರು ಜಿಲ್ಲೆ ಇದರ ಕ್ಷೀರ ಸಂಗಮ ಸಬಾಭವನ ಕಳಿಯ- ಗೇರುಕಟ್ಟೆ ಯೋಗ ತರಬೇತಿ ಶಾಖೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು. ನಿತ್ಯ ಯೋಗ ತರಗತಿಯನ್ನು ಸಂಚಾಲಕ ವಿಜಯಣ್ಣ ನಿರ್ವಹಿಸಿದರು.ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ದೀಪಾವಳಿಯ ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ ಬಗ್ಗೆ ಬೌದ್ಧಿಕ್ ನೀಡಿದರು. ಕೇಂದ್ರದ ಸಹ ಶಿಕ್ಷಕ ಸುಕೇಶ್,ಅಶೋಕ,ವಸಂತ, ವರದಿ ಪ್ರಮುಖ ಕೇಶವ, ಶಿವಣ್ಣ,ಅರುಣಾ, ಭಾರತಿ,ಪದ್ಮಲತ ಕಾರ್ಯಕ್ರಮದಲ್ಲಿ

ಗೇರುಕಟ್ಟೆ ಪತಂಜಲಿ ಯೋಗಶಾಖೆಯಲ್ಲಿ ದೀಪಾವಳಿ ಆಚರಣೆ Read More »

ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಪ್ರಕರಣ : ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಕಾರಣ

ಪ್ರೇಯಸಿ ಜೊತೆ ಒಂದು ವಾರ ಲಾಡ್ಜ್‌ನಲ್ಲಿ ತಂಗಿದ್ದ ಯುವಕ ನಿಗೂಢವಾಗಿ ಸಾವಿಗೀಡಾದ ಪ್ರಕರಣ ಪುತ್ತೂರು : ಬೆಂಗಳೂರಿನ ಮಡಿವಾಳದ ಲಾಡ್ಜೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪುತ್ತೂರು ಸಮೀಪದ ಸೇಡಿಯಾಪಿನ ಯುವಕ ತಕ್ಷಿತ್‌ನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ವಿಫಲಗೊಂಡಿದ್ದ ಅಂಶ ಪತ್ತೆಯಾಗಿದೆ. ತಕ್ಷಿತ್‌ಗೆ ಕಿಡ್ನಿ ವೈಫಲ್ಯ ಮಾತ್ರವಲ್ಲದೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆ ಇತ್ತು ಎನ್ನುವುದು ಪತ್ತೆಯಾಗಿದೆ. ಹೀಗಾಗಿ ಇದೇ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಕ್ಷಿತ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕು

ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಪ್ರಕರಣ : ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಕಾರಣ Read More »

ಪುತ್ತೂರು : ದನ ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು

ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು 10 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸರು ಪುತ್ತೂರು : ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬೆನ್ನಟ್ಟಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಬೆಳಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗುಂಡು ಕಾಲಿಗೆ ತಗುಲಿದ ಆರೋಪಿಯನ್ನು ಕೇರಳದ ಕಾಸರಗೋಡಿನ ಅಬ್ದುಲ್ಲಾ (40 ವರ್ಷ) ಎಂದು ಗುರುತಿಸಲಾಗಿದೆ. ಐಶರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸಲಾಗುತ್ತಿತ್ತು. ಅಬ್ದುಲ್ಲಾ ಈ ವಾಹನದ ಚಾಲಕನಾಗಿದ್ದ. ವಾಹನದಲ್ಲಿ ಇನ್ನೂ ಓರ್ವ ವ್ಯಕ್ತಿ ಇದ್ದ.

ಪುತ್ತೂರು : ದನ ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು Read More »

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ

ಮನೆಯವರು ಮಲಗಿರುವಾಗಲೇ 20 ಲ.ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದ ಚಾಲಾಕಿಗಳು ಮಂಗಳೂರು: ನಗರದ ಲಾಲ್‌ಬಾಗ್‌ನ ಅಪಾರ್ಟ್ಮೆಂಟ್‌ವೊಂದರ ಮೂರು ಫ್ಲಾಟ್‌ಗಳಿಂದ ಮನೆಯವರು ಮಲಗಿರುವಾಗಲೇ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವುಗೈದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಸಾಂನ ಕಾಚಾರ್‌ ಜಿಲ್ಲೆಯ ಅಭಿಜಿತ್ ದಾಸ್ (24) ಹಾಗೂ ದೇಬಾ ದಾಸ್ (21) ಎಂದು ಗುರುತಿಸಲಾಗಿದೆ. ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ Read More »

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ : ಯುವಕ ಸೆರೆ

ನಿಟ್ಟೆ ಅಭಿಷೇಕ್‌ ಆಚಸರ್ಯ ಅತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಅವಮಾನ ಮತ್ತು ಮಾನಸಿಕ ಯಾತನೆಯನ್ನುಂಟು ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಯುವಕ ಓರ್ವನನ್ನು ಬಂಧಿಸಿದ್ದಾರೆ. ಮಂಗಳೂರಿನ ಕಾವೂರು ಕಾಪಿಗುಡ್ಡದ ಆಕಾಶ್ ಭವನ ನಿವಾಸಿ ನಿಖಿಲ್ ರಾಜ್ (27) ಸೆರೆಯಾಗಿರುವ ಆರೋಪಿ. ಬೆಳ್ಮಣ್‌ನ ಲಾಡ್ಜ್‌ನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಾರ್ಕಳದ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ ದೂರುದಾರರಿಗೆ

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ : ಯುವಕ ಸೆರೆ Read More »

ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಾಳೆ ಗೋಪೂಜೆಗೆ ‌ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ದೀಪಾವಳಿ ಹಿನ್ನೆಲೆ ನಾಳೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಬಲಿಪಾಡ್ಯಮಿ ಹಿನ್ನೆಲೆ ಗೋಪೂಜೆ ನಡೆಸುವಂತೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರು, ಕರ್ನಾಟಕ ಸರ್ಕಾರದ ಪರ ಬಲಿಪಾಡ್ಯಮಿಯಂದು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಗೋ ಪೂಜೆ ನಡೆಸುವಂತೆ ಆದೇಶಿಸಿರುವುದಾಗಿದೆ. ಹಿಂದೂ ಧರ್ಮದಲ್ಲಿ ಗೋವಿಗೆ ‌ವಿಶೇಷ ಸ್ಥಾನಮಾನ ಇದ್ದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಗೋವುಗಳ ಮಹತ್ವ ಮತ್ತು ಅವುಗಳ

ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಾಳೆ ಗೋಪೂಜೆಗೆ ‌ರಾಜ್ಯ ಸರ್ಕಾರ ಆದೇಶ Read More »

ಮಾವೋವಾದ ಇತಿಹಾಸದ ಪುಟ ಸೇರಲಿದೆ: ರಾಜನಾಥ್ ಸಿಂಗ್

ನವದೆಹಲಿ: ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಕಾರ್ಯಾಚರಣೆಯ ಫಲವಾಗಿ ಭಾರತದಲ್ಲಿ ಮಾವೋವಾದ ಶೀಘ್ರದಲ್ಲೇ ಇತಿಹಾಸದ ಪುಟಗಳನ್ನು ಸೇರಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಸಮಯದಲ್ಲಿ ಸರ್ಕಾರದ ವಿರುದ್ಧ ಶಸ್ತ್ರ ಹಿಡಿದ ನಕ್ಸಲರು ಈಗ ಶರಣಾಗತರಾಗುತ್ತಿದ್ದು, ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇದು ದೇಶ ನಕ್ಸಲಿಸಂ ಮುಕ್ತವಾಗುತ್ತಿರುವುದರಲ್ಲಿ ಯಶಸ್ಸು ಕಾಣುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ

ಮಾವೋವಾದ ಇತಿಹಾಸದ ಪುಟ ಸೇರಲಿದೆ: ರಾಜನಾಥ್ ಸಿಂಗ್ Read More »

error: Content is protected !!
Scroll to Top