ಸುದ್ದಿ

ದೇಶಾದ್ಯಂತ ನಡೆಯಲಿದೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ

15 ರಾಜ್ಯಗಳ ಪರಿಷ್ಕರಣೆ ವೇಳಾಪಟ್ಟಿ ಇಂದು ಪ್ರಕಟ ನವದೆಹಲಿ: ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ವಿಶೇಷ ಪರಿಷ್ಕರಣೆ ಕೈಗೊಳ್ಳುವ ಮೊದಲ 10 ರಿಂದ 15 ರಾಜ್ಯಗಳ ವೇಳಾಪಟ್ಟಿಯನ್ನು ಆಯೋಗ ಇಂದು ಪ್ರಕಟಿಸಲಿದೆ. ಇಂದು ಸಂಜೆ 4.45ಕ್ಕೆ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ಹಂತಹಂತವಾಗಿ ಎಸ್‌ಐಆರ್‌ ನಡೆಸುವ ರಾಜ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಪರಿಷ್ಕರಣೆಯು 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಸೇರಿದಂತೆ 10 ರಿಂದ […]

ದೇಶಾದ್ಯಂತ ನಡೆಯಲಿದೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ Read More »

ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌

ಉಪ್ಪಳಿಗೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್‌ ಪುತ್ತೂರು : ಕೋಮು ದ್ವೇಷದ ಭಾಷಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಆರ್​​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ 118/2025ಕ್ಕೆ ಸಂಬಂಧಿಸಿದಂತೆ ಅ.30ರಂದು ಕಲಂ 35 (3 )ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ಪ್ರಭಾಕರ ಭಟ್ ಮನೆಗೆ ನೋಟಿಸ್ ಜಾರಿ ಮಾಡಲಾಗಿದೆ. ಈಶ್ವರಿ ಪದ್ಮುಂಜ ಎಂಬವರು ನೀಡಿದ ದೂರಿನ ಮೇರೆಗೆ

ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ Read More »

ನಟ ಸಲ್ಮಾನ್‌ ಖಾನ್‌ಗೆ ಭಯೋತ್ಪಾದಕನ ಪಟ್ಟ ಕಟ್ಟಿದ ಪಾಕಿಸ್ತಾನ

ಬಲೂಚಿಸ್ತಾನ ಹೇಳಿಕೆಗೆ ಪ್ರತಿಯಾಗಿ ನಟನನ್ನು ಉಗ್ರರ ಪಟ್ಟಿಗೆ ಸೇರ್ಪಡೆ ಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಬಲೂಚಿಸ್ತಾನ ಬಗ್ಗೆ ನೀಡಿದ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ ಸರ್ಕಾರ ಸಲ್ಮಾನ್‌ ಖಾನ್‌ಗೆ ಭಯೋತ್ಪಾದಕನ ಪಟ್ಟಕಟ್ಟಿದೆ. ಸಲ್ಮಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್​​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಸಿನಿಮಾಗಳ ಬಗ್ಗೆ ಮಾತನಾಡುವಾಗ ಪಾಕಿಸ್ತಾನದ ಬಗ್ಗೆ ಪ್ರಸ್ತಾಪಿಸಿದ್ದರು. ಈಗ

ನಟ ಸಲ್ಮಾನ್‌ ಖಾನ್‌ಗೆ ಭಯೋತ್ಪಾದಕನ ಪಟ್ಟ ಕಟ್ಟಿದ ಪಾಕಿಸ್ತಾನ Read More »

ಪ್ರಧಾನಿ ಮೋದಿ ಹತ್ಯೆಗೆ ನಡೆದಿತ್ತಾ ಸಂಚು?

ಚೀನದಲ್ಲಿ ಸಾಯಿಸಲು ಸಂಚು ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗ ರಷ್ಯಾ ಅಧ್ಯಕ್ಷ ಪುಟಿನ್‌ ಅವರಿಂದ ವಿಫಲಗೊಂಡಿತು ಸಂಚು ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ನಡೆದಿತ್ತಾ ಸಂಚು? ಹೀಗೊಂದು ಸುದ್ದಿ ನಿನ್ನೆಯಿಂದೀಚೆಗೆ ಭಾರಿ ಸದ್ದು ಮಾಡುತ್ತಿದೆ. ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಇಂಥಹದ್ದೊಂದು

ಪ್ರಧಾನಿ ಮೋದಿ ಹತ್ಯೆಗೆ ನಡೆದಿತ್ತಾ ಸಂಚು? Read More »

ಬಂಟ್ವಾಳ : ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವಕ ಸಾವು

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಹೊಳೆನರಸೀಪುರದ ಸಂಜಯ್‌ (25) ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಉಪ್ಪಿನಂಗಡಿ ಅಡ್ಡಹೊಳೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಸಂಭವಿಸಿದೆ. ಕಾರು ಚಾಲಕ ಅರಕಲಗೂಡು ನಿವಾಸಿ ಸಂದೀಪ್‌, ಕಾರಿನಲ್ಲಿದ್ದ ಶೇಷ, ಮಹೇಶ್‌ ಅವರು ಅಪಾಯದಿಂದ ಪಾರಾಗಿದ್ದಾರೆ. ಸಂಜಯ್‌ ಹಾಗೂ ಇತರರು ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಉಡುಪಿಗೆ ಬಂದಿದ್ದರು. ಹೂವು ಮಾರಾಟ ಮಾಡಿ ಮತ್ತೆ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘ‌ಟನೆ

ಬಂಟ್ವಾಳ : ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವಕ ಸಾವು Read More »

ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದೂರು

ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಪ್ರಭಾಕರ ಭಟ್‌ ಪುತ್ತೂರು: ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಶ್ವರಿ ಪದ್ಮುಂಜ ಎಂಬವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ.20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಈಶ್ವರಿ

ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದೂರು Read More »

ಚೂರಿ ಇರಿತ ಪ್ರಕರಣ : ಪ್ರಮುಖ ಆರೋಪಿ ಸೆರೆ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಎದುರು ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ರೌಡಿ ಶೀಟರ್ ಗುರುರಾಜ್ ಆಚಾರಿ ಎಂಬಾತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಮತ್ತೊಬ್ಬ ಆರೋಪಿ ಅಶೋಕ್ ಎಂಬಾತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಾರ್‌ನೊಳಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯು ತೀವ್ರಗೊಂಡು ಹೊರಗೆ ಚಾಕು ಇರಿತದಲ್ಲಿ ಅಂತ್ಯಗೊಂಡಿತ್ತು. ಈ ಘಟನೆಯಲ್ಲಿ ಗಾಯಗೊಂಡಿರುವ ನಿಝಾಮ್ ಮತ್ತು ಹಸನ್ ಮುಕ್ಷಿತ್ ಸ್ಥಳೀಯ ಆಸ್ಪತ್ರೆಯಲ್ಲಿ

ಚೂರಿ ಇರಿತ ಪ್ರಕರಣ : ಪ್ರಮುಖ ಆರೋಪಿ ಸೆರೆ Read More »

ಅಂತಿಮ ಹಂತಕ್ಕೆ ತಲುಪಿದ ಬುರುಡೆ ಷಡ್ಯಂತ್ರದ ತನಿಖೆ; ಸೋಮವಾರ ನಿರ್ಣಾಯಕ ವಿಚಾರಣೆ

ತಿಮರೋಡಿ ಸಹಿತ ನಾಲ್ವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ಮಂಗಳೂರು: ಧರ್ಮಸ್ಥಳ ಬುರುಡೆ ಬುರುಡೆ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ವಿಚಾರಣೆಗಾಗಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಜಯಂತ್‌ ಟಿ. ಮತ್ತು ವಿಠಲ ಗೌಡ ಅವರಿಗೆ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಿದ್ದು, ಈ ನೋಟಿಸ್‌ ಸುತ್ತ ನಾನಾ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿವೆ. ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ.

ಅಂತಿಮ ಹಂತಕ್ಕೆ ತಲುಪಿದ ಬುರುಡೆ ಷಡ್ಯಂತ್ರದ ತನಿಖೆ; ಸೋಮವಾರ ನಿರ್ಣಾಯಕ ವಿಚಾರಣೆ Read More »

ಕರ್ನಾಟಕ ಪೊಲೀಸರ ಮುಡಿಗೇರಲಿದೆ ಹೊಸ ವಿನ್ಯಾಸದ ಟೋಪಿ

ಅ.28ರಂದು ಹೊಸ ಮಾದರಿಯ ಟೋಪಿ ವಿತರಣೆ ಬೆಂಗಳೂರು: ಕರ್ನಾಟಕ ಪೊಲೀಸ್​ ಇಲಾಖೆಯ ಕಾನ್‌ಸ್ಟೆಬಲ್‌ಗಳು ಮತ್ತು ಹಡ್‌ಕಾನ್‌ಸ್ಟೆಬಲ್‌ಗಳು ಧರಿಸುವ ಬ್ರಿಟಿಷ್​ ಕಾಲದ ಟೋಪಿಸದ್ಯದಲ್ಲೇ ಬದಲಾಗಲಿದೆ. ಒಂದು ಬದಿ ಚಪ್ಪಟೆಯಾಗಿರುವ ಸ್ಲೋಚ್​​​ ಹ್ಯಾಟ್​ಗೆ ಕೊಕ್​​ ನೀಡಲಾಗುತ್ತಿದ್ದು, ಅದರ ಬದಲಿಗೆ ಪೀಕ್ ಕ್ಯಾಪ್ ವಿತರಿಸಲು ಗೃಹ ಇಲಾಖೆ ಮುಂದಾಗಿದೆ. ಹೊಸ ಟೋಪಿಗಳು ಅಕ್ಟೋಬರ್ 28ರಿಂದಲೇ ಪೊಲೀಸರ ಕೈಸೇರಲಿವೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್‌ಗಳ ವಿತರಣೆ

ಕರ್ನಾಟಕ ಪೊಲೀಸರ ಮುಡಿಗೇರಲಿದೆ ಹೊಸ ವಿನ್ಯಾಸದ ಟೋಪಿ Read More »

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯವಾಣಿ ಸಂಖ್ಯೆ ಬದಲಾವಣೆ

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಕುರಿತು ಮಾಹಿತಿ ಮತ್ತು ನೆರವು ಪಡೆಯಲು ಈ ವರೆಗೆ ಬಳಕೆ ಮಾಡಲಾಗುತ್ತಿದ್ದ ಉಚಿತ ಸಹಾಯವಾಣಿ ಸಂಖ್ಯೆಯನ್ನು ಬದಲಾವಣೆ ಮಾಡಿದೆ. ಈ ಸಂಬಂಧ ಮಾಹಿತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಸಚಿವಾಲಯವು ಪ್ರಕಟಿಸಿದ್ದು, ಇದೇ ತಿಂಗಳ 31 ರಂದು ಪ್ರಸ್ತುತ ಚಾಲ್ತಿಯಲ್ಲಿರುವ 14408 ಸಂಖ್ಯೆ ರದ್ದಾಗಲಿದೆ. ನ. 1 ರಿಂದ ತೊಡಗಿದಂತೆ ಹೊಸ ಸಹಾಯವಾಣಿ ಸಂಖ್ಯೆ 1515 ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ. ಗರ್ಭಿಣಿಯರು ಮತ್ತು

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯವಾಣಿ ಸಂಖ್ಯೆ ಬದಲಾವಣೆ Read More »

error: Content is protected !!
Scroll to Top