ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು
ಸುಬ್ರಹ್ಮಣ್ಯ: ವ್ಯಕ್ತಿಯೋರ್ವ ಅಪ್ರಾಪ್ತ ಹುಡುಗನಿಗೆ ಗದರಿಸಿ, ಕೋಲಿನಿಂದ ಹೊಡೆದಿದ್ದು, ಈ ಘಟನೆ ಬಾಲಕನ ತಾಯಿಯ ಗಮನಕ್ಕೆ ಬಂದ ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕ ಸ್ಥಳೀಯ ಶಾಲೆಯಲ್ಲಿ ಓದುತ್ತಿದ್ದು, ಆರೋಪಿ ಚೇತನ್ ಎಂಬಾತ ಹುಡುಗನಿಗೆ ಕೋಲು ಹಿಡಿದು ಹೊಡೆಯುತ್ತಿರುವ ವಿಡಿಯೋ ಮೊಬೈಲಿನಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿರುವುದಾಗಿದೆ.
ಅಪ್ರಾಪ್ತ ಹುಡುಗನಿಗೆ ಕೋಲಿನಿಂದ ಹೊಡೆದ ವ್ಯಕ್ತಿಯ ವಿರುದ್ಧ ದೂರು Read More »










