ಸುದ್ದಿ

ಋತಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆ

ಕಾರ್ಮಿಕ ಕಾಯಿದೆಯಲ್ಲಿಲ್ಲದ ಅಧಿಕಾರ ಬಳಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಾದ ಬೆಂಗಳೂರು : ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ಋತುಚಕ್ರ ರಜೆಯನ್ನು ಕಡ್ಡಾಯವಾಗಿ ನೀಡಲು ರಾಜ್ಯ ಸರ್ಕಾರ ಇತ್ತೀಚಿಗೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈ ಕೋರ್ಟ್​ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಹೋಟೆಲ್ ಮಾಲೀಕರ ಸಂಘದ ಮಾನ್ಯ ಉಚ್ಚ […]

ಋತಚಕ್ರ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆ Read More »

ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ವಿದ್ಯಾರ್ಥಿಗೆ 31.99 ಲ.ರೂ. ವಂಚನೆ

ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ನಂಬಿ ವಿದ್ಯಾರ್ಥಿಯೊಬ್ಬ ಬರೋಬ್ಬರಿ 31.99 ಲ.ರೂ. ಕಳೆದುಕೊಂಡಿರುವ ಕುರಿತು ದೂರು ದಾಖಾಲಾಗಿದೆ. ಹೋಮಿಯೋಪತಿ ಕಲಿಯುತ್ತಿರುವ ಯುವಕನಿಗೆ ಆನ್‌ಲೈನ್ ಮೂಲಕ 31.99 ಲಕ್ಷ ರೂ. ವಂಚಿಸಲಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಗಮನಿಸಿದ ತಾನು ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂಬ ಆಸೆಯಿಂದ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗಳಿಗೆ ನ.5ರಿಂದ 26ರ ವರೆಗೆ ತನ್ನಲ್ಲಿದ್ದ ಹಣ ಹಾಗೂ ಮನೆಯಲ್ಲಿದ್ದ ಬಂಗಾರನ್ನು ಅಡವಿಟ್ಟು

ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ವಿದ್ಯಾರ್ಥಿಗೆ 31.99 ಲ.ರೂ. ವಂಚನೆ Read More »

ವಿದೇಶದಲ್ಲಿರುವಾಗ ಭಗವದ್ಗೀತೆ ಅವಮಾನಿಸಿ ಪೋಸ್ಟ್‌ : ಆರೋಪಿ ಸೆರೆ

ಸೌದಿಯಲ್ಲಿ ಕುಳಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದ ಆರೋಪಿ ಮಂಗಳೂರು: ವಿದೇಶದಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭಾವ ಉಂಟಾಗುವ ಪೋಸ್ಟ್ ಹಾಕಿದ ಆರೋಪಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 2024ರ ಫೆಬ್ರವರಿಯಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಫೆಲಿಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟಿದ್ದ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾಗ ಪೋಸ್ಟ್ ಹಾಕಿದ್ದ. ಮೂಲತಃ ಮುಂಬೈಯ ಚಾರ್ಕೋಪ್ ನಿವಾಸಿಯಾಗಿದ್ದ ಈತನ ಬಗ್ಗೆ ಮಾಹಿತಿ

ವಿದೇಶದಲ್ಲಿರುವಾಗ ಭಗವದ್ಗೀತೆ ಅವಮಾನಿಸಿ ಪೋಸ್ಟ್‌ : ಆರೋಪಿ ಸೆರೆ Read More »

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ : ವ್ಯಾಪಕ ಹಾನಿ

ಟೋಕಿಯೊ: ಸೋಮವಾರ ತಡರಾತ್ರಿ ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಲ್ಲಿ ತಡರಾತ್ರಿ ಭೂಕಂಪ ಮತ್ತು ಸುನಾಮಿ ನಂತರ ಜಪಾನ್‌ನಲ್ಲಿ ಸಾಕಷ್ಟು ಹಾನಿಯಾಗಿದೆ. ಹೊನ್ಶುವಿನ ಉತ್ತರ ತುದಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಹಲವಾರು ಕರಾವಳಿ ಪಟ್ಟಣಗಳಿಗೆ ಸಣ್ಣ ಸುನಾಮಿ ಅಲೆಗಳು ಬಡಿದಿವೆ. ಭೂಕಂಪ ಪೀಡಿತ ಸುಮಾರು 800 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಿಂಕನ್ಸೆನ್

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ : ವ್ಯಾಪಕ ಹಾನಿ Read More »

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ : ಕಟಕ್‌ನಲ್ಲಿ ಇಂದು ಮೊದಲ ಪಂದ್ಯ

ಐದು ಪಂದ್ಯಗಳ ಸರಣಿ ಗೆಲ್ಲಲು ಉಭಯ ತಂಡಗಳಿಂದ ತಂತ್ರಗಾರಿಕೆ ಕಟಕ್‌: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇಂದಿನಿಂದ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಕಟಕ್‌ನ ಬಾರಾಬತಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ಇರಾದೆಯಲ್ಲಿರುವ ಟೀಂ ಇಂಡಿಯಾಕ್ಕೆ, ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಸವಾಲು ಎದುರಾಗಿದೆ.

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ : ಕಟಕ್‌ನಲ್ಲಿ ಇಂದು ಮೊದಲ ಪಂದ್ಯ Read More »

ಮದುವೆಗೆ ಎರಡು ದಿನ ಬಾಕಿಯಿರುವಾಗ ವರ ಪರಾರಿ

ಮದುವೆ ಇಷ್ಟ ಇಲ್ಲ ಎಂದು ಹೇಳದೆ ಕೇಳದೆ ಚೆನ್ನೈಗೆ ಹೋದ ಯುವಕ ಮಂಗಳೂರು: ಮದುವೆಗೆ ಎರಡು ದಿನಗಳು ಬಾಕಿಯಿರುವಂತೆಯೇ ಯುವಕನೊಬ್ಬ ಕಾರಿನ ಜತೆ ನಾಪತ್ತೆಯಾಗಿದ್ದು, ಆತ ಚೆನ್ನೈಗೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಪ್ಪು ಮಾರ್ಕೆಟ್‌ ಅರಕೆರೆಬೈಲುವಿನ ನಿವಾಸಿ ರಕ್ಷಣ್‌ ಜೆ.ಕೆ. (32) ನಾಪತ್ತೆಯಾಗಿ ಚೆನ್ನೈಗೆ ತೆರಳಿದವರು. ರಕ್ಷಣ್‌ ತನ್ನ ಮನೆಯಿಂದ ಡಿ.6ರಂದು ಬೆಳಗ್ಗೆ 11.30ಕ್ಕೆ ತನ್ನ ತಾಯಿಯ ಕಾರಿನಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು ಹಾಗೂ ಗೆಳೆಯರಿಗೆ ನೀಡಲೆಂದು ಹೋಗಿದ್ದರು. ಆ ಬಳಿಕ ಮನೆಗೂ ಬಾರದೆ,

ಮದುವೆಗೆ ಎರಡು ದಿನ ಬಾಕಿಯಿರುವಾಗ ವರ ಪರಾರಿ Read More »

ನೇಣು ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಹಗ್ಗ ತುಂಡಾಗಿ ಗಾಯಗೊಂಡಿದ್ದ ಕಾರ್ಮಿಕ ಸುಳ್ಯ: ಆತ್ಮಹತ್ಯೆಗೆ ಪ್ರಯತ್ನಿಸಿದಾಗ ನೇಣು ಬಿಗಿದು ಜಿಗಿದ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದಿದೆ. ಕಲ್ಲುಗುಂಡಿ ಕೂಲಿಶೆಡ್ ಬಳಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಐವರ್ನಾಡು ಗ್ರಾಮದ ಮಾಧವ (60) ಎಂಬವರು ತನ್ನ ಬಾಡಿಗೆ ರೂಮಿನಲ್ಲಿ ಡಿ.5ರಂದು ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದು ಕೆಳಕ್ಕೆ ಜಿಗಿದ ಸಂದರ್ಭ

ನೇಣು ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಆನ್‌ಲೈನ್‌ ಟಾಸ್ಕ್‌ ನಂಬಿ 31 ಲಕ್ಷ ರೂ. ಕಳೆದುಕೊಂಡ ಮಹಿಳೆ

ಪಾರ್ಟ್‌ ಟೈಮ್‌ ಜಾಬ್‌ ನೆಪದಲ್ಲಿ ವಂಚಿಸಿದ ಸೈಬರ್‌ ಚೋರರು ಉಡುಪಿ: ಆನ್‌ಲೈನ್ ಟಾಸ್ಕ್ ನಂಬಿ ಮಹಿಳೆಯೊಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡ ಘಟನೆ ಉಡುಪಿಯ ಉದ್ಯಾವರ ಸಮೀಪ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಾವರದ ವಿಜಯಲಕ್ಷ್ಮೀ (55) ಎಂಬ ಮಹಿಳೆ ನ.29ರಂದು ಫೇಸ್‌ಬುಕ್‌ನಲ್ಲಿ ವರ್ಕ್‌ಫ್ರಮ್ ಹೋಮ್ ಕುರಿತ ಜಾಹೀರಾತು ಕ್ಲಿಕ್ ಮಾಡಿದ್ದು, ಆಗ ವಿಜಯಲಕ್ಷ್ಮೀ ಅವರ ವಾಟ್ಸಾಪ್‌ಗೆ ಸಂದೇಶ ಬಂದಿತ್ತು. ತಾನು ಕಂಪನಿಯೊಂದರ ಎಚ್‌ಆರ್ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿ, ಪಾರ್ಟ್

ಆನ್‌ಲೈನ್‌ ಟಾಸ್ಕ್‌ ನಂಬಿ 31 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಡಿ.20: ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ

ಪುತ್ತೂರು: ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆಯಾದ ಡಾ. ಕೆ. ಚಿನ್ನಪ್ಪ ಗೌಡ ಅವರ ಸಂಶೋಧನಾ ಕೃತಿ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿ ಬಿಡುಗಡೆ ಸಮಾರಂಭ ಡಿ. 20 ನೇ ಶನಿವಾರದಂದು ನಡೆಯಲಿದೆ. ಈ ಕಾರ್ಯಕ್ರಮವು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಎಲ್. ಎಫ್. ರಸ್ಕಿನ್ಹ ಸಭಾಂಗಣ, ಎಲ್.ಸಿ.ಆರ್.ಐ. ಬ್ಲಾಕ್‌ನಲ್ಲಿ ಮಧ್ಯಾಹ್ನ 3

ಡಿ.20: ಡಾ. ಕೆ. ಚಿನ್ನಪ್ಪ ಗೌಡರ ಕೃತಿ ‘ಭೂತಾರಾಧನೆ- ಮಾಯದ ‌ನಡೆ ಜೋಗದ ನುಡಿ’ ಬಿಡುಗಡೆ Read More »

ಪಡುಕುತ್ಯಾರಿನಲ್ಲಿ ತಾಳಮದ್ದಳೆ ಸಪ್ತಾಹ ಸಮಾರೋಪ

ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಶ್ರೀ ವಿಶ್ವಕರ್ಮ ಕಲಾವೇದಿಕೆಯಲ್ಲಿ ದಶಂಬರ ಒಂದರಿಂದ ಏಳರವರೆಗೆ ವಾಲಿಮೋಕ್ಷ,ಶ್ರೀ ಕೃಷ್ಣ ತುಲಾಭಾರ, ಶ್ರೀ ಕೃಷ್ಣ ಸಂಧಾನ, ಜಾಬಲಿ ನಂದಿನಿ, ಬೀಷ್ಮ ವಿಜಯ, ಸುಧನ್ವ ಮೋಕ್ಷ, ಭೀಷ್ಮಾರ್ಜುನ ತಾಳಮದ್ದಳೆಯು ಹವ್ಯಾಸಿ ಮತ್ತು ಅತಿಥಿ ಕಲಾವಿದರಿಂದ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅನಂತ ಶ್ರೀ ಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ತಾಳಮದ್ದಳೆಯ ಪ್ರಾಯೋಜಕರನ್ನು ಗೌರವಿಸಿ ಮಾತಿನ ಮೂಲಕ ಪುರಾಣದ ಸಂದೇಶಗಳನ್ನು ಪಾತ್ರಗಳ ಮೂಲಕ ನಿರೂಪಿಸುವ ಕಲಾವಿದರ

ಪಡುಕುತ್ಯಾರಿನಲ್ಲಿ ತಾಳಮದ್ದಳೆ ಸಪ್ತಾಹ ಸಮಾರೋಪ Read More »

error: Content is protected !!
Scroll to Top