ಸುದ್ದಿ

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ

ಗೋಮಾಂಸ ಸಾಗಿಸುತ್ತಿದ್ದ ಬೈಕ್‌ ಅಡ್ಡಗಟ್ಟಿ ಹಲ್ಲೆಗೈದ ಪ್ರಕರಣ ಮಂಗಳೂರು: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದ ಘಟನೆಯೊಂದಕ್ಕೆ ಸಂಬಂಧಿಸಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್ (30) ಎಂದು ಗುರುತಿಸಲಾಗಿದೆ. ಗೋಮಾಂಸ ಸಾಗಿಸುತ್ತಿದ್ದ ಅಬ್ದುಲ್ ಸತ್ತಾರ್ ಹಾಗೂ ಅವರ 11 ವರ್ಷದ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಅವರ ಮೇಲೆ ಇದೆ. ಅಬ್ದುಲ್ ಸತ್ತಾರ್ ಎಂಬವರು ತಮ್ಮ ಪುತ್ರಿಯೊಂದಿಗೆ […]

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ Read More »

ಬೈಕ್‌ ಮೇಲೆ ಕಾಡುಕೋಣ ದಾಳಿ : ಸವಾರನಿಗೆ ಗಂಭೀರ ಗಾಯ

ಬೆಳ್ತಂಗಡಿ : ಸಂಚರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ ಮಾಡಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ಸಂಭವಿಸಿದೆ. ಬೈಕ್‌ ಸವಾರನನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯವರ ಮಗ ಸುಕೇಶ್(31) ಎಂಬವರು ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳ್ತಂಗಡಿಯಿಂದ ಕೆಲಸ ಮುಗಿಸಿ ಡಿ.26ರಂದು ರಾತ್ರಿ ಸುಮಾರು 8.45ಕ್ಕೆ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಲಾಯಿಲ ಗ್ರಾಮದ ಅಲೆಕ್ಕಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ

ಬೈಕ್‌ ಮೇಲೆ ಕಾಡುಕೋಣ ದಾಳಿ : ಸವಾರನಿಗೆ ಗಂಭೀರ ಗಾಯ Read More »

ಮುಸ್ಲಿಮರ ಮನೆ ನೆಲಸಮ ಪ್ರಕರಣ : ಮೂಗು ತೂರಿಸಿ ವಿವಾದ ಮಾಡಿದ ಕೇರಳ

ಕೇರಳದ ಕಾಂಗ್ರೆಸ್‌ ಲಾಬಿಯಿಂದ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಬೆಂಗಳೂರು : ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಮುಸ್ಲಿಂ ಸಮುದಾಯದವರು ಅನಧಿಕೃತವಾಗಿ ನಿರ್ಮಿಸಿದ್ದ ಸುಮಾರು 200 ಮನೆಗಳು ಮತ್ತು ಶೆಡ್‌ಗಳನ್ನು ನೆಲಸಮ ಮಾಡಿದ ಪ್ರಕರಣ ಈಗ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಘಟನೆಯಲ್ಲಿ ಅನಗತ್ಯವಾಗಿ ಮೂಗು ತೂರಿಸಿ ಖಂಡಿಸಿದ ಬಳಿಕ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈ ವಿಚಾರದಲ್ಲೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಎಂಟ್ರಿಯಾಗಿದ್ದು, ಕರ್ನಾಟಕದಲ್ಲಿ ಕೇರಳದವರ ಲಾಬಿ

ಮುಸ್ಲಿಮರ ಮನೆ ನೆಲಸಮ ಪ್ರಕರಣ : ಮೂಗು ತೂರಿಸಿ ವಿವಾದ ಮಾಡಿದ ಕೇರಳ Read More »

ಖ್ಯಾತ ಸಾಹಿತಿ ಸರಿತಾ ಜ್ಞಾನಾನಂದ ನಿಧನ

50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದ ಲೇಖಕಿ ಬೆಂಗಳೂರು: ಕನ್ನಡ ಕವಯತ್ರಿ, ಲೇಖಕಿ ಸರಿತಾ ಜ್ಞಾನಾನಂದ (82) ಶುಕ್ರವಾರ ಆರ್‌.ಆರ್‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನುವಾದಕಿಯಾಗಿ ಪ್ರಸಿದ್ಧರಾಗಿದ್ದ ಸರಿತಾ ಅವರು ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಸರಿತಾ ಜ್ಞಾನಾನಂದ ಮೂಲತಃ ಬೆಂಗಳೂರಿನವರು. ಜನವರಿ 21, 1943ರಲ್ಲಿ ಜನಿಸಿದ ಅವರು ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಮತ್ತು ಬಿ.ಎಡ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್. ಪದವಿಗಳನ್ನು ಪಡೆದಿದ್ದರು. ಹಿಂದಿಯಲ್ಲಿ ರಾಷ್ಟ್ರಭಾಷಾ

ಖ್ಯಾತ ಸಾಹಿತಿ ಸರಿತಾ ಜ್ಞಾನಾನಂದ ನಿಧನ Read More »

ಬಿಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ ಎಂದ ಜೆಡಿಎಸ್‌

ಎಲ್ಲ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ದೇವೇಗೌಡರ ನಕಾರ ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದಿನ ಎಲ್ಲ ಚುನಾವಣೆಗಳಿಗೂ ಮುಂದುವರಿಯುತ್ತದೆ ಎಂದು ಹೇಳಿದ್ದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ೆಚ್.ಡಿ. ದೇವೇಗೌಡ ಇದೀಗ ಏಕಾಏಕಿ ಯೂಟರ್ನ್ ಹೊಡೆದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮೈತ್ರಿ ಮುಂದುವರಿಸುವುದು ಕಷ್ಟ ಎಂದು ಹೇಳಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೂ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಯುತ್ತದೆ. ಆದರೆ ಜಿಲ್ಲಾ

ಬಿಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ ಎಂದ ಜೆಡಿಎಸ್‌ Read More »

ಸೋನಿಕಾ ಜನಾರ್ದನ್ ಅವರ ಸಂವಿಧಾನ ಪೀಠಿಕೆ ಗಾಯನ ಅಭಿಯಾನ

ಪುತ್ತೂರು: ಇಲ್ಲಿನ ಪಡ್ಡಾಯೂರಿನಲ್ಲಿರುವ ‘ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ’ ಇಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಾಂಸ್ಕೃತಿಕ ಉಪ ಸಮಿತಿಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಭಾರತೀಯ ಸಂವಿಧಾನ ಪೀಠಿಕೆ ಗಾಯನ ಅಭಿಯಾನದ ಅಂಗವಾಗಿ ಸೋನಿಕಾ ಜನಾರ್ದನ್ ಸಂವಿಧಾನ ಪೀಠಿಕೆಯ ಗಾಯನ ಅಭಿಯಾನದ ಅಂಗವಾಗಿ ಗಾಯನ ಕಾರ್ಯಕ್ರಮ ನಡೆಯಿತು. ಶಾಲಾ ಪ್ರಾಂಶುಪಾಲರಾದ ಸತೀಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ವಾಣಿಶ್ರೀ, ನಿಲಯ ಪಾಲಕ ವಸಂತ ಎಂ., ಶಿಕ್ಷಕ ರಕ್ಷಕ

ಸೋನಿಕಾ ಜನಾರ್ದನ್ ಅವರ ಸಂವಿಧಾನ ಪೀಠಿಕೆ ಗಾಯನ ಅಭಿಯಾನ Read More »

ನೇಮೋತ್ಸವದಲ್ಲಿ ಮಹಿಳೆಯ ಸರಕದ್ದ ಮಹಿಳೆಯರ ಬಂಧನ

ಗಂಟೆ ಹೊಡೆಯುವ ನೆಪದಲ್ಲಿ ವೃದ್ಧೆಯ ಸರ ಎಗರಿಸಿದ್ದ ಮಹಿಳೆಯರು ಉಡುಪಿ: ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ಧೆಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಮಹಿಳೆಯರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಕೃಷ್ಣಗಿರಿ ನಿವಾಸಿಗಳಾದ ಶೀತಲ್, ಕಾಳಿಯಮ್ಮ ಮತ್ತು ಮಾರಿ ಎಂದು ಗುರುತಿಸಲಾಗಿದೆ. ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ನಡೆಯುತ್ತಿದ್ದ ವೇಳೆ ಮೂವರು ಮಹಿಳೆಯರು ಹೆಜಮಾಡಿ ನಿವಾಸಿ ಕಮಲ ಎಂಬ ವೃದ್ಧ ಕುತ್ತಿಗೆಯಲ್ಲಿದ್ದ

ನೇಮೋತ್ಸವದಲ್ಲಿ ಮಹಿಳೆಯ ಸರಕದ್ದ ಮಹಿಳೆಯರ ಬಂಧನ Read More »

ಧರ್ಮಸ್ಥಳ ಪ್ರಕರಣ : ವರದಿ ಮೇಲಿನ ತೀರ್ಪು ಮತ್ತೆ ಮುಂದೂಡಿಕೆ

ವರದಿಯ ಕೆಲವು ಭಾಗಗಳನ್ನು ಜಯಂತ್‌ಗೆ ನೀಡಿದ ನ್ಯಾಯಾಲಯ ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಬಗ್ಗೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯ ಬಗ್ಗೆ ಡಿ.26ಕ್ಕೆ ನಿಗದಿಪಡಿಸಲಾಗಿದ್ದ ಆದೇಶವನ್ನು ಡಿ.29ಕ್ಕೆ ಬೆಳ್ತಂಗಡಿ ನ್ಯಾಯಾಲಯ ಮುಂದೂಡಿದೆ ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20ರಂದು ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಸುಜಾತ ಭಟ್ ವಿರುದ್ಧ ಸುಳ್ಳು ಸಾಕ್ಷಿ ವರದಿಯನ್ನು ಸೆಕ್ಷನ್‌ 215ರ ಅಡಿಯಲ್ಲಿ ಸಲ್ಲಿಸಿದ್ದರು. ಈ ವರದಿಯ ಬಗ್ಗೆ ಬೆಳ್ತಂಗಡಿ

ಧರ್ಮಸ್ಥಳ ಪ್ರಕರಣ : ವರದಿ ಮೇಲಿನ ತೀರ್ಪು ಮತ್ತೆ ಮುಂದೂಡಿಕೆ Read More »

ಇಂದು ಮಂಗಳೂರು ಕಂಬಳ

9ನೇ ವರ್ಷಕ್ಕೆ 9 ವಿಶಿಷ್ಟ ಕಾರ್ಯಕ್ರಮಗಳ ಆಕರ್ಷಣೆ ಮಂಗಳೂರು: ಸಂಸದ ಕ್ಯಾ.ಬ್ರಿಜೇಶ್ ಶೆಟ್ಟಿಯವರ ಸಾರಥ್ಯದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ 9ನೇ ವರ್ಷದ ಮಂಗಳೂರು ಕಂಬಳ ಇಂದು ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ. ಶನಿವಾರ ಆಯೋಜಿಸಲಾಗಿರುವ ಈ ವರ್ಷದ ಕಂಬಳದಲ್ಲಿ ಒಟ್ಟು 9 ವಿಭಿನ್ನ ಚಟುವಟಿಕೆಗಳನ್ನು ರೂಪಿಸಲಾಗಿದೆ. ತುಳು ಸಂಸ್ಕೃತಿ ಹಾಗೂ ಕಂಬಳದ ಮಹತ್ವವನ್ನು ನಗರ ಪ್ರದೇಶದಲ್ಲಿ ಬೆಳೆದ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ 9 ವರ್ಷಗಳ ಹಿಂದೆ ಸಣ್ಣ ಪ್ರಯತ್ನವಾಗಿ ಆರಂಭಗೊಂಡ ಮಂಗಳೂರು ಕಂಬಳ

ಇಂದು ಮಂಗಳೂರು ಕಂಬಳ Read More »

ಕಡಬ : ಬಾರ್‌ ಮಾಲೀಕನಿಗೆ 6.5 ಲ.ರೂ. ವಂಚಿಸಿ ಮ್ಯಾನೇಜರ್‌ ಪಲಾಯನ

ಕಡಬ : ಬಾರ್ ಸಿಬ್ಬಂದಿಯೋರ್ವ ವ್ಯವಹಾರದಲ್ಲಿ ವಂಚಿಸಿ ಪರಾರಿಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ (25) ಎಂಬವರು ಠಾಣೆಗೆ ದೂರು ನೀಡಿದ್ದಾರೆ. ಸ್ಟೀಫನ್ ಅವರ ತಾಯಿ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಬಾರ್‌ನಲ್ಲಿ ಕಡಬದ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನೇ ನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದ. ಡಿ.21ರಂದು ಸ್ಟೀಫನ್ ಬಾರಿನ ವಹಿವಾಟು ಬಗ್ಗೆ

ಕಡಬ : ಬಾರ್‌ ಮಾಲೀಕನಿಗೆ 6.5 ಲ.ರೂ. ವಂಚಿಸಿ ಮ್ಯಾನೇಜರ್‌ ಪಲಾಯನ Read More »

error: Content is protected !!
Scroll to Top