ಸುದ್ದಿ

ಸಿಎಂ ವಿರುದ್ಧ ಮುಡಾ ಸೈಟ್‌ ಕಬಳಿಕೆ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್‌

ದೂರು ಕೊಟ್ಟ ಮರುಕ್ಷಣದಲ್ಲೇ ಬಂಧಿಸಿ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್‌ ಕಬಳಿಕೆ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿದೆ. ಮುಂಬಡ್ತಿಗಾಗಿ ನಟೇಶ್ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಒಂದೂವರೆ ಕೋಟಿ ಲಂಚ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು.ಇದರ ಬೆನ್ನಲ್ಲೇ ನಿನ್ನೆ […]

ಸಿಎಂ ವಿರುದ್ಧ ಮುಡಾ ಸೈಟ್‌ ಕಬಳಿಕೆ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್‌ Read More »

ಬಾಗಲಕೋಟೆ ಕಲ್ಲು ತೂರಾಟ : ಮುಂದುವರಿದ ಉದ್ವಿಗ್ನ ಸ್ಥಿತಿ

ಶಾಂತಿ ಸಭೆ ವಿಫಲ; ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ಬಾಗಲಕೋಟೆ : ಬಾಗಲಕೋಟೆಯಲ್ಲಿ ಗುರುವಾರ ರಾತ್ರಿ ಶಿವಾಜಿ ಮೆರವಣಿಗೆ ಮೇಲೆ ನಡೆದ ಕಲ್ಲು ಹಾಗೂ ಚಪ್ಪಲಿ ತೂರಾಟದ ಬಳಿಕ ಉಂಟಾಗಿದ್ದ ಬಿಗುವಿನ ವಾತಾವರಣ ಮುಂದುವರಿದಿದೆ. ಘಟನೆ ಖಂಡಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬೀದಿಗಿಳಿದಿದ್ದಾರೆ. ಶುಕ್ರವಾರ ಆಗಿದ್ದರಿಂದ ಪಂಕಾ ಮಸೀದಿ ಹಾಗೂ ಕೊತ್ತಲೇಶ್ವರ ದೇವಸ್ಥಾನದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುರುವಾರ ರಾತ್ರಿ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಜಯಪುರ ಜೈಲಿಗೆ ಅಟ್ಟಿದ್ದಾರೆ.

ಬಾಗಲಕೋಟೆ ಕಲ್ಲು ತೂರಾಟ : ಮುಂದುವರಿದ ಉದ್ವಿಗ್ನ ಸ್ಥಿತಿ Read More »

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರರಿಬ್ಬರ ಸಾವು

ಹಾಸನ: ಬೈಕ್‌ಗಳು ಢಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಚ ಘಟನೆ ಗುಟ್ಟೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ನಡೆದಿದೆ. ಮೃತರನ್ನು ಗುಟ್ಟೇನಹಳ್ಳಿ ನಿವಾಸಿ ರಾಕೇಶ್ (28) ಮತ್ತು ವಲ್ಲಭಾಯಿ ರಸ್ತೆಯ ಮಯೂರ(25) ಎಂದು ಗುರುತಿಸಲಾಗಿದೆ. ರಾಕೇಶ್ ಅವರ ಬೈಕ್ ಮತ್ತು ಮಯೂರ್ ಅವರ ಹೋಂಡಾ ಆಕ್ಟಿವಾ ನಡುವೆ ಅಪಘಾತ ಸಂಭವಿಸಿರುವುದಾಗಿದೆ. ಸವಾರರ ಅತಿ ವೇಗ ಮತ್ತು ನಿಯಂತ್ರಣ ತಪ್ಪಿದ ಕಾರಣವೇ ಈ ಅಪಘಾತ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಸವಾರರಿಬ್ಬರ ಸಾವು Read More »

ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ : 8 ಮಂದಿ ಬಂಧನ

ಮಸೀದಿಯಿಂದಲೇ ಕಲ್ಲು, ಚಪ್ಪಲಿ ತೂರಿದ್ದಾರೆ ಎಂದು ದೃಢಪಡಿಸಿದ ಎಸ್‌ಪಿ ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.ತನ್ವೀರ್ (28) , ಮುಜ್ಜು (23), ಸದ್ದಾಂ(22), ಫಯಾಜ್(24), ಸರ್ಫರಾಜ್(33), ರಿಯಾನ್(21), ಅಯಾನ್(19), ವಸೀಮ್(22) ಬಂಧನಕ್ಕೆ ಒಳಗಾದ ಆರೋಪಿಗಳು. ವಿಡಿಯೋ ದೃಶ್ಯಗಳನ್ನು ಆಧಾರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ರಾತ್ರಿ 10.06ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ 7 ಮಂದಿ ಮೇಲೆ ಕೇಸ್‌

ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ : 8 ಮಂದಿ ಬಂಧನ Read More »

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ

ಉಡುಪಿ: ಸರಕು ಸಾಗಿಸುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಘಟನೆ ಗುರುವಾರ ತಡರಾತಿ ಬೈಂದೂರು ಸಮೀಪ ಸಂಭವಿಸಿದೆ. ಗುರುವಾರ ಮಧ್ಯರಾತ್ರಿ ಸುಮಾರಿಗೆ ಬೈಂದೂರಿನ ಉಪ್ಪುಂದ-ಬಿಜೂರು ರಾಷ್ಟ್ರೀಯ ಹೆದ್ದಾರಿ-66 ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರವನ್ನು ಸಾಗಿಸುತ್ತಿದ್ದ ಲಾರಿ ಇದಾಗಿದ್ದು ರಾತ್ರಿ 1 ಗಂಟೆ ಸುಮಾರಿಗೆ ಯಡ್ತರೆ ಬೈಪಾಸ್‌ನಿಂದ ಮುಂದಕ್ಕೆ ಸಾಗಿ ಬಿಜೂರು ಬಳಿ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಲಾರಿಗೆ ಬೆಂಕಿ ತಗುಲಿದೆ. ಭಾಗಶಃ ಲಾರಿ ಸಹಿತ ಒಳಗಿದ್ದ ಪಶು ಆಹಾರ

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ Read More »

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರಯಾಣಿಸುತ್ತಿದ್ದ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ

ಲಖನೌ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯ್‌ ಸಮೀಪ ನಡೆದಿದೆ. ಲಖನೌ-ದೆಹಲಿ ವಂದೇ ಭಾರತ್‌ನಲ್ಲಿ ಭಾಗವತ್‌ ಮೀರತ್‌ಗೆ ಹಿಂತಿರುಗುತ್ತಿದ್ದರು. ಈ ವೇಳೆ ಹಾರ್ದೋಯ್ ಗ್ರಾಮದಲ್ಲಿ ಕಲ್ಲು ತೂರಾಟವಾಗಿದೆ. ಗುರುವಾರ ಮಧ್ಯಾಹ್ನ 3:30ರ ವೇಳೆಗೆ ಘಟನೆಯಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯಲ್ಲಿ ಮೋಹನ್‌ ಭಾಗವತ್‌ ಅವರು ಇಳಿದಿದ್ದಾರೆ. ಇಂದು ಮತ್ತು ನಾಳೆ 2 ದಿನಗಳ ಸಂವಾದ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರಯಾಣಿಸುತ್ತಿದ್ದ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ Read More »

ಈಶ್ವರಮಂಗಲದ ಸಾಂತ್ಯದಲ್ಲಿ ಮಾರ್ಗ ಸೂಚಕ ಫಲಕ ಅನಾವರಣ: ಗ್ರಾಮಾಭಿವೃದ್ಧಿಗೆ ಯುವಕರಿಂದ ಅರ್ಥಪೂರ್ಣ ಹೆಜ್ಜೆ

ಈಶ್ವರಮಂಗಲ: ಸಾಂತ್ಯ ಮುಖ್ಯ ರಸ್ತೆಯಿಂದ ಕವಲೊಡೆಯುವ ಪಳನೀರು-ಸಸ್ಪೆಟ್ಟಿ ಮಾರ್ಗದಲ್ಲಿ ಮಾರ್ಗ ಸೂಚಕ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಸ್ಥಳೀಯ ಯುವಕರು ಸಮಾಜಮುಖಿ ಕಾರ್ಯಕ್ಕೆ ಹೊಸ ಅರ್ಥ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ರೈ ಸಾಂತ್ಯ ಅವರು, ಯುವಕರು ತಮ್ಮ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆಯೂ ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಗ್ರಾಮಾಭಿವೃದ್ಧಿಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು. ಬಾಲಮುರಳಿ ಸಸ್ಪೆಟ್ಟಿ ಅವರು ಮಾತನಾಡಿ, ಇಂದಿನ ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ದಿಕ್ಕುತಪ್ಪುತ್ತಿರುವ ಸಂದರ್ಭದಲ್ಲಿ, ಇಂತಹ ಕಾರ್ಯಗಳು

ಈಶ್ವರಮಂಗಲದ ಸಾಂತ್ಯದಲ್ಲಿ ಮಾರ್ಗ ಸೂಚಕ ಫಲಕ ಅನಾವರಣ: ಗ್ರಾಮಾಭಿವೃದ್ಧಿಗೆ ಯುವಕರಿಂದ ಅರ್ಥಪೂರ್ಣ ಹೆಜ್ಜೆ Read More »

ಹೈನುಗಾರರಿಗೆ ಸಿಗಲಿದೆ 1 ರೂ. ಹೆಚ್ಚುವರಿ ಪ್ರೋತ್ಸಾಹಧನ

ಬೇಸಿಗೆಯ ಮೇವಿನ ಸಂಕಷ್ಟ ನಿವಾರಿಸಲು ದ.ಕ. ಹಾಲು ಉತ್ಪಾದಕರ ಒಕ್ಕೂಟ ನೆರವು ಮಂಗಳೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ತನ್ನ ಸದಸ್ಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಈ ವಿಶೇಷ ಪ್ರೋತ್ಸಾಹಧನ ಫೆಬ್ರವರಿ 21ರಿಂದ ಮೇ 31ರವರೆಗೆ ಅನ್ವಯವಾಗಲಿದೆ. ಬೇಸಿಗೆಯ ಅವಧಿಯಲ್ಲಿ ಹಸಿರು ಹುಲ್ಲು ಮತ್ತು ಒಣ ಹುಲ್ಲಿನ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹೈನುಗಾರರಿಗೆ ಸಹಾಯ ಮಾಡಲು ವಿಶೇಷ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.

ಹೈನುಗಾರರಿಗೆ ಸಿಗಲಿದೆ 1 ರೂ. ಹೆಚ್ಚುವರಿ ಪ್ರೋತ್ಸಾಹಧನ Read More »

ತಲೆಮರೆಸಿಕೊಂಡಿರುವ ಉಗ್ರನ ಸುಳಿವಿಗೆ 5 ಲ.ರೂ. ಬಹುಮಾನ ಘೋಷಿಸಿದ ಎನ್‌ಐಎ

ಮೂರು ವರ್ಷಗಳಿಂದ ತಪ್ಪಿಸಿಕೊಂಡಿರುವ ಲಷ್ಕರ್‌ನ ಉಗ್ರ ಬೆಂಗಳೂರು: ಮೋಸ್ಟ್‌ ವಾಂಟೆಡ್‌ ಉಗ್ರ ಜುನೈದ್‌ ಅಹಮ್ಮದ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಮೋಸ್ಟ್ ವಾಂಟೆಡ್ ಲಷ್ಕರ್ ಎ ತೊಯ್ಬಾ ಉಗ್ರನಿಗಾಗಿ ಕಳೆದ ಮೂರು ವರ್ಷದಿಂದ ಎನ್‌ಐಎ ಅಧಿಕಾರಿಗಳು ದೇಶ, ಹೊರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಶಂಕಿತ ಉಗ್ರ ಜುನೈದ್ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ, ಉಗ್ರನ ಸುಳಿವು ಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಗರದ ಜನನಿಬಿಡ

ತಲೆಮರೆಸಿಕೊಂಡಿರುವ ಉಗ್ರನ ಸುಳಿವಿಗೆ 5 ಲ.ರೂ. ಬಹುಮಾನ ಘೋಷಿಸಿದ ಎನ್‌ಐಎ Read More »

ಪುತ್ತೂರು : ಎಂಡಿಎಂ ಸಾಗಿಸುತ್ತಿದ್ದ ಮೂವರ ಬಂಧನ

ಕಾರು, ಮಾರಕಾಸ್ತ್ರ ಸೇರಿ 5.38 ಲ.ರೂ. ಮೌಲ್ಯದ ಸೊತ್ತು ವಶ ಪುತ್ತೂರು : ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೇರಳ ಮೂಲದ ಮೂವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂದಿಸಿದ್ದಾರೆ. ಕೇರಳದ ಕೋಝಿಕೋಡ್‌ನ ಮುಹಮ್ಮದ್ ಅಜ್ಮಲ್ ಸಿ. ಯಾನೆ ಅಜ್ಜು (30), ವಯನಾಡ್ ಜಿಲ್ಲೆಯ ಇಸ್ಮಾಯಿಲ್ (28), ಕೊಝಿಕೋಡ್‌ನ ಸಂಶೀರ್ (27) ಬಂಧಿತ ಆರೋಪಿಗಳು. ಆರೋಪಿಗಳು ಫೆ.18ರಂದು ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ವಾಹನದಲ್ಲಿ ಮಾರಾಕಾಯುಧ ತಲವಾರನ್ನು ಇಟ್ಟುಕೊಂಡು, ಸುಮಾರು 5,38,800 ಮೌಲ್ಯದ 53.58 ಗ್ರಾಂ

ಪುತ್ತೂರು : ಎಂಡಿಎಂ ಸಾಗಿಸುತ್ತಿದ್ದ ಮೂವರ ಬಂಧನ Read More »

error: Content is protected !!
Scroll to Top