ಶೈಕ್ಷಣಿಕ

ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಪುತ್ತೂರು: ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಎಲೈಟ್ ಅಸೋಸಿಯೇಷನ್ ಹಾಗೂ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ( ಬೇಸ್), ಮಂಗಳೂರು ಜಂಟಿಯಾಗಿ ಆರಂಭಿಸಿದ ತ್ರೀಡಿಎಸ್ ಮ್ಯಾಕ್ಸ್ ಮತ್ತು ತ್ರೀಡಿ ರೆಂಡರಿಂಗ್ ಎಂಬ ವಿಷಯದಲ್ಲಿ ನಡೆದ ಕಾರ‍್ಯಗಾರದ ಪ್ರಮಾಣ ಪತ್ರ ವಿತರಣಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಬೇಸ್ ನ ಸ್ಥಾಪಕ ನವೀನ್ ಗುರುರಾಜ್ ಶಿಕ್ಷಣದ ಜೊತೆಗೆ ಸ್ವಯಂ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿ ಸಲಹೆ ನೀಡಿ ವಿದ್ಯರ‍್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ […]

ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ Read More »

ಇಂದು ಪ್ರಕಟವಾಗುವುದಿಲ್ಲ ದ್ವಿತೀಯ ಪಿಯುಸಿ ಫಲಿತಾಂಶ

ಮೌಲ್ಯಮಾಪನ ಪ್ರಕ್ರಿಯೆ ಬಾಕಿ ಇರುವುದರಿಂದ ವಿಳಂಬ ಬೆಂಗಳೂರು : ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಏ.7ರಂದು ಪ್ರಕಟವಾಗುವುದಿಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಘೋಷಿಸಿದ್ದರು. ಆದರೆ ಇಂದು ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಆಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ. ಬಹಳ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು

ಇಂದು ಪ್ರಕಟವಾಗುವುದಿಲ್ಲ ದ್ವಿತೀಯ ಪಿಯುಸಿ ಫಲಿತಾಂಶ Read More »

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಅಂಕ ಕೈಬಿಡುವ ಆದೇಶದ ವಿರುದ್ಧ ಪಿಐಎಲ್‌

ಪರೋಕ್ಷವಾಗಿ ದ್ವಿಭಾಷಾ ನೀತಿ ಜಾರಿಗೆ ತರುವ ಪ್ರಯತ್ನ ಎಂದು ವಿರೋಧ ಬೆಂಗಳೂರು : ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ತೀರ್ಮಾನ ಈಗ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ದಿಢೀರ್ ಘೋಷಣೆಯು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿ ನೆರಳು ಬೀರಲಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಬೆಂಗಳೂರಿನ ನಿವಾಸಿಗಳಾದ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಸಲ್ಲಿಸಿರುವ ಈ ಅರ್ಜಿಯಲ್ಲಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಅಂಕ ಕೈಬಿಡುವ ಆದೇಶದ ವಿರುದ್ಧ ಪಿಐಎಲ್‌ Read More »

ಏಪ್ರಿಲ್‌ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ?

ಬೆಂಗಳೂರು : ಮಾರ್ಚ್ 31ರಂದು ಪ್ರಥಮ ಪಿಯುಸಿ ಫಲಿತಾಂಶ ಯಶಸ್ವಿಯಾಗಿ ಪ್ರಕಟಗೊಂಡ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಅಧಿಕೃತ ಮೂಲಗಳ ಪ್ರಕಾರ ಏಪ್ರಿಲ್ ಎರಡನೇ ವಾರದಲ್ಲಿ (ಏಪ್ರಿಲ್ 7 ಅಥವಾ 8) ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಮಂಡಳಿಯು ಮೊದಲು ಸುದ್ದಿಗೋಷ್ಠಿಯ ಮೂಲಕ ಫಲಿತಾಂಶದ ವಿವರಗಳನ್ನು ಹಂಚಿಕೊಂಡು, ನಂತರ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಅಥವಾ karresults.nic.inನಲ್ಲಿ ಫಲಿತಾಂಶ ಪ್ರಕಟಿಸಲಿದೆ. ಆನ್​ಲೈನ್​ನಲ್ಲಿ

ಏಪ್ರಿಲ್‌ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ? Read More »

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸುತ್ತಿದೆ. ರಾಜ್ಯಾದ್ಯಂತ 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶವನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.inಗೆ ಭೇಟಿ ನೀಡಿ, ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿಯನ್ನು ಪಡೆಯಬಹುದು. ಫಲಿತಾಂಶದ ಜೊತೆಗೆ ಕಾಲೇಜುಗಳಲ್ಲಿಯೂ ಅಂಕಪಟ್ಟಿಗಳನ್ನು ಪ್ರಕಟಿಸಲು ಸೂಚಿಸಲಾಗಿದೆ.

ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ Read More »

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್‌ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯುಎಸಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಮಾರ್ಚ್ 26ರಂದು ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷಯ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಆದ ಶ್ರೀಮತಿ ಕಲಾವತಿ ಜಯಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್ ಕಾರ್ಯಕ್ರಮ Read More »

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಪ್ಯದಲ್ಲಿರುವ ಅಕ್ಷಯ ಪಿಯು ಕಾಲೇಜು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಕಾಲೇಜು ವತಿಯಿಂದ ಉಚಿತ ಕ್ರ್ಯಾಶ್ ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಈ ಸಂಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ CET, NEET ಹಾಗೂ IIT-JEEಗೆ ವಿಶೇಷ ತರಬೇತಿ ನೀಡುತ್ತಿದೆ. ಶ್ರೀ ಚೈತನ್ಯ ಇನ್‌ಸ್ಟಿಟ್ಯೂಷನ್

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ Read More »

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು

ಗದಗ: ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೂ ಹೋಗದೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದು ಅಧಿಕಾರಿಗಳು ಪರೀಕ್ಷೆ ಬರೆಸಿದ ಘಟನೆ ಮುಂಡರಗಿಯ ಬರ್ಡೂರಿನಲ್ಲಿ ನಡೆದಿದೆ. ಪಲ್ಲವಿ ಎಂಬ ಬಾಲಕಿ ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿ ತೀರದ ಬಡತನದ ಕಾರಣಕ್ಕೆ ಆಕೆ ತನ್ನ ಪರೀಕ್ಷೆಗೂ ಹೋಗದೆ ದ್ರಾಕ್ಷಿ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗಿದ್ದಳು. ಅವಳ ಪರಿಸ್ಥಿತಿ ಅರಿತ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ, ಆಕೆಯ ಪೋಷಕರ ಮನವೊಲಿಸಿ

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು Read More »

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿ ಎಸ್ ಸುದರ್ಶನ್ ಐವತೋಕ್ಲು ಗ್ರಾಮದ ಕಮಿಲ

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ Read More »

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ

ಸವಣೂರು: ಎಸ್ ಎಸ್ ಎಲ್ ಸಿ 2026 ಪರೀಕ್ಷಾ ಕೇಂದ್ರವಾದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಅವರು ದೀಪ ಪ್ರಜ್ವಲನೆಯ ಮೂಲಕ ಪರೀಕ್ಷೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷರ ಶಿವಕುಮಾರ್, ಉಪಧೀಕ್ಷಕಿ ಲಕ್ಷ್ಮೀ, ಪ್ರಶ್ನೆಪತ್ರಿಕೆ ಅಧೀಕ್ಷಕ ಸತೀಶ್ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ Read More »

error: Content is protected !!
Scroll to Top