ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
ಸುಳ್ಯ : ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಕಂದೂರು ಎಂಬಲ್ಲಿ ಎ. 11 ರಂದು ಸಂಭವಿಸಿದೆ. ಹರೀಶ್ ಜಿ ಎಂಬವರೇ ಮೃತಪಟ್ಟ ವ್ಯಕ್ತಿ. ಇವರು ನೆಮ್ಮೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಕಂದೂರು ಎಂಬಲ್ಲಿಗೆ ತೆಂಗಿನಕಾಯಿ ಕೊಯ್ಯುವ ಕೆಲಸಕ್ಕೆ ಹೋಗಿದ್ದು, ತೆಂಗಿನಕಾಯಿ ಕೊಯ್ದು ಮರದಿಂದ ಇಳಿಯುತ್ತಿದ್ದಂತೆ ಆಕಸ್ಮಿಕವಾಗಿ ಮರದಿಂದ ನೆಲಕ್ಕೆ ಬಿದ್ದು ಸ್ಮೃತಿ ಕಳೆದುಕೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಹರೀಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. […]
ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು Read More »