ನಿಧನ

ತಾಸೆ ಬಳಗದಲ್ಲಿ ಗುರುತಿಸಿಕೊಂಡ ರಕ್ಷಿತ್ ಜೋಗಿ ನಿಧನ

ಪುತ್ತೂರು: ಅನಾರೋಗ್ಯದಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ ಕೀರ್ತಿ ಯಾನೆ ರಕ್ಷಿತ್ ಜೋಗಿ (30) ಮೃತಪಟ್ಟ ಯುವಕ. ಕೆಮ್ಮಿಂಜೆ ಬಾಡಿಗೆ ಮನೆಯಲ್ಲಿ ವಾಸವಿದ್ದ ರಕ್ಷಿತ್ ರವರು ಹುಲಿ ವೇಷದ ಸಂದರ್ಭ ತಾಸೆಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು ಮತ್ತು ನೇಮ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನಲ್ಲಿ ಡೋಲು ಬಾರಿಸುತ್ತಿದ್ದರು. ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ತಾಯಿ, ಅಜ್ಜಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ತಾಸೆ ಬಳಗದಲ್ಲಿ ಗುರುತಿಸಿಕೊಂಡ ರಕ್ಷಿತ್ ಜೋಗಿ ನಿಧನ Read More »

ಕಾಂಟಾ ಲಗಾ…ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಪುನೀತ್‌ ರಾಜ್‌ಕುಮಾರ್‌ ಚಿತ್ರಗಳಲ್ಲೂ ನಟಿಸಿದ್ದ ನಟಿ ಮುಂಬಯಿ: ಕಾಂಟಾ ಲಗಾ… ಹಾಡಿಗೆ ಮಾದಕವಾಗಿ ಕುಣಿದು ಆಲ್ಬಂ ಸಾಂಗ್‌ ಜಮಾನದಲ್ಲಿ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪುನೀತ್ ರಾಜ್​ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿನಲ್ಲೂ ಮಸ್ತ್‌ ಆಗಿ ಕುಣಿದಿದ್ದರು. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು. ಅವರಿಗೆ ಎದೆನೋವು

ಕಾಂಟಾ ಲಗಾ…ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ Read More »

ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಕಾವು ನಿವಾಸಿ ಸತೀಶ್‍ ಕುಮಾರ್ ನಿಧನ

ಪುತ್ತೂರು: ಕುಂಬ್ರದ ಕಾವು ನಿವಾಸಿ ಸತೀಶ್ ಕುಮಾರ್ ಹೃದಯಘಾತದಿಂದ ಬೆಂಗಳೂರಿನಲ್ಲಿ ಇಂದು ನಿಧನರಾದರು. ಸತೀಶ್‍ ಕುಮಾರ್ ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಮಾಜಿ ಪಿಸಿಎನ್ ಕೇಬಲ್ ನೆಟ್ವರ್ಕ್ ಪಾಟ್ನರ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ ಆಗಿದ್ದರು. ಮೃತರು ತಾಯಿ, ಮಕ್ಕಳಾದ ಅನಿರುದ್ಧ, ಅನುರಾಗ್ ಮತ್ತು ಅಣ್ಣ ಬೆಂಗಳೂರಿನ ಹೊಟೇಲ್ ಉದ್ಯಮಿ ಹರೀಶ್, ತಮ್ಮ ರಿಪಬ್ಲಿಕ್ ಟಿ.ವಿ ಚಾನಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಕಾವು ನಿವಾಸಿ ಸತೀಶ್‍ ಕುಮಾರ್ ನಿಧನ Read More »

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ

ಪುತ್ತೂರು: ನಗರಸಭಾ ಸದಸ್ಯ ಶೀನಪ್ಪ ನಾಯ್ಕ ಅನಾರೋಗ್ಯದಿಂದ ಶನಿವಾರ ನಿಧನರಾದರು. ಮುಕ್ರಂಪಾಡಿ ಆನಂದಾಶ್ರಮ ನಿವಾಸಿಯಾಗಿದ್ದ ಶೀನಪ್ಪ ನಾಯ್ಕರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ Read More »

ಕೊಂಬಾರು ನಿವಾಸಿ, ನಿವೃತ್ತ ಸೈನಿಕ ಹೃದಯಾಘಾತದಿಂದ ನಿಧನ

ಕಡಬ: ವರ್ಷದ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಬುಧವಾರ ಸಂಜೆ ನಡೆದಿದೆ. ಮೂಲತ: ಕೊಂಬಾರು ಗ್ರಾಮದಲ್ಲಿ ವಾಸವಿದ್ದ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಹೃದಯಾಘಾತಕ್ಕೆ ಒಳಗಾದವರು. ಇಂದು ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸಿದ್ದು ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆ ಸಿಬ್ಬಂದಿಗಳು

ಕೊಂಬಾರು ನಿವಾಸಿ, ನಿವೃತ್ತ ಸೈನಿಕ ಹೃದಯಾಘಾತದಿಂದ ನಿಧನ Read More »

ಕೆದಂಬಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುನಂದಾ ರೈ ಕೇನ್ಯ ನಿಧನ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ಸುನಂದಾ ರೈ ಕೇನ್ಯ (54 ) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಬೆಳ್ಳಾರೆ ನಿವಾಸಿಯಾಗಿದ್ದ  ಸುನಂದಾ ರೈ ಅನಾರೋಗ್ಯಕ್ಕೊಳಗಾಗಿ ಕೆಲ ಸಮಯಗಳಿಂದ ತಿಂಗಳಾಡಿ ಬಳಿ ವಾಸವಾಗಿದ್ದರು. ಆರಂಭದಲ್ಲಿ ಬಳ್ಪ ಗ್ರಾಮ ಪಂಚಾಯತ್‌ ನಲ್ಲಿ ಸೇವೆಯನ್ನು ಪ್ರಾರಂಭಿಸಿ ಬಳಿಕ ಬೆಳ್ಳಾರೆ ಪಂಚಾಯತ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗ್ರೇಡ್-1 ಕಾರ್ಯದರ್ಶಿಯಾಗಿ ಭಡ್ತಿ ಪಡೆದು ಕೆದಂಬಾಡಿ ಗ್ರಾಪಂಗೆ ವರ್ಗಾವಣೆಗೊಂಡಿದ್ದರು. ಶಾಲಾ ದಿನಗಳಲ್ಲೇ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದು, ಗ್ರಾಮ

ಕೆದಂಬಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುನಂದಾ ರೈ ಕೇನ್ಯ ನಿಧನ Read More »

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್‍ ಸಾಲಿಯಾನ್‍ ನಿಧನ

ಪುತ್ತೂರು: ಕಾಂಗ್ರೆಸ್ ಹಿರಿಯ ಕಾರ್ಯಕರ್ತ, ಸಾಮೆತ್ತಡ್ಕ ನಿವಾಸಿ ಸುರೇಶ್ ಸಾಲಿಯಾನ್ (65) ರವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತ ಸುರೇಶ್ ಸಾಲಿಯಾನ್ ರವರು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತ ಸುರೇಶ್ ರವರು ದರ್ಬೆಯಲ್ಲಿ ಬಜಾಜ್ ಗ್ಯಾರೇಜ್ ನಲ್ಲಿ ಸೇವೆ ನೀಡುತ್ತಿದ್ದು ಬಳಿಕ ಸಾಮೆತ್ತಡ್ಕ ದ್ವಿತೀಯ ಕ್ರಾಸ್ ನಲ್ಲಿ ಪಡಿತರ ಅಂಗಡಿಯನ್ನು ನಡೆಸುತ್ತಿದ್ದರು. ಸಾಮೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯ ಸಕ್ರಿಯ ಸದಸ್ಯರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್

ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್‍ ಸಾಲಿಯಾನ್‍ ನಿಧನ Read More »

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ

ಪುತ್ತೂರು: ಸಂಚಾರ ಪೊಲೀಸ್ ಠಾಣೆ ಹೆಡ್‌ ಕಾನ್‍ ಸ್ಟೇಬಲ್ ಗೂನಡ್ಕ ನಿವಾಸಿ ಶಿವ ಪ್ರಸಾದ್ (51) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮುಂದಿನ ವರ್ಷದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎ ಎಸ್ ಐ ಭಡ್ತಿ ಹೊಂದಲಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಬಂಧು ಮಿತ್ರರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ Read More »

ಕಾಂತಾರ-1 ಚಿತ್ರದ ಇನ್ನೋರ್ವ ಕಲಾವಿದ ಸಾವು

ಕೆಲವೇ ತಿಂಗಳ ಅಂತರದಲ್ಲಿ ಚಿತ್ರದ ಮೂವರು ಕಲಾವಿದರು ಮೃತ್ಯು ಮಂಗಳೂರು: ಕರಾವಳಿಯ ದೈವಾರಾಧನೆಯ ಕಥೆಯನ್ನೊಳಗೊಂಡಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ-1 ಚಿತ್ರಕ್ಕೆ ಅಪಘಾತ, ಅವಘಡ ಎಂದು ಪದೇಪದೆ ಅಪಶಕುನ ಎದುರಾಗುತ್ತಿದೆ. ಈ ಚಿತ್ರದಲ್ಲಿ ನಟಿಸುತ್ತಿದ್ದ ಇಬ್ಬರು ಕಲಾವಿದರು ಈ ಮೊದಲು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದರು. ಇದೀಗ ಇನ್ನೋರ್ವ ಕಲಾವಿದ ಮೃತ್ಯುವೀಡಾಗಿದ್ದಾರೆ. ವಿಜು ವಿ.ಕೆ ಎಂಬುವವರು ಮೃತ ದುರ್ದೈವಿ. ಇವರು ಕೇರಳದ ತ್ರಿಶ್ಶೂರ್​ನವರು. ‘ಕಾಂತಾರ-1’ ಸಿನಿಮಾ ಶೂಟ್​ಗಾಗಿ ಕರ್ನಾಟಕಕ್ಕೆ ಬಂದು ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ

ಕಾಂತಾರ-1 ಚಿತ್ರದ ಇನ್ನೋರ್ವ ಕಲಾವಿದ ಸಾವು Read More »

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು

ಉಡುಪಿ : ಕಾರು ಚಾಲಕನ ನಿರ್ಲಕ್ಷದಿಂದ ಪ್ರಸಿದ್ಧ ಭಕ್ತಿ ಗಾಯಕ ಮತ್ತು ತಬಲಾ ವಾದಕ ಆಳ್ವಾಸ್ ಸಂಕೀರ್ತನ್ (28) ಮೃತಪಟ್ಟಿದ್ದಾರೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ಸಂಭವಿಸಿದ್ದು, ಕುಂದಾಪುರದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರನ್ನು ಚಾಲಕ ಅಜಾಗರೂಕತೆ ಯಿಂದ ಚಲಾಯಿಸುತ್ತಿದ್ದುದರಿಂದ ಕಾರು  ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ  ರಸ್ತೆ ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿ ಸಂಕೀರ್ತ

ಪ್ರಸಿದ್ಧ ಭಕ್ತಿ ಗಾಯಕ, ತಬಲಾ ವಾದಕ ಸಂಕೀರ್ತನ್‍ ಅಪಘಾತದಲ್ಲಿ ಮೃತ್ಯು Read More »

error: Content is protected !!
Scroll to Top