ಹಾವು ಕಚ್ಚಿ ಮಹಿಳೆ ಮೃತ್ಯು
ಬೆಳ್ತಂಗಡಿ: ವಿಷಪೂರಿತ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ನಾರ್ಯ ನಿವಾಸಿ ಶಾಂತಾ (68) ಮೃತಪಟ್ಟವರು. ಮನೆಯ ಹಿಂಬದಿಗೆ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಚ್ಚಿತ್ತು..ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಹಾವು ಕಚ್ಚಿ ಮಹಿಳೆ ಮೃತ್ಯು Read More »










