ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ
ಸುಳ್ಯ: ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಬೈಲಿನಲ್ಲಿ ಇಂದು ಸಂಜೆ ಬೀಸಿದ ಭಾರಿ ಗಾಳಿಗೆ ಅಡಕೆ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ. ಇಂದು ಸಂಜೆ ಅಜ್ಜಾವರದ ಮೇನಾಲದ ವ್ಯಾಪ್ತಿಯಲ್ಲಿ ಮತ್ತು ಮೇದಿನಡ್ಕ, ಪಡ್ಡಂಬೈಲು ಭಾಗದಲ್ಲಿ ಮಾತ್ರ ಭಾರಿ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಕೂಡ ಹಾನಿಯಾಗಿದೆ. ಇಂದು ರಾತ್ರಿ ಅಜ್ಜಾವರ ವ್ಯಾಪ್ತಿಯಲ್ಲಿನ ಜನತೆ ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. .
ಸುಳ್ಯ ಅಜ್ಜಾವರದಲ್ಲಿ ಭಾರೀ ಗಾಳಿ ಮಳೆ | ಧರೆಗುರುಳಿದ ಅಡಕೆ ಮರ Read More »