ಉಡುಪಿ

ನವೆಂಬರ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮನ

ಶ್ರೀಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್ ಗೀತೋತ್ಸವದಲ್ಲಿ ಭಾಗಿಯಾಗಲು ಆಗಮನ ಉಡುಪಿ : ಪ್ರಧಾನಿ ನರೇಂದ್ರ ಮೋದಿ ನವೆಂಬರ್​ 28ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಇದರ ಜೊತೆಗೆ ಇನ್ನಿತರ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಮಂಗಳೂರಿನ ಪಣಂಬೂರಿನಲ್ಲಿ ನಿರ್ಮಾಣವಾಗಿರುವ ಬಂದರು ಕಾರ್ಮಿಕರ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲೂ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಈ ಕಾರ್ಯಕ್ರಮ ಇನ್ನೂ ದೃಢಪಟ್ಟಿಲ್ಲ. ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ […]

ನವೆಂಬರ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮನ Read More »

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ

ಉಡುಪಿ: ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಮಹಿಳೆಯೊಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಉಡುಪಿ ಸಮೀಪದ ಬ್ರಹ್ಮಾವರದ ಕೌಶಲ್ಯ ಎಂದು ಗುರುತಿಸಲಾಗಿದೆ ಈಕೆ 2023ರ ನವೆಂಬರ್‌ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಸರಿತಾ

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ Read More »

ಉಡುಪಿ: ಮನೆಯಲ್ಲೇ ನೇಣಿಗೆ ಶರಣಾದ ಪ್ರೇಮಿಗಳು

ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತರನ್ನು ಪವಿತ್ರ (17) ಹಾಗೂ ಮಲ್ಲೇಶ (23) ಎಂದು ಗುರುತಿಸಲಾಗಿದೆ. ಪವಿತ್ರ ಅಜ್ಜರಕಾಡು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿ ರಾಯಚೂರಿಗೆ ತೆರಳಿದ್ದ ಮೇಲೆ ಮಲ್ಲೇಶ ಮನೆಗೆ ಬಂದಿದ್ದ ಎನ್ನಲಾಗಿದೆ. ಬಳಿಕ ಇವರಿಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ

ಉಡುಪಿ: ಮನೆಯಲ್ಲೇ ನೇಣಿಗೆ ಶರಣಾದ ಪ್ರೇಮಿಗಳು Read More »

ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು, ಮಲ್ಪೆಯಲ್ಲಿ ಪ್ರವಾಸಿಗ ಜಲಸಮಾಧಿ

ಮೀನು ಹಿಡಿಯಲು ಹೋದ ಮಕ್ಕಳ ದುರಂತ ಅಂತ್ಯದಿಂದ ಇಡೀ ಗ್ರಾಮಕ್ಕೆ ಶೋಕ ಉಡುಪಿ: ನಿನ್ನೆ ಒಂದೇ ದಿನ ಮಲ್ಪೆ ಮತ್ತು ಬೈಂದೂರಲ್ಲಿ ಸಮುದ್ರದಲ್ಲಿ ಮುಳುಗಿ ನಾಲ್ಕು ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ಸಂಭವಿಸಿದೆ. ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕಡಲ ಕಿನಾರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ಕಿರಿಮಂಜೇಶ್ವರ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ 15 ವರ್ಷ ವಯಸ್ಸಿನ ಆಶಿಶ್ ದೇವಾಡಿಗ, ಕಿರಿ ಮಂಜೇಶ್ವರ ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷ ವಯಸ್ಸಿನ

ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು, ಮಲ್ಪೆಯಲ್ಲಿ ಪ್ರವಾಸಿಗ ಜಲಸಮಾಧಿ Read More »

ಬಾಲಕನಿಗೆ ಲೈಂಗಿಕ ಕಿರುಕುಳ : ಆರೋಪಿ ವಿರುದ್ಧ ಪೋಕ್ಸೊ ಕೇಸ್‌

ಬೀಚ್‌ಗೆ ತಿರುಗಾಡಲು ಬಂದಿದ್ದ ಬಾಲಕನಿಗೆ ಕಿರುಕುಳ ಉಡುಪಿ: ಕಾಪು ಬೀಚ್‌ನಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿದೆ. ಮೈಸೂರಿನಿಂದ ಮಗನ ಜೊತೆ ಪ್ರವಾಸ ಬಂದಿದ್ದ ದಂಪತಿ ಕಾಪು ಬೀಚ್‌ನಲ್ಲಿ ತಿರುಗಾಡುತ್ತಿದ್ದಾಗ ಶೌಕತ್‌ ಅಲಿ (47) ಎಂಬಾತ ಶೌಚಾಲಯದ ಬಳಿ ಬಾಲಕನನ್ನು ಹಿಡಿದು ಚುಂಬಿಸಿ ಕಿರುಕುಳ ನೀಡಿದ್ದ. ಇದನ್ನು ನೋಡಿ ಬಾಲಕನ ತಂದೆ ಬೊಬ್ಬೆ ಹಾಕಿದ್ದು, ಆಗ ಆರೋಪಿ ಸ್ಥಳದಿಂದ ಪಲಾಯನ ಮಾಡಲು ಯತ್ನಿಸಿದ್ದ. ಆದರೆ ಬೀಚ್‌ನಲ್ಲಿ ಗಸ್ತು ನಿರತ ಪೊಲೀಸರು ಮತ್ತು

ಬಾಲಕನಿಗೆ ಲೈಂಗಿಕ ಕಿರುಕುಳ : ಆರೋಪಿ ವಿರುದ್ಧ ಪೋಕ್ಸೊ ಕೇಸ್‌ Read More »

ಸ್ನೇಹಿತರಿಂದ ವಿಡಿಯೋ ಬಹಿರಂಗ ಮಾಡುವ ಬೆದರಿಕೆ : ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ

ಗೆಳತಿ ಜೊತೆಗಿದ್ದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಸ್ನೇಹಿತರು ಕಾರ್ಕಳ : ತನ್ನ ಗೆಳತಿಯೊಂದಿಗೆ ಇರುವ ಖಾಸಗಿ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಸ್ನೇಹಿತರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಗುರುವಾರ ಸಂಜೆ ಬೆಳ್ಮಣ್‌ನಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಭಿಷೇಕ್ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು ಮತ್ತು ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದರು. ಇಬ್ಬರ ಸಂಬಂಧ ಬಹಳ

ಸ್ನೇಹಿತರಿಂದ ವಿಡಿಯೋ ಬಹಿರಂಗ ಮಾಡುವ ಬೆದರಿಕೆ : ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ Read More »

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ

ಉಡುಪಿ : ಉಡುಪಿ ನಗರಸಭೆಗೆ ಸಂಬಂಧಿಸಿದ ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲುವಿನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಭಾರಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಘಟಕವನ್ನು ಆವರಿಸಿತು. ಇದರಿಂದ ಕಟ್ಟಡ, ಶೆಡ್‌ನಲ್ಲಿರುವ ಹಲವು ಯಂತ್ರೋಪಕಣಗಳು, ತ್ಯಾಜ್ಯಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ

ಉಡುಪಿ ಘನತ್ಯಾಜ್ಯ ಘಟಕದಲ್ಲಿ ಭಾರಿ ಬೆಂಕಿ ಅವಘಡ Read More »

ಸೋಷಿಯಲ್‌ ಮೀಡಿಯಾದಲ್ಲಿ ಸಿಎಂ ಟೀಕೆ : ಬಿಜೆಪಿ ಐಟಿ ಸೆಲ್‌ ಯುವಕನ ವಿರುದ್ಧ ಕೇಸ್‌

ಕಟೀಲು ದೇವಳ ಪೂಜಾ ದರ ಏರಿಕೆ ಹಿನ್ನೆಲೆಯಲ್ಲಿ ಮಾಡಿದ್ದ ಟೀಕೆಗೆ ಕೇಸ್‌ ಕಾರ್ಕಳ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯ ದರಗಳನ್ನು ಏರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪ್ರಸಾರ ಮಾಡಿದ ಆರೋಪದಲ್ಲಿ ಬಿಜೆಪಿ ಐಟಿ ಸೆಲ್‌ಗೆ ಸೇರಿದ ಯುವಕನ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳದ ಈದು ನಿವಾಸಿ ಪ್ರಖ್ಯಾತ್ ಬಿ.ಜೆ ಎಂದು ಗುರುತಿಸಲಾದ ಯುವಕ ಸೋಷಿಯಲ್‌ ಮೀಡಿಯಾಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು

ಸೋಷಿಯಲ್‌ ಮೀಡಿಯಾದಲ್ಲಿ ಸಿಎಂ ಟೀಕೆ : ಬಿಜೆಪಿ ಐಟಿ ಸೆಲ್‌ ಯುವಕನ ವಿರುದ್ಧ ಕೇಸ್‌ Read More »

ಕಮಲಶಿಲೆಯ ಉದ್ಯಮಿ ಆತ್ಮಹತ್ಯೆ

ಉಡುಪಿ: ಕುಂದಾಪುರ ಸಮೀಪದ ಕಮಲಶಿಲೆ ಗ್ರಾಮದ ಬರೇಗುಂಡಿ ಎಂಬಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸಿದ್ದಾಪುರದಲ್ಲಿರುವ ಛಾತ್ರ ಎಂಟರ್‌ಪ್ರೈಸಸ್‌ನ ಮಾಲೀಕ ಉದಯ ಛಾತ್ರ (43) ಸೆಪ್ಟೆಂಬರ್ 17ರಂದು ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಯ ಛಾತ್ರ ಬೆಳಗ್ಗೆ ಕಮಲಶಿಲೆಯಲ್ಲಿ ನಡೆದ ಮಣಂಜೆ ಕೃಷಿ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಗೆ ಪೋಷಕರು ಮತ್ತು ಪತ್ನಿಯೊಂದಿಗೆ ಹಾಜರಾಗಿದ್ದರು. ಅವರನ್ನು ಸಭೆಯಲ್ಲಿ ಬಿಟ್ಟ ನಂತರ ಸಿದ್ದಾಪುರದಲ್ಲಿರುವ ತಮ್ಮ ವ್ಯಾಪಾರ ಸಂಸ್ಥೆ ಛಾತ್ರ ಎಂಟರ್‌ಪ್ರೈಸಸ್‌ಗೆ

ಕಮಲಶಿಲೆಯ ಉದ್ಯಮಿ ಆತ್ಮಹತ್ಯೆ Read More »

ಉಡುಪಿಯಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಇಂದು ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ, ನಾಳೆ ಲೀಲೋತ್ಸವ ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಭಾನುವಾರ ಮತ್ತು ಸೋಮವಾರ (ಸೆ.14-15)ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಇದಕ್ಕಾಗಿ ವ್ಯಾಪಕ ತಯಾರಿ ಮಾಡಲಾಗಿದೆ. ದೇಶದ ಉಳಿದ ಭಾಗಗಳಲ್ಲಿ ಕೃಷ್ಣಾಷ್ಟಮಿ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಆಚರಣೆಯಾಗುವುದಾದರೆ ಉಡುಪಿಯಲ್ಲಿ ಜನ್ಮಾಷ್ಟಮಿಯನ್ನು ಸೌರಮಾನ ಕ್ಯಾಲೆಂಡರ್ (ಸೌರಮಾನ) ಪ್ರಕಾರ ಆಚರಿಸಲಾಗುತ್ತದೆ. ಸೌರಮಾನ ಪದ್ಧತಿಯ ಪ್ರಕಾರ ಸೆಪ್ಟೆಂಬರ್ 14ರಂದು ಅರ್ಘ್ಯ ಪ್ರದಾನ (ಶ್ರೀಕೃಷ್ಣನಿಗೆ ಮಧ್ಯರಾತ್ರಿಯ ಹೊತ್ತಿಗೆ ಅರ್ಪಣೆ) ನಡೆಯಲಿದೆ, ನಂತರ ಸೆಪ್ಟೆಂಬರ್15 ರಂದು ಲೀಲೋತ್ಸವ (ವಿಟ್ಲಪಿಂಡಿ)

ಉಡುಪಿಯಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ Read More »

error: Content is protected !!
Scroll to Top