ಉಡುಪಿ

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ

ಉಡುಪಿ : ಕೋಟದ ಶ್ರೀ ಮಾತಾ ಆಸ್ಪತ್ರೆಯ ಮಾಲಕ ಡಾ.ಸತೀಶ್ ಪೂಜಾರಿ (54) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಮಾಲೀಕರಾಗಿದ್ದ ಇವರು ಕಲಾವಿದರೂ ಆಗಿದ್ದರು ಹಾಗೂ ಮನಸ್ಮಿತಾ ಫೌಂಡೇಷನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲೂ ಇದ್ದರು. ಇಎನ್‌ಟಿ ತಜ್ಞರಾಗಿದ್ದ ಡಾ. ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು, ಆಲ್ಬಂಗಳನ್ನು ಹೊರತಂದಿದ್ದರು. ಸಂಗೀತ ರಸಮಂಜರಿಗಳಲ್ಲಿ ಹಾಡುತ್ತಿದ್ದರು. ಗಾಯಕಿ ಎಸ್‌. ಜಾನಕಿಯವರ ಅಭಿಮಾನಿಯಾಗಿದ್ದ ಡಾ.ಸತೀಶ್ ಪೂಜಾರಿ ವರ್ಷಂಪ್ರತಿ ಕೋಟೇಶ್ವರದಲ್ಲಿ ಡಾ.ಎಸ್‌.ಜಾನಕಿ […]

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ Read More »

ಇಂಡಿಯಾ ಟೀಮ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ | ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಗೆದ್ದ ಬಳಿಕ ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸ್ಪಾರ್ ಕ್ರಿಕೆಟರ್ ಗೆ ಸ್ವಾಗತ ಕೋರಲಾಯಿತು. ನೂತನವಾಗಿ ನಿರ್ಮಾಣವಾಗುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದಂಪತಿ ಪೂಜೆ ಸಲ್ಲಿಸಿ, ದೇವಸ್ಥಾನದ ನಿರ್ಮಾಣ, ಕೆತ್ತನೆ ಶಿಲ್ಪಕಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇಂಡಿಯಾ ಟೀಮ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ | ವಿಶೇಷ ಪೂಜೆ ಸಲ್ಲಿಕೆ Read More »

ಭಾರೀ ಮಳೆ : ನಾಳೆ ಉಡುಪಿ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ

ಉಡುಪಿ: ಭಾರೀ ಮಳೆಯ ಹಿನ್ನಲೆಯಲ್ಲಿ ನಾಳೆ (ಜು.9) ಉಡುಪಿ ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಉಡುಪಿ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಸೇರಿದಂತೆ ಮೀನುಗಾರರು ನದಿ ತೀರಕ್ಕೆ ತೆರಳುವುದು, ಮೀನುಗಾರಿಕೆ ಮಾಡುವುದು ನಿಷೇಧಿಸಲಾಗಿದೆ.

ಭಾರೀ ಮಳೆ : ನಾಳೆ ಉಡುಪಿ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ Read More »

ಭಾರೀ ಮಳೆ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಟ್ಟಗಳು, ಜಲಪಾತಗಳ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಫಾಲ್ಸ್ ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಬೆಳ್ತಂಗಡಿ ಆರ್‌ಎಫ್‌ಒಗೆ ಕುದುರೆಮುಖ

ಭಾರೀ ಮಳೆ ಹಿನ್ನಲೆ : ದಕ್ಷಿಣ ಕನ್ನಡದಲ್ಲಿ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ Read More »

ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಹಣ  ಕಳೆದುಕೊಂಡ ಮಣಿಪಾಲದ ಯುವತಿ

ಮಣಿಪಾಲ : ವಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿ ಟಾಸ್ಕ್ ಪೂರ್ಣಗೊಳಿಸಿ ಹಣ ಸಂಪಾದಿಸುವ ನಿಟ್ಟಿನಲ್ಲಿ ಯುವತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಹಣ ಕಳೆದುಕೊಂಡ ವಿದ್ಯಾರ್ಥಿನಿ ಮಣಿಪಾಲದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡಿಕೊಂಡಿರುವ ಗಿಟಿಕಾ ಬಸಿನ್. ಈಕೆ ಜೂ. 23ರಂದು ತನ್ನ ಕೊಠಡಿಯಲ್ಲಿರುವಾಗ Review job & Pre Paid Tasks ಎಂಬ ಸಂದೇಶವನ್ನು ವಾಟ್ಸ್ಆ್ಯಪ್ ನಲ್ಲಿ ಸ್ವೀಕರಿಸಿರುತ್ತಾಳೆ. ಸಂದೇಶದ ಪ್ರಕಾರ ಆಕೆ ಅದರಲ್ಲಿರುವ ಟಾಸ್ಕ್ ಗಳನ್ನು ಪೂರ್ಣಗೊಳಿಸಿದಾಗ ಅವರ ಬ್ಯಾಂಕ್ ಖಾತೆಗೆ 205 ರೂ.ಜಮೆಯಾಯಿತು.

ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಹಣ  ಕಳೆದುಕೊಂಡ ಮಣಿಪಾಲದ ಯುವತಿ Read More »

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃವಿಯೋಗ

ಕೋಟ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ,ಮಾಜಿ, ಸಚಿವ  ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಕೋಟತಟ್ಟು ಬಾರಿಕೆರೆ ನಿವಾಸಿ ಲಚ್ಚಿ ಪೂಜಾರಿ (97) ಭಾನುವಾರ ನಿಧನ ಹೊಂದಿದರು. ಇವರು ಉತ್ತಮ ಕೃಷಿಕರಾಗಿದ್ದರು .ಪೂಜಾರಿ ಅವರು ತನ್ನ ರಾಜಕೀಯ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಪ್ರತಿ ಸಂದರ್ಭ ತಾಯಿ ವಾಸವಿರುವ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಚುನಾವಣೆಯಲ್ಲೂ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಂದಾಪುರ ಶಾಸಕ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃವಿಯೋಗ Read More »

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ

ಉಡುಪಿ: ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ರಿಡ್ಜ್ ಕಾರು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ. ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ. ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ Read More »

ಸಮುದ್ರ ಪಾಲಾದ ಯುವಕ : ಮೂರು ದಿನ ಕಳೆದರೂ ಪತ್ತೆಯಾಗದ ಸುಳಿವು

ಉಡುಪಿ : ಕುಂದಾಪುರ ತಾಲೂಕಿನ ಬೀಜಾಡಿ ಬಳಿ ಸಮುದ್ರದಲೆಯ ಅಬ್ಬರಕ್ಕೆ ಕೊಚ್ಚಿಹೋಗಿ ನಾಪತ್ತೆಯಾದ ಯುವಕನಿಗಾಗಿ ಮೂರು ದಿನಗಳಿಂದ  ಶೋಧ ಕಾರ್ಯ ಮುಂದುವರಿದಿದ್ದು, ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ತುಮಕೂರು ಜಿಲ್ಲೆಯ ತಿಪಟೂರು ಮೂಲದ ಯೋಗೀಶ್ (22) ಎಂಬಾತ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನೀರು ಪಾಲಾಗಿದ್ದನು. ಮಳೆಗಾಲದ ಸಮುದ್ರದ ಅಬ್ಬರದ ಕುರಿತು ಮಾಹಿತಿ ಇಲ್ಲದೆ ನೀರಿಗೆ ಇಳಿದಿದ್ದ ಆತ, ಸಮುದ್ರದಲ್ಲಿ ಗಾಳಿಯ ಒತ್ತಡ ಮತ್ತು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದನು. ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಸ್ಥಳೀಯರ ತಂಡ

ಸಮುದ್ರ ಪಾಲಾದ ಯುವಕ : ಮೂರು ದಿನ ಕಳೆದರೂ ಪತ್ತೆಯಾಗದ ಸುಳಿವು Read More »

ಗ್ಯಾರಂಟಿ ಹಣ ಹೊಂದಿಸಲು ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸೆಸ್‍ ಜಾಸ್ತಿ ಮಾಡಿ ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ : ಶಾಸಕ ಸುನಿಲ್ ಕುಮಾರ್

ಕಾರ್ಕಳ : ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‍ ನ್ನು ಹೆಚ್ಚಳ ಮಾಡುವ ಆದೇಶಕ್ಕೆ ಸಹಿತ ಹಾಕುವ ಮೂಲಕ ರಾಜ್ಯವನ್ನು ಲೂಟಿ ಹೊಡೆಯಲು ಹೊರಟಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲಭ್ಯ ಇರುವ ಎಲ್ಲ ಆದಾಯ ಮೂಲಗಳಿಂದ ಸರಕಾರ ಜನರನ್ನು ಎಷ್ಟು ಸುಲಿಗೆ ಮಾಡಿದರೂ ರಾಜಸ್ವ ಸಂಗ್ರಹ ದಿನೇ ದಿನೇ ಕುಸಿದು ಬೀಳುತ್ತಿದೆ. ಈ ವರ್ಷದ ತೆರಿಗೆ ಸಂಗ್ರಹಣೆಯಲ್ಲಿ 13 ಸಾವಿರ

ಗ್ಯಾರಂಟಿ ಹಣ ಹೊಂದಿಸಲು ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸೆಸ್‍ ಜಾಸ್ತಿ ಮಾಡಿ ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ : ಶಾಸಕ ಸುನಿಲ್ ಕುಮಾರ್ Read More »

ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ

ಉಡುಪಿ : ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾದುಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಜೂನ್ 08 ರಂದು ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಚ್ಚಿದ ಸರ್ವಿಸ್ ರಸ್ತೆಯನ್ನು ಮೀರಿದ್ದು, ಕೆಸರು ರಸ್ತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಟ್ಯಾಂಕರ್ ಪಲ್ಟಿಯಾಗಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್ ನಿರ್ಮಾಣ ಪ್ರದೇಶಕ್ಕೆ ಬಿದ್ದಿದೆ.ಘಟನೆಯಲ್ಲಿ ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ ಎನ್ನಲಾಗಿದೆ.

ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ Read More »

error: Content is protected !!
Scroll to Top