ಉಡುಪಿ

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಉಡುಪಿ: ಸಾಕುನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು–ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕುನಾಯಿಯನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ಮಾನವೀಯ ಕೃತ್ಯದ ವಿಡಿಯೋ ಮೇ […]

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು Read More »

ತಂದೆಯನ್ನೇ ಮದುವೆಗೆ ಆಹ್ವಾನಿಸಿಲ್ಲವಂತೆ ಚೈತ್ರಾ ಕುಂದಾಪುರ

ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಮೋಸಗಾರರು ಎಂದು ತಂದೆಯ ಗಂಭೀರ ಆರೋಪ ಕುಂದಾಪುರ : ಇತ್ತೀಚೆಗೆ ವಿವಾಹಿತರಾಗಿರುವ ಬಿಗ್‌ಬಾಸ್‌ ಸ್ಪರ್ಧಿ ಚೈತ್ರಾ ಕುಂದಾಪುರ ಮೇಲೆ ಅವರ ತಂದೆಯೇ ಗಂಭೀರ ಅರೋಪಗಳನ್ನು ಮಾಡಿದ್ದು, ತನ್ನನ್ನು ಮದುವೆಗೆ ಕರೆದೇ ಇಲ್ಲ ಎಂದು ತಂದೆ ಬಾಲಕೃಷ್ಣ ನಾಯ್ಕ್ ಹೇಳಿದ್ದಾರೆ. ಚೈತ್ರಾ ಕುಂದಾಪುರ ಕೆಲದಿನಗಳ ಹಿಂದೆ ದೇವಸ್ಥಾನದಲ್ಲಿ ವಿವಾಹ ಸರಳವಾಗಿ ನಡೆದಿತ್ತು. ಚೈತ್ರಾ ಅವರು ಶ್ರೀಕಾಂತ್ ಕಶ್ಯಪ್ ಎಂಬ ಯುವಕನನ್ನು ವರಿಸಿದ್ದಾರೆ. ಮಗಳ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ

ತಂದೆಯನ್ನೇ ಮದುವೆಗೆ ಆಹ್ವಾನಿಸಿಲ್ಲವಂತೆ ಚೈತ್ರಾ ಕುಂದಾಪುರ Read More »

ಸಾಲಬಾಧೆಯಿಂದ ತತ್ತರಿಸಿ ಬಾವಿಗೆ ಹಾರಿದ ತಂದೆ, ರಕ್ಷಿಸಲು ಜಿಗಿದ ಮಗ ಇಬ್ಬರೂ ಸಾವು

ತಾಯಿಯನ್ನು ರಕ್ಷಿಸಿದ ಸ್ಥಳೀಯರು-ಕುಂದಾಪುರದ ತೆಕ್ಕಟ್ಟೆಯಲ್ಲಿ ಸಂಭವಿಸಿದ ದಾರುಣ ಘಟನೆ ಕುಂದಾಪುರ: ಸಾಲಬಾಧೆಯಿಂದ ತತ್ತರಿಸುತ್ತಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ಮಗ ಕೂಡ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಗುರುವಾರ ಬೆಳಗ್ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೀನು ಮಾರುಕಟ್ಟೆ ಸಮೀಪ ನಡೆದಿದೆ. ಈ ಮಧ್ಯೆ ತಂದೆ-ಮಗ ಬಾವಿಗೆ ಹಾರಿದ್ದನ್ನು ಗಮನಿಸಿ ಅವರನ್ನು ರಕ್ಷಿಸಲು ಬಾವಿಗೆ ಜಿಗಿದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತರನ್ನು ಮಾಧವ ದೇವಾಡಿಗ (55) ಮತ್ತು ಅವರ ಪುತ್ರ

ಸಾಲಬಾಧೆಯಿಂದ ತತ್ತರಿಸಿ ಬಾವಿಗೆ ಹಾರಿದ ತಂದೆ, ರಕ್ಷಿಸಲು ಜಿಗಿದ ಮಗ ಇಬ್ಬರೂ ಸಾವು Read More »

ತೆಕ್ಕಟ್ಟೆಯಲ್ಲಿ ತಂದೆ, ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ | ಸ್ಥಳೀಯರಿಂದ ತಾಯಿಯ ರಕ್ಷಣೆ

ಉಡುಪಿ: ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆಯನ್ನು ರಕ್ಷಿಸಿದ ಘಟನೆ ತೆಕಟ್ಟೆಯಲ್ಲಿ ಇಂದು ಮುಂಜಾನೆ ನಡೆದಿದೆ. ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಅಗ್ನಿಶಾಮಕ ದಳ ಪೊಲೀಸರು ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿ ಶವವನ್ನು ಮೇಲೆತ್ತಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ತೆಕ್ಕಟ್ಟೆಯಲ್ಲಿ ತಂದೆ, ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ | ಸ್ಥಳೀಯರಿಂದ ತಾಯಿಯ ರಕ್ಷಣೆ Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ

ಉಡುಪಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬಲಾಯಿಪಾದೆ ಜಂಕ್ಷನ್ ಬಳಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಶಾಂತ್ ಹಾಗೂ ಪ್ರವೀಣ್ ಎಂದು ಪತ್ತೆಹಚ್ಚಲಾಗಿದೆ. ಆರೋಪಿಗಳಿಬ್ಬರ ಬಳಿ ಇದ್ದ ವಿವಿಧ ಬ್ಯಾಂಡ್‌ನ ಮದ್ಯದ ಸಾಚೇಟ್, ಬೀಯರ್ ಬಾಟಲ್, ನೀರಿನ ಬಾಟಲ್‌ಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ Read More »

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚೈತ್ರಾ ಕುಂದಾಪುರ

ಕುಂದಾಪುರ : ಫೈರ್ ಬ್ರಾಂಡ್‍ ಹಾಗೂ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಇಂದು (ಮೇ.9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳ ಪ್ರೀತಿಯ ನಂತರ ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆಗೆ ಚೈತ್ರಾ ಕುಂದಾಪುರ ಹಸೆಮಣೆಯೇರಿದ್ದಾರೆ. ಮದುವೆ ಸಮಾರಂಭಕ್ಕೆ  100 ಜನರಿಗೆ ಮದುವೆಗೆ ಆಮಂತ್ರಿಸಲಾಗಿದ್ದು, ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆಯಿತು. ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಹಾಗೂ ಗೋಲ್ಡ್ ಸುರೇಶ್ ಮದುವೆಯಲ್ಲಿ ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದರು. ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಶ್ರೀಕಾಂತ್ ಕಶ್ಯಪ್

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚೈತ್ರಾ ಕುಂದಾಪುರ Read More »

ಕಾಂತಾರ ಕಲಾವಿದ ನದಿಯಲ್ಲಿ ಮುಳುಗಿ ಸಾವು

ಕುಂದಾಪುರ : ರಿಷಬ್‌ ಶೆಟ್ಟಿಯವರ ಕಾಂತಾರಾ-1 ಸೆಟ್‌ನಲ್ಲಿ ಇನ್ನೊಂದು ದುರಂತ ಸಂಭವಿಸಿದೆ. ಚಿತ್ರತಂಡದಲ್ಲಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬವರು ಕೊಲ್ಲೂರಿನಲ್ಲಿ ಮಂಗಳವಾರ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಕೊಲ್ಲೂರು ಭಾಗದಲ್ಲಿ ಕಾಂತಾರ-1 ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿ ಕಪಿಲ್‌ ಮತ್ತು ತಂಡ ಸೌಪರ್ಣಿಕಾ ನದಿಗೆ ಈಜಾಡಲು ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಕಪಿಲ್‌ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಇಂದು ಕಪಿಲ್ ಅವರ ಮನೆಯವರು ಬಂದ ನಂತರ ಮರಣೋತ್ತರ ಪರೀಕ್ಷೆ

ಕಾಂತಾರ ಕಲಾವಿದ ನದಿಯಲ್ಲಿ ಮುಳುಗಿ ಸಾವು Read More »

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ

ಕಾರ್ಕಳ : ಮಂಗಳೂರಿನಲ್ಲಿ ವಾಸವಿದ್ದ ಮೂಲತಃ ಕಾರ್ಕಳದವರಾದ ಉದ್ಯಮಿ ದಿಲೀಪ್‌ ಎನ್‌.ಆರ್‌. ಎಂಬವರು ಮಂಗಳವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದರು.ವಾರ ನಸುಕಿನ ಹೊತ್ತು ಕಾರ್ಕಳದ ನಿಟ್ಟೆ ಸಮೀಪ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಮಂಗಳೂರಿನಲ್ಲಿ ವಾಸವಿದ್ದ ದಿಲೀಪ್‌ ಎನ್‌.ಆರ್‌. ಅವರು ನಿನ್ನೆ ರಾತ್ರಿ ಅಲ್ಲಿಂದ ತನ್ನ ಕ್ವಿಡ್‌ ಕಾರಿನಲ್ಲಿ ಹೊರಟವರು ನಿಟ್ಟೆ ದೂಪಕಟ್ಟೆಯ

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ Read More »

ನದಿಗೆ ಬಿದ್ದು ಯುವಕ ಸಾವು

ಉಡುಪಿ: ಹೆಬ್ರಿ ಸಮೀಪ ಸೀತಾನದಿ ನದಿಗೆ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕ ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ. ಮೃತನನ್ನು ಹೆಬ್ರಿಯ ಕಿನ್ನಿಗುಡ್ಡೆ ನಿವಾಸಿ ಸುಧಾಕರ ಶೆಟ್ಟಿ ಅವರ ಪುತ್ರ ಸಂಕೇತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸಂಕೇತ್ ತನ್ನ ಸ್ನೇಹಿತರೊಂದಿಗೆ ನದಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೆಬ್ರಿ ಗ್ರಾಮ ಪಂಚಾಯತ್ ಅಡಿಯಲ್ಲಿ ಅಂಗವಿಕಲ ವ್ಯಕ್ತಿಗಳ ಪುನರ್ವಸತಿ ವಿಭಾಗದಲ್ಲಿ ಅವರು ಉದ್ಯೋಗದಲ್ಲಿದ್ದರು ಮತ್ತು ಹೆಬ್ರಿ ಜೆಸಿಐ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ನದಿಗೆ ಬಿದ್ದು ಯುವಕ ಸಾವು Read More »

ಐಪಿಎಲ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಯುವಕರು ಸೆರೆ

ಮೊಬೈಲ್‌ ಬೆಟ್ಟಿಂಗ್ ಅಪ್ಲಿಕೇಶನ್ ಮೂಲಕ ಅಕ್ರಮ ದಂಧೆ ಉಡುಪಿ : ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ವ್ಯಕ್ತಿಗಳನ್ನು ಉಡುಪಿ ಸಿಇಎನ್ (ಸೆನ್‌) ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಸಿಇಎನ್ ಪೊಲೀಸ್ ಠಾಣೆಯ ಅಪರಾಧ ನಿರೀಕ್ಷಕ ರಾಮಚಂದ್ರ ನಾಯಕ್ ಉಡುಪಿ ಅಜ್ಜರಕಾಡಿನ ಭುಜಂಗ್ ಪಾರ್ಕ್ ಬಳಿ ದಾಳಿ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಭೇದಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟಲು

ಐಪಿಎಲ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಯುವಕರು ಸೆರೆ Read More »

error: Content is protected !!
Scroll to Top