ಮತಕಳ್ಳತನ ಒಪ್ಪಿಕೊಂಡ ಸಿದ್ದರಾಮಯ್ಯನವರನ್ನು ವಜಾ ಮಾಡುವ ತಾಕತ್ತು ಇದೆಯಾ?: ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ
ಸಿದ್ದರಾಮಯ್ಯ ಪಾಲಿಗೆ ತಿರುಗುಬಾಣವಾದ ಹಳೆ ನೆನಪುಗಳು ಬೆಂಗಳೂರು: ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆದಕಿದ ಹಳೆ ನೆನಪುಗಳೇ ಈಗ ಅವರ ಪಾಲಿಗೆ ತಿರುಗುಬಾಣವಾಗಿದೆ. ವಕೀಲರ ಸಂಘ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ 1991ರ ಲೋಕಸಭೆ ಚುನಾವಣೆಯಲ್ಲಿ ಮೋಸದಿಂದ ಸೋಲಿಸಿದ್ದರು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ನೆರವು ನೀಡಿದ್ದರು ಎಂದು ಸ್ಮರಿಸಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್‌ನ ಮತಕಳ್ಳತನ […]










