ರಾಜ್ಯ

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ. ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯತ್‌ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆ ಕೂಡ […]

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ Read More »

ಶಿವಮೊಗ್ಗ ಭಾರೀ ಮಳೆಯಿಂದ ಭೂಕುಸಿತ | ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ

ಶಿವಮೊಗ್ಗ : ಭಾರೀ ಮಳೆಯಿಂದ ಭೂ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಮುಂಗಾರು ಮಳೆ ಹಿನ್ನೆಲೆ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಬರೋಬ್ಬರಿ ಮೂರುವರೆ ತಿಂಗಳುಗಳ ಕಾಲ ಆಗುಂಬೆ ಘಾಟಿನಲ್ಲಿ ಭಾರೀ ವಾಹನ ಓಡಾಡುವುದಿಲ್ಲ. ಆಗುಂಬೆ ಘಾಟಿ 169ಎ ಹೆದ್ದಾರಿ ರಸ್ತೆಯಲ್ಲಿ

ಶಿವಮೊಗ್ಗ ಭಾರೀ ಮಳೆಯಿಂದ ಭೂಕುಸಿತ | ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ Read More »

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ

ಶಿವಮೊಗ್ಗ: ಕಾಂತಾರ-1 ಚಿತ್ರತಂಡಕ್ಕೆ ಇನ್ನೊಂದು ಅವಘಡ ಎದುರಾದ ಕುರಿತು ವರದಿಯಾಗಿದೆ. ನಿನ್ನೆ ರಾತ್ರಿ ತೀರ್ಥಹಳ್ಳಿ ಸಮೀಪ ಶೂಟಿಂಗ್‌ ನಡೆಯುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಬೋಟ್‌ನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿಯವರೂ ಇದ್ದರು ಎನ್ನಲಾಗಿದೆ. ಕಾಂತಾರ-1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ಮಧ್ಯರಾತ್ರಿ ಹಟ್ಟಿಯಲ್ಲಿದ್ದ ಹಸುವಿಗೆ ಹಿಂಸೆ ಬೆಂಗಳೂರು: ಬೆಂಗಳೂರು ಬಳಿಕ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಕುಳಗೇರಿ ಕ್ರಾಸ್‌ ಬಳಿ ಮನೆಯ ಹಟ್ಟಿಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ದುರುಳರು ವಿಕೃತಿ ಮೆರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿರುವ ಹಸುವಿನ ಕೆಚ್ಚಲನ್ನು ದುರುಳರು ಶುಕ್ರವಾರ ಕತ್ತರಿಸಿದ್ದಾರೆ. ಮಧ್ಯರಾತ್ರಿ ಹಸುವಿಗೆ ಮೇವು ಹಾಕಿ ಮನೆಯವರು ತೆರಳಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಹಸುವಿನ ಕೆಚ್ಚಲಿನಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

ಸರ್ಕಾರ-ವಿಪಕ್ಷ ಜಾತಿ ಗಣತಿ ಜಟಾಪಟಿ

ಮೊದಲ ಗಣತಿಗೆ ಮಾಡಿದ 165 ಕೋ. ರೂ.ಗೆ ಯಾರು ಹೊಣೆ ಎಂದು ಪ್ರಶ್ನೆ ಬೆಂಗಳೂರು: ರಾಜ್ಯದಲ್ಲಿ ಮರಳಿ ಜಾತಿ ಗಣತಿ ಮಾಡುವ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯ ಸರ್ಕಾರ ಮತ್ತೆ ಜಾತಿ ಗಣತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ನಡೆದ ಸಮೀಕ್ಷೆ ವರದಿ ಏನು ಮಾಡುತ್ತೀರಿ? 165 ಕೋಟಿ ರೂ. ಖರ್ಚು ಮಾಡಿದ್ದು ನೀರಿನಲ್ಲಿಟ್ಟ ಹೋಮದಂತಾಯಿತೇ ಎಂದು ಬಿಜೆಪಿ

ಸರ್ಕಾರ-ವಿಪಕ್ಷ ಜಾತಿ ಗಣತಿ ಜಟಾಪಟಿ Read More »

ಎಂಟು ಕಡೆ ಇ.ಡಿ. ದಾಳಿ: ಸಂಸದ, ಮೂವರು ಶಾಸಕರ ಮನೆ ಪರಿಶೋಧನೆ

ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆ ಗೆಲ್ಲಲು ಬಳಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿ ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ಸಂಭವಿಸಿರುವ ಬಹುಕೋಟಿ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆ ಬಳ್ಳಾರಿಯ ಕಾಂಗ್ರೆಸ್‌ ಸಂಸದ ಇ.ತುಕರಾಂ ಮತ್ತು ಬಳ್ಳಾರಿ ಭಾಗದ ಮೂವರು ಶಾಸಕರು ಸೇರಿದಂತೆ ಒಟ್ಟು ಕಡೆ ದಾಳಿ ನಡೆಸಿದೆ. ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ನಿಗಮದ 21 ಕೋಟಿ ರೂ. ಬಳಸಿದ ಆರೋಪದಲ್ಲಿ ಈ ದಾಳಿಯಾಗಿದ್ದು, ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮುಡಾ

ಎಂಟು ಕಡೆ ಇ.ಡಿ. ದಾಳಿ: ಸಂಸದ, ಮೂವರು ಶಾಸಕರ ಮನೆ ಪರಿಶೋಧನೆ Read More »

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಶೀಘ್ರ ಡಿಪಿಆರ್‌

ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಬೃಹತ್‌ ಯೋಜನೆ ಮಂಗಳೂರು: ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ ಸಮಯವನ್ನು ಗಣನೀಯವಾಗಿ ಕಡಿಮೆಗೊಳಿಸಲಿರುವ ಬಹುನಿರೀಕ್ಷಿತ ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಶುರುವಾಗಿದೆ. ಹೆದ್ದಾರಿ ಸಚಿವಾಲಯದಿಂದ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ. ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ವೇಗದ ಕಾರಿಡಾರ್ ರಸ್ತೆ ನಿರ್ಮಾಣದ ಕುರಿತಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಾಣಕ್ಕೆ ಶೀಘ್ರ ಡಿಪಿಆರ್‌ Read More »

ಬಳ್ಳಾರಿಯ ಕಾಂಗ್ರೆಸ್‌ ಸಂಸದ ತುಕರಾಂ ಇ.ಡಿ. ವಶ?

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ದಾಳಿ ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್‌ಗೆ ಜಾರಿ ನಿರ್ದೇಶನಾಲಯ ಭಾರಿ ದೊಡ್ಡ ಶಾಕ್‌ ನೀಡಿದೆ. ಕಾಂಗ್ರೆಸ್‌ ಸಂಸದ ತುಕರಾಮ್‌ ಮತ್ತು ಮೂವರು ಶಾಸಕರ ಮನೆ ಮೇಲೆ ಇ.ಡಿ. ದಾಳಿಯಾಗಿದೆ. ತುಕರಾಂ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಬಳ್ಳಾರಿ ಚುನಾವಣೆಗೆ 21 ಕೋಟಿ ರೂ. ಬಳಸಿದ ಆರೋಪ ಸಂಸದ ತುಕಾರಾಂ ಮೇಲಿದೆ. ಇದು ವಾಲ್ಮೀಕಿ ನಿಗಮದ ಹಣ ಎನ್ನಲಾಗಿದೆ.

ಬಳ್ಳಾರಿಯ ಕಾಂಗ್ರೆಸ್‌ ಸಂಸದ ತುಕರಾಂ ಇ.ಡಿ. ವಶ? Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇಂದಿನಿಂದ ರನ್ಯಾ ರಾವ್‌ಗೆ ಐಟಿ ಡ್ರಿಲ್‌

ಜೈಲಿನಲ್ಲಿರುವ ರನ್ಯಾಳನ್ನು ತೀವ್ರ ವಿಚಾರಣೆಗೊಳಪಡಿಸಲಿರುವ ಐಟಿ ಇಲಾಖೆ ಬೆಂಗಳೂರು : ಕನ್ನಡ ನಟಿ ರನ್ಯಾ ರಾವ್‌ ಒಳಗೊಂಡಿರುವ ದೇಶಾದ್ಯಂತ ಸಂಚಲನ ಉಂಟು ಮಾಡಿದ್ದಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆಗೆ ಈಗ ಆದಾಯ ಕರ ಇಲಾಖೆಯೂ ಮುಂದಾಗಿದೆ. ಈಗಾಗಲೇ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುವಾಗ ಸಿಕ್ಕಿಬಿದ್ದಿರುವ ರನ್ಯಾ ರಾವ್‌ ಈಗಲೂ ಜೈಲಿನಲ್ಲಿ ಇದ್ದಾಳೆ.

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಇಂದಿನಿಂದ ರನ್ಯಾ ರಾವ್‌ಗೆ ಐಟಿ ಡ್ರಿಲ್‌ Read More »

ಜಾತಿ ಗಣತಿ ಮರು ಸರ್ವೇ : ಸಿದ್ದರಾಮಯ್ಯನವರಿಗೆ ಹೈಕಮಾಂಡ್‌ ಮಟ್ಟದಲ್ಲಾದ ಭಾರಿ ಹಿನ್ನಡೆ

ಪ್ರಬಲ ಜಾತಿಗಳ ವಿರೋಧಕ್ಕೆ ಮಣಿದು ಮರು ಜಾತಿ ಗಣತಿಗೆ ಸೂಚಿಸಿದ ಹೈಕಮಾಂಡ್‌ ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ಜಾತಿ ಗಣತಿಗಾಗಿ ಮರಳಿ ಸರ್ವೇ ಮಾಡಲು ಸೂಚಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಾಗಿರುವ ಹಿನ್ನಡೆಯೆಂದೇ ಭಾವಿಸಲಾಗುತ್ತಿದೆ. ಸಿದ್ದರಾಮಯ್ಯನವರು ಹಳೆಯ ಜಾತಿಗಣತಿ ವರದಿಯನ್ನೇ ಯಥಾವತ್ತಾಗಿ ಜಾರಿಗೊಳಿಸಲು ಶತಾಯಗತಾಯ ಮುಂದಾಗಿದ್ದರು. ಡಿ.ಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು, ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳ ವಿರೋಧದ ನಡುವೆಯೂ ಸಿದ್ದರಾಮಯ್ಯನವರು 10 ವರ್ಷಗಳ ಹಿಂದಿನ ಜಾತಿಗಣತಿ ವರದಿಯನ್ನೇ ಜಾರಿಗೆ ತರಲು ಕಸರತ್ತು ನಡೆಸಿದ್ದರು. ಅದನ್ನು

ಜಾತಿ ಗಣತಿ ಮರು ಸರ್ವೇ : ಸಿದ್ದರಾಮಯ್ಯನವರಿಗೆ ಹೈಕಮಾಂಡ್‌ ಮಟ್ಟದಲ್ಲಾದ ಭಾರಿ ಹಿನ್ನಡೆ Read More »

error: Content is protected !!
Scroll to Top