ರಾಜ್ಯ

ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಸರ್ಕಾರ ಆಡಳಿತಕ್ಕೆ ಬರಬೇಕು: HD ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿರುವ ಜನ ವಿರೋಧಿ, ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿವ ಗುರಿ ನಮ್ಮದು. ಸಿ ಎಂ ಸ್ಥಾನದ ಬಗ್ಗೆ ಚರ್ಚಿಸುವುದಕ್ಕಿಂತ ಜನಸ್ನೇಹಿ ಆಡಳಿತ ಅಧಿಕಾರಕ್ಕೆ ಬರಬೇಕು ಎನ್ನುವುದೇ ಮುಖ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈತ್ರಿ ಮಾಡಿಕೊಂಡು 113 ಸ್ಥಾನ ಗಳಿಸಿದರೆ ಸಿ ಎಂ ಆಗಬಹುದು ಎನ್ನುವುದಕ್ಕೆ ಉತ್ತರ ನೀಡಿದ ಅವರು, ಅದರ ಕುರಿತು ಈಗಲೇ ಮಾತನಾಡುವ ಅಗತ್ಯ ಇಲ್ಲ. ಇನ್ನೂ 2 ವರ್ಷ ಸಮಯ ಇದೆ. ನಮ್ಮ […]

ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಸರ್ಕಾರ ಆಡಳಿತಕ್ಕೆ ಬರಬೇಕು: HD ಕುಮಾರಸ್ವಾಮಿ Read More »

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ: ಬಿ. ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿದ್ದು, ಕಾಂಗ್ರೆಸ್ ತನ್ನ ಯೋಜನೆಗಳನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದರೂ ಜನರಿಗೆ ತಲುಪುತ್ತಿರುವ ಪ್ರಯೋಜನ ಮಾತ್ರ ಕಡೆಮೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿರುವ ಅವರು ಆ ಗ್ಯಾರಂಟಿಗಳು ಈಗಾಗಲೇ ಪಂಚರ್ ಆಗಿವೆ. ಸರ್ಕಾರದ ಗ್ಯಾರಂಟಿಗಳು ಕೇವಲ ಪ್ರಚಾರಕ್ಕೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದು 1000 ದಿನಗಳಾಗಿದ್ದರೂ ಜನರನ್ನು ಕಾಯಿಸುವುದೇ ಕೈಲಾಸ ಎಂಬಂತೆ ವರ್ತಿಸುತ್ತಿದೆ ಎಂದು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ: ಬಿ. ವೈ. ವಿಜಯೇಂದ್ರ Read More »

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೆೊಂಡ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು

ತಿರುವನಂತಪುರಂ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 10 ತಿಂಗಳ ಮಗು ಅಲಿನ್‌ ಮೃತಪಟ್ಟಿದ್ದು, ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗುವಿನ ಪೋಷಕರು 5 ಜೀವಗಳನ್ನು ಉಳಿಸುವ ಮಹತ್ಕಾರ್ಯವನ್ನು ‌ತಮ್ಮ ನೋವಿನಲ್ಲೂ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅಲಿನ್ ಪೋಷಕರಾದ ಅರುಣ್ ಮತ್ತು ಶೆರಿನ್ ತಮ್ಮ ಮೃತ ಪುತ್ರಿಯ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಿದ್ದು, ಆ ಮೂಲಕ ಐದು ಜೀವಗಳನ್ನು ಉಳಿಸುವ ಮೂಲಕ ಅಲಿನ್‌ನ ನೆನಪುಗಳನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆ ಮೂಲಕ ಅಲಿನ್ ಅತ್ಯಂತ ಕಿರಿಯ

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೆೊಂಡ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು Read More »

ಕರ್ನಾಟಕದ ವಿದ್ಯಾರ್ಥಿ ಅಮೆರಿಕದಲ್ಲಿ ನಾಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಸಾಕೇತ್ ಶ್ರೀನಿವಾಸಯ್ಯ ನವದೆಹಲಿ: ಕರ್ನಾಟಕ ಮೂಲದ ವಿದ್ಯಾರ್ಥಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದು, ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಆತಂಕ ವ್ಯಕ್ತಪಡಿಸಿದೆ. 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಮತ್ತು ಭಾರತೀಯ ದೂತಾವಾಸ ಕಚೇರಿ ತುರ್ತು ಕ್ರಮ ಕೈಗೊಂಡಿವೆ. ಮಾಸ್ಟರ್ಸ್ ವಿದ್ಯಾರ್ಥಿಯಾಗಿರುವ ಸಾಕೇತ್ ಶ್ರೀನಿವಾಸಯ್ಯ ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೆಯಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಫೆ.10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೆ ನಗರದ ಡ್ವೈಟ್ ವೇ

ಕರ್ನಾಟಕದ ವಿದ್ಯಾರ್ಥಿ ಅಮೆರಿಕದಲ್ಲಿ ನಾಪತ್ತೆ Read More »

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ

ತುಮಕೂರು: ಬಿಸಿಯೂಟ ಸೇವಿಸಲು ಸರತಿ‌ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ನೂಕುನುಗ್ಗಲು ಸಂಭವಿಸಿದ್ದು, ಇದರಿಂದಾಗಿ ಒಂದನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾದ ಘಟನೆ ಗೂಳೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಚಿನ್ಮಯಿದೇವಿ ಎಂಬ ಮಗು ಈ ಘಟನೆಯಲ್ಲಿ ತನ್ನ ಕೈಯ ಎರಡು ಬೆರಳುಗಳನ್ನು ಕಳೆದುಕೊಂಡಿದೆ. ತಳ್ಳಾಟ ನೂಕಾಟದ ನಡುವೆ ತಾನು ಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕಿ ಕಬ್ಬಿಣದ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಹಿಂದಿದ್ದ ವಿದ್ಯಾರ್ಥಿಗಳು ಬಾಗಿಲನ್ನು ನೂಕಿದ್ದು,

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ Read More »

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ

ಬೆಂಗಳೂರು: ಮಹಾ ಶಿವರಾತ್ರಿಯ ಪ್ರಯುಕ್ತ ಫೆ. 15 ರಂದು ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, H.A.L. ಮೂರನೇ ಹಂತ, ಹೊಸ ತಿಪ್ಪೆಸಂದ್ರದಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ವರೆಗೆ 6 ನೇ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಫೆ. 14 ರಂದು 10.30 ಕ್ಕೆ ಉತ್ಸವ ಸ್ಥಳಕ್ಕೆ ಶಿವಲಿಂಗವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಫೆ. 15 ರ ಶಿವರಾತ್ರಿಯಂದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಮಹತೋಭಾರ ಶ್ರೀ

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ Read More »

ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ

ಹಾಸನ: ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಮೂಲದ ಫರ್ವೀಜ್, ಸುಹೇಲ್, ಅಬ್ದುಲ್ ಯಾಸಿನ್, ಇಬ್ರತ್ ಖಾನ್ ಮತ್ತು ಹಾಸನದ ಸೈಯದ್ ಯೂಸಫ್ ಎಂದು ಗುರುತಿಸಲಾಗಿದೆ. ಹಾಸನದ ರಾಜ್‌ಕುಮಾರ್ ರಸ್ತೆಯ ಚೆಕ್ ಪೋಸ್ಟ್ ಬಳಿಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ 40 ಗ್ರಾಂ ಗಳಷ್ಟು ಎಂಡಿಎಂಎ ಪತ್ತೆಯಾಗಿದೆ. ಪೊಲೀಸರು ಕರು ಮತ್ತು ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.

ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ Read More »

ಕಾಂಗ್ರೆಸ್‌ ಸರ್ಕಾರಕ್ಕೆ ಸಾವಿರ ದಿನದ ಸಂಭ್ರಮ

ಕಚ್ಚಾಟ, ವಿವಾದ, ಸಂಘರ್ಷದ ಸುಳಿಯಲ್ಲೇ ಕಳೆದು ಹೋದ ಸಾವಿರ ದಿನಗಳು ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿದೆ. 2023ರಲ್ಲಿ ಗ್ಯಾರಂಟಿ ಬಲದಿಂದ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಆರಂಭದ ದಿನದಿಂದಲೂ ಸಂಘರ್ಷದಲ್ಲೇ ಕಳೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಮೊದಲ ದಿನದಿಂದ ಶುರುವಾದ ಕುರ್ಚಿ ಕಿತ್ತಾಟ ಈಗಲೂ ಮುಂದುವರಿದಿದೆ ಮಾತ್ರವಲ್ಲದೆ ಸಾವಿರ ದಿನ ಪೂರೈಸುವ ಸಂದರ್ಭದಲ್ಲೇ ತಾರಕ್ಕೇರಿರುವುದು ಗಮನಾರ್ಹ. ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ತನ್ನ ಪಾತ್ರವೇ

ಕಾಂಗ್ರೆಸ್‌ ಸರ್ಕಾರಕ್ಕೆ ಸಾವಿರ ದಿನದ ಸಂಭ್ರಮ Read More »

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆ ವಿವಾದ : ಸಿಎಂ ಸ್ಪಷ್ಟನೆ

ಡಿಎಚ್‌ಒವನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ಪತ್ರದಿಂದ ಭಾರಿ ವಿವಾದ ಬೆಂಗಳೂರು : ಆರೋಗ್ಯ ಇಲಾಖೆ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾದ ಪತ್ರ ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೊಳಗಾಗಿದೆ. ಮೊದಲೇ ವರ್ಗಾವಣೆ ದಂಧೆಯ ಆರೋಪ ಮಾಡುತ್ತಿದ್ದ ಬಿಜೆಪಿಗೆ ಹೊಸ ಅಸ್ತ್ರವೇ ಸಿಕ್ಕಂತಾಗಿತ್ತು. ಈ ವಿಚಾರವಾಗಿ ಖದ್ದು ಸಿಎಂ ಸಿದ್ದರಾಮಯ್ಯ ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆ ವಿವಾದ : ಸಿಎಂ ಸ್ಪಷ್ಟನೆ Read More »

ಹೆತ್ತ ತಾಯಿಗೆ ಚಟ್ಟ ಕಟ್ಟಿದ ಮಗಳು ಈಗ ಪೊಲೀಸರ ಅತಿಥಿ

ತುಮಕೂರು: ಅಳಿಯ ಮತ್ತು ಮಗಳ ಜೊತೆಗೆ ವಾಸವಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರು ಹೃದಯಾಘಾತದಿಂದ ಸಾವನ್ನಪ್ಪಿಲ್ಲ ಬದಲಾಗಿ ಮಗಳೇ ಅವರನ್ನು ಹತ್ಯೆ ಮಾಡಿದ್ದಾಳೆ ಎನ್ನುವ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಸದ್ಯ ಆರೋಪಿ ಪುತ್ರಿ ಮತ್ತು ಆಕೆಯ ಪತಿ ಕ್ಯಾತಸಂದ್ರ ಪೊಲೀಸರ ವಶದಲ್ಲಿದ್ದಾರೆ. ಬಂಡೇಪಾಳ್ಯ ಸಮೀಪದ ಶ್ರೀನಗರದ ಪುಷ್ಪಲತಾ ಅವರೇ ಮೃತ ದುರ್ದೈವಿ. ಮಗಳು ಸುಚಿತ್ರಾಳೇ ತನ್ನ ಪತಿ ಸುರೇಶ್ ಸಹಾಯದೊಂದಿಗೆ ಹೆತ್ತ ಅಮ್ಮನನ್ನೇ ಕೊಂದ ಪಾಪಿ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಆರೇಪು ಸುಚಿತ್ರಾ ದೊಡ್ಡ ಕಥೆಯೊಂದನ್ನೇ

ಹೆತ್ತ ತಾಯಿಗೆ ಚಟ್ಟ ಕಟ್ಟಿದ ಮಗಳು ಈಗ ಪೊಲೀಸರ ಅತಿಥಿ Read More »

error: Content is protected !!
Scroll to Top