ರಾಜ್ಯ

ತೀವ್ರಗೊಂಡ ಸಿದ್ದರಾಮಯ್ಯ-ಡಿಕೆಶಿ ತಿಕ್ಕಾಟ : ಹೈಕಮಾಂಡ್‌ ತೇಪೆ ವ್ಯರ್ಥ

ಸಾಧನಾ ಸಮಾವೇಶದಲ್ಲಿ ಡಿಸಿಎಂಗೆ ಸಿಎಂ ನೇರ ಟಕ್ಕರ್‌ ಬೆಂಗಳೂರು: ಹೈಕಮಾಂಡ್‌ ಎಷ್ಟೇ ತೇಪೆ ಹಾಕಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಮೂಡಿರುವ ಬಿರುಕು ಮುಚ್ಚಿಕೊಳ್ಳುತ್ತಿಲ್ಲ ಎನ್ನುವುದು ನಿನ್ನೆ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಜಗಜ್ಜಾಹೀರಾಗಿದೆ. ಈ ಸಮಾವೇಶದಲ್ಲಿ ಡಿಕೆಶಿಗೆ ಸ್ವಾಗತ ಕೋರಲು ಸಿದ್ದರಾಮಯ್ಯ ನಿರಾಕರಿಸಿರುವುದು ಇದಕ್ಕೂ ಮೊದಲು ಡಿಕೆಶಿ ತನ್ನ ಭಾಷಣ ಮುಗಿಸಿ ಅರ್ಧದಲ್ಲೇ ನಿರ್ಗಮಿಸಿರುವುದು ಕಾಂಗ್ರೆಸ್‌ನೊಳಗೆ ಮತ್ತೊಂದು ಸುತ್ತಿನ ಒಳಜಗಳಕ್ಕೆ ದಾರಿ ಮಾಡಿಕೊಟ್ಟಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ಸಮಾವೇಶದಿಂದ ದಿಢೀರ್ ನಿರ್ಗಮಿಸಿದ ಡಿ.ಕೆ ಶಿವಕುಮಾರ್ […]

ತೀವ್ರಗೊಂಡ ಸಿದ್ದರಾಮಯ್ಯ-ಡಿಕೆಶಿ ತಿಕ್ಕಾಟ : ಹೈಕಮಾಂಡ್‌ ತೇಪೆ ವ್ಯರ್ಥ Read More »

ಡಿ ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ

ಸಾಧನಾ ಸಮಾವೇಶದಿಂದ ಮರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದ ವಾಹನ ಮೈಸೂರು: ನಗರದಲ್ಲಿ ನಡೆಯುತ್ತಿದ್ದ ಸಾಧನಾ ಸಮಾವೇಶ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ‌ನಲ್ಲಿ ಈ ಘಟನೆ ಸಂಭವಿಸಿದೆ. ಶ್ರೀರಂಗಪಟ್ಟಣದ ಗೌಡಹಳ್ಳಿ ಟಿಎಂ ಹೊಸೂರು ಸಮೀಪದ ಎಕ್ಸ್‌ಪ್ರೆಸ್ ವೇ ನಲ್ಲಿ ಈ ದುರಂತ ಸಂಭವಿಸಿದೆ. ಡಿವೈಡರ್‌ಗೆ ‌ಢಿಕ್ಕಿಯಾದ ಪರಿಣಾಮ ಆ ಅಪಘಾತ

ಡಿ ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ Read More »

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ. ವಿಭು ಭಕ್ರು

ಬೆಂಗಳೂರು: ನ್ಯಾ. ವಿಭು ಭಕ್ರು ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ‌ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ. ವಿಭು ಭಕ್ರು Read More »

ವರ್ಷಾಂತ್ಯಕ್ಕೆ ರಾಜ್ಯ ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆ: ಬಿ.ವೈ. ವಿಜಯೇಂದ್ರ

ಬೆಂಗಳೂರು: ಈ ವರ್ಷಾಂತ್ಯಕ್ಕೆ ರಾಜ್ಯದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಈಗೀಗಲೇ‌ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಸಮಾವೇಶ ಮಾಡುತ್ತಾರೆ. ಓಟ್‌ಬ್ಯಾಂಕ್ ಬಳಸಿಕೊಂಡು ಹೈಕಮಾಂಡ್‌ಗೆ ತನ್ನನ್ನು ಸಿಎಂ ‌ಸ್ಥಾನದಿಂದ ಕೆಳಗಿಳಿಸದ ಹಾಗೆ ಬೆದರಿಸುತ್ತಾರೆ ಎಂದು ಅವರು ನುಡಿದಿದ್ದಾರೆ. ಮುಂದೆ ನಡೆಯಲಿರುವ ಬಿಹಾರದ ಚುನಾವಣೆದೆ ಮೊದಲು ಅಥವಾ ನಂತರ, ಇಲ್ಲವೇ ಈ ವರ್ಷದ ಅಂತ್ಯಕ್ಕೆ ರಾಜ್ಯ ರಾಜಕೀಯದಲ್ಲಿ

ವರ್ಷಾಂತ್ಯಕ್ಕೆ ರಾಜ್ಯ ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆ: ಬಿ.ವೈ. ವಿಜಯೇಂದ್ರ Read More »

ಸುರ್ಜೇವಾಲ ಜೊತೆ ಚರ್ಚೆ: ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ: KPCC ಅಧ್ಯಕ್ಷರ ಆಯ್ಕೆಯ ನಿರ್ಧಾರ ಹೈಕಮಾಂಡ್‌ನದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೇವಾಲಾ ಅವರ ಜೊತೆಗೆ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಮಾತನಾಡಲಾಗಿದೆ. ಹಾಗೆಯೇ ಅಭಿವೃದ್ಧಿಗಾಗಿ ಪ್ರತಿ ಶಾಸಕರಿಗೆ ಮೀಸಲಿಡಲಾದ ಹಣದ ಬಗ್ಗೆ ಚರ್ಚೆ ನಡೆಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಕೆಪಿಸಿಸಿ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಹಾಗೆ ಯಾವ ಚರ್ಚೆ ಸಹ ನಡೆಸಿಲ್ಲ. ಅದೆಲ್ಲಾ ಹೈಕಮಾಂಡ್‌ಗೆ ಬಿಟ್ಟದ್ದು. RCB ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತಕ್ಕೆ

ಸುರ್ಜೇವಾಲ ಜೊತೆ ಚರ್ಚೆ: ಸತೀಶ್ ಜಾರಕಿಹೊಳಿ ಹೇಳಿದ್ದೇನು? Read More »

ಕನ್ನಡದ ಧ್ವಜಕ್ಕೆ ಅಧಿಕೃತ ಮಾನ್ಯತೆ : ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ಜ್ವಲಂತ ಸಮಸ್ಯೆಗಳಿಂದ ಗಮನ ತಿರುಗಿಸುವ ತಂತ್ರ ಎಂದು ಬಿಜೆಪಿ ಟೀಕೆ ಬೆಂಗಳೂರು : ಈಗಾಗಲೇ ಭಾಷೆಯ ವಿಚಾರವಾಗಿ ಹಲವು ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ಇದರ ನಡುವೆ ಕರ್ನಾಟಕ ಸರ್ಕಾರ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಆಗ್ರಹಿಸಿ ಕೇಂದ್ರದ ಎದುರು ಕೋರಿಕೆ ಮಂಡಿಸಿದೆ. ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017ರಲ್ಲೇ ಬಾವುಟ ಅಧಿಕೃತ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮನವಿ ಸಲ್ಲಿಸಿತ್ತು.

ಕನ್ನಡದ ಧ್ವಜಕ್ಕೆ ಅಧಿಕೃತ ಮಾನ್ಯತೆ : ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ Read More »

ಬಸ್‌ ಪಲ್ಟಿಯಾಗಿ 25ಕ್ಕೂ ಹೆಚ್ಚು ಟೆಕ್ಕಿಗಳಿಗೆ ಗಾಯ

ಕುದುರೆಮುಖಕ್ಕೆ ಪ್ರವಾಸ ಹೊರಟಿದ್ದ ಬಸ್‌ ಅಪಘಾತ ಚಿಕ್ಕಮಗಳೂರು: ಖಾಸಗಿ ಬಸ್ ಪಲ್ಟಿಯಾಗಿ 25ಕ್ಕೂ ಹೆಚ್ಚು ಟೆಕ್ಕಿಗಳು ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ದೇವನ ಗೂಲ್ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದೆ. ಖಾಸಗಿ ಕಂಪನಿ ನೌಕರರು ಬೆಂಗಳೂರಿನಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೀಕೆಂಡ್ ಹಿನ್ನೆಲೆ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿವ 40ಕ್ಕೂ ಹೆಚ್ಚು ಯುವಕ–ಯುವತಿಯರು ನೇತ್ರಾವತಿ ಪೀಕ್ ಟ್ರಕ್ಕಿಂಗ್‍ಗೆ ಹೊರಟಿದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 25ಕ್ಕೂ ಹೆಚ್ಚು

ಬಸ್‌ ಪಲ್ಟಿಯಾಗಿ 25ಕ್ಕೂ ಹೆಚ್ಚು ಟೆಕ್ಕಿಗಳಿಗೆ ಗಾಯ Read More »

ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ ಕರೆ

ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಿರುವ ಕುರಿತು ದೂರು ದಾಖಲು ಬೆಂಗಳೂರು: ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ. ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು, ಈ ಬಗ್ಗೆ ಅನಂತ ಕುಮಾರ್ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂನ್ 24ರಂದು ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು. ನ್ಯಾಯಾಲಯದ

ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ ಕರೆ Read More »

ಆ.11ರಿಂದ 22ರ ತನಕ ವಿಧಾನ ಮಂಡಲದ ಮುಂಗಾರು ಅಧಿವೇಶನ

ಬೆಂಗಳೂರು : ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11ರಿಂದ ಆರಂಭವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್ 11ರಿಂದ ಆ.22ರ ವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಆಗಸ್ಟ್ 11ರಂದು ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದು, ಒಟ್ಟು 12 ದಿನಗಳ ಪೈಕಿ 8 ದಿನ ಮಾತ್ರ ಅಧಿವೇಶನ ನಡೆಯಲಿದೆ. ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ

ಆ.11ರಿಂದ 22ರ ತನಕ ವಿಧಾನ ಮಂಡಲದ ಮುಂಗಾರು ಅಧಿವೇಶನ Read More »

ಕಾಂಗ್ರೆಸ್ ಹೈಕಮಾಂಡ್ ಅನ್ನು ಹೆದರಿಸಲು ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಾರೆ: ಬಿ.ವೈ. ವಿಜಯೇಂದ್ರ

ಸಿಎಂ ಕುರ್ಚಿ ಅಲ್ಲಾಡುವಾಗ ಸಮಾವೇಶ ಮಾಡುವ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ ಮೈಸೂರು: ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ತಿಳಿದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಬೆದರಿಸಲು ಸಮಾವೇಶಗಳ ಮೊರೆ ಹೋಗುತ್ತಾರೆ. ಅಂತಹ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ‌ಸಿದ್ದುಗೆ ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಮಯ ಕೊಟ್ಟಿಲ್ಲ. ಆದ್ದರಿಂದ ಕೈ ಹೈಕಮಾಂಡ್ ಅನ್ನು ಬೆದರಿಸಲು ಸಾಧನಾ

ಕಾಂಗ್ರೆಸ್ ಹೈಕಮಾಂಡ್ ಅನ್ನು ಹೆದರಿಸಲು ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಾರೆ: ಬಿ.ವೈ. ವಿಜಯೇಂದ್ರ Read More »

error: Content is protected !!
Scroll to Top