ರಾಜ್ಯ

ಧರ್ಮಸ್ಥಳ ಪ್ರಕರಣ : ಎಸ್‌ಐಟಿ ತನಿಖೆಗೆ ನ.12ರ ತನಕ ತಡೆ

ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್‌ ನೀಡಿದ ಹೈಕೋರ್ಟ್‌ ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಕೇಸ್ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್​ ತಾತ್ಕಾಲಿಕ ರಿಲೀಫ್​ ನೀಡಿದೆ. ಧರ್ಮಸ್ಥಳದ ಠಾಣೆಯ FIR 39/2025 ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಾಲನ್​, […]

ಧರ್ಮಸ್ಥಳ ಪ್ರಕರಣ : ಎಸ್‌ಐಟಿ ತನಿಖೆಗೆ ನ.12ರ ತನಕ ತಡೆ Read More »

ದೂರು ವಜಾಗೊಳಿಸಿ ಎಂದು ಹೈಕೋರ್ಟ್‌ಗೆ ಮೊರೆಯಿಟ್ಟ ಬುರುಡೆ ಗ್ಯಾಂಗ್‌ : ಇಂದು ಅರ್ಜಿ ವಿಚಾರಣೆ

ತಾವೇ ಹೋರಾಟ ಮಾಡಿ, ದುಂಬಾಲು ಬಿದ್ದು ಮಾಡಿಸಿದ್ದ ತನಿಖೆಯೇ ಬೇಡ ಎನ್ನುತ್ತಿರುವ ಹೋರಾಟಗಾರರು ಬೆಂಗಳೂರು : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿರುವ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ಅರ್ಜಿ ವಿಚಾರಣೆ ನಡೆಯಲಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್

ದೂರು ವಜಾಗೊಳಿಸಿ ಎಂದು ಹೈಕೋರ್ಟ್‌ಗೆ ಮೊರೆಯಿಟ್ಟ ಬುರುಡೆ ಗ್ಯಾಂಗ್‌ : ಇಂದು ಅರ್ಜಿ ವಿಚಾರಣೆ Read More »

ಬಿಹಾರ ಚುನಾವಣೆಗೆ ರಾಜ್ಯದಿಂದ 300 ಕೋ. ರೂ. ಕಪ್ಪ : ಶ್ರೀರಾಮುಲು ಆರೋಪ

ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಚಿವರಿಂದ ಹಣ ಸಂಗ್ರಹಸಿ ಕೊಟ್ಟಿದ್ದಾರೆಂದು ಆರೋಪ ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಹಣಕಾಸು ಒದಗಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸಚಿವರಿಂದ 300 ಕೋಟಿ ರೂ. ಸಂಗ್ರಹಿಸಿದ್ದಾರೆ. ಈ ಹಣ ಸಿದ್ದರಾಮಯ್ಯ ಕುರ್ಚಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾಗಿದೆ ಎಂದು ಎಂದು ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಭೋಜನ ಸಭೆಯಲ್ಲಿ ಈ ಮೊತ್ತವನ್ನು ಸಂಗ್ರಹಿಸಲಾಗಿದೆ

ಬಿಹಾರ ಚುನಾವಣೆಗೆ ರಾಜ್ಯದಿಂದ 300 ಕೋ. ರೂ. ಕಪ್ಪ : ಶ್ರೀರಾಮುಲು ಆರೋಪ Read More »

ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ : ಖಾದರ್‌ ತಿರುಗೇಟು

ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದರೆ ಕಚೇರಿಗೆ ಬಂದು ಮಾತನಾಡಿ ಎಂದು ಸವಾಲು ಮಂಗಳೂರು : ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಮಾಜಿ ಸ್ಪೀಕರ್​, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಂಗಳೂರು ಉತ್ತರದ ಶಾಸಕ ಡಾ.ಭರತ್‌ ಶೆಟ್ಟಿ ಅವರಿಗೆ ತಿರುಗೇಟು ನೀಡಿರುವ ವಿಧಾನಸಭೆ ಸ್ಪೀಕರ್​ ಯು.ಟಿ.ಖಾದರ್ ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ ಎಂದಿದ್ದಾರೆ. ನಿನ್ನೆಯಷ್ಟೇ ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಖಾದರ್‌ ಮಂಗಳೂರಿನಲ್ಲಿ ಆರೋಪಗಳಿಗೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ

ಬಿಜೆಪಿಯವರ ಅಸೂಯೆಗೆ ಮದ್ದಿಲ್ಲ : ಖಾದರ್‌ ತಿರುಗೇಟು Read More »

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವದ ಅಂಗವಾಗಿ ಮಾಣಿ ವಲಯದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಕಾಶ್ ಭಟ್ ರವರು ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿದರು. ವಲಯದ 7 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಜನಜಾಗೃತಿ ವಲಯಾಧ್ಯಕ್ಷ ರಾಜಾರಾಮ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಆಳ್ವ, ತನಿಯಪ್ಪಗೌಡ, ವೇಣು ಗೋಪಾಲ್, ಸುರೇಶ್ ಮುಕ್ಕುಡ

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ Read More »

ಸ್ಪೀಕರ್‌ ಯು.ಟಿ.ಖಾದರ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿ

ನವೀಕರಣ, ಪುಸ್ತಕ ಮೇಳದಲ್ಲಿ ಅವ್ಯವಹಾರ, ನಿಯಮ ಮೀರಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಆರೋಪ ಮಂಗಳೂರು: ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಮಂಗಳೂರಿನಲ್ಲಿ ನಿನ್ನೆ ಬಿಜೆಪಿ ಶಾಸಕ ಡಾಸ. ಭರತ್‌ ಶೆಟ್ಟಿ ಸುದ್ದಿಗೋಷ್ಠಿ ಕರೆದು ಸ್ಪೀಕರ್‌ ಕಚೇರಿ ನವೀಕರಣ ಮತ್ತಿತರ ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿದ್ದರು. ಅದೇ ರೀತಿ ಬೆಂಗಳೂರು ಮತ್ತಿತರೆಡೆಗಳಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಠಿಗಳಲ್ಲಿ ಖಾದರ್‌ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಖಾದರ್‌

ಸ್ಪೀಕರ್‌ ಯು.ಟಿ.ಖಾದರ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿ Read More »

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧ : ಹೈಕೋರ್ಟ್‌ ತಡೆಯಾಜ್ಞೆ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ

ಪಥಸಂಚಲನಕ್ಕೆ ಲಗಾಮು ಹಾಕಲು ಮುಂದಾಗಿದ್ದ ಸರ್ಕಾರಕ್ಕೆ ಕೋರ್ಟ್‌ ತೀರ್ಪಿನಿಂದ ಹಿನ್ನಡೆ ಬೆಂಗಳೂರು: ಆರ್‌ಎಸ್‌ಎಸ್‌ನ್ನು ಗುರಿಮಾಡಿಕೊಂಡು ಸರ್ಕಾರ ಜಾರಿಗೆ ತಂದಿದ್ದ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸುವ ನಿಯಮಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಪೀಠ ನೀಡರುವ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ, ತಡೆಯಾಜ್ಞೆ ತೆರವಿಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧ : ಹೈಕೋರ್ಟ್‌ ತಡೆಯಾಜ್ಞೆ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ Read More »

ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿ ಸೆರೆ

ಕಟ್ಟಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಭಗ್ನಪ್ರೇಮಿ ಯುವಕ ಬೆಂಗಳೂರು: ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿದ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಮಂಗಳವಾರ ಸಂಭವಿಸಿದೆ. ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಈ ಘಟನೆಯಲ್ಲಿ, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಗ್ನಗೊಳಿಸಿರುವ ಆರೋಪ ಕೇಳಿಬಂದಿದೆ. ಶಿಕ್ಷಕಿಯ

ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿ ಸೆರೆ Read More »

ಸಮಾಜ ಕಲ್ಯಾಣ ಇಲಾಖೆಯಲ್ಲಿ 125 ಕೋ. ರೂ. ಅವ್ಯವಹಾರ ಆರೋಪ

ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಬೆಂಗಳೂರು: ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್‌ನಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ನಡೆಯುತ್ತಿದೆ ಎಂದು ಇಲಾಖೆಯ ಸಚಿವ ಎಚ್‌.ಸಿ.ಮಹಾದೇವಪ್ಪ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಟೆಂಡರ್‌ನಲ್ಲಿ 125 ಕೋ.ರೂ. ಮೊತ್ತದ ಗೋಲ್ಮಾಲ್ ಆಗಿದೆ ಎನ್ನಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗ ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಬಿಡ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಅನರ್ಹ

ಸಮಾಜ ಕಲ್ಯಾಣ ಇಲಾಖೆಯಲ್ಲಿ 125 ಕೋ. ರೂ. ಅವ್ಯವಹಾರ ಆರೋಪ Read More »

ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ?

ಮಂಗಳೂರಿನಲ್ಲಿ ನೀಡಿದ ಹೇಳಿಕೆಯಿಂದ ಹೊಸ ಚರ್ಚೆ ಶುರು ಮಂಗಳೂರು: ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಪದೆಪದೇ ಹೇಳುತ್ತಿದ್ದ ಸಿದ್ದರಾಮಯ್ಯ ಸೋಮವಾರ ದಿಢೀರ್‌ ಎಂದು ವರಸೆ ಬದಲಿಸಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಊಹಾಪೂಹಗಳಿಗೆ ಕಾರಣವಾಗಿದೆ. ಕೊನೆಗೂ ಸಿಎಂ ಪಟ್ಟದ ಪಟ್ಟನ್ನು ಸಿದ್ದರಾಮಯ್ಯ ಸಡಿಲಿಸಿದರೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮದವರು 5 ವರ್ಷ ನೀವೇ ಸಿಎಂ ಆಗಿರುತ್ತೀರಾ ಎಂದು ಪ್ರಶ್ನಿಸಿದಾಗ, ‘ಹೈಕಮಾಂಡ್ ತೀರ್ಮಾನ ಮಾಡಿದರೆ 5 ವರ್ಷ

ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ? Read More »

error: Content is protected !!
Scroll to Top