ರಾಜ್ಯ

ನಟಿ ರಮ್ಯಾಗೆ ಅಸಭ್ಯ ಕಮೆಂಟ್‌ : 43 ಮಂದಿ ವಿರುದ್ಧ ಕೇಸ್‌

ಸೋಷಿಯಲ್‌ ಮೀಡಿಯಾದಲ್ಲಿ ರಮ್ಯಾ V/S ದರ್ಶನ್‌ ಅಭಿಮಾನಿಗಳ ಜಟಾಪಟಿ ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ನಟ ದರ್ಶನ್‌ ಅಭಿಮಾನಿಗಳ ನಡುವಿನ ಜಟಾಪಟಿ ತೀವ್ರಗೊಂಡಿದ್ದು, ನಟಿಗೆ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ದರ್ಶನ್ ಅವರ 43 ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ, ಮಹಿಳಾ ಆಯೋಗ […]

ನಟಿ ರಮ್ಯಾಗೆ ಅಸಭ್ಯ ಕಮೆಂಟ್‌ : 43 ಮಂದಿ ವಿರುದ್ಧ ಕೇಸ್‌ Read More »

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌ : ಆರು ಕಡೆ ಏಕಕಾಲದಲ್ಲಿ ದಾಳಿ

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದೆ. ಬೆಂಗಳೂರು ಸೇರಿದಂತೆ 4 ಜಿಲ್ಲೆಗಳಲ್ಲಿ ಆರು ಕಡೆ ದಾಳಿ ನಡೆಸಿದೆ. ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳ 6 ಕಡೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಸಿನಿಯರ್ ಅರ್ಟಿಕಲ್ಚರ್ ಡೈರೆಕ್ಟರ್ ಓಂ ಪ್ರಕಾಶ್‌, ರಾಷ್ಟ್ರೀಯ ಹೆದ್ದಾರಿ ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜ್ಯೂನಿಯರ್ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌ : ಆರು ಕಡೆ ಏಕಕಾಲದಲ್ಲಿ ದಾಳಿ Read More »

ಧರ್ಮಸ್ಥಳ ಪ್ರಕರಣ : ಇಂದೇ ಗುರುತಿಸಿದ ಸ್ಥಳಗಳ ಅಗೆತ ಕಾರ್ಯಾಚರಣೆ?

ಶವ ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿ ಸೋಮವಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿರುವ 13 ಸ್ಥಳಗಳನ್ನು ತೋರಿಸಿದ್ದಾನೆ. ಪೊಲೀಸರು ಈ 13 ಸ್ಥಳಗಳನ್ನು ನಂಬರ್ ನೀಡಿ ಗುರುತಿಸಿದ್ದಾರೆ. ಅದರ ಸುತ್ತ ಟೇಪ್ ಕಟ್ಟಲಾಗಿದ್ದು ಈ ಸ್ಥಳಗಳಲ್ಲಿ ರಾತ್ರಿ ಪೊಲೀಸ್ ಗಸ್ತನ್ನು ಏರ್ಪಡಿಸಲಾಗಿತ್ತು. ಮಂಗಳವಾರವೇ ಮೃತದೇಹಗಳನ್ನು ಹೂತು ಹಾಕಿದ ಸ್ಥಳಗಳಲ್ಲಿ ಅಗೆದು ಅವಶೇಷಗಳನ್ನು

ಧರ್ಮಸ್ಥಳ ಪ್ರಕರಣ : ಇಂದೇ ಗುರುತಿಸಿದ ಸ್ಥಳಗಳ ಅಗೆತ ಕಾರ್ಯಾಚರಣೆ? Read More »

ಮಲ್ಲಿಕಾರ್ಜುನ ಖರ್ಗೆಯವರ ಪುತ್ರನ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಖರ್ಗೆಯವರ ಪುತ್ರ ಮಿಲಿಂದ್ ಖರ್ಗೆ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಮಿಲಿಂದ್ ಖರ್ಗೆ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಿಲಿಂದ್ ಸಾರ್ವಜನಿಕವಾಗಿ

ಮಲ್ಲಿಕಾರ್ಜುನ ಖರ್ಗೆಯವರ ಪುತ್ರನ ಆರೋಗ್ಯ ಸ್ಥಿತಿ ಗಂಭೀರ Read More »

ಅಧಿಕಾರ ಹಂಚಿಕೆ ಆಗಲಿ : ಕಾಂಗ್ರೆಸ್‌ ಶಾಸಕ ಬಿ.ದೇವೇಂದ್ರಪ್ಪ

ಕಾಂಗ್ರೆಸ್‌ನಲ್ಲಿ ಮುಗಿಯದ ಕುರ್ಚಿ ಕಿತ್ತಾಟ ಬೆಂಗಳೂರು: ಹೈಕಮಾಂಡ್‌ಎಷ್ಟೇ ತೇಪೆ ಹಾಕಿದರೂ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಬೇಗುದಿ ಶಮನವಾಗುತ್ತಿಲ್ಲ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಾಕಷ್ಟು ಚರ್ಚೆ ಮತ್ತು ತೀವ್ರ ಕುತೂಹಲ ಮೂಡಿಸುತ್ತಿವೆ. ಐದು ವರ್ಷ ನಾನೇ ಸಿಎಂ ಎಂದಿರುವ ಸಿದ್ದರಾಮಯ್ಯ ಪದೇಪದೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೇಗುಲಗಳಿಗೆ ಸರಣಿ ಭೇಟಿ ನೀಡಿ ಪೂಜೆ, ಹೋಮ ಮಾಡಿಸುತ್ತಿದ್ದಾರೆ. ಈದರ ಮಧ್ಯೆ ಸಿಎಂ ಮತ್ತು ಡಿಸಿಎಂ ನಡುವೆ ಒಪ್ಪಂದ ಆಗಿದ್ದರೆ ಅಧಿಕಾರ ಹಂಚಿಕೆ ಆಗಲಿ ಎಂದು

ಅಧಿಕಾರ ಹಂಚಿಕೆ ಆಗಲಿ : ಕಾಂಗ್ರೆಸ್‌ ಶಾಸಕ ಬಿ.ದೇವೇಂದ್ರಪ್ಪ Read More »

ಧರ್ಮಸ್ಥಳ ಪ್ರಕರಣ : ದೂರು ನೀಡಿದ ವ್ಯಕ್ತಿ ಎಸ್‌ಐಟಿ ಎದುರು ಹಾಜರು?

ಮಂಗಳೂರಿನಲ್ಲಿ ಪೊಲೀಸ್‌ ವಿಚಾರಣೆಗೆ ಹಾಜರಾದ ಶವ ಹೂತಿಟ್ಟಿದ್ದೇನೆ ಎಂದ ವ್ಯಕ್ತಿ ಮಂಗಳೂರು : ಧರ್ಮಸ್ಥಳದಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಿದ್ದ ವ್ಯಕ್ತಿ ಇಂದು ಮಂಗಳೂರಿನಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಎದುರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಶವ ಹೂತಿಟ್ಟ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಶುಕ್ರವಾರದಿಂದ ತನಿಖೆ ಪ್ರಾರಂಭಿಸಿದೆ. ನಿನ್ನೆ ದೂರಿನ ಕಡತಗಳ ಪರಿಶೀಲನೆ ನಡೆದಿದ್ದು, ಇಂದು ದೂರುದಾರನ ವಿಚಾರಣೆ ನಡೆಯುತ್ತಿದೆ ಎಂದು

ಧರ್ಮಸ್ಥಳ ಪ್ರಕರಣ : ದೂರು ನೀಡಿದ ವ್ಯಕ್ತಿ ಎಸ್‌ಐಟಿ ಎದುರು ಹಾಜರು? Read More »

ಹಿಂದೂ ಮಠದಲ್ಲಿ ಮುಸ್ಲಿಂ ಮಹಿಳೆಯ ಧ್ಯಾನ

ಮಾನಸಿಕ ನೆಮ್ಮದಿಗಾಗಿ 11 ದಿನಗಳ ಧ್ಯಾನ ವ್ರತ ಬೆಂಗಳೂರು: ಕೊಪ್ಪಳದ ಪ್ರಸಿದ್ಧ ಗವಿಮಠದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಳೆದ ಎಂಟು ದಿನಗಳಿಂದ ಧ್ಯಾನಕ್ಕೆ ಮಾಡುತ್ತಿವುದು ಈ ಭಾಗದಲ್ಲಿ ಅಚ್ಚರಿಗೆ ಕಾರಣವಾಗಿದೆ. ಎಂಟು ದಿಗಳಿಂದ ನಿತ್ಯ ಮಠಕ್ಕೆ ಬರುತ್ತಿರುವ ಮಹಿಳೆ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಎಂಬಲ್ಲಿನ ನಿವಾಸಿ ಹಸೀನಾ ಬೇಗಂ ಎಂಬ ಮಹಿಳೆ ಗವಿ ಮಠದಲ್ಲಿ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಮಠಕ್ಕೆ ಬರುವವರಲ್ಲಿ ಮುಸ್ಲಿಂ ಭಕ್ತರೂ ಇದ್ದಾರೆ.

ಹಿಂದೂ ಮಠದಲ್ಲಿ ಮುಸ್ಲಿಂ ಮಹಿಳೆಯ ಧ್ಯಾನ Read More »

ಧರ್ಮಸ್ಥಳ ಪ್ರಕರಣ : ತನಿಖೆ ಅಧಿಕೃತವಾಗಿ ಆರಂಭ

ಧರ್ಮಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ : ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವ ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತಂಡದ ಅಧಿಕಾರಿಗಳು ಶುಕ್ರವಾರ ಧರ್ಮಸ್ಥಳ ಠಾಣೆಯಿಂದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ಪ್ರಕರಣದ ಎಸ್‌ಐಟಿ ತನಿಖೆ ಅಧಿಕೃತವಾಗಿ ಪ್ರಾರಂಭವಾದಂತಾಗಿದೆ. ಎಸ್‌ಐಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಧರ್ಮಸ್ಥಳ ಠಾಣೆಗೆ ಆಗಮಿಸಿದ್ದರು.ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್

ಧರ್ಮಸ್ಥಳ ಪ್ರಕರಣ : ತನಿಖೆ ಅಧಿಕೃತವಾಗಿ ಆರಂಭ Read More »

ಮಂಗಳೂರು ಸೆಂಟ್ರಲ್‌ – ಶ್ರೀ ಮಾತಾ ವೈಷ್ಣೋದೇವಿ ಕತ್ರಾಗೆ ನೇರ ರೈಲು ಸೇವೆ: ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ಕರಾವಳಿ ಕರ್ನಾಟಕ ಪ್ರದೇಶದ ದೀರ್ಘಕಾಲದ ಬೇಡಿಕೆಯಾದ ಮಂಗಳೂರು ಸೆಂಟ್ರಲ್ (MAQ) ನಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ (SVDK) ಗೆ ನೇರ ಮತ್ತು ಸಮಯ ದಕ್ಷ ರೈಲು ಸೇವೆಯನ್ನು ಒದಗಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮನವಿ ಮಾಡಿದ್ದಾರೆ. ಕೆಲ ವಾರಗಳ ಹಿಂದೆ ಹಲವರು ನವಯುಗ ಎಕ್ಸ್‌ಪ್ರೆಸ್ ಪುನರಾರಂಭ ಮಾಡಿ, ಇದನ್ನು ಹಾಸನ, ಹುಬ್ಬಳ್ಳಿ – ಮೀರಜ್ ಮಾರ್ಗವಾಗಿ ದೆಹಲಿಗೆ ಸಂಪರ್ಕಿಸುವಂತೆ ಕೋರಿ

ಮಂಗಳೂರು ಸೆಂಟ್ರಲ್‌ – ಶ್ರೀ ಮಾತಾ ವೈಷ್ಣೋದೇವಿ ಕತ್ರಾಗೆ ನೇರ ರೈಲು ಸೇವೆ: ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಕಿಶೋರ್ ಕುಮಾರ್ ಪುತ್ತೂರು Read More »

ಧರ್ಮಸ್ಥಳ ಪ್ರಕರಣ: SIT ಅಧಿಕಾರಿಗಳಿಗೆ ಬೆಳ್ತಂಗಡಿಯಲ್ಲಿ ಕಚೇರಿ ಆರಂಭ?

ಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿರುವ ಧರ್ಮಸ್ಥಳದಲ್ಲಿ ನಡೆದ ನೂರಾರು ಅಸಹಜ ಸಾವು ಪ್ರಕರಣಕ್ಕೆ ‌ಸಂಬಂಧಿಸಿದಂತೆ ರಚಿಸಲಾದ SIT ಅಧಿಕಾರಿಗಳ ತಂಡಕ್ಕೆ ಬೆಳ್ತಂಗಡಿಯಲ್ಲಿ ಕಚೇರಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ. ಅಸಹಜವಾಗಿ ಮೃತಪಟ್ಟವರ ಹೆಣಗಳನ್ನು ಹೂಳಲಾಗಿದೆ ಎಂಬ ಬಹುದೊಡ್ಡ ಆರೋಪದಲ್ಲಿ ದಾಖಲಾದ ಪ್ರಕರಣ ಇದಾಗಿದೆ. ಈ ಪ್ರಕರಣದ ತನಿಖೆ ನಡೆಸಲಿರುವ SIT ಅಧಿಕಾರಿಗಳು ಇಂದು ಧರ್ಮಸ್ಥಳಕ್ಕೆ ತೆರಳುತ್ತಿದೆ ಎಂದು ಹೇಳಲಾಗಿದೆ. SIT ಅಧಿಕಾರಿಗಳಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ನೂತನವಾಗಿ ನಿರ್ಮಾಣವಾದ ಪೊಲೀಸ್ ಕ್ವಾಟ್ರಸ್‌ನಲ್ಲಿ ಕಚೇರಿ ಆರಂಭವಾಗಲಿದೆ ಎಂದು ವರದಿಗಳು ಹೇಳಿವೆ.

ಧರ್ಮಸ್ಥಳ ಪ್ರಕರಣ: SIT ಅಧಿಕಾರಿಗಳಿಗೆ ಬೆಳ್ತಂಗಡಿಯಲ್ಲಿ ಕಚೇರಿ ಆರಂಭ? Read More »

error: Content is protected !!
Scroll to Top