ರಾಜ್ಯ

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು!

ಎಎಸ್‌ಐ ಸಹಿತ ಐವರು ಅಮಾನತು ಬೆಂಗಳೂರು: ಜೂಜಾಡುವವರನ್ನು ಹಿಡಿದು ತಂದು ರುಬ್ಬಿ ಪಾಠ ಕಲಿಸಬೇಕಾದ ಪೊಲೀಸರು ತಾವೇ ಠಾಣೆಯಲ್ಲಿ ಯೂನಿಫಾರ್ಮ್‌ ಧರಿಸಿಕೊಂಡು ಜೂಜಾಡಿದರೆ ಹೇಗೆ? ಇಂಥ ಒಂದು ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೊಲೀಸ್‌ ಠಾಣೆಯಲ್ಲಿ ಸಂಭವಿಸಿದೆ. ಜೂಜಾಡಿದ ಐವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಎಸ್​ಐ ಮಹಿಮೂದ್ ಮಿಯಾ, ಹೆಡ್​ಕಾನ್ಸ್‌ಟೆಬಲ್‌ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್‌ಸ್ಟೆಬಲ್‌ ನಾಗಭೂಷಣ್ […]

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು! Read More »

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು

ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಇನ್ನೋರ್ವ ಸಚಿವರಿಂದ ಪ್ರಯತ್ನ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು ಕೇಳಿಸಲಾರಂಭಿಸಿದೆ. ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ತುಮಕೂರು ಕಡೆಯ ಸಚಿವರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಿ ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಈ ಹನಿಟ್ರ್ಯಾಪ್‌ ಜಾಲ ಹೆಣೆದಿರುವುದು ಕಾಂಗ್ರೆಸಿನವರೇ ಆದ ಇನ್ನೊಬ್ಬ ಪ್ರಭಾವಿ ಸಚಿವರು ಎಂಬ ವದಂತಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ. ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಮಾಡಿ ಸಿಕ್ಕಿಬಿದ್ದರುವ ನಟಿ ರನ್ಯಾ ರಾವ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಅಕುಲ ಅನುರಾಧ ಎಂಬವರು ಯತ್ನಾಳ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಯತ್ನಾಳ್‌ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಬಿಎನ್‌ಎಸ್‌ ಸೆಕ್ಷನ್‌ 79 ಅಡಿ ಎಫ್‌ಐಆರ್‌ ದಾಖಲಾಗಿದೆ.ಆಕೆ ದೇಹದಾದ್ಯಂತ ಚಿನ್ನವನ್ನು ಹೊಂದಿದ್ದಳು, ರಂಧ್ರಗಳನ್ನು ಹೊಂದಿರುವಲ್ಲೆಲ್ಲಾ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌ Read More »

ಮತ್ತೆ ಮುನ್ನೆಲೆಗೆ ಬಂದ ಸೌಜನ್ಯಾ ಪ್ರಕರಣ : 14 ವರ್ಷವಾದರೂ ತಗ್ಗದ ಕಾವು

ಹೋರಾಟಗಾರರ ಸಭೆಗೆ ಮತ್ತೊಮ್ಮೆ ಅನುಮತಿ ನಿರಾಕರಿಸಿದ ಪೊಲೀಸರು ಮಂಗಳೂರು : ಕೆಲ ಸಮಯದಿಂದ ತಣ್ಣಗಾದಂತೆ ಕಾಣಿಸುತ್ತಿದ್ದ ಸೌಜನ್ಯಾ ಪರ ಹೋರಾಟ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಮೀರ್‌ ಎಂ.ಡಿ. ಎಂಬ ಯೂಟ್ಯೂಬರ್‌ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಹೇಳಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ಮಾಡಿದ ವೀಡಿಯೊದಿಂದಾಗಿ ಮತ್ತೆ ಸೌಜನ್ಯಾ ಪ್ರಕರಣ ಜೀವ ಪಡೆದುಕೊಂಡಿದೆ.39 ನಿಮಿಷ 8 ಸೆಕೆಂಡುಗಳ ಈ ವೀಡಿಯೊ ಆರಂಭದಲ್ಲಿ ಸಮೀರ್‌ನ ಚಾನೆಲ್‌ನಲ್ಲಿ ಮಾತ್ರ ಇತ್ತು ಹಾಗೂ ಮೊದಲ ನಾಲ್ಕು

ಮತ್ತೆ ಮುನ್ನೆಲೆಗೆ ಬಂದ ಸೌಜನ್ಯಾ ಪ್ರಕರಣ : 14 ವರ್ಷವಾದರೂ ತಗ್ಗದ ಕಾವು Read More »

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ

ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ಉಯಿಲು ರದ್ದುಪಡಿಸಲು ಆದೇಶ ಬೆಂಗಳೂರು : ವಯಸ್ಸಾದ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಅವರ ಆಸ್ತಿ ಮಕ್ಕಳಿಗೆ ಸಿಗಲ್ಲ. ಹೀಗೊಂದು ಆದೇಶವನ್ನು ಕರ್ನಾಟಕ ಸರಕಾರ ನೀಡಿದೆ. ವಯಸ್ಸಾದ ತಂದೆ ತಾಯಿಯನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗಳಿಗೆ ತಂದು ದಾಖಲಿಸಿ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕರಾರ ಈ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಇಂಥ 150ಕ್ಕೂ ಹೆಚ್ಚು ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿದ್ದವು. ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಭಾರತೀಯ

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ Read More »

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು

ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ ಬೃಹತ್‌ ಡ್ರಗ್ಸ್‌ ಜಾಲದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿರುವ ರಾಜ್ಯದ ಅತಿದೊಡ್ಡ ಡ್ರಗ್ಸ್ ಜಾಲದ ಹಲವು ಮಾಹಿತಿಗಳು ಬೆಚ್ಚಿಬೀಳಿಸುವಂತಿದೆ. ದಾಖಲೆಯ 75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜೊತೆ ಸಿಕ್ಕಿಬಿದ್ದಿರುವ ಇಬ್ಬರು ವಿದೇಶಿ ಮಹಿಳೆಯರು ಈ ಮೊದಲು ಒಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 59 ಸಲ ಡ್ರಗ್ಸ್‌ ಸಾಗಿಸಿದ್ದರೂ ಸಿಕ್ಕಿಬೀಳದೆ ಪಾರಾಗಿದ್ದರು. ಆದರೆ ಅದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯೊಂದು ಕಾಡುತ್ತಿದೆ. ರನ್ಯಾ ರಾವ್‌

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು Read More »

ಇಂದು ಬಹಿರಂಗವಾಗಲಿದೆ ಗೋಲ್ಡ್‌ ಸ್ಮಗ್ಲಿಂಗ್‌ನಲ್ಲಿ ಶಾಮೀಲಾಗಿರುವ ಸಚಿವರ ಹೆಸರು

ಯತ್ನಾಳ್‌ ಹೇಳಿಕೆಯಿಂದ ಇಡೀ ದೇಶದ ಗಮನ ಇಂದಿನ ಕಲಾಪದತ್ತ ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಸಚಿವರ ಹೆಸರನ್ನು ಸೋಮವಾರ ಸದನದಲ್ಲೇ ಹೇಳುವುದಾಗಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿರುವುದು ಭಾರಿ ಕುತೂಹಲ ಹುಟ್ಟಿಸಿದೆ.ವಿಜಯಪುರದಲ್ಲಿ ಭಾನುವಾರ ಈ ವಿಚಾರವಾಗಿ ಮಾತನಾಡಿರುವ ಅವರು, ರನ್ಯಾ ರಾವ್‌ಗೆ ಪ್ರೊಟೊಕಾಲ್ ನೀಡಿದವರ ಮಾಹಿತಿ ಸಂಗ್ರಹಿಸಲಾಗಿದೆ. ಚಿನ್ನ ಎಲ್ಲಿಂದ ತಂದರು, ಎಲ್ಲಿಟ್ಟು ತಂದರು ಎಂಬುದು ಗೊತ್ತಿದೆ. ಸೋಮವಾರ ವಿಧಾನಸಭೆಯಲ್ಲಿ ಸಚಿವರ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಇಂದು ಬಹಿರಂಗವಾಗಲಿದೆ ಗೋಲ್ಡ್‌ ಸ್ಮಗ್ಲಿಂಗ್‌ನಲ್ಲಿ ಶಾಮೀಲಾಗಿರುವ ಸಚಿವರ ಹೆಸರು Read More »

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ

ಬೆಂಗಳೂರಿನಲ್ಲಿ ಮಂಗಳೂರು ಪೊಲೀಸರ ಕಾರ್ಯಾಚರಣೆ ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್​ ವಶಪಡಿಸಿಕೊಂಡು ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ ಡ್ರಗ್ಸ್ ವಶ ಕಾರ್ಯಾಚರಣೆ ಎನ್ನಲಾಗಿದೆ. ಸಿಸಿಬಿ ಪೊಲೀಸರು ಕಳೆದ ಐದು ತಿಂಗಳಿಂದ ಈ ಡ್ರಗ್ಸ್‌ ಜಾಲದ ಬೆನ್ನುಹತ್ತಿದ್ದರು.ಎಂಡಿಎಂಎ ಡ್ರಗ್ಸ್ ದೆಹಲಿಯ ಲ್ಯಾಬ್​ನಲ್ಲಿ ನಿತ್ಯ ತಯಾರಾಗುತ್ತಿತ್ತು. ವಾರಕ್ಕೊಮ್ಮೆ ಬೆಂಗಳೂರಿಗೆ ವಿಮಾನದಲ್ಲಿ ಮೂಟೆಗಟ್ಟಲೆ ಬರುತ್ತಿತ್ತು. ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ

75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಮಹಿಳೆಯರ ಬಂಧನ Read More »

ಬಹುಭಾಷಾ ಪಂಡಿತ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ

ಬಹುಭಾಷಾ ಪಂಡಿತ, ಕನ್ನಡದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ (92) ನಿಧನರಾಗಿದ್ದಾರೆ. ಧಾರವಾಡದ ಜಯನಗರ ನಿವಾಸಿ ಹಾಗೂ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾದ್ಯಾಪಕರಾಗಿದರು. ಪಂಚಾಕ್ಷರಿ ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಕನ್ನಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರು 19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ

ಬಹುಭಾಷಾ ಪಂಡಿತ, ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ನಿಧನ Read More »

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ

ನಶೆ ಏರಿದ ಬಳಿಕ ರಾಡ್‌, ದೊಣ್ಣೆಯಿಂದ ಬಡಿದಾಡಿಕೊಂಡ ಸ್ನೇಹಿತರು ಬೆಂಗಳೂರು: ಹೋಳಿ ಗಮ್ಮತ್ತಿನಲ್ಲಿ ಕಂಠಮಟ್ಟ ಶರಾಬು ಕುಡಿದು ನಶೆ ತಲೆಗೇರಿಸಿಕೊಂಡಿದ್ದ ಬಿಹಾರ ಮೂಲದ ಆರು ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಫೋರ್‌ವಾಲ್ ಅವೆನ್ಯೂ ಅಪಾರ್ಟ್​ಮೆಂಟ್​ನ​ 3ನೇ ಮಹಡಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಇಬ್ಬರನ್ನು ಅನ್ಸು(19) ಮತ್ತು ರಾಧೆ ಶ್ಯಾಮ್(20) ಎಂದು

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ Read More »

error: Content is protected !!
Scroll to Top