ರಾಜ್ಯ

ಹಿಜಾಬ್‌ ವಿವಾದ ಕಾರಣ: ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ತಡೆ

ಸರಕಾರದ ಕ್ರಮಕ್ಕೆ ಭಾರಿ ಆಕ್ರೋಶ ಉಡುಪಿ: ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಘೋಷಿಸಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ಕೊನೇ ಕ್ಷಣದಲ್ಲಿ ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ತಡೆಹಿಡಿದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿವಿಧ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಸರಕಾರ ಅವರ ಪ್ರಶಸ್ತಿಯನ್ನು ತಡೆಹಿಡಿದಿದೆ. ಇದಕ್ಕೆ ಕಾರಣ ಎರಡು […]

ಹಿಜಾಬ್‌ ವಿವಾದ ಕಾರಣ: ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ತಡೆ Read More »

ಗಣೇಶೋತ್ಸವಕ್ಕೆ ಬರುವ ಅತಿಥಿಗಳ ಮೊಬೈಲ್‌ ನಂಬರ್‌ ನೀಡುವ ನಿಯಮಕ್ಕೆ ವೇದವ್ಯಾಸ ಕಾಮತ್‌ ಕಿಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಚಿತ್ರವಿಚಿತ್ರ ನಿಯಮ ಹೇರಿದ್ದಾರೆ ಎಂದು ಆರೋಪ ಮಂಗಳೂರು: ರಾಜ್ಯ ಸರಕಾರ ವಿಘ್ನ ವಿನಾಯಕನಿಗೆ ಈಗ ವಿಘ್ನ ತಂದಿರಿಸಿದೆ. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಿದರೆ ಚಿತ್ರವಿಚಿತ್ರ ನಿಯಮ ಹೇರಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ನೀಡಲು ಹೇಳಲಾಗುತ್ತಿದೆ. ಅವರ ವಿಳಾಸ ನೀಡಬೇಕು, ಭಾಗವಹಿಸುವ ಟ್ಯಾಬ್ಲೊಗಳ ತಂಡ ಯಾವುದು ಎಂದು ಸೂಚಿಸಬೇಕು. ಯಾವ ವಾಹನದಲ್ಲಿ ಬರುತ್ತಾರೆ, ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂದು ಅರ್ಥವಿಲ್ಲದ ಸೂಚನೆಗಳನ್ನು ಸರ್ಕಾರ

ಗಣೇಶೋತ್ಸವಕ್ಕೆ ಬರುವ ಅತಿಥಿಗಳ ಮೊಬೈಲ್‌ ನಂಬರ್‌ ನೀಡುವ ನಿಯಮಕ್ಕೆ ವೇದವ್ಯಾಸ ಕಾಮತ್‌ ಕಿಡಿ Read More »

ಕೊಲೆ ಪ್ರಕರಣ : ದರ್ಶನ್‌ ವಿರುದ್ಧ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಪವಿತ್ರಾ ಎ1, ದರ್ಶನ್‌ ಎ2 ಆರೋಪಿ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಕೋರ್ಟ್‌ಗೆ ಪೊಲೀಸರು ಇಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 24ನೇ ಎಸಿಎಂಎಂ ಕೋರ್ಟ್‌ಗೆ ಸುಮಾರು 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಇಂದು ಬೆಳಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಮೊದಲು ಎಫ್​ಐಆರ್​ ಹಾಕುವಾಗ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ

ಕೊಲೆ ಪ್ರಕರಣ : ದರ್ಶನ್‌ ವಿರುದ್ಧ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ Read More »

ಶಾಲೆಯ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ : ಛಲವಾದಿ ವಿರುದ್ಧ ಕಾಂಗ್ರೆಸ್‌ ಆರೋಪ

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಭೂ ಹಗರಣಗಳನ್ನು ಬಯಲು ಮಾಡಿ ದಾಳಿ ನಡೆಸುತ್ತಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮೇಲೆ ಕಾಂಗ್ರೆಸ್‌ ಮುಗಿಬಿದ್ದಿದೆ. ಛಲವಾದಿ ನಾರಾಯಣ ಸ್ವಾಮಿ ಶಾಲೆಗೆಂದು ಪಡೆದುಕೊಂಡ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ ಪ್ರಾರರಂಭಿಸಿದ್ದಾರೆ ಎಂದು ನಿನ್ನೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ದೂರು ನೀಡಿ ವಿಧಾನಪರಿಷತ್‌ ಸದಸ್ಯ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿದ್ದಾರೆ.ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ನೇತೃತ್ವದಲ್ಲಿ ಕಾಂಗ್ರೆಸ್‌‍ ನಾಯಕರು ಮಂಗಳವಾರ

ಶಾಲೆಯ ಸೈಟ್‌ನಲ್ಲಿ ದಮ್‌ ಬಿರಿಯಾನಿ ಹೋಟೆಲ್‌ : ಛಲವಾದಿ ವಿರುದ್ಧ ಕಾಂಗ್ರೆಸ್‌ ಆರೋಪ Read More »

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ಬಿಜೆಪಿ ಮಾಜಿ ಸಚಿವ, ಹಾಲಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸುರೇಶ್‌ ಕುಮಾರ್‌ ಅವಋ ಮೆದುಳಿಗೆ ಜ್ವರ ತಗುಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಸೈಕಲ್ ಪ್ರಯಾಣ ಬೆಳೆಸಿದ್ದ ಸುರೇಶ್‌ಕುಮಾರ್‌ ಬಳಿಕ ದೋಸ್ತಿ ಪಾದಯಾತ್ರೆಯಲ್ಲೂ ಒಂದು ದಿನ ಭಾಗಿ ಆಗಿದ್ದರು. ಕಳೆದ 3-4 ದಿನಗಳ

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ Read More »

ಮುಡಾ ಹಗರಣ : ಅಮಾನತು ಆದೇಶವೇ ಸಿಎಂಗೆ ಮುಳ್ಳಾಗುತ್ತಾ?

ಸೈಟ್‌ಗೆ ಸಂಬಂಧಪಟ್ಟ ಆದೇಶದಲ್ಲೇ ಸತ್ಯ ಬಹಿರಂಗ ಬೆಂಗಳೂರು: ತನ್ನನ್ನು ಸುತ್ತಿಕೊಂಡಿರುವ ಮುಡಾ ಭೂ ಹಗರಣದಿಂದ ಪಾರಾಗುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೊಂದು ತಂತ್ರಗಾರಿಕೆ ಮಾಡುತ್ತಿದ್ದಾರೆ. ಅದರಂತೆ ನಿನ್ನೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಿಂದಿನ‌ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಆದರೆ ಈ ಅಮಾನತು ಆದೇಶದಲ್ಲೇ ಸರ್ಕಾರ ಹಲವು ಸತ್ಯಗಳನ್ನು ಬಿಚ್ಚಿಟ್ಟಿದೆ. ಸರ್ಕಾರದ ಅಮಾನತು ಆದೇಶದ ಅಂಶಗಳೇ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2001ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರ

ಮುಡಾ ಹಗರಣ : ಅಮಾನತು ಆದೇಶವೇ ಸಿಎಂಗೆ ಮುಳ್ಳಾಗುತ್ತಾ? Read More »

ಖರ್ಗೆ ಕುಟುಂಬದ ಟ್ರಸ್ಟ್‌ಗೆ 19 ಎಕರೆ ಭೂಮಿ ಉಚಿತ ಕೊಡುಗೆ : ಲೆಹರ್ ಸಿಂಗ್ ಇನ್ನೊಂದು ಬಾಂಬ್‌

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮತ್ತೊಂದು ಭೂ ಹಗರಣ ಸುತ್ತಿಕೊಂಡಿದೆ. ಖರ್ಗೆ ಕುಟುಂಬದ ವಿರುದ್ಧ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದ್ದು, ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಸಂಸ್ಥೆಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ಮಾಡಿದ್ದಾರೆ. ಸಿದ್ಧಾರ್ಥ ವಿಹಾರ ಟ್ರಸ್ಟ್ ನಡೆಸುತ್ತಿರುವ ಕಲಬುರಗಿಯ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್‌ಗೆ 19 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತಿವೆ. ಈ

ಖರ್ಗೆ ಕುಟುಂಬದ ಟ್ರಸ್ಟ್‌ಗೆ 19 ಎಕರೆ ಭೂಮಿ ಉಚಿತ ಕೊಡುಗೆ : ಲೆಹರ್ ಸಿಂಗ್ ಇನ್ನೊಂದು ಬಾಂಬ್‌ Read More »

ಸಿಎಂ ಸೋಷಿಯಲ್‌ ಮೀಡಿಯಾ ಖರ್ಚು ತಿಂಗಳಿಗೆ 54 ಲ.ರೂ.

ಇದು ಬಹಳ ಕಡಿಮೆ ಮೊತ್ತ ಎಂದ ಸಿಎಂಒ ಕಚೇರಿ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಸುಮಾರು 54 ಲಕ್ಷ ರೂಪಾಯಿ, ಅಂದರೆ ವರ್ಷಕ್ಕೆ ಸುಮಾರು 6.5 ಕೋ. ರೂ. ಖರ್ಚು ಮಾಡಲಾಗುತ್ತದೆ ಎಂಬುದು ಆರ್‌ಟಿಐ ಕಾರ್ಯಕರ್ತರು ಸಲ್ಲಿಸಿದ ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವಾಗ ಮುಖ್ಯಮಂತ್ರಿ ಕಚೇರಿ ಇಷ್ಟೊಂದು ಮೊತ್ತದ ಹಣವನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಆರ್​ಟಿಐ ಕಾರ್ಯಕರ್ತರು ಆಕ್ಷೇಪ

ಸಿಎಂ ಸೋಷಿಯಲ್‌ ಮೀಡಿಯಾ ಖರ್ಚು ತಿಂಗಳಿಗೆ 54 ಲ.ರೂ. Read More »

ಸೆ.6ರಂದು ಎತ್ತಿನಹೊಳೆ ಯೋಜನೆ ಲೋಕಾರ್ಪಣೆ

ನೇತ್ರಾವತಿ ನದಿ ತಿರುಗಿಸುವ ಬೃಹತ್‌ ಯೋಜನೆಗೆ ಕರಾವಳಿಯಲ್ಲಿ ಈಗಲೂ ಇದೆ ವಿರೋಧ ಬೆಂಗಳೂರು: ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿ ಹಬ್ಬದ ದಿನವಾದ ಸೆ.6ರಂದು ಏಳು ವಿಯರ್‌ಗಳ ಮೂಲಕ ನೀರು ಮೇಲೆತ್ತುವ ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲಿದ್ದಾರೆ.ಮೊದಲ ಹಂತವಾದ 8 ವಿಯರ್‌ಗಳ ಮೂಲಕ 28 ಟಿಎಂಸಿ ನೀರನ್ನು ಮೇಲೆತ್ತುವ ಲಿಫ್ಟ್‌ ಕಾಂಪೋನೆಂಟ್‌ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. 3ನೇ ಸಂಖ್ಯೆಯ ವಿಯರ್‌ ಹೊರತುಪಡಿಸಿ ಉಳಿದೆಲ್ಲವೂ ಸಿದ್ಧವಾಗಿದ್ದು,

ಸೆ.6ರಂದು ಎತ್ತಿನಹೊಳೆ ಯೋಜನೆ ಲೋಕಾರ್ಪಣೆ Read More »

ಮುಡಾ ಹಗರಣದಲ್ಲಿ ಸಿಎಂಗೆ ಇಂದು ಮತ್ತೊಮ್ಮೆ ಕೋರ್ಟ್‌ ಅಗ್ನಿಪರೀಕ್ಷೆ

ಇಂದು ಮುಗಿಯುತ್ತಾ ಸಿದ್ದರಾಮಯ್ಯ ವಿಚಾರಣೆ? ಬೆಂಗಳೂರು : ಮುಡಾದಿಂದ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮತ್ತೆ ಕೋರ್ಟ್‌ ಅಗ್ನಿಪರೀಕ್ಷೆಯಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿದ್ದರಾಮಯ್ಯನವರು ಕಾನೂನು ಸಮರ ನಡೆಸುತ್ತಿದ್ದು, ಇಂದು ಅದು ಅಂತಿಮ ಘಟ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಮುದುವರಿಯಲಿದೆ. ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ. ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು

ಮುಡಾ ಹಗರಣದಲ್ಲಿ ಸಿಎಂಗೆ ಇಂದು ಮತ್ತೊಮ್ಮೆ ಕೋರ್ಟ್‌ ಅಗ್ನಿಪರೀಕ್ಷೆ Read More »

error: Content is protected !!
Scroll to Top