ರಾಜ್ಯ

ಮುಖ್ಯಮಂತ್ರಿಗೆ ಶಾಲು ಹೊದಿಸಲು ವೇದಿಕೆಗೆ ಜಿಗಿದ ಯುವಕ

ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಗಂಭೀರ ಭದ್ರತಾ ಲೋಪ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಸಂಭವಿಸಿದೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕನೋರ್ವ ಆತಂಕ ಸೃಷ್ಟಿಸಿದ್ದಾನೆ. ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದ ವೇದಿಕೆಗೆ ಕೇಸರಿ ಬಣ್ಣದ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯುವಕ ಯತ್ನಿಸಿದ್ದು ವೇದಿಕೆ ಮೇಲ್ಭಾಗಕ್ಕೆ ಜಿಗಿದಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ. ಸಿಎಂ ಅಂಗರಕ್ಷಕರು ಕೂಡಲೇ ಯುವಕನನ್ನ ವಶಕ್ಕೆ […]

ಮುಖ್ಯಮಂತ್ರಿಗೆ ಶಾಲು ಹೊದಿಸಲು ವೇದಿಕೆಗೆ ಜಿಗಿದ ಯುವಕ Read More »

ನಾಗಮಂಗಲ ಕೋಮುಗಲಭೆ ಹಿಂದೆ ಕೇರಳದ ಪಿಎಫ್‌ಐ ಕಾರ್ಯಕರ್ತರು?

ಎನ್‌ಐಎ ತನಿಖೆಗೆ ವಿಶ್ವ ಹಿಂದು ಪರಿಷತ್‌ ಆಗ್ರಹ ಬೆಂಗಳೂರು : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲುತೂರಿದ ಘಟನೆ ಪೂರ್ವ ಯೋಜಿತ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿವಬೆವೆ. ಜೊತೆಗೆ ಇದರಲ್ಲಿ ಕೇರಳದ ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಕೋಮುಗಲಭೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕೆಂಬ ಕೂಗು ಕೇಳಿಬಂದಿದೆ.ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್‌ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ

ನಾಗಮಂಗಲ ಕೋಮುಗಲಭೆ ಹಿಂದೆ ಕೇರಳದ ಪಿಎಫ್‌ಐ ಕಾರ್ಯಕರ್ತರು? Read More »

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌: ಬುಧವಾರದ ತನಕ ಇಲ್ಲ ದಂಡ

ಇನ್ನು ಡೆಡ್‌ಲೈನ್‌ ವಿಸ್ತರಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅಂತಿಮ ಗಡು ಭಾನುವಾರಕ್ಕೆ ಮುಕ್ತಾಯವಾಗಲಿದೆ. ಸಾರಿಗೆ ಇಲಾಖೆ ಈ ಹಿಂದೆ ಹೇಳಿದ ಪ್ರಕಾರ ಸೆ.16ರಿಂದ ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳಿಂದ ದಂಡ ವಸೂಲಿ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ ಸೆ.18ರ ತನಕ ಕಠಿಣ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆ ಪೊಲೀಸರಿಗೆ ಸೂಚಿಸಿದೆ.ಇಂದು ಕೂಡ ನೋದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಂಡವರಿಗೆ ಮುಂದೆ ದಂಡ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌: ಬುಧವಾರದ ತನಕ ಇಲ್ಲ ದಂಡ Read More »

ಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌ ಕಸ್ಟಡಿಗೆ

ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣದಲ್ಲಿ ಸೆರೆಯಾಗಿರುವ ಎಂಎಲ್‌ಎ ಬೆಂಗಳೂರು : ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಬಂಧಿತವಾಗಿರುವ ಆರ್​. ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ನ್ಯಾಯಾಲಯ ಎರಡು ದಿನದ ಮಟ್ಟಿಗೆ ಪೊಲೀಸ್​ ಕಸ್ಟಡಿಗೆ ನೀಡಿದೆ. ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿದ್ದಾರೆ. ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.ಪೊಲೀಸರು ಒಂದು ವಾರ ಕಸ್ಟಡಿಗೆ ನೀಡುವಂತೆ

ಬಿಜೆಪಿ ಶಾಸಕ ಮುನಿರತ್ನ ಎರಡು ದಿನ ಪೊಲೀಸ್‌ ಕಸ್ಟಡಿಗೆ Read More »

ನಾಗಮಂಗಲ ಕೋಮು ಗಲಭೆ ಕಾಂಗ್ರೆಸ್‌ ಪ್ರಾಯೋಜಿತ : ಕುಮಾರಸ್ವಾಮಿ ಆರೋಪ

10 ನಿಮಿಷದಲ್ಲಿ ಕಲ್ಲು, ರಾಡ್‌ಗಳು, ತಲವಾರು, ಪೆಟ್ರೋಲ್ ಬಾಂಬ್‌ ಹೇಗೆ ತಂದರು ಎಂದು ಪ್ರಶ್ನೆ ಮೈಸೂರು: ನಾಗಮಂಗಲದ ಕೋಮು ಹಿಂಸಾಚಾರದ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಮುಂಬರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ. ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಕೋಮು ಗಲಭೆ ನಡೆದಿದೆ ಎಂದು ರಾಜ್ಯ ಸರ್ಕಾರದ

ನಾಗಮಂಗಲ ಕೋಮು ಗಲಭೆ ಕಾಂಗ್ರೆಸ್‌ ಪ್ರಾಯೋಜಿತ : ಕುಮಾರಸ್ವಾಮಿ ಆರೋಪ Read More »

ಮತ್ತೆ ಹೆಚ್ಚಾಗಲಿದೆ ನಂದಿನಿ ಹಾಲಿನ ಬೆಲೆ

ಲೀಟರಿಗೆ 3 ರೂ. ಹೆಚ್ಚಿಸುವ ಕುರಿತು ಸಿದ್ದರಾಮಯ್ಯ ಸುಳಿವು ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ ಕುರಿತು ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣ ಸಂಪೂರ್ಣ ರೈತರಿಗೆ ಹೋಗಬೇಕು ಎಂದರು. ನಮ್ಮ ಸರ್ಕಾರ ಯಾವಾಗಲೂ ರೈತರ ಪರ, ಹಾಲು ಉತ್ಪಾದಕರ ಪರ, ದಲಿತರು, ಬಡವರ ಪರ ಇರುತ್ತದೆ ಎಂದು ತಿಳಿಸಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು

ಮತ್ತೆ ಹೆಚ್ಚಾಗಲಿದೆ ನಂದಿನಿ ಹಾಲಿನ ಬೆಲೆ Read More »

ಎಸ್‍ಡಿಪಿಐ, ಪಿಎಫ್‍ಐಗೆ ಶರಣಾಗಿರುವ ಕಾಂಗ್ರೆಸ್‌ ಸರಕಾರ : ತೇಜಸ್ವಿ ಸೂರ್ಯ ಕಿಡಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಟಿಪ್ಪು, ಔರಂಗಜೇಬನ ಸಂತತಿ ಜನನ ಎಂದು ಆಕ್ರೋಶ ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆಯನ್ನು ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಹೇಳುತ್ತಾರೆ. ನಿಮ್ಮ ಮನೆ ರೋಡ್‍ನಲ್ಲಿ ಯಾರಾದ್ರೂ ಗಣೇಶ ಕೂರಿಸಿದಾಗ ಅಲ್ಲಿ ಯಾರಾದ್ರೂ ಕಲ್ಲು ಹೊಡೆದ್ರೆ, ಬೆಂಕಿ ಹಾಕಿದ್ರೆ ಸಣ್ಣ ಘಟನೆ ಎಂದು ಹೇಳುತ್ತೀರಾ? ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ

ಎಸ್‍ಡಿಪಿಐ, ಪಿಎಫ್‍ಐಗೆ ಶರಣಾಗಿರುವ ಕಾಂಗ್ರೆಸ್‌ ಸರಕಾರ : ತೇಜಸ್ವಿ ಸೂರ್ಯ ಕಿಡಿ Read More »

ಪಿಯುಸಿ ಪರೀಕ್ಷೆ ಅವಧಿ 15 ನಿಮಿಷ ಕಡಿತ

ಇನ್ನು 2.45 ತಾಸಲ್ಲಿ ಮಕ್ಕಳು ಉತ್ತರ ಬರೆದು ಮುಗಿಸಬೇಕು ಬೆಂಗಳೂರು: ಶಾಲೆ ಮತ್ತು ಕಾಲೇಜನ್ನು ತನ್ನ ಪ್ರಯೋಗಶಾಲೆಯಾಗಿ ಮಾಡಿಕೊಂಡಿರುವ ಕಾಂಗ್ರೆಸ್‌ ಸರಕಾರ ಈಗ ಇನ್ನೊಂದು ಪ್ರಯೋಗಕ್ಕೆ ಮುಂದಾಗಿದೆ. ಈ ವರ್ಷದಿಂದಲೇ ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆ ಬರೆಯುವ ಅವಧಿಯನ್ನು ಕಡಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಹೊಸ ನಿಯಮವನ್ನು ಈ ವರ್ಷದಿಂದಲೇ ಅನುಷ್ಠಾನಗೊಳಿಸಲು ಮಂಡಳಿ ಸಜ್ಜಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು

ಪಿಯುಸಿ ಪರೀಕ್ಷೆ ಅವಧಿ 15 ನಿಮಿಷ ಕಡಿತ Read More »

ಕಲ್ಲು ತೂರಿದವರು ಮುಸ್ಲಿಮರು, ಕೇಸ್‌ ಹಿಂದುಗಳ ಮೇಲೆ : ಬಿಜೆಪಿ ಆಕ್ರೋಶ

1ರಿಂದ 23ರ ವರೆಗಿನ ಆರೋಪಿಗಳೆಲ್ಲ ಹಿಂದುಗಳು ಎಂದು ಆರೋಪ ಮಂಡ್ಯ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಪೊಲೀಸರು ಹಿಂದುಗಳ ಮೇಲೇಯೇ ಕೇಸ್‌ ಹಾಕುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳ ಪೈಕಿ ಎ1ನಿಂದ ಎ23 ವರೆಗಿನ ಆರೋಪಿಗಳು ಹಿಂದೂಗಳೇ ಆಗಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಇದು ಮುಸ್ಲಿಮ್‌ ಒಲೈಕೆಯ ಪರಾಕಾಷ್ಠೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಹಲವು ನಾಯಕರು ಕಿಡಿಕಾರಿದ್ದಾರೆ. ಗಲಭೆ ನಡೆದ ಬಳಿಕ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರ್‌

ಕಲ್ಲು ತೂರಿದವರು ಮುಸ್ಲಿಮರು, ಕೇಸ್‌ ಹಿಂದುಗಳ ಮೇಲೆ : ಬಿಜೆಪಿ ಆಕ್ರೋಶ Read More »

ಪೊಲೀಸ್‌ ಠಾಣೆ ಎದುರು ಮಹಿಳೆಯರ ಹೈಡ್ರಾಮ

ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಧರಣಿ ಕುಳಿತು ಆಗ್ರಹ ಮಂಡ್ಯ: ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದ ಕೆಲವು ವ್ಯಕ್ತಿಗಳ ಕುಟುಂಬದ ಹೆಂಗಸರು ಇಂದು ಬೆಳಗ್ಗೆ ಪೊಲೀಸ್‌ ಠಾಣೆಯ ಎದುರು ಧರಣಿ ಕುಳಿತು ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಹೈಡ್ರಾಮ ಮಾಡಿದ್ದಾರೆ. ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಮಹಿಳೆಯರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಗುಂಪುಗೂಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು

ಪೊಲೀಸ್‌ ಠಾಣೆ ಎದುರು ಮಹಿಳೆಯರ ಹೈಡ್ರಾಮ Read More »

error: Content is protected !!
Scroll to Top