ರಾಜ್ಯ

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌

ಸಂವಾದ ಕಾರ್ಯಕ್ರಮದಲ್ಲಿ ಹಿಂದುಗಳ ದೇವತೆಗಳನ್ನು ಅವಮಾನಿಸಿದ್ದ ಮಾಜಿ ಸಚಿವೆ ಬೆಂಗಳೂರು: ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದು ಕರೆದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಬಂಡಾಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ.23ರಂದು ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ‌ ನಡೆದ ಸಂವಾದದಲ್ಲಿ ಲಲಿತಾ ನಾಯ್ಕ್‌ “ರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶರಲ್ಲ ಅವರು ಕ್ರೂರಿಗಳು” ಎಂಬ ಹೇಳಿದ್ದರು. ಭಕ್ತಿಯ ಜೊತೆಗೆ ಬೆರೆತ ಮೌಢ್ಯ ಜನರ ವಿಚಾರ ಶಕ್ತಿಯನ್ನು […]

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌ Read More »

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ

ಮುಖ್ಯಮಂತ್ರಿ ನಿವಾಸದಲ್ಲಿ ಸಿಎಂ-ಡಿಸಿಎಂ ನಡುವೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬೆಂಗಳೂರು: ಅಧಿಕಾರ ಹಂಚಿಕೆ ಗುದ್ದಾಟದ ನಡುವಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ನೇರ ಮಾತುಕತೆ ನಡೆಯಲಿರುವುದು ಕುತೂಹಲ ಕೆರಳಿಸಿದೆ. ಕುರ್ಚಿ ಕಚ್ಚಾಟ ಶುರುವಾದ ಬಳಿಕ ಬಹಳ ಸಮಯದ ಬಳಿಕ ಹೀಗೆ ಸಿಎಂ ಮತ್ತು ಡಿಸಿಎಂ ಮುಖಾಮುಖಿಯಾಗುತ್ತಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಬೆಳಗ್ಗೆ 9.30ಕ್ಕೆ ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್‌ ಮೀಟಿಂಗ್ ನಡೆಯಲಿದೆ ಎನ್ನಲಾಗಿದೆ. ಮೊದಲು ನೀವಿಬ್ಬರು ಮಾತನಾಡಿಕೊಂಡು ಸ್ಪಷ್ಟತೆಗೆ ಬನ್ನಿ, ಯಾವುದೇ ಗೊಂದಲ

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ Read More »

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ

ವಿಕಸಿತ ಭಾರತ ಸಂಕಲ್ಪ ಪೂರ್ಣವಾಗಲು ಜನರಿಗೆ 9 ಕರ್ತವ್ಯ ತಿಳಿಸಿದ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎಂದು ಪ್ರಶಂಸೆ ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಎಂದು ಬಣ್ಣಿಸಿದ ಮೋದಿ ಉಡುಪಿ: ಜನರು 9 ಬಗೆಯ ಕರ್ತವ್ಯ ನಿರ್ವಹಿಸಿದರೆ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಿದೆ. ಲಕ್ಷ ಕಂಠ ಗೀತ ಗಾಯನ ಅತ್ಯುತ್ತಮ ಕಾರ್ಯಕ್ರಮ, ಅದರಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ ಸಾಧ್ಯ. ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ Read More »

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ

ರೋಡ್‌ ಶೋದಲ್ಲಿ ಪ್ರಧಾನಿಯನ್ನು ಕಂಡು ಪುಳಕಿತರಾದ ಜನ ಉಡುಪಿ: 17 ವರ್ಷಗಳ ಬಳಿಕ ಕೃಷ್ಣನಗರಿ ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃಷ ಮಠದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಪರ್ಯಾಯ ಪುತ್ತಿಗೆ ಶ್ರೀಗಳು ತಿಲಕವಿಟ್ಟು ಪ್ರಧಾನಿಯನ್ನು ಸಾಂಪ್ರದಾಯಿಒಕವಾಗಿ ಸ್ವಾಗತಿಸಿದರು. ಮಧ್ವ ತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಯಾದ ಬಳಿಕ ಕನಕನ ಕಿಂಡಿಯ ಮೂಲಕ ಮೋದಿ ಕೃಷ್ಣನ ದರ್ಶನ ಪಡೆದರು. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ Read More »

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ

ಡಾಕ್ಟರ್‌ ಆಗುವ ಕನಸು ನನಸಾಯಿತು ಎಂದು ಖುಷಿಪಟ್ಟ ಖಾದರ್‌ ಬೆಂಗಳೂರು: ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಖಾದರ್‌, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಸಾಕಷ್ಟು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿ ಕೂಡ

ಸ್ಪೀಕರ್‌ ಖಾದರ್‌ಗೆ ಗೌರವ ಡಾಕ್ಟರೇಟ್‌ ಪ್ರದಾನ Read More »

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ

ಕನ್ನಡದಲ್ಲೇ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡ ಪ್ರಧಾನಿ ಉಡುಪಿ : ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಇದಕ್ಕೂ ಮೊದಲು ಉಡುಪಿಯಲ್ಲಿ ರೋಡ್‌ಶೋ ನಡೆಯಲಿದೆ. ಜನರು ಮುಂಜಾನೆಯಿಂದಲೇ ಉಡುಪಿಯತ್ತ ಹೋಗಲಾರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಉಡುಪಿಯ ಭೇಟಿಗೆ ಕಾತರರಾಗಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ ಎಂದು

ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ Read More »

ಶತಕದತ್ತ ಮುನ್ನುಗ್ಗುತ್ತಿರುವ ಟೊಮೆಟೊ ಬೆಲೆ

ದಿಢೀರ್‌ ಏರಿಕೆಯಿಂದ ರೈತರು ಖುಷ್‌; ಗ್ರಾಹಕರು ಕಂಗಾಲು ಮಂಗಳೂರು: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್‌ ಆಗಿದ್ದರೆ ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ತಿಂಗಳು 20-30 ರೂ. ಇದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿ ಈಗ ಶತಕದತ್ತ ಮುನ್ನಗ್ಗುತ್ತಿದೆ. ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ತೀವ್ರ ಏರಿಕೆ ಕಂಡಿದ್ದು, 80ರಿಂದ 90 ರೂ. ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.

ಶತಕದತ್ತ ಮುನ್ನುಗ್ಗುತ್ತಿರುವ ಟೊಮೆಟೊ ಬೆಲೆ Read More »

ಕುರ್ಚಿ ಕಿತ್ತಾಟದ ನಡುವೆ ಮಾರ್ಮಿಕ ಸಂದೇಶ ಪೋಸ್ಟ್‌ ಮಾಡಿದ ಡಿಕೆಶಿ

ರಾಜಕೀಯಕ್ಕೆ ಹೊಸ ತಿರುವು ನೀಡುತ್ತಾ ಈ ಸಂದೇಶ? ಬೆಂಗಳೂರು : ಮುಖ್ಯಮಂತ್ರಿ ಪಟ್ಟಕ್ಕಾಗಿ ಇನ್ನಿಲ್ಲದಂತೆ ಪ್ರಯತ್ನಪಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಂದು ಪೋಸ್ಟ್‌ ಮಾಡಿರುವ ಸಂದೇಶವೊಂದು ಬಹಳ ಮಾರ್ಮಿಕವಾಗಿದ್ದು, ಅನೇಕ ಕಾರಣಗಳಿಗಾಗಿ ಗಮನ ಸೆಳೆದಿದೆ. ಸಂಚಲನಕ್ಕೂ ಕಾರಣವಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿ.ಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ

ಕುರ್ಚಿ ಕಿತ್ತಾಟದ ನಡುವೆ ಮಾರ್ಮಿಕ ಸಂದೇಶ ಪೋಸ್ಟ್‌ ಮಾಡಿದ ಡಿಕೆಶಿ Read More »

ದಕ್ಷ ಐಎಎಸ್‌ ಅಧಿಕಾರಿಯ ಪ್ರಾಣಕ್ಕೆ ಎರವಾದ ಶ್ವಾನ

ಭೀಕರ ಅಪಘಾತದಲ್ಲಿ ಮೂವರು ಸಾವು ಬೆಂಗಳೂರು: ಕಲಬುರಗಿಯ ಜೇವರ್ಗಿ ಸಮೀಪ ನಿನ್ನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಸಹಿತ ಮೂವರು ಸಾವನ್ನಪ್ಪಿದ್ದಾರೆ. ಮಾರ್ಗ ಮಧ್ಯೆ ಶ್ವಾನ ಅಡ್ಡಬಂದ ಹಿನ್ನೆಲೆ ಅದನ್ನು ತಪ್ಪಿಸಲು ಹೋಗಿ ಜೇವರ್ಗಿ ಬೈಪಾಸ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಹಾಂತೇಶ್ ಬೀಳಗಿ ಅವರ ಸೋದರರಾದ ಶಂಕರ ಬೀಳಗಿ

ದಕ್ಷ ಐಎಎಸ್‌ ಅಧಿಕಾರಿಯ ಪ್ರಾಣಕ್ಕೆ ಎರವಾದ ಶ್ವಾನ Read More »

ರಾಜ್ಯದ ಹತ್ತು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ಶಾಕ್‌ ಬೆಂಗಳೂರು : ಬೆಂಗಳೂರು, ಮಂಡ್ಯ, ಬೀದರ್, ಮೈಸೂರು, ಧಾರವಾಡ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಡಿಕೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಸಂಬಂಧಿಸಿದೆ ಎನ್ನಲಾದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ

ರಾಜ್ಯದ ಹತ್ತು ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ Read More »

error: Content is protected !!
Scroll to Top