ರಾಜ್ಯ

ಪಾಕ್‌ ಪ್ರಜೆಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದವ ಸೆರೆ

ಧರ್ಮ ಪ್ರಚಾರಕ್ಕಾಗಿ ನುಸುಳಿ ಬರುತ್ತಿರುವ ಪಾಕಿಸ್ಥಾನಿಯರು ಬೆಂಗಳೂರು: ಪಾಕಿಸ್ಥಾನಿ ಪ್ರಜೆಗಳಿಗೆ ಅಕ್ರಮವಾಗಿ ಭಾರತದೊಳಗೆ ನುಸುಳಿ ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ 55 ವರ್ಷದ ಪರ್ವೇಜ್​ ಅಹ್ಮದ್​​ ಬಂಧಿತ ವ್ಯಕ್ತಿ. ಹಿಂದೂ ಹೆಸರುಗಳನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ನೆಲಸಿದ್ದ ಐದಕ್ಕೂ ಹೆಚ್ಚು ಮಂದಿ ಪಾಕಿಸ್ಥಾನಿ ಪ್ರಜೆಗಳನ್ನು ಕಳೆದ ವಾರ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬೆಂಗಳೂರು ಹೊರವಲಯದ ಆನೆಕಲ್​ ತಾಲೂಕಿನ ಜಿಗಣಿಯಲ್ಲಿ ವಾಸವಾಗಿದ್ದ ರಷೀದ್​ ಅಲಿ ಸಿದ್ದಿಕಿ ಕುಟುಂಬ ಮತ್ತು ಪೀಣ್ಯದಲ್ಲಿ ವಾಸವಾಗಿದ್ದ […]

ಪಾಕ್‌ ಪ್ರಜೆಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಸಹಾಯ ಮಾಡಿದ್ದವ ಸೆರೆ Read More »

ಮುಡಾ ಹಗರಣ : ಸಚಿವ ಬೈರತಿ ಸುರೇಶ್‌, ಎಸ್‌ಪಿ ಸಜಿತ್‌ ವಿರುದ್ಧ ದೂರು

ಮೈಸೂರಿನಿಂದ ಮುಡಾ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ಹೊತ್ತೊಯ್ದಿದ್ದ ಸಚಿವ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಕಡತ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಮತ್ತು ಹಿಂದಿನ ಲೋಕಾಯುಕ್ತ ಎಸ್​​ಪಿ ಸಜಿತ್ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್​​ ಮೋಹನ್​​ ಅವರಿಗೆ ಲಿಖಿತ ದೂರಿನಲ್ಲಿ ಒತ್ತಾಯಿಸಿದ್ದಾರೆ.ಲೋಕಾಯುಕ್ತ ನೀಡಿದ್ದ ಸರ್ಚ್​ ವಾರಂಟ್​ ಆಧರಿಸಿ ಜು.26ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು.

ಮುಡಾ ಹಗರಣ : ಸಚಿವ ಬೈರತಿ ಸುರೇಶ್‌, ಎಸ್‌ಪಿ ಸಜಿತ್‌ ವಿರುದ್ಧ ದೂರು Read More »

ಖಾಸಗಿ ಬಸ್‌ಗೆ ಇಸ್ರೇಲ್‌ ಹೆಸರಿಟ್ಟದ್ದಕ್ಕೆ ಭಾರಿ ವಿರೋಧ

ಜೆರಸಲೇಂ ಎಂದು ಹೆಸರು ಬದಲಾಯಿಸಿದ ಮಾಲೀಕ ಮಂಗಳೂರು : ಮೂಡುಬಿದಿರೆ-ಮೂಲ್ಕಿ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗೆ ಇಸ್ರೇಲ್‌ ಎಂದು ಹೆಸರಿಟ್ಟದ್ದು ಭಾರಿ ವಿವಾದಕ್ಕೊಳಗಾದ ಬಳಿಕ ಮಾಲೀಕರು ಬಸ್‌ನ ಹೆಸರನ್ನೇ ಬದಲಾಯಿಸಿದ್ದಾರೆ. ಮೂಲತಃ ಕಟೀಲಿನವರಾದ ಲೆಸ್ಬರ್‌ ಕಟೀಲು ಎಂಬವರು ಕಳೆದ ಸುಮಾರು 12 ವರ್ಷಗಳಿಂದ ಇಸ್ರೇಲ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಅಲ್ಲಿ ದುಡಿದ ಹಣದಿಂದ ಬಸ್‌ ಖರೀದಿಸಿ ಮೂಡುಬಿದಿರೆ-ಮೂಲ್ಕಿ ರೂಟ್‌ನಲ್ಲಿ ಸರ್ವಿಸ್‌ ನಡೆಸುತ್ತಿದ್ದು. ಲೆಸ್ಬರ್‌ ಅವರ ಸಂಬಂಧಿಕರು ಈ ಬಸ್‌ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.ತನಗೆ ಅನ್ನ ನೀಡುತ್ತಿರುವ ಇಸ್ರೇಲ್‌ ಮೇಲಿನ ಅಭಿಮಾನದಿಂದ

ಖಾಸಗಿ ಬಸ್‌ಗೆ ಇಸ್ರೇಲ್‌ ಹೆಸರಿಟ್ಟದ್ದಕ್ಕೆ ಭಾರಿ ವಿರೋಧ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರಾಕ್ಕೆ ಆಯ್ಕೆ

ಸುಬ್ರಹ್ಮಣ್ಯ: ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡ ಯುವದಸರಾಕ್ಕೆ ಆಯ್ಕೆಯಾಗಿದೆ.. ದಕ್ಷಿಣ ಕನ್ನಡದ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದ ತಂಡ ತೀರ್ಪುಗಾರರ ಮೆಚ್ಚುಗೆ ಪಡೆದು ಆಯ್ಕೆಯಾಗಿದೆ. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ಅವರ ನೇತೃತ್ವದಲ್ಲಿ, ಸಾಂಸ್ಕೃತಿಕ ತಂಡದ ಸಂಯೋಜಕ ಡಾ. ವಿನ್ಯಾಸ್ ಹೊಸೊಳಿಕೆ ಮತ್ತು ರಾಜಕೀಯ ಶಾಸ್ತ್ರದ ಮುಖ್ಯಸ್ಥೆ ಸ್ವಾತಿ ಅವರ ಮಾರ್ಗದರ್ಶನದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದೆ. ನೃತ್ಯ ಸಂಯೋಜನೆಯನ್ನು ಪ್ರಮೋದ್ ರೈ, ಮತ್ತು

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಮೈಸೂರಿನ ಯುವ ದಸರಾಕ್ಕೆ ಆಯ್ಕೆ Read More »

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು

ನಕಲಿ ಸರ್ಟಿಫಿಕೆಟ್‌ ಮೂಲಕ ಲಾಯರ್‌ ಡಿಗ್ರಿ ಪಡೆದಿರುವುದು ಬಯಲು ಬೆಂಗಳೂರು : ಪ್ರಸ್ತುತ ಬಿಗ್‌ಬಾಸ್‌ ಸ್ಪರ್ಧಿಯಾಗಿರುವ ವಕೀಲ ಕೆ.ಎನ್‌.ಜಗದೀಶ್‌ ನಕಲಿ ಪ್ರಮಾಣಪತ್ರದ ಮೂಲಕ ಲಾಯರ್‌ ಡಿಗ್ರಿ ಪಡೆದುಕೊಂಡಿರುವ ವಂಚನೆ ಬೆಳಕಿಗೆ ಬಂದ ಬಳಿಕ ಬಾರ್‌ ಕೌನ್ಸಿಲ್‌ ಅವರನ್ನು ಅಮಾನ್ಯಗೊಳಿಸಿದೆ. ಇನ್ನು ಮುಂದೆ ಜಗದೀಶ್‌ ಕರಿಕೋಟು ಹಾಕಿಕೊಂಡು ಕೋರ್ಟ್‌ನಲ್ಲಿ ವಾದ ಮಾಡುವಂತಿಲ್ಲ.ವಕೀಲಿಕೆಯಿಂದ ಹೆಚ್ಚಾಗಿ ತನ್ನ ಅತಿರೇಕದ ವರ್ತನೆ ಮತ್ತು ವಿವಾದಗಳಿಂದಲೇ ಪ್ರಸಿದ್ಧಿಗೆ ಬಂದಿದ್ದ ಜಗದೀಶ್‌ ಅವರನ್ನು ಇದೇ ಮಾನದಂಡದ ಮೇಲೆ ಈ ಸಲ ಬಿಗ್‌ಬಾಸ್‌ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಕೆ.ಎನ್‌. ಜಗದೀಶ್‌ ಲೈಸೆನ್ಸ್‌ ರದ್ದು Read More »

ಸಾವರ್ಕರ್‌ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು : ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು ಮತ್ತು ಮಾಂಸಹಾರ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಾಹ್ಮಣ ಸಮುದಾಯದ ಸಾವರ್ಕರ್ ಮಾಂಸ ಸೇವಿಸುತ್ತಿದ್ದರು.‌ ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಸ್ಟ್‌ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು

ಸಾವರ್ಕರ್‌ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು : ದಿನೇಶ್‌ ಗುಂಡೂರಾವ್‌ ವಿವಾದಾತ್ಮಕ ಹೇಳಿಕೆ Read More »

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ

ಸಾಹಿತಿ ಹಂಪನಾ ಅವರಿಂದ ಉತ್ಸವಗಳ ವಿಧ್ಯುಕ್ತ ಉದ್ಘಾಟನೆ, ಪುಷ್ಪಾರ್ಚನೆ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಇಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಉದ್ಘಾಟಿಸಿದರು. ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬೆಳಗ್ಗೆ 9.29ಕ್ಕೆ ಶುಭ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತವಾಗಿದೆ. ಇದು ಅರಮನೆ ಹಬ್ಬವಲ್ಲ. ಜನರ ಆರಿಸಿದ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ Read More »

50 ಕೋ.ರೂ. ಕೊಡಲು ಧಮಕಿ : ಕುಮಾರಸ್ವಾಮಿ ವಿರುದ್ಧ ದೂರು

ಚನ್ನಪಟ್ಟಣ ಉಪಚುನಾವಣೆಗೆ ಹಣ ಹೊಂದಿಸಿಕೊಡಲು ಜೀವ ಬೆದರಿಕೆ ಎಂದು ಆರೋಪ ಬೆಂಗಳೂರು: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಪರಿಷತ್‌ ಸದಸ್ಯ ರಮೇಶ್ ಗೌಡ 50 ಕೋ.ರೂ.ಗೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್‌ ನಾಯಕ ವಿಜಯ್‌ ಟಾಟಾ ಎಂಬವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವಿಜಯ್ ಟಾಟಾ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಜೆಡಿಎಸ್ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷರಾಗಿದ್ದಾರೆ.ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಫಿಕ್ಸ್ ಆಗಿದೆ. ಉಪಚುನಾವಣೆ

50 ಕೋ.ರೂ. ಕೊಡಲು ಧಮಕಿ : ಕುಮಾರಸ್ವಾಮಿ ವಿರುದ್ಧ ದೂರು Read More »

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ : ಎಪಿಎಂಸಿಯಿಂದ 12 ಟನ್‌ ವಶ

ವಿಪರೀತ ಬೆಲೆ ಏರಿಕೆ ಪರಿಣಾಮ ಕಳ್ಳದಾರಿಯ ಮೂಲಕ ಬರುತ್ತಿದೆ ಚೀನದ ಬೆಳ್ಳುಳ್ಳಿ ಉಡುಪಿ: ನಿಷೇಧಿತ ಚೀನ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಗುಣಮಟ್ಟದ ಶಂಕೆ ಹಿನ್ನೆಲೆಯಲ್ಲಿ 12 ಟನ್ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ.ನಗರಸಭೆ ಕಮಿಷನರ್ ರಾಯಪ್ಪ ನೇತೃತ್ವದ ತಂಡ ಮತ್ತು ಎಪಿಎಂಸಿ ಅಧಿಕಾರಿಗಳು ದಾಳಿ ನಡೆಸಿ ಚೀನ ಬೆಳ್ಳುಳ್ಳಿ ದಾಸ್ತಾನು ಪರಿಶೀಲಿಸಿದರು. ಚೀನ ಬೆಳ್ಳುಳ್ಳಿಯಲ್ಲಿ ಅತಿಯಾದ ಕೀಟನಾಶಕ ಅಂಶ ಇರುವುದರಿಂದ ಭಾರತ ಸರ್ಕಾರ

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ : ಎಪಿಎಂಸಿಯಿಂದ 12 ಟನ್‌ ವಶ Read More »

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ

ಗನ್‌ಮ್ಯಾನ್‌ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ ಬೆಂಗಳೂರು : ಕಿತ್ತೂರು ಉತ್ಸವದ ಉದ್ಘಾಟಿಸುವ ವೇಳೆ ಜ್ಯೋತಿ ಬೆಳಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿ ತಾಗಿ ತುಸು ಹೊತ್ತು ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬಟ್ಟೆಗೆ ಬೆಂಕಿ ಹತ್ತಿಕೊಂಡಿರುವುದನ್ನು ಕಂಡ ಗನ್‌ಮ್ಯಾನ್​ ಕೂಡಲೇ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ, ಕಿತ್ತೂರು

ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ ಶಲ್ಯಕ್ಕೆ ಹತ್ತಿಕೊಂಡ ಬೆಂಕಿ Read More »

error: Content is protected !!
Scroll to Top