ರಾಜ್ಯ

ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ

ಧಾರವಾಡ: ಹೊಸಯಲ್ಲಾಪುರದ ಬೃಹತ್ ತ್ಯಾಜ್ಯ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಿಷಕಾರಿ ದಟ್ಟ ಹೊಗೆ ವಿದ್ಯಾಕಾಶಿಯನ್ನು ‌ನಲುಗಿಸಿದೆ. ಬೆಂಕಿಯ ಜ್ವಾಲೆ ತೀವ್ರವಾಗುತ್ತಿದ್ದು ಇದು ಸಮೀಪವಾಸಿಗಳು, ಸಾರ್ವಜನಿಕರನ್ನು ‌ಸಂಕಷ್ಟಕ್ಕೆ ದೂಡಿದೆ. ಪ್ಲಾಸ್ಟಿಕ್, ರಬ್ಬರ್ ಸೇರಿದಂತೆ ಇನ್ನೂ ಹಲವು ರೀತಿಯ ಪ್ರಕೃತಿಗೆ ಮಾರಕವಾದ ಅಂಶಗಳು ಈ ತ್ಯಾಜ್ಯದೊಳಗೆ ಇದ್ದು ಕಪ್ಪು ಬಣ್ಣದ ದಟ್ಟ ಹೊಗೆ ನಗರದಾದ್ಯಂತ ಆವರಿಸಲಾರಂಭಿಸಿದೆ. ರಸ್ತೆಗಳ ಸುತ್ತೆಲ್ಲಾ ಕಪ್ಪು ಹೊಗೆ ಆವರಿಸಿದ ಪರಿಣಾಮ ವಾಹನ ಸವಾರರು ಸಹ ಪರದಾಡುವಂತಾಗಿದೆ. ಅಪಘಾತದ ಭೀತಿಯೂ ಎದುರಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು, […]

ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ Read More »

ಸ್ನೇಹಿತೆಯ ‌ಪ್ರೀತಿಗೆ ಮಧ್ಯಸ್ಥಿಕೆಗೆ ಹೋದ ಹೆಂಡತಿ ಶವವಾಗಿ ಪತ್ತೆ: ಗಂಡನ ವಿರುದ್ಧ ಕೊಲೆ ಆರೋಪ

ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕರೆಯನ್ನು ಸ್ವೀಕರಿಸಿ ಮಾತನಾಡಿದ ಕಾರಣಕ್ಕೆ ಗಂಡ ಮತ್ತು ಹೆಂಡತಿಯ ನಡುವೆ ಜಗಳವಾಗಿದ್ದು, ಪತ್ನಿ ಶವವಾಗಿ ಪತ್ತೆಯಾದ ಘಟನೆ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ವರಲಕ್ಷ್ಮೀ(25) ಎಂಬಾಕೆಯೇ ಮೃತ ದುರ್ದೈವಿ. ವರಲಕ್ಷ್ಮೀ ತಮ್ಮ ಸ್ನೇಹಿತೆಯ ಬಾಯ್‌ಫ್ರೆಂಡ್ ಮಾಡಿದ್ದ ಕರೆಯನ್ನು ಸ್ವೀಕರಿಸಿ ಮಾತನಾಡಿದ್ದಳು. ಇದಕ್ಕೆ ಆಕೆಯ ಗಂಡ ಗಂಗರಾಜು ಆಕ್ಷೇಪ ವ್ಯಕ್ತಪಡಿಸಿ, ಪ್ರೇಮಿಗಳ ಮಧ್ಯೆ ಹೋಗದಂತೆ, ಮಧ್ಯಸ್ಥಿಕೆ ವಹಿಸದಂತೆ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಷಯದಲ್ಲಿ ಪತಿ ಪತ್ನಿ ನಡುವೆ ಮಾತಿಗೆ ಮಾತು

ಸ್ನೇಹಿತೆಯ ‌ಪ್ರೀತಿಗೆ ಮಧ್ಯಸ್ಥಿಕೆಗೆ ಹೋದ ಹೆಂಡತಿ ಶವವಾಗಿ ಪತ್ತೆ: ಗಂಡನ ವಿರುದ್ಧ ಕೊಲೆ ಆರೋಪ Read More »

ಮಧ್ಯಪ್ರಾಚ್ಯ ಬಿಕ್ಕಟ್ಟು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಇಸ್ರೇಲ್ – ಇರಾನ್‌ನ ನಡುವಿನ ಯುದ್ಧದ ತೀವ್ರತೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಕಡೆಗೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ಅಬುದಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ, ದೋಹಾ‌ಗಳಿಂದ ಬೆಂಗಳೂರಿಗೆ ಬರಬೇಕಾಗಿದ್ದ ಎಂಟು ವಿಮಾನಗಳು ಮತ್ತು ಬೆಂಗಳೂರಿನಿಂದ ಹೊರಡಬೇಕಾಗಿದ್ದ ಒಂಬತ್ತು ವಿಮಾನಗಳು ರದ್ದಾಗಿವೆ. ಭದ್ರತಾ ಕಾರಣಗಳು ಮತ್ತು ಏರ್‌ಸ್ಪೇಸ್ ನಿರ್ಬಂಧದ ಕಾರಣಕ್ಕಾಗಿ ಈ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲನೆ ಮಾಡುವಂತೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಧ್ಯಪ್ರಾಚ್ಯ ಬಿಕ್ಕಟ್ಟು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಹಾರಾಟ ರದ್ದು Read More »

ಸಹಪಾಠಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ ವಿದ್ಯಾರ್ಥಿ ಸೆರೆ

ಸಹಪಾಠಿಗಳು, ವಾರ್ಡನ್‌ ಮೇಲೆ ಹಲ್ಲೆ ಮಾಡಿದ್ದ 9ನೇ ತರಗತಿ ವಿದ್ಯಾರ್ಥಿ ಬಳ್ಳಾರಿ: ಜಿಲ್ಲೆಯ ಗೋನಾಳ ಪ್ರದೇಶದ ವಸತಿ ಶಾಲೆಯಲ್ಲಿ ಸಹಪಾಠಿ ವಿದ್ಯಾರ್ಥಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು ಹಾಸ್ಟೆಲ್‌ ವಾರ್ಡನ್‌ ಮತ್ತು ಇತರ ಏಳು ವಿದ್ಯಾರ್ಥಿಗಲ ಮೇಲೆ ಹಲ್ಲೆ ಮಾಡಿ ಓಡಿಹೋಗಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈ ಅಪ್ರಾಪ್ತ ವಯಸ್ಸಿನವನನ್ನು ಬಳ್ಳಾರಿ ನಗರದ ಶ್ರೀರಾಮಪುರ ಕಾಲೊನಿಯ ರೂಪನಗುಡಿಯಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಹೊರವಲಯದ ತಾಳೂರು ರಸ್ತೆಯಲ್ಲಿರುವ

ಸಹಪಾಠಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ ವಿದ್ಯಾರ್ಥಿ ಸೆರೆ Read More »

ಕುತೂಹಲಕ್ಕೆ ಕಾರಣವಾದ ಡಿಕೆಶಿ ಔತಣಕೂಟ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷವಾದ ಹಿನ್ನೆಲೆಯಲ್ಲಿ ಡಿನ್ನರ್‌ ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಶಾಸಕರಿಗಾಗಿ ಏರ್ಪಡಿಸಿರುವ ಔತಣಕೂಟ ನಾನಾ ಕಾರಣಗಳಿಗಾಗಿ ಕುತೂಹಲ ಹುಟ್ಟಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಡಿ.ಕೆ ಶಿವಕುಮಾರ್ 6 ವರ್ಷ ಪೂರೈಸಿದ್ದು, ಈ ಸಂಭ್ರಮಾಚರಣೆಗಾಗಿ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ ಎನ್ನಲಾಗಿದ್ದರೂ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಈಗಲೂ ಶೀತಲ ಸಮರ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಈ ಔತಣಕೂಟಕ್ಕೆ ಮಹತ್ವ ಬಂದಿದೆ. ಇಂದಿನ ಔತಣಕೂಟದಲ್ಲಿ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ

ಕುತೂಹಲಕ್ಕೆ ಕಾರಣವಾದ ಡಿಕೆಶಿ ಔತಣಕೂಟ Read More »

ವೈದ್ಯರ ಮುಷ್ಕರ : ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯ ಸಾಧ್ಯತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಲಿರುವ ವೈದ್ಯರು ಬೆಂಗಳೂರು : ಸರ್ಕಾರದ ಎಚ್ಚರಿಕೆಯ ಹೊರತಾಗಿಯೂ ವೈದ್ಯರು ಮುಷ್ಕರ ಹೂಡಲು ಮುಂದಾಗಿರುವುದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾರ್ಚ್ 11ರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಇದರಿಂದಾಗಿ ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜ್ವರ, ಕೆಮ್ಮು, ಚರ್ಮ ಸಂಬಂಧಿತ ಸಮಸ್ಯೆಗಳು, ಸ್ಕ್ಯಾನಿಂಗ್ ಅಥವಾ ರಕ್ತ

ವೈದ್ಯರ ಮುಷ್ಕರ : ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯ ಸಾಧ್ಯತೆ Read More »

ದಂಪತಿ ಆತ್ಮಹತ್ಯೆ: ಕುಟುಂಬ ಕಲಹದ ಶಂಕೆ

ಮಂಡ್ಯ: ಕುಟುಂಬ ಕಲಹಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ. ಆರ್. ಪೇಟೆ ಪಟ್ಟಣದಲ್ಲಿ ನಡೆದಿದೆ. ದಂಪತಿ ಆತ್ಮಹತ್ಯೆಗೂ ಮುನ್ನ ತಮ್ಮ ಎರಡು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲ್ಲಲು ಪ್ರಯತ್ನ ನಡೆಸಿದ್ದು, ಆದರೆ ಅಸ್ವಸ್ಥಗೊಂಡ ಮಗು ಬದುಕುಳಿದ ಘಟನೆ ನಡೆದಿದೆ. ಮೃತರನ್ನು ದರ್ಶನ್ ಮತ್ತು ದಿವ್ಯಶ್ರೀ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯನಗರ ಬಡಾವಣೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಯಾವುದೋ ಕಾರಣಕ್ಕೆ ದಂಪತಿ ತಮ್ಮ ಮಗುವನ್ನು ಕತ್ತು

ದಂಪತಿ ಆತ್ಮಹತ್ಯೆ: ಕುಟುಂಬ ಕಲಹದ ಶಂಕೆ Read More »

ಜಾತಿಗೆ ಬೆಲೆ ನಮ್ಮ ದೇಶದಲ್ಲಿ ಇರಲಿಲ್ಲ ಎನ್ನುವುದು ಇತಿಹಾಸ ಓದಿದರೆ ತಿಳಿಯುತ್ತದೆ: ಅನಂತ ಕುಮಾರ್ ಹೆಗಡೆ

ಭಟ್ಕಳ: ಭಾರತದಲ್ಲಿ ಜಾತಿಗೆ ಎಂದೂ ಬೆಲೆ ಇರಲಿಲ್ಲ. ಯೋಗ್ಯತೆಗೆ ಬೆಲೆ ಇತ್ತು. ನಮ್ಮಂತಹ ಬುದ್ಧಿವಂತರು ಜಾತಿಗೆ ಪ್ರಾಶಸ್ತ್ಯ ನೀಡಿದ್ದು. ನಮ್ಮ ಹಿಂದಿನ ಕಾಲದ ಸತ್ಯ ಏನು ಎನ್ನುವುದು ಇತಿಹಾಸ ಓದಿದರೆ ಅರಿವಾಗುತ್ತದೆ ಎಂದು ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ. ಅವರು ಭಟ್ಕಳದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಇತಿಹಾಸದಲ್ಲಿ ಆಗಿ ಹೋದ 90% ಗಳಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರರೂ ಬ್ರಾಹ್ಮಣರಲ್ಲ. ಜಾತ್ಯಾತೀತತೆ ಎಂದರೆ ಅದು ಹಿಂದುತ್ವ. ನಾವು

ಜಾತಿಗೆ ಬೆಲೆ ನಮ್ಮ ದೇಶದಲ್ಲಿ ಇರಲಿಲ್ಲ ಎನ್ನುವುದು ಇತಿಹಾಸ ಓದಿದರೆ ತಿಳಿಯುತ್ತದೆ: ಅನಂತ ಕುಮಾರ್ ಹೆಗಡೆ Read More »

ಕಾಡಾನೆ ದಾಳಿ ಮಹಿಳೆ ಬಲಿ

ಕುಶಾಲನಗರ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ತ್ಯಾಗತ್ತೂರಿನಲ್ಲಿ ‌ನಡೆದಿದೆ. ನಂಜರಾಯಪಟ್ಟಣದ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ, ಬಾಳೆಗುಂಡಿ ಗಿರಿಜನ ಹಾಡಿಯ ‌ನಿವಾಸಿ ಜಲಜಾಕ್ಷಿ(53) ಎಂಬವರೇ ಮೃತ ದುರ್ದೈವಿ. ಸ್ಥಳಕ್ಕೆ ಎಸಿಎಫ್ ಗೋಪಾಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆ ದಾಳಿ ಮಹಿಳೆ ಬಲಿ Read More »

ಅಲ್ಟೋ ಕಾರ್ ಹೊತ್ತುರಿದು ‌ವೃದ್ಧ ಸಜೀವ ದಹನ

ಚಿಕ್ಕಬಳ್ಳಾಪುರ: ಅಲ್ಟೋ ಕಾರೊಂದು ಹೊತ್ತಿ ಉರಿದ ‌ಪರಿಣಾಮ ವೃದ್ಧ ಚಾಲಕ ಸಜೀವ ದಹನವಾದ ಘಟನೆ ಬಾಗೇಪಲ್ಲಿಯ ಆಚೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಮೃತನನ್ನು ಪೆನುಮಲೆ ಗ್ರಾಮದ ಉದಯ್ ಕುಮಾರ್ (70) ಎಂದು ಗುರುತಿಸಲಾಗಿದೆ.‌ ಅವರು ನಿನ್ನೆ ರಾತ್ರಿ ಬಾಗೇಪಲ್ಲಿಯಿಂದ ‌ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿ ಯಾವುದೇ ದೋಷಗಳು, ಅಪಘಾತದ ಕುರುಹುಗಳು ಕಂಡು ಬಂದಿಲ್ಲ. ಆದ್ದರಿಂದ ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಅನುಮಾನವೂ ಸೃಷ್ಟಿಯಾಗಿದೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಅಲ್ಟೋ ಕಾರ್ ಹೊತ್ತುರಿದು ‌ವೃದ್ಧ ಸಜೀವ ದಹನ Read More »

error: Content is protected !!
Scroll to Top